Author: sarkari

  • SBI Recruitment 2024: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಹುಡುಕುವವರಿಗೆ ಸಿಹಿ ಸುದ್ದಿ; ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    SBI Recruitment 2024: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಹುಡುಕುವವರಿಗೆ ಸಿಹಿ ಸುದ್ದಿ; ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    SBI Recruitment 2024: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹುದ್ದೆ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಹೌದು, ಎಸ್‌ಬಿಐ (State Bank Of India) ದಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಬಿಐ ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್, ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಸಲಹೆಗಾರರ ​​ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 04-Mar-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 13-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 04-03-2024

    ಹುದ್ದೆಗಳ ವಿವರ
    ಹುದ್ದೆಗಳು ಮತ್ತು ಸಂಖ್ಯೆ;
    ಸರ್ಕಲ್‌ ಡಿಫೆನ್ಸ್‌ ಬ್ಯಾಂಕಿಂಗ್‌ ಅಡೈವಸರ್‌ – 1 ಹುದ್ದೆ
    ಅಸಿಸ್ಟೆಂಟ್‌ ಮ್ಯಾನೇಜರ್‌- 23 ಹುದ್ದೆಗಳು
    ಡೆಪ್ಯೂಟಿ ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) -51 ಹುದ್ದೆಗಳು
    ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) – 3 ಹುದ್ದೆಗಳು
    ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ (ಅಪ್ಲಿಕೇಶನ್‌ ಸೆಕ್ಯುರಿಟಿ- 3 ಹುದ್ದೆಗಳು
    ಮ್ಯಾನೇಜರ್‌ (ಕ್ರೆಡಿಟ್‌ ಅನಾಲಿಸ್ಟ್‌) – 50 ಹುದ್ದೆಗಳು
    ಒಟ್ಟು 131 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವಯೋಮಿತಿ: ಸರ್ಕಲ್‌ ಡಿಫೆನ್ಸ್‌ ಬ್ಯಾಂಕಿಂಗ್‌ ಅಡೈವಸರ್‌ – ಈ ಹುದ್ದೆಗೆ 60 ವರ್ಷ ವಯಸ್ಸನ್ನು ನಿಗದಿಪಡಿಸಲಾಗಿದೆ.
    ಅಸಿಸ್ಟೆಂಟ್‌ ಮ್ಯಾನೇಜರ್‌- 30 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು.
    ಡೆಪ್ಯೂಟಿ ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) – 35 ವರ್ಷದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು
    ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) – 38 ವರ್ಷ ವಯೋಮಿತಿಯವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು
    ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ (ಅಪ್ಲಿಕೇಶನ್‌ ಸೆಕ್ಯುರಿಟಿ- 42 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು
    ಮ್ಯಾನೇಜರ್‌ (ಕ್ರೆಡಿಟ್‌ ಅನಾಲಿಸ್ಟ್‌) – 25 ರಿಂದ 35 ವರ್ಷದೊಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು

    ವಯೋಮಿತಿ ಸಡಿಲಿಕೆಯನ್ನು ನಿಯಮಾನುಸರ ನೀಡಲಾಗುವುದು.

    ಅರ್ಜಿ ಶುಲ್ಕ: SC/ST/PwBD ಅಭ್ಯರ್ಥಿಗಳು ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಉಳಿದ ಹಾಗೆ General/EWS/OBC ಅಭ್ಯರ್ಥಿಗಳು ರೂ.750 ನ್ನು ಪಾವತಿ ಮಾಡಬೇಕು. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಮಾತ್ರ ಪಾವತಿ ಮಾಡಬೇಕು.

    ವೇತನ: ಸರ್ಕಲ್‌ ಡಿಫೆನ್ಸ್‌ ಬ್ಯಾಂಕಿಂಗ್‌ ಅಡೈವಸರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.2450000/-ವಾರ್ಷಿಕ ವೇತನ ನಿಗದಿಪಡಿಸಲಾಗಿದೆ.
    ಅಸಿಸ್ಟೆಂಟ್‌ ಮ್ಯಾನೇಜರ್‌- ಈ ಹುದ್ದೆಗೆ ರೂ.36,000-ರೂ.63840 ಮಾಸಿಕ ವೇತನವಿರಲಿದೆ
    ಡೆಪ್ಯೂಟಿ ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) -ಈ ಹುದ್ದೆಗೆ ಆಯ್ಕಯಾದವರಿಗೆ ರೂ.48170-ರೂ.69810 ಮಾಸಿಕ ವೇತನ ನೀಡಲಾಗುವುದು.
    ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರೂ.63840-ರೂ.78230 ಮಾಸಿಕ ವೇತನ ಸಿಗಲಿದೆ.
    ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ (ಅಪ್ಲಿಕೇಶನ್‌ ಸೆಕ್ಯುರಿಟಿ- ಈ ಹುದ್ದೆಗೆ ರೂ.89890-ರೂ.100350 ರೂ. ಮಾಸಿಕ ವೇತನ ದೊರಕಲಿದೆ.
    ಮ್ಯಾನೇಜರ್‌ (ಕ್ರೆಡಿಟ್‌ ಅನಾಲಿಸ್ಟ್‌) – ರೂ.63840-ರೂ.78230 ರೂ. ಮಾಸಿಕ ವೇತನ ಇರಲಿದೆ.

    ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳು ಕಿರುಪಟ್ಟಿ, ಸಂವಹನ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಮೊದಲನೆಯದಾಗಿ SBI ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.
    ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
    ಎಸ್‌ಬಿಐ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ದಾಖಲಿಸಿ ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅರ್ಜಿಯಲ್ಲಿ ಕೇಳಿದ್ದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿ, ಪ್ರತಿಗಳನ್ನು ಅಪ್‌ಲೋಡ್ ಮಾಡಿ.
    ಅರ್ಜಿ ಶುಲ್ಕ ಪಾವತಿಸಿ (ಅನ್ವಯಿಸಿದರೆ ಮಾತ್ರ)
    ನಂತರ ಕೊನೆಯದಾಗಿ ಸಲ್ಲಿಸು ಬಟನ್‌ ಅನ್ನು ಕ್ಲಿಕ್‌ ಮಾಡಿ.

    ಅಭ್ಯರ್ಥಿಗಳು ನೋಟಿಫಿಕೇಶನ್‌ಗಾಗಿ ಇಲ್ಲಿ ನೀಡಲಾಗಿರುವ ಮಾಹಿತಿಯ ಮೇಲೆ ಕ್ಲಿಕ್‌ ಮಾಡಿ;
    ಉಪ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು: ಇಲ್ಲಿ ಕ್ಲಿಕ್ ಮಾಡಿ
    ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ): ಇಲ್ಲಿ ಕ್ಲಿಕ್ ಮಾಡಿ
    ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಸಲಹೆಗಾರ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: sbi.co.in

  • CISF Recruitment 2024: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ  ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿ; 820 ಖಾಲಿ ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ

    CISF Recruitment 2024: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿ; 820 ಖಾಲಿ ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ

    CISF Recruitment 2024: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಖಾಲಿ ಹುದ್ದೆಗಳಿದ್ದು ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಗ್ರೇಡ್ ಅಥವಾ ಐದು ವರ್ಷಗಳ ಮೂಲ ತರಬೇತಿಯ ಅವಧಿಯನ್ನು ಒಳಗೊಂಡಂತೆ 5 ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿದ ಹೆಡ್ ಕಾನ್ಸ್‌ಟೇಬಲ್/ಜಿಡಿ, ಕಾನ್‌ಸ್ಟೆಬಲ್/ಜಿಡಿ ಮತ್ತು ಕಾನ್‌ಸ್ಟೆಬಲ್/ಟ್ರೇಡ್ಸ್‌ಮೆನ್‌ ಮೂಲ ತರಬೇತಿಯ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಹಾಗೂ ಸೀಮಿತ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

    CISF ನಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಕಾರ್ಯನಿರ್ವಾಹಕ) 836 ಖಾಲಿ ಹುದ್ದೆಗಳನ್ನು (UR-649, SC- 125 ಮತ್ತು ST-62) ಭರ್ತಿ ಮಾಡಲು ಅರ್ಹ ಇಲಾಖಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರೀಯ ಕೈಗಾರಿಕಾ ಪಡೆ ಸೀಮಿತ ಇಲಾಖೆಯಲ್ಲಿ ಎಎಸ್‌ಐ ಹುದ್ದೆಗೆ 836 ಸ್ಥಾನಗಳಿವೆ. UR-649, SC- 125 ಮತ್ತು ST-62 ಹುದ್ದೆ ಮೀಸಲಿಡಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-02-2024. CISF ನೇಮಕಾತಿ ಅರ್ಜಿ 2024 ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಮೊದಲು ಅರ್ಜಿ ಶುಲ್ಕವನ್ನು ಪಾವತಿಸುವುದು ಬಹಳ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲನೆ ಮಾಡಬಹುದು

    ವಯೋಮಿತಿ: ಮೇಲೆ ತಿಳಿಸಿದ ಹುದ್ದೆಗಳಿಗೆ ಅಭ್ಯರ್ಥಿಗಳ ವಯೋಮಿತಿಯು 25 ವರ್ಷ ಮೀರಿರಬಾರದು. SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. OBC ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಸಡಿಲಿಕೆ ಅನ್ವಯಿಸುವುದಿಲ್ಲ ಏಕೆಂದರೆ OBC ವರ್ಗಕ್ಕೆ ಯಾವುದೇ ಹುದ್ದೆಯನ್ನು ಕಾಯ್ದಿರಿಸಲಾಗಿಲ್ಲ, OBC ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಬಹುದು.

    ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.

    ಅರ್ಜಿ ಸಲ್ಲಿಸುವುದು ಹೇಗೆ-
    ಅಭ್ಯರ್ಥಿಗಳು CISF ವೆಬ್‌ಸೈಟ್‌ಗೆ ಭೇಟಿ ನೀಡಿ, ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

  • RRB Technician Recruitment 2024: ರೈಲ್ವೆ ಇಲಾಖೆಯಲ್ಲಿ ಬೃಹತ್‌ ಉದ್ಯೋಗಾವಕಾಶ; ಭರ್ಜರಿ 9000 ಹುದ್ದೆಗಳು,ಐಟಿಐ, ಡಿಪ್ಲೋಮಾ, ಬಿಇ ಪಾಸಾದವರಿಗೆ ಸಿಹಿ ಸುದ್ದಿ

    RRB Technician Recruitment 2024: ರೈಲ್ವೆ ಇಲಾಖೆಯಲ್ಲಿ ಬೃಹತ್‌ ಉದ್ಯೋಗಾವಕಾಶ; ಭರ್ಜರಿ 9000 ಹುದ್ದೆಗಳು,ಐಟಿಐ, ಡಿಪ್ಲೋಮಾ, ಬಿಇ ಪಾಸಾದವರಿಗೆ ಸಿಹಿ ಸುದ್ದಿ

    RRB Technician Recruitment 2024: ಕೇಂದ್ರ ಸರಕಾರಿ ಹುದ್ದೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ರೈಲ್ವೆ ಇಲಾಖೆಯು ಖಾಲಿ ಇರುವ 9000 ಟೆಕ್ನಿಷಿಯನ್‌ ಹುದ್ದೆಗಳಿಗೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ. ಟೆಕ್ನಿಷಿಯನ್ಸ್ ಗ್ರೇಡ್ III ರ ವಿವಿಧ ವಿಭಾಗಗಳಿಗೆ ಮತ್ತು ಟೆಕ್ನಿಷಿಯನ್ ಗ್ರೇಡ್ 1 ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-04-2024. ಅಭ್ಯರ್ಥಿಗಳು ಎಲ್ಲಾ ರೀತಿಯಲ್ಲೂ ಪೂರ್ಣಗೊಂಡ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು.

    ದೇಶದ ಎಲ್ಲಾ ರೈಲ್ವೇ ವಲಯಗಳಲ್ಲಿ ನೇಮಕ ಮಾಡಲು ಕಿರು ನೋಟಿಫಿಕೇಶನ್‌ನ್ನು ಬಿಡುಗಡೆ ಮಾಡಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 09-03-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-04-2024

    ಹುದ್ದೆಗಳ ವಿವರ: ಟೆಕ್ನಿಷಿಯನ್‌ ಗ್ರೇಡ್‌-1 ಸಿಗ್ನಲ್‌-1100
    ಟೆಕ್ನಿಷಿಯನ್‌ ಗ್ರೇಡ್‌ 111-7900 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವೇತನ: ಟೆಕ್ನಿಷಿಯನ್‌ ಗ್ರೇಡ್‌ 1 ಸಿಗ್ನಲ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.29,200 ಮಾಸಿಕ ವೇತನ ಸಿಗಲಿದೆ
    ಟೆಕ್ನಿಷಿಯನ್‌ ಗ್ರೇಡ್‌ 111 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.19,900 ವೇತನ ದೊರಕಲಿದೆ.

    ವಯೋಮಿತಿ: ಟೆಕ್ನಿಷಿಯನ್‌ ಗ್ರೇಡ್‌ 1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಆಗಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 36 ವರ್ಷ ಮೀರಿರಬಾರದು.
    ಟೆಕ್ನಿಷಿಯನ್‌ ಗ್ರೇಡ್‌ 111 ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ಆಗಿರಬೇಕು. ಗರಿಷ್ಠ ವಯೋಮಿತಿ 33 ಮೀರರಬಾರದು.

    ಶೈಕ್ಷಣಿಕ ಅರ್ಹತೆ: ವಿವಿಧ ಹುದ್ದೆಗಳಿಗೆ ವಿವಿಧ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, RRB ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವಿವರ ನೀಡಲಾಗಿದೆ.

    ಅರ್ಜಿ ಶುಲ್ಕ: Gen/OBC/EWS ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.500 ಪಾವತಿ ಮಾಡಬೇಕು.
    SC, ST, ಮಾಜಿ ಸೈನಿಕರು, EBC/ ಮಹಿಳಾ ಅಭ್ಯರ್ಥಿಗಳಿಗೆ ರೂ.250
    ಟ್ರಾನ್ಸ್ಜೆಂಡರ್, ಅಲ್ಪಸಂಖ್ಯಾತರು ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ) ರೂ.250/-ಗಳ ಈ ಶುಲ್ಕವನ್ನು CBT ಯಲ್ಲಿ ಕಾಣಿಸಿಕೊಂಡಾಗ ಅನ್ವಯವಾಗುವಂತೆ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕಿರು ನೋಟಿಫಿಕೇಶನ್‌ ಕ್ಲಿಕ್‌ ಮಾಡಬಹುದು.

  • DWCD Bidar Recruitment 2024: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ, ಅರ್ಜಿ ಸಲ್ಲಿಸಲು ಮಾ.5 ಕೊನೆಯ ದಿನಾಂಕ

    DWCD Bidar Recruitment 2024: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ, ಅರ್ಜಿ ಸಲ್ಲಿಸಲು ಮಾ.5 ಕೊನೆಯ ದಿನಾಂಕ

    DWCD Bidar Recruitment 2024: ಬೀದರ್‌ ಜಿಲ್ಲೆಯಲ್ಲಿ “ಮಿಷನ್‌ ಶಕ್ತಿ” ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಉಪ ಯೋಜನೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ ಕಾರ್ಯನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: ಫೆಬ್ರವರಿ 09, 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 05, 2024

    ಶೈಕ್ಷಣಿಕ ಅರ್ಹತೆ; ಡಿಸ್ಟ್ರಿಕ್ಟ್‌ಮಿಷನ್‌ ಕೋಆರ್ಡಿನೇಟರ್-‌ ಸೋಷಿಯಲ್‌ ಸೈನ್ಸ್‌/ ಲೈಪ್‌ ಸೈನ್ಸ್‌/ ನ್ಯೂಟ್ರಿಷನ್‌/ ಮೆಡಿಸಿನ್‌/ ಹೆಲ್ತ್‌ ಮ್ಯಾನೇಜ್ಮೆಂಟ್‌/ ಸೋಷಿಯಲ್‌ ವರ್ಕ್‌/ ರೂರಲ್‌ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬೇಕು.
    ಸ್ಪೆಷಲಿಸ್ಟ್‌ ಇನ್‌ ಫೈನಾನ್ಸಿಯಲ್‌ ಲಿಟರೆಸಿ ಆಂಡ್‌ ಅಕೌಂಟೆಂಟ್‌- ಎಕನಾಮಿಕ್ಸ್‌/ ಬ್ಯಾಂಕಿಂಗ್‌/ ಇತರ ವಿಭಾಗಗಳಲ್ಲಿ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬೇಕು.

    ಹುದ್ದೆಗಳ ವಿವರ: ಡಿಸ್ಟ್ರಿಕ್‌ ಮಿಷನ್‌ ಕೊರ್ಡಿನೇಟರ್‌, ಸ್ಪೆಷಲಿಸ್ಟ್‌ ಇನ್‌ ಫೈನಾನ್ಶಿಯಲ್‌ ಲಿಟೆರೆಸಿ ಆಂಡ್‌ ಅಕೌಂಟೆಂಟ್‌
    ಹುದ್ದೆಗಳ ಸಂಖ್ಯೆ: 2

    ಅನುಭವ: ಅಭ್ಯರ್ಥಿಗಳು ಈ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಮೂರು ವರ್ಷಗಳ ಕಾರ್ಯಾನುಭವ ಹೊಂದಿರಬೇಕು.

    ಅರ್ಜಿ ಶುಲ್ಕ: ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

    ಆಯ್ಕೆ: ಈ ಹಿಂದೆ ಉತ್ತಮ ಕಾರ್ಯ ನಿರ್ವಹಿಸುವ ಬಗ್ಗೆ ದಾಖಲೆ ಹೊಂದಿರುವ ಹಾಗೂ ಕನಿಷ್ಠ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ, ತರಬೇತಿಗಳನ್ನು ಹಮ್ಮಿಕೊಳ್ಳಲು ಸಾರ್ಮರ್ಥ್ಯ ಹೊಂದಿರುವ, ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣಿತಿ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪರಿಪೂರ್ಣ ಹಿಡಿತವುಳ್ಳ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಿ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು, ಅನುಭವ, ಕಂಪ್ಯೂಟರ್‌ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಲಾಗುವುದು.

    ಅರ್ಜಿ ಸಲ್ಲಿಕೆ ಹೇಗೆ?
    ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕಚೇರಿ ಅಥವಾ ಬೀದರ ಜಿಲ್ಲಾ ಎನ್‌.ಐ.ಸಿ. ವೆಬ್‌ಸೈಟ್‌ https;//bidar.nic.in ನಲ್ಲಿ ಪಡೆದು ದಿನಾಂಕ 05/03/2024 ರ ವರೆಗೆ ಅಗತ್ಯ ದಾಖಲಾತಿಗಳೊಂದಿಗೆ ಈ ಕಚೇರಿ ಸಮಯದಲ್ಲಿ ಸಂಜೆ 5.30 ರ ಒಳಗೆ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
    ಅಭ್ಯರ್ಥಿಗಳಿಗೆ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿರುವುದರಿಂದ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ನಂತರ ಅರ್ಜಿ ಸಲ್ಲಿಸಬೇಕು
    ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ಅಪ್ಲಿಕೇಶನ್‌ ಫಾರ್ಮ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿ
    ಅದರಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
    ಕೊನೆಯದಾಗಿ ಯಾವುದೇ ಪ್ರಮಾಣ ಪತ್ರ/ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ ಅವುಗಳನ್ನು ಲಗತ್ತಿಸಿ. ನಂತರ ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಯ ವಿಳಾಸಕ್ಕೆ ಸಲ್ಲಿಸಿ.
    ವಿಳಾಸ: ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಲೂರ ರಸ್ತೆ, ಬೀದರ್‌

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಲೂರ ರೋಡ್‌, ಬೀದರ, ಫೋನ್‌ ಸಂಖ್ಯೆ 08482-233146, 9591914358 ಸಂಪರ್ಕಿಸಲು ಸೂಚಿಸಲಾಗಿದೆ.

  • Indian Coast Guard: ಭಾರತೀಯ ಕೋಸ್ಟ್‌ಗಾರ್ಡ್‌ನಲ್ಲಿ ಉದ್ಯೋಗಾವಕಾಶ; ಒಟ್ಟು 70 ಹುದ್ದೆ, ಮಾಸಿಕ ಭಾರೀ ವೇತನ

    Indian Coast Guard: ಭಾರತೀಯ ಕೋಸ್ಟ್‌ಗಾರ್ಡ್‌ನಲ್ಲಿ ಉದ್ಯೋಗಾವಕಾಶ; ಒಟ್ಟು 70 ಹುದ್ದೆ, ಮಾಸಿಕ ಭಾರೀ ವೇತನ

    Indian Coast Guard: ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ದಿನಾಂಕ ಫೆ.15 ರಂದು ಪ್ರಾರಂಭವಾಗುತ್ತದೆ. ಭಾರತೀಯ ಕೋಸ್ಟ್‌ ಗಾರ್ಡ್‌ನಲ್ಲಿ ಸಹಾಯಕ ಕಮಾಂಡೆಂಟ್ ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಧಿಸೂಚನೆಯನ್ನು ಓದಿ ಉದ್ಯೋಗದ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಹುದು.

    ಭಾರತೀಯ ಕೋಸ್ಟ್ ಗಾರ್ಡ್, ಸಹಾಯಕ ಕಮಾಂಡೆಂಟ್ (‘ಎ’ ಗೆಜೆಟೆಡ್ ಅಧಿಕಾರಿ) ಹಾಗೂ ವಿವಿಧ ಶಾಖೆಗಳಿಗೆ ಭಾರತೀಯ ಪುರುಷ/ಮಹಿಳೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ‘ಆನ್‌ಲೈನ್’ ಮೂಲಕ ಅರ್ಜಿ ನೋಂದಣಿಯನ್ನು ಅಭ್ಯರ್ಥಿಗಳು ಕೋಸ್ಟ್ ಗಾರ್ಡ್ ನೇಮಕಾತಿ ವೆಬ್‌ಸೈಟ್ https://joinindiancoastguard.cdac.in ನಲ್ಲಿ ಮಾಡಬೇಕು.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-02-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2024

    ಹುದ್ದೆಗಳ ವಿವರ
    ಹುದ್ದೆಯ ಹೆಸರು: ಇಂಡಿಯನ್ ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ
    ಹುದ್ದೆ ಸಂಖ್ಯೆ: ಭಾರತೀಯ ಕೋಸ್ಟ್‌ ಗಾರ್ಡ್‌ನಲ್ಲಿ 70 ಹುದ್ದೆಗಳು ಖಾಲಿ ಇದೆ.

    ಹುದ್ದೆಗಳ ವಿವರ:
    ಜನರಲ್‌ ಡ್ಯೂಟಿ(GD),ಟೆಕ್ನಿಕಲ್‌ (ಮೆಕ್ಯಾನಿಕಲ್‌),ಟೆಕ್ನಿಕಲ್(‌ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್‌)

    ಅರ್ಜಿ ಶುಲ್ಕ: ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ : ರೂ. 300/-
    SC/ST ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇತರೆ ಅಭ್ಯರ್ಥಿಗಳು ಆನ್‌ಲೈನ್ ಮೋಡ್ ಮೂಲಕ ನೆಟ್ ಬ್ಯಾಂಕಿಂಗ್ ಅಥವಾ ವೀಸಾ / ಮಾಸ್ಟರ್ / ಮೆಸ್ಟ್ರೋ / ರುಪೇ ಕ್ರೆಡಿಟ್ / ಡೆಬಿಟ್ ಕಾರ್ಡ್ / ಯುಪಿಐ ಬಳಸಿ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ವಯೋಮಿತಿ: ಈ ಮೇಲೆ ತಿಳಿಸಿದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ: 21 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ: 25 ವರ್ಷಗಳು.
    ಅಭ್ಯರ್ಥಿಗಳು 01 ಜುಲೈ 1999 ರಿಂದ 30 ಜೂನ್ 2003 ರ ನಡುವೆ ಜನಿಸಿರಬೇಕು (ಎರಡೂ ದಿನಾಂಕಗಳನ್ನು ಒಳಗೊಂಡಂತೆ)
    ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಬಡ್ತಿ ಮತ್ತು ವೇತನ: ರ್ಯಾಂಕ್‌ಗಳಿಗೆ ಬಡ್ತಿಗಳು ನಿಗದಿಪಡಿಸಿದ ಬಡ್ತಿ ಮಾನದಂಡಗಳ ಪ್ರಕಾರ ಇರುತ್ತದೆ. 7ನೇ CPC ಯ ಪ್ರಕಾರ ವಿವಿಧ ಹುದ್ದೆಗಳಿಗೆ ವೇತನ ಶ್ರೇಣಿಗಳು ಈ ಕೆಳಗೆ ನೀಡಲಾಗಿದೆ.
    ಸಹಾಯಕ ಕಮಾಂಡೆಂಟ್- 56,100/-
    ಉಪ ಕಮಾಂಡೆಂಟ್- 67,700/-
    ಕಮಾಂಡೆಂಟ್ (ಜೆಜಿ)- 78,800/-
    ಕಮಾಂಡೆಂಟ್- 1,23,100/-
    ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್- 1,31,100/-
    ಇನ್ಸ್ಪೆಕ್ಟರ್ ಜನರಲ್-‌ 1,44,200/-
    ಹೆಚ್ಚುವರಿ ಮಹಾನಿರ್ದೇಶಕರು-1,82,200/-
    ಮಹಾನಿರ್ದೇಶಕರು-2,25,000/-

    ಆಯ್ಕೆ: ನಿರ್ದಿಷ್ಟ ಬ್ಯಾಚ್‌ಗೆ ಸಂಬಂಧಿಸಿದ ಅಭ್ಯರ್ಥಿಯ ಆಯ್ಕೆಯು ಆ ಬ್ಯಾಚ್‌ಗೆ ಮಾತ್ರ ಮಾನ್ಯವಾಗಿರುತ್ತದೆ. ಅಭ್ಯರ್ಥಿಗಳು ಹೊಸ ಬ್ಯಾಚ್‌ಗೆ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ SMB (ವಿಶೇಷ ವೈದ್ಯಕೀಯ ಮಂಡಳಿ) ಸೇರಿದಂತೆ ಆಯ್ಕೆ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ.

    ಟ್ರೈನಿಂಗ್‌: ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು 44 ವಾರಗಳ ಕಾಲ ನೇವಲ್ ಓರಿಯಂಟೇಶನ್ ಕೋರ್ಸ್‌ಗೆ ಒಳಗಾಗಲು ಐಎನ್‌ಎ ಎಜಿಮಲಾದಲ್ಲಿ ವರದಿ ಮಾಡಬೇಕಾಗುತ್ತದೆ ಮತ್ತು ನಂತರ ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ನ ವಿವಿಧ ತರಬೇತಿ ಸಂಸ್ಥೆಗಳು / ಘಟಕಗಳು / ಹಡಗುಗಳಲ್ಲಿ ತರಬೇತಿಯನ್ನು ಪಡೆಯಬೇಕಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • Army Agniveer Recruitment: ಭಾರತೀಯ ಸೇನೆ ಸೇರಲು ಇಚ್ಛೆ ಇದೆಯೇ? ಅಗ್ನಿವೀರ್ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ; ಸಂಪೂರ್ಣ ಮಾಹಿತಿ ಇಲ್ಲಿದೆ

    Army Agniveer Recruitment: ಭಾರತೀಯ ಸೇನೆ ಸೇರಲು ಇಚ್ಛೆ ಇದೆಯೇ? ಅಗ್ನಿವೀರ್ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ; ಸಂಪೂರ್ಣ ಮಾಹಿತಿ ಇಲ್ಲಿದೆ

    Army Agniveer Recruitment 2024: ಭಾರತೀಯ ಸೇನೆಯು ಅಗ್ನಿವೀರ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಹುದ್ದೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು, ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ್ದಲ್ಲಿ ಸಂಪೂರ್ಣವಾಗಿ ನೇಮಕಾತಿ ಅಧಿಸೂಚನೆಯನ್ನು ಓದಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ 8th/10th/12th ಪಾಸಾದವರು ಕೂಡಾ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು: ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08-02-2024
    ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-03-2024

    ಹುದ್ದೆಗಳು: ಅಗ್ನೀವೀರ್‌ ಜನರಲ್‌ ಡ್ಯೂಟಿ,ಅಗ್ನಿವೀರ್‌ ಟೆಕ್ನಿಕಲ್‌,ಅಗ್ನಿವೀರ್‌ ಕ್ಲರ್ಕ್‌ (ಅಗ್ನಿವೀರ್‌ ಸ್ಟೋರ್‌ಕೀಪರ್‌ ಟೆಕ್ನಿಕಲ್),ಅಗ್ನಿವೀರ್‌ ಟ್ರೇಡ್ಸ್‌ಮ್ಯಾನ್‌,ಅಗ್ನಿವೀರ್‌ ಜನರಲ್‌ ಡ್ಯೂಟಿ (ಮಹಿಳೆ) ಮಿಲಿಟರಿ ಪೊಲೀಸ್‌ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವಯೋಮಿತಿ: ಅಗ್ನಿವೀರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 17.5 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 21 ವರ್ಷ ಮೀರಿರಬಾರದು.

    ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ವಿವರ:
    ಅಗ್ನೀವೀರ್‌ ಜನರಲ್‌ ಡ್ಯೂಟಿ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು. ಪ್ರತಿ ವಿಷಯದಲ್ಲಿ ಅಭ್ಯರ್ಥಿಗಳು ಶೇ.45 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
    ಅಗ್ನಿವೀರ್‌ ಟೆಕ್ನಿಕಲ್‌ – ಈ ಹುದ್ದೆಗೆ ಎಸ್‌ಎಸ್‌ಎಲ್ಸಿ/12th/ITI ಪಾಸ್‌ ಮಾಡಿರಬೇಕು. ಶೇ.60 ಅಂಕ ಪಡೆದಿರಬೇಕು.
    ಅಗ್ನಿವೀರ್‌ ಕ್ಲರ್ಕ್‌ (ಅಗ್ನಿವೀರ್‌ ಸ್ಟೋರ್‌ಕೀಪರ್‌ ಟೆಕ್ನಿಕಲ್)‌ – ಈ ಹುದ್ದೆಗೆ 10+2/Intermidiate ಪಾಸ್‌ ಆಗಿರಬೇಕು. .ಶೇ.60 ರಷ್ಟು ಅಂಕ ಪಡೆದಿರಬೇಕು.
    ಅಗ್ನಿವೀರ್‌ ಟ್ರೇಡ್ಸ್‌ಮ್ಯಾನ್‌ – ಈ ಹುದ್ದೆಗೆ 10th class Pass ಆಗಿರಬೇಕು. ಶೇ.33 ರಷ್ಟು ಅಂಕವನ್ನು ಪ್ರತಿ ವಿಷಯದಲ್ಲಿ ಅಭ್ಯರ್ಥಿಗಳು ಪಡೆದಿರಬೇಕು.
    ಅಗ್ನಿವೀರ್‌ ಟ್ರೇಡ್ಸ್‌ಮ್ಯಾನ್‌- ಈ ಹುದ್ದೆಗೆ ಎಂಟನೇ ತರಗತಿ ಪಾಸ್‌ ಆಗಿರಬೇಕು. ಪ್ರತಿ ವಿಷಯದಲ್ಲಿ ಅಭ್ಯರ್ಥಿಗಳು ಶೇ.33 ರಷ್ಟು ಅಂಕ ಪಡೆದಿರಬೇಕು.
    ಅಗ್ನಿವೀರ್‌ ಜನರಲ್‌ ಡ್ಯೂಟಿ (ಮಹಿಳೆ) ಮಿಲಿಟರಿ ಪೊಲೀಸ್‌- ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 10th/Matriculation ತೇರ್ಗಡೆ ಹೊಂದಿರಬೇಕು. 10ನೇ/ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಶೇ.45 ಅಂಕ ಹಾಗೂ ಪ್ರತಿ ವಿಷಯದಲ್ಲಿ ಶೇ.33 ಅಂಕಗಳೊಂದಿಗೆ ತೇರ್ಗಡೆ ಕಡ್ಡಾಯವಾಗಿದ್ದು, ಗ್ರೇಡಿಂಗ್ ಪದ್ಧತಿ ಜಾರಿಯಲ್ಲಿದ್ದರೆ ಪ್ರತಿ ವಿಷಯದಲ್ಲಿ ಡಿ ಗ್ರೇಡ್ ಹಾಗೂ ಶೇ.45 ಅಂಕಗಳೊಂದಿಗೆ ಸಿ2 ಶ್ರೇಣಿಯಲ್ಲಿ ತೇರ್ಗಡೆಯಾಗುವುದು ಕಡ್ಡಾಯ.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಈ ಮೇಲಿನ ಹುದ್ದೆಗಳಿಗೆ ರೂ.550 ಪಾವತಿಸಬೇಕು.

    ಆಯ್ಕೆ ವಿಧಾನ: ಅಭ್ಯರ್ಥಿಗಳ ಆಯ್ಕೆ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲನೆಯ ಹಂತ ಆನ್‌ಲೈನ್‌ ಪರೀಕ್ಷೆ ಇರಲಿದ್ದು, ಇದರಲ್ಲಿ ಟೈಪಿಂಗ್‌ ಟೆಸ್ಟ್‌ ಇರಲಿದೆ. ಎರಡನೇ ಹಂತದಲ್ಲಿ ನೇಮಕಾತಿ ರ್ಯಾಲಿ ಇರಲಿದೆ. ಇದರಲ್ಲಿ ತೇರ್ಗಡೆಯಾದವರನ್ನು ಮೂರನೇ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಮೆರಿಟ್‌ ಲಿಸ್ಟ್‌ ಮೂಲಕ ಆಯ್ಕೆ ಮಾಡಲಾಗುವುದು.

    ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.