Author: Mallika

  • Indian Navy: ಎಸ್ ಎಸ್ ಸಿ ಆಫೀಸರ್ ಹುದ್ದೆ ; ಪದವೀಧರರಿಗೆ ಅವಕಾಶ

    ಇಂಡಿಯನ್ ನೇವಿಯು ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಹುದ್ದೆಗಳನ್ನು ನೇಮಕ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಈಜಿಮಾಲಾ, ಕೇರಳ ನೇವಲ್ ಅಕಾಡೆಮಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. 2022 ನೇ ಸಾಲಿನ ಜೂನ್ ಅವಧಿ ಕೋರ್ಸ್ ಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಕೆಳಗಿನ ಮಾಹಿತಿಗಳನ್ನು ಓದಿ ಆಸಕ್ತರು ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 21-09-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-10-2021

    ವಿದ್ಯಾರ್ಹತೆ : ಬಿಎಸ್ಸಿ, ಬಿಕಾಂ, ಬಿಎಸ್ಸಿ ( ಐಟಿ), ಬಿಟೆಕ್, ಎಂಬಿಎ, ಎಂಎಸ್ಸಿ, ಎಂಎ ತೇರ್ಗಡೆ ಹೊಂದಿರುವವರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ ವಿವರ : ಜೆನರಲ್ ಸರ್ವಿಸ್ ಕೇಡರ್ ಹುದ್ದೆಗಳು: 42
    ಏರ್ ಟ್ರಾಫಿಕ್ ಕಂಟ್ರೋಲರ್: 04
    ಅಬ್ ಸರ್ವರ್ : 08
    ಪೈಲಟ್ : 15
    ಲಾಜಿಸ್ಟಿಕ್ಸ್ : 18
    ಎಜುಕೇಷನ್ : 18
    ಇಂಜಿನಿಯರಿಂಗ್ ಬ್ರ್ಯಾಂಚ್ ( ಜಿಎಸ್) : 27
    ಇಲೆಕ್ಟ್ರಿಕಲ್ ಬ್ರ್ಯಾಂಚ್ : 34
    ನೇವಲ್ ಆಕ್ಟಿಟೆಕ್ಚರ್ : 12

    ಆನ್ಲೈನ್ ಅಪ್ಲೈ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

    ವೆಬ್ಸೈಟ್ ಲಿಂಕ್

  • ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನ

    ವೈಮಾನಿಕ ಅಭಿವೃದ್ಧಿ ಸಂಸ್ಥೆ (ADA), ಒಂದು ಸ್ವಾಯತ್ತ ಸಂಸ್ಥೆ. ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಹುದ್ದೆ : ಅಸಿಸ್ಟೆಂಟ್- 22 ಹುದ್ದೆ
    ಸ್ಟೆನೋಗ್ರಾಫರ್ – 03 ಹುದ್ದೆ

    ವಯೋಮಿತಿ : 30 ವರ್ಷ

    ಅಸಿಸ್ಟೆಂಟ್ ಹುದ್ದೆಗಳಲ್ಲಿ ಎರಡು ಹುದ್ದೆಗಳು ಮಾಜಿ ಸೈನಿಕರಿಗೆ ಹಾಗೂ ಒಂದು ಹುದ್ದೆಯನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

    ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯವೊಂದರಿಂದ ಕಾಮರ್ಸ್/ ಸೈನ್ಸ್/ ಆರ್ಟ್ಸ್/ ಬಿಸ್ ನೆಸ್ ಅಡ್ಮಿನಿಸ್ಟ್ರೇಶನ್/ ಬಿಸ್ ನೆಸ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆದಿರಬೇಕು. ಸ್ಟೆನೋಗ್ರಾಫರ್ ಹುದ್ದೆಗೆ ಅಭ್ಯರ್ಥಿಗಳು ಮೇಲಿನವರೊಂದಿಗೆ ಸರಕಾರಿ ಮಾನ್ಯತೆ ಹೊಂದಿದ ಸಂಸ್ಥೆ/ಬೋರ್ಡ್ ಒಂದರಿಂದ ಟೈಪ್ ರೈಟಿಂಗ್ ಮತ್ತು ಶಾರ್ಟ್ ಹ್ಯಾಂಡ್ ನಲ್ಲಿ ಅರ್ಹತೆಯನ್ನು ಪಡೆದಿರಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 22-09-2021 ರಿಂದ ಬೆಳಿಗ್ಗೆ 10 ರ ನಂತರ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-10-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್

  • ಹೆಸ್ಕಾಂನಲ್ಲಿ 200 ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ

    ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ಬಿ.ಇ ಪದವಿ ಹಾಗೂ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಂದ 2021-22 ನೇ ಸಾಲಿಗೆ 200 ಶಿಶುಕ್ಷು ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅ.20 ರೊಳಗೆ ಅರ್ಜಿಯನ್ನು ಹಾಕಬಹುದು. ನೇಮಕಾತಿಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಇಲ್ಲಿದೆ ಮಾಹಿತಿ.

    ಬಿ.ಇ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ಸಂಸ್ಥೆಯಿಂದ ಪಡೆದಿರಬೇಕು.

    ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿಯ ಶಿಶುಕ್ಷು ತರಬೇತಿಗಾಗಿ ಆಯ್ಕೆಯಾದ ಪದವಿ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.7000/- ರೂ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ ರೂ.5000/- ಸ್ಟೈಫೆಂಡ್ ನ್ನು ನೀಡಲಾಗುವುದು.

    ಶಿಶಿಕ್ಷು ತರಬೇತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಿ ತದನಂತರ ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-10-2021

    ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.

  • ಸಮಾಲೋಚಕರು ಹುದ್ದೆಗೆ ಅರ್ಜಿ ಆಹ್ವಾನ

    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ” ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಕನಿಷ್ಟ ಮಿತಿಯ ವ್ಯಕ್ತಿಗಳ ಬೆಂಬಲಕ್ಕೆ ( ಎಸ್ ಎಂಐಎಲ್ ಇ) ” ಯೋಜನೆಯ ಅನುಷ್ಠಾನಕ್ಕಾಗಿ ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ಸಂಯೋಜಕ ಮತ್ತು ಸಮಾಲೋಚಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

    ಹುದ್ದೆಯ ವಿವರ : ರಾಷ್ಟ್ರೀಯ ಸಂಯೋಜಕ – 1 ಸಂಖ್ಯೆ
    ಸಮಾಲೋಚಕರು – 2 ಸಂಖ್ಯೆ

    ಆಸಕ್ತ ಅಭ್ಯರ್ಥಿಗಳು ಅರ್ಹತಾ ನಿಬಂಧನೆಗಳು, ವಿತ್ತೀಯ ರೂಢಿಗಳು, ಆಯ್ಕೆ ಮಾದರಿ ಮತ್ತು ಇತರೆ ಸಂಬಂಧಿತ ವಿವರಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ‌ಮಂತ್ರಾಲಯದ ವೆಬ್ಸೈಟ್ ( www.socialjustice.nic.in) ನ್ನು ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಕೆಗೆ ಕಡೇ ದಿನಾಂಕ : 30-09-2021

  • ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಎಡೆಯೂರು ತುಮಕೂರು ಹುದ್ದೆಗಳಿಗೆ ಅರ್ಜಿ ಆಹ್ವಾನ

    ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಎಡೆಯೂರು, ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಇಲ್ಲಿ ಕ್ಷೇತ್ರದ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುವ ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ, ವೇದ, ಜ್ಯೋತಿಷ್ಯ ಮತ್ತು ‌ವೀರಶೈವಗಾಮ ಶಾಲೆ ಪಾಠಶಾಲೆ ಎಡೆಯೂರು ಇಲ್ಲಿ ಖಾಲಿ ಇರುವ 02 ತಾತ್ಕಾಲಿಕ ಹುದ್ದೆ ನೇಮಕಾತಿ ಬಗ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಯ ಹೆಸರು : ವೇದ ಶಿಕ್ಷಕರು, ಸಂಸ್ಕೃತ ಸಾಹಿತ್ಯ ಶಿಕ್ಷಕರು

    ವಯೋಮಿತಿ : 18 ವರ್ಷ ಮೇಲ್ಪಟ್ಟು, 40 ವರ್ಷ ದಾಟಿರಬಾರದು.

    ಮೇಲ್ಕಂಡ ಎರಡು ಹುದ್ದೆಗಳು ತಾತ್ಕಾಲಿಕ ಹುದ್ದೆಗಳಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಕೈ ಬರಹದ ಅರ್ಜಿಯನ್ನು ದೃಢೀಕೃತ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಜಾಹಿರಾತು ಪ್ರಕಟಗೊಂಡ 15 ದಿವಸದೊಳಗೆ ಮುದ್ದಾಂ ಅಥವಾ ನೋಂದಣಿ ಅಂಚೆ ಮೂಲಕ ಸಲ್ಲಿಸುವುದು. ಹೆಚ್ಚಿನ ವಿಷಯಗಳಿಗೆ ಕಚೇರಿಯನ್ನು ಸಂಪರ್ಕಿಸುವುದು.

  • ಮಹಾತ್ಮಾ ಗಾಂಧಿ ಇಂಧನ ಮತ್ತು ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ಹುದ್ದೆ ; ಈ ಕೂಡಲೇ ಅರ್ಜಿ ಸಲ್ಲಿಸಿ

    ಮಹಾತ್ಮಾ ಗಾಂಧಿ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಗೆ ಮೂರು ವರ್ಷದ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಹುದ್ದೆಯ ಹೆಸರು : ಸಮಾಲೋಚಕ‌ ಬೋಧಕರು ( ಬಯೋ ಎನರ್ಜಿ & ಘನ ತ್ಯಾಜ್ಯ ನಿರ್ವಹಣೆ )

    ಹುದ್ದೆ ಸಂಖ್ಯೆ : 01

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-09-2021 ರ ಸಂಜೆ 06.00 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ 080-23626359/23626493

    ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.