Author: Mallika

  • 90 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ: ಈ ಕೂಡಲೇ ಅರ್ಜಿ ಸಲ್ಲಿಸಿ

    90 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ: ಈ ಕೂಡಲೇ ಅರ್ಜಿ ಸಲ್ಲಿಸಿ

    ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 6 ಶಿಶು ಅಭಿವೃದ್ಧಿ ಯೋಜನೆಯಡಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ‌. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಎಪ್ರಿಲ್ 21,2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-04-2021 ಸಂಜೆ 5.30 ಗಂಟೆಗೆ
    ಅರ್ಜಿ ಶುಲ್ಕ:ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ಹುದ್ದೆಗಳ ವಿವರ:
    8 ಮಿನಿ ಅಂಗನವಾಡಿ ಕಾರ್ಯಕರ್ತೆ, 9 ಅಂಗನವಾಡಿ ಕಾರ್ಯಕರ್ತೆ, 73 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಅಂಗನವಾಡಿ ಕಾರ್ಯಕರ್ತೆ ಆಗಲು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಕಾರ್ಯಕರ್ತೆ ಆಗಲು ಕನಿಷ್ಠ 4ನೇ ತರಗತಿ ತೇರ್ಗಡೆಯಾಗಿದ್ದು, ಗರಿಷ್ಠ ವಿದ್ಯಾರ್ಹತೆ 9 ತರಗತಿ ತೇರ್ಗಡೆ ಆಗಿರಬೇಕು.

    ವಯೋಮಿತಿ: 18 ರಿಂದ 35 ವರ್ಷದೊಳಗಿನ ಅರ್ಹ ಸ್ಥಳೀಯ (ಅದೇ ಗ್ರಾಮದ) ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ‌.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಭಾರತೀಯ ವಾಯುಪಡೆ ಬೀದರ್ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಭಾರತೀಯ ವಾಯುಪಡೆ ಬೀದರ್ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕದ ಬೀದರ್ ನ ವಾಯುಪಡೆ ನಿಲ್ದಾಣದಲ್ಲಿ ಸ್ಟೇಷನ್ ಮೆಡಿಕೇರ್ ಸೆಂಟರ್ 01 ನೇ ಎಪ್ರಿಲ್ 2021 ರಿಂದ 31 ನೇ ಮಾರ್ಚ್ 2022 ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕೆಳಕಂಡ ಸಿಬ್ಬಂದಿಯ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.

    ಹುದ್ದೆಗಳ ವಿವರ : ಸ್ತ್ರೀ ರೋಗ ವೈದ್ಯ, ಮಕ್ಕಳ ವೈದ್ಯ, ದಂತ ವೈದ್ಯ, ಮಾನಸಿಕ ಸಲಹೆಗಾರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಸ್ತ್ರೀ ರೋಗ ವೈದ್ಯ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಡಿ/ಡಿಎನ್ಎ (ಸ್ತ್ರಿರೋಗ ಮತ್ತು ಪ್ರಸೂತಿ) ವಿದ್ಯಾರ್ಹತೆ ಯನ್ನು ಪಡೆದಿರಬೇಕು.

    ಮಕ್ಕಳ ವೈದ್ಯ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಯ ಎಂಡಿ/ ಡಿಎನ್‌ಎ ( ಪೀಡಿಯಾಟ್ರಿಕ್ಸ್) ಮಾಡಿರಬೇಕು.

    ದಂತ ವೈದ್ಯ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಡಿಎಸ್/ಎಂಡಿಎಸ್ ಪಡೆದಿರಬೇಕು.

    ಮಾನಸಿಕ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮನಃಶಾಸ್ತ್ರದಲ್ಲಿ ಎಂಎ/ಎಂಫಿಲ್ ಪಡೆದಿರಬೇಕು.

    ವೇತನ: ಸ್ತ್ರೀ ರೋಗ ವೈದ್ಯ ಹುದ್ದೆಗೆ ರೂ. 21,500/- ಮಾಸಿಕ ವೇತನ ಇರುತ್ತದೆ.

    ಮಕ್ಕಳ ವೈದ್ಯ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.16,200/- ವೇತನ ಇರುತ್ತದೆ.

    ದಂತ ವೈದ್ಯ ಹುದ್ದರ ಮಾಸಿಕ ವೇತನ ರೂ. 24,384/- ನಿಗದಿಪಡಿಸಲಾಗಿದೆ.

    ಮಾನಸಿಕ ಸಲಹೆಗಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗರ ತಿಂಗಳ ರೂ. 16,800/- ವೇತನವಿರುತ್ತದೆ.

    ನಮೂದಿತ ವೇತನವು ಸಾಮಾನ್ಯವಾಗಿ ಕ್ರೋಢಿಕೃತವಾಗಿದೆ. ಮತ್ತು ಸರಕಾರಿ ಉದ್ಯೋಗಿಗಳಿಗೆ ಅನ್ವಯಿಸುವಂತರ ಇನ್ನಿತರೆ ಭತ್ಯೆಗಳು/ ಹಣಕಾಸು ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ.

    ಈ ಹುದ್ದೆ ಕೇವಲ ತಾತ್ಕಾಲಿಕ ವಾಗಿದ್ದು, ಖಾಯಂ ಉದ್ಯೋಗಕ್ಕೆ ಸೇರ್ಪಡೆಯಾಗಲು ಯಾವುದೇ ಅಧಿಕಾರವಿರುವುದಿಲ್ಲ. ಯಾವುದೇ ಕಾರಣ ನೀಡದೆ 30 ದಿನಗಳ ನೋಟೀಸು ನೀಡಿ ಗುತ್ತಿಗೆ ಅವಧಿಗೆ ಮುಂಚೆ ಉದ್ಯೋಗವನ್ನು ಸಮಾಪ್ತಿಗೊಳಿಸಬಹುದು.

    ಸಂದರ್ಶನಕ್ಕೆ ಹಾಜರಾಗುವವರಿಗೆ ಯಾವುದೇ ಟಿಎ/ಡಿಎ ನೀಡುವುದಿಲ್ಲ.

    ಯಾವುದೇ ರೀತಿಯ ವಶೀಲಿ ಮತ್ತು ಶಿಫಾರಸು ಅನರ್ಹತೆಗೆ ಕಾರಣವಾಗುತ್ತದೆ.

    ಆಸಕ್ತ ಅರ್ಹ ಅಭ್ಯರ್ಥಿ ಒಂದು ಪಾಸ್ ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ ಸೇರಿ ದೃಢೀಕೃತ ಅರ್ಹತಾ ಪ್ರಮಾಣ ಪತ್ರ,ಅನುಭವ ಪ್ರಮಾಣ ಪತ್ರ ಮತ್ತು ಸಂಪರ್ಕ ಸಂಖ್ಯೆ ಯೊಂದಿಗೆ ಬಿಳಿ ಹಾಳೆಯ ಮೇಲೆ ಬರೆದ ಅರ್ಜಿಯು ಈ ಜಾಹೀರಾತು ಪ್ರಕಟವಾದ 15 ದಿನದೊಳಗೆ ಸ್ಟೇಷನ್ ಮೆಡಿಕೇರ್ ಸೆಂಟರ್ ಕೇರಾಫ್ ವಾಯು ಪಡೆ ನಿಲ್ದಾಣ, ಬೀದರ್-585401 ಗೆ ತಲುಪಿಸಬೇಕು.

    ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ‌ ಆಯ್ಕೆ ಮಾಡಲಾಗುತ್ತದೆ.

    ಎಸ್ ಎಂಒ ನೊಂದಿಗೆ ಸಮಾಲೋಚಿಸಿದ ನಂತರ ಸಮಯವನ್ನು ನಿರ್ಧರಿಸಲಾಗುವುದು.

  • ಕೆಎಸ್ ಪಿ ಎಸ್ ಐ ಮೆಡಿಕಲ್  ಎಕ್ಸಾಮ್  ಪ್ರವೇಶ ಪತ್ರ ಬಿಡುಗಡೆ

    ಕೆಎಸ್ ಪಿ ಎಸ್ ಐ ಮೆಡಿಕಲ್ ಎಕ್ಸಾಮ್ ಪ್ರವೇಶ ಪತ್ರ ಬಿಡುಗಡೆ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ವೈರ್ಲೆಸ್) ಹುದ್ದೆಗಳ ವೈದ್ಯಕೀಯ ಪರಿಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 26 ಸಬ್ ಇನ್ಸ್ ಪೆಕ್ಟರ್ (ವೈಯರ್ಲೆಸ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿತ್ತು. ಇದೀಗ ವೈದ್ಯಕೀಯ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.

    ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ http://siwireless20.ksp-online.in/ ಗೆ ಭೇಟಿ ನೀಡಿ my application ನನ್ನು ಕ್ಲಿಕ್ ಮಾಡಿ. ಇನ್ನೊಂದು ಪುಟ ತೆರೆಯುತ್ತೆ.‌ ಅಲ್ಲಿ ಜನ್ಮದಿನಾಂಕ, ರಿಜಿಸ್ಟ್ರೇಶನ್ ನಂಬರ್ ಹಾಕಿ. ಪ್ರವೇಶ ಪತ್ರ ಸ್ಕ್ರೀನ್ ಮೇಲೆ ಕಾಣುತ್ತೆ. ಸೇವ್ ಮಾಡಿ, ಡೌನ್‌ಲೋಡ್ ಮಾಡಿ.

  • ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆ

    ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆ

    ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 03-04-2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.


    ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20-03-2021
    ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-04-2021

    ಹುದ್ದೆಗಳ ವಿವರ : ಎಜಿಎಂ(ಕಾನೂನು ), ಚೀಫ್ ಇನ್‌ಫೋರ್ಮೇಶನ್ ಸೆಕ್ಯುರಿಟಿ ಆಫೀಸರ್(ಸಿಐಎಸ್‌ಒ), ರಿಸ್ಕ್‌ ಮ್ಯಾನೇಜರ್(ಎಸ್‌ಎಂಜಿಎಸ್‌ 4), ರಿಸ್ಕ್ ಮ್ಯಾನೇಜರ್ ( ಎಂಎಂಜಿಎಸ್‌ ೩), ಐಟಿ ಮ್ಯಾನೇಜರ್( ಎಂಎಂಜಿಎಸ್‌ 3),ಐಟಿ ಮ್ಯಾನೇಜರ್ ( ಎಂಎಂಜಿಎಸ್‌ 2) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಚೀಫ್ ಇನ್‌ಫೊರ್ಮೇಶನ್ ಸೆಕ್ಯುರಿಟಿ ಆಫೀಸರ್ (ಸಿಐಎಸ್‌ಓ) ಹುದ್ದೆಗೆ ಇಂಜಿನಿಯರಿಂಗ್ ಗ್ರಾಜ್ಯುಯೇಟ್ (ಕಂಪ್ಯೂಟರ್ ಸೈನ್ಸ್/ಐಟಿ) ಅಥವಾ ಇಂಜಿನಿಯರಿಂಗ್ ಗ್ರಾಜ್ಯುಯೇಷನ್ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಮಾಡಿರಬೇಕು.
    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಕಾನೂನು) ಹುದ್ದೆಗೆ ಕಾನೂನು ಪದವಿ ಹೊಂದಿರಬೇಕು.
    ರಿಸ್ಕ್ ಮ್ಯಾನೇಜರ್ (ಎಸ್‌ಎಂಜಿಎಸ್‌-iv) ಮತ್ತು ರಿಸ್ಕ್ ಮ್ಯಾನೇಜರ್ ( ಎಂಎಂಜಿಎಸ್ III) ಹುದ್ದೆಗೆ ಸಿಜಿಪಿಎ ನಲ್ಲಿ 60% ಅಂಕಗಳನ್ನು ಪಡೆದಿರಬೇಕು. ಹಾಗೂ ಪೋಸ್ಟ್‌ ಗ್ರಾಜ್ಯುಯೇಟ್ ಮ್ಯಾಥಮ್ಯಾಟಿಕ್ಸ್/ಸ್ಟೆಟಿಸ್ಟಿಕ್ಸ್/ರಿಸ್ಕ್ ಮ್ಯಾನೇಜ್‌ಮೆಂಟ್ ಅಥವಾ ಎಂಬಿಎ ಯನ್ನು ಫೈನಾನ್ಸ್/ಬ್ಯಾಂಕಿಂಗ್/ರಿಸ್ಕ್ ಮ್ಯಾನೇಜ್ ಮೆಂಟ್ ಮಾಡಿರಬೇಕು.

    ಐಟಿ ಆಫೀಸರ್ ಹುದ್ದೆಗೆ ಬಿಇ/ಬಿ.ಟೆಕ್/ಎಂ.ಇ/ಎಂ.ಟೆಕ್ ಇನ್ ಕಂಪ್ಯೂಟರ್ ಸೈನ್ಸ/ ಕಂಪ್ಯೂಟರ್ ಟೆಕ್ನಾಲಜಿ/ ಕಂಪ್ಯೂಟರ್ ಇಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್‌ ಮತ್ತು ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್/ಇನ್ಪೋರ್‌ಮೇಶನ್ ಟೆಕ್ನಾಲಜಿ ಮಾಡಿರಬೇಕು.

    ವಯೋಮಿತಿ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳಿಗೆ ೨೫ ರಿಂದ ೫೫ ವರ್ಷ ಮೀರಿರಬಾರದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ

  • ಆರೋಗ್ಯ  ಮತ್ತು ಕುಟುಂಬ  ಕಲ್ಯಾಣ ಇಲಾಖೆಯಲ್ಲಿ ಹುದ್ದೆ

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹುದ್ದೆ

    ‘ಜೀವಸಾರ್ಥಕತೆ’ ಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಂದು ಭಾಗ. ಇಲ್ಲಿ ಖಾಲಿ ಇರುವ ಹುದ್ದೆಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ವಿವರಗಳು ಈ ಕೆಳಗಿನಂತಿವೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-04-2021

    ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಸಂದರ್ಶನ ದಿನಾಂಕ : 06-04-2021

    ಹುದ್ದೆ : ಅಂಗಾಂಗ ಕಸಿ ಹುದ್ದೆ ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಈ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿದೆ.

    ರಾಜ್ಯದಲ್ಲಿ ಮೃತದಾನಿ ಅಂಗಾಂಗ ಕಸಿ ಕಾರ್ಯಕ್ರಮದ ಸಂಯೋಜನೆಯಲ್ಲಿ ನೆರವಾಗಬೇಕಾಗುತ್ತದೆ.

    ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್/ಬಿಡಿಎಸ್/ಎಂಎಸ್ಸಿ ( ನರ್ಸಿಂಗ್ ಮತ್ತು ಸಂಬಂಧಿತ ವೈದ್ಯಕೀಯ ವಿಷಯಗಳು)/ ಎಂಎಸ್ ಡಬ್ಲ್ಯೂ ಹೊಂದಿರಬೇಕು.

    ಮೇಲೆ ತಿಳಿಸಿದ ಹುದ್ದೆಯಲ್ಲಿ ಅಭ್ಯರ್ಥಿಯು ಕನಿಷ್ಠ ಒಂದು ವರ್ಷದ ಸೇವಾ ಅನುಭವ ಹೊಂದಿರಬೇಕು.

    ಅಂಗಾಂಗ ಕಸಿ ಕಾರ್ಯಕ್ರಮ ಏರ್ಪಡಿಸುವಲ್ಲಿ ಸಾಂಸ್ಥಿಕ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.

    ವೇತನ : ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ವೇತನ ರೂ.50,000/- ಗೌರವ ಧನ ನೀಡಲಾಗುತ್ತದೆ.

    ವಯೋಮಿತಿ : ಗರಿಷ್ಠ 60 ವರ್ಷದ ಮೀರದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅಭ್ಯರ್ಥಿಗಳು ಅರ್ಜಿ ಜೊತೆಗೆ ಅಗತ್ಯ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

    ಅಭ್ಯರ್ಥಿಗಳು ಅರ್ಜಿಯನ್ನು ಜಂಟಿ‌ ನಿರ್ದೇಶಕರು (ವೈದ್ಯಕೀಯ) ರವರ ಕಚೇರಿ, ಆರೋಗ್ಯ ಸೌಧ, 6 ನೇ ಮಹಡಿ, ಮಾಗಡಿ ರಸ್ತೆ, ಬೆಂಗಳೂರು- 560023

  • ಶಿವಮೊಗ್ಗ ಸ್ಮಾರ್ಟ್ ಸಿಟಿ ಕೆಲಸ ಖಾಲಿ ಇದೆ

    ಶಿವಮೊಗ್ಗ ಸ್ಮಾರ್ಟ್ ಸಿಟಿ ಕೆಲಸ ಖಾಲಿ ಇದೆ

    ಶಿವಮೊಗ್ಗ ಸ್ಮಾರ್ಟ್ ಸಿಟಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆ : ಜನರಲ್ ಪ್ಲಾನರ್- 1
    ಸೀನಿಯರ್ ಅರ್ಬನ್ ಪ್ಲಾನರ್- 1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸ್ಥಳ : ಆಯ್ಕೆಯಾದ ಅಭ್ಯರ್ಥಿಗಳು ಶಿವಮೊಗ್ಗದಲ್ಲಿ ಕೆಲಸ ಮಾಡಬೇಕು.

    ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 64 ವರ್ಷವನ್ನು ಮೀರಿರಬಾರದು.

    ಅರ್ಜಿಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ವನ್ನು ಪಾವತಿ ಮಾಡಬೇಕಾಗಿಲ್ಲ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ವೇತನ : ಜನರಲ್ ಮ್ಯಾನೇಜರ್ ಹುದ್ದೆಗೆ ರೂ.74,400/-, ಮತ್ತು ಸೀನಿಯರ್ ಅರ್ಬನ್ ಪ್ಲಾನರ್ ಹುದ್ದೆಗೆ 1,00,000/- ರೂ. ವೇತನ ನಿಗದಿಪಡಿಸಲಾಗಿದೆ.

    ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಎಪ್ರಿಲ್ 9 ರೊಳಗಾಗಿ ಈ ಕೆಳಕಂಡ ಇ-ಮೇಲ್ ಮಾಡಬೇಕು.
    [email protected]

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ