Author: Mallika

  • ಎಸ್‌ಎಸ್‌ಸಿ ಸ್ಟೆನೋಗ್ರಾಫರ್ ಫಲಿತಾಂಶ: ಇಲ್ಲಿದೆ ಸಂಪೂರ್ಣ ಮಾಹಿತಿ

    ಎಸ್‌ಎಸ್‌ಸಿ ಸ್ಟೆನೋಗ್ರಾಫರ್ ಫಲಿತಾಂಶ: ಇಲ್ಲಿದೆ ಸಂಪೂರ್ಣ ಮಾಹಿತಿ

    ಸಿಬ್ಬಂದಿ ನೇಮಕಾತಿ ಸಂಸ್ಥೆ, ಎಸ್‌ಎಸ್‌ಸಿ ಸ್ಟೆನೋಗ್ರಾಫರ್ 2019 ಫಲಿತಾಂಶವನ್ನು ಪ್ರಕಟಿಸಿದೆ.

    ಎಸ್‌ಎಸ್‌ಸಿ ಸ್ಟೆನೋಗ್ರಾಫರ್ ಕಟ್-ಆಫ್ ಅಂಕ, ವಿವಿಧ ಕೆಟಗರಿವಾರು ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್‌ನ್ನು ಅಭ್ಯರ್ಥಿಗಳು ಫಲಿತಾಂಶ ಶೀಟ್‌ನಲ್ಲಿ ಚೆಕ್ ಮಾಡಿ ತಿಳಿದುಕೊಳ್ಳಬಹುದು. ಅರ್ಹತಾ ಅಭ್ಯರ್ಥಿಗಳ ಅಂಕಗಳನ್ನು ಮಾರ್ಚ್ 23, 2021 ರಂದು ಎಸ್‌ಎಸ್‌ಸಿ ವೆಬ್‌ಸೈಟ್‌ ssc.nic.in ನಲ್ಲಿ ಅಪಲೋಡ್ ಮಾಡಲಾಗುತ್ತದೆ.

    ಸದರಿ ಫಲಿತಾಂಶಕ್ಕೆ ಪರಿಗಣಿಸಲಾದ ಅಂತಿಮ ಕೀ ಉತ್ತರಗಳನ್ನು ಎಸ್‌ಎಸ್‌ಸಿ ಯು ಮಾರ್ಚ್ ರಿಂದ ಎಪ್ರಿಲ್ ನಡುವೆ ಅಪ್‌ಲೋಡ್ ಮಾಡುವ ಸಾಧ್ಯತೆ ಇದೆ.

    ಎಸ್‌ಎಸ್‌ಸಿ ಸ್ಟೆನೋ ಲಿಂಕ್ ಗ್ರೇಡ್ ಸಿ

    ಎಸ್‌ಎಸ್‌ಸಿ ಸ್ಟೆನೋ ಲಿಂಕ್ ಗ್ರೇಡ್ ಡಿ

  • ಕಲಬುರಗಿ ನ್ಯಾಯಾಲಯದಲ್ಲಿ ವಕೀಲರ ನೇಮಕ

    ಕಲಬುರಗಿ ನ್ಯಾಯಾಲಯದಲ್ಲಿ ವಕೀಲರ ನೇಮಕ

    ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅಪರ ಸರಕಾರಿ ವಕೀಲರ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ : ಅಪರ ಸರ್ಕಾರಿ ವಕೀಲ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 2021 ಎಪ್ರಿಲ್ 5ರ ಸಂಜೆ 4 ಗಂಟೆ
    ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ವಿದ್ಯಾರ್ಹತೆ : ಕಾನೂನು ಪದವಿ ಪಡೆದಿರಬೇಕು.
    ಅನುಭವ : 7 ವರ್ಷಗಳ ಕಾಲ ವಕೀಲ ವೃತ್ತಿಯಲ್ಲಿ ಅನುಭವ ಹೊಂದಿರುವ ಹಾಗೂ ಅರ್ಹತೆಯುಳ್ಳ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅಭ್ಯರ್ಥಿಗಳು ತಮ್ಮ ಪೂರ್ಣ ಹೆಸರು, ಜನ್ಮದಿನಾಂಕ, ವಿದ್ಯಾರ್ಹತೆ, ಸದ್ಯದ ಅಂಚೆ ವಿಳಾಸ, ಜಿಲ್ಲಾ ಬಾರ್ ಅಸೋಸಿಯೇಷನ್ ನೋಂದಣಿ ವಿವರ, ಕರ್ನಾಟಕ ಬಾರ್ ಅಸೋಸಿಯೇಶನ್‌ ನಲ್ಲಿ ನೋಂದಣಿ ವಿವರ, ದಿವಾಣಿ ನ್ಯಾಯಾಲಯದಲ್ಲಿ ನಡೆಸಿದ ಪ್ರಕರಣಗಳ ಸಂಖ್ಯೆ, ಕ್ರಿಮಿನಲ್ ನ್ಯಾಯಾಲಯದಲ್ಲಿ ನಡೆಸಿದ ಪ್ರಕರಣಗಳ ಸಂಖ್ಯೆ, ಜಾತಿ ಮತ್ತು ಮತ್ತಿತರ ಪ್ರಮಾಣಪತ್ರಗಳನ್ನು (ಸಂಬಂಧಪಟ್ಟ ತಹಶೀಲ್ದಾರರ ಕಾರ್ಯಾಲಯದಿಂದ ಪಡೆದ) ದಾಖಲೆಗಳು ಹಾಗೂ ವೈಯಕ್ತಿಕ ವಿವರಗಳನ್ನೊಳಗೊಂಡ ಅರ್ಜಿಯನ್ನು ನಿಗದಿಪಡಿಸಲಾದ ಕೊನೆ ದಿನಾಂಕದೊಳಗೆ ಸಲ್ಲಿಸಬೇಕು.

    ಅರ್ಜಿ ಸಲ್ಲಿಸುವ ವಿಳಾಸ: ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ

  • ಬಾಗಲಕೋಟೆ ಸಖಿ ಕೇಂದ್ರದಲ್ಲಿ ವಿವಿಧ ಹುದ್ದೆ:

    ಬಾಗಲಕೋಟೆ ಸಖಿ ಕೇಂದ್ರದಲ್ಲಿ ವಿವಿಧ ಹುದ್ದೆ:

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬಾಗಲಕೋಟೆ ಸಖಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ: ಘಟಕ ಆಡಳಿತಾಧಿಕಾರಿ-1, ಪ್ಯಾರಾ ಲೀಗಲ್ ಪರ್ಸನಲ್-1, ವಕೀಲ-2 ಹುದ್ದೆಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 15,2021(ಸಂಜೆ 5.30ರೊಳಗೆ)

    ವಯೋಮಿತಿ : 45 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿ‌ನಡಿ ವೈದ್ಯಕೀಯ, ಪೊಲೀಸ್, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ಉದ್ದೇಶದಿಂದ ಎಂಎಸ್ ಡಬ್ಲ್ಯೂ, ಎಲ್ಎಲ್ಎಂ, ಎಲ್ಎಲ್ ಬಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

    ವಿಳಾಸ: ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾಡಳಿತ ಭವನ,ನವನಗರ,ಬಾಗಲಕೋಟೆ.

    ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

  • ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ

    ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ

    ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 31, ಮಾರ್ಚ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆಫ್ ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-03-2021

    ಹುದ್ದೆಗಳ ವಿವರ : ಟೆಕ್ನಿಕಲ್ ಅಸಿಸ್ಟೆಂಟ್ಸ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಟೆಕ್ನಿಕಲ್ ಅಸಿಸ್ಟೆಂಟ್ (ಅರಣ್ಯ) -3 ಹಾಗೂ ಟೆಕ್ನಿಕಲ್ ಅಸಿಸ್ಟೆಂಟ್ ( ಅಗ್ರಿಕಲ್ಚರ್) -1

    ಹುದ್ದೆ ಸ್ಥಳ: ಮೈಸೂರು-ಕರ್ನಾಟಕ

    ಹುದ್ದೆ ಸಂಖ್ಯೆ : 04

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.24,000/- ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ: ಅಂಗೀಕೃತ ಬೋರ್ಡ್/ಯುನಿವರ್ಸಿಟಿ ಯಿಂದ ಅಭ್ಯರ್ಥಿಗಳು ಬಿ.ಎಸ್ಸಿ, ಎಂಎಸ್ಸಿ ಪಾಸಾಗಿರಬೇಕು.

    ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ಹಾಗೂ ಗರಿಷ್ಠ 40 ವಯೋಮಿತಿಯನ್ನು ಮೀರಿರಬಾರದು.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

    ವಿಳಾಸ:

    Chief Executive Officer, Zilla Panchayat, Mysore – 570005, Karnataka.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • KPTCL GPCL : ಎಸ್ಎಸ್ಎಲ್ ಸಿ , ಐಟಿಐ ಓದಿರುವವರಿಗೆ ಅವಕಾಶ

    KPTCL GPCL : ಎಸ್ಎಸ್ಎಲ್ ಸಿ , ಐಟಿಐ ಓದಿರುವವರಿಗೆ ಅವಕಾಶ

    ಕೆಪಿಸಿಎಲ್ ಗ್ಯಾಸ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ‌ನಲ್ಲಿ ವಿವಿಧ ಹುದ್ದೆಗಳಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಹುದ್ದೆ: ಅಪ್ರೆಂಟಿಸ್ ಟ್ರೈನಿಂಗ್

    ಹುದ್ದೆ ಸಂಖ್ಯೆ : 12

    ಹುದ್ದೆ ಸ್ಥಳ : ಬೆಂಗಳೂರು

    ಹುದ್ದೆಗಳ ವಿವರ: ಐಟಿಐ (ಎಲೆಕ್ಟ್ರಿಶಿಯನ್)-3
    ಐಟಿಐ (ಫಿಟ್ಟರ್) – 3
    ಅಸಿಸ್ಟೆಂಟ್ ಫ್ರಂಟ್ ಆಫೀಸ್ ಮ್ಯಾನೇಜರ್- 6

    ವಿದ್ಯಾರ್ಹತೆ:ಐಟಿಐ (ಎಲೆಕ್ಟ್ರಿಶಿಯನ್) ಹಾಗೂ
    ಐಟಿಐ (ಫಿಟ್ಟರ್) ಹುದ್ದೆಗೆ ಅಭ್ಯರ್ಥಿಗಳು ಐಟಿಐ ಪಾಸಾಗಿರಬೇಕು. ಅಸಿಸ್ಟೆಂಟ್ ಫ್ರಂಟ್ ಆಫೀಸ್ ಮ್ಯಾನೇಜರ್ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ಕೆಪಿಸಿಎಲ್ ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ವೇತನ: ಐಟಿಐ (ಎಲೆಕ್ಟ್ರಿಶಿಯನ್) ಹಾಗೂ
    ಐಟಿಐ (ಫಿಟ್ಟರ್) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.10,000/- ವೇತನವಿರುತ್ತದೆ.
    ಅಸಿಸ್ಟೆಂಟ್ ಫ್ರಂಟ್ ಆಫೀಸ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ರೂ.‌7000/- ವೇತನವಿರುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಕೆಒಎಫ್ ವಿವಿಧ ಹುದ್ದೆ: ಎಪ್ರಿಲ್ 8 ಕಡೇ ದಿನಾಂಕ

    ಕೆಒಎಫ್ ವಿವಿಧ ಹುದ್ದೆ: ಎಪ್ರಿಲ್ 8 ಕಡೇ ದಿನಾಂಕ

    ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿಯಮಿತ ಕೇಂದ್ರ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಎಪ್ರಿಲ್ 8,2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-04-2021 ಸಂಜೆ 5.30

    ಹುದ್ದೆಗಳ ವಿವರ : ಜನರಲ್ ಮ್ಯಾನೇಜರ್ 1, ಅಸಿಸ್ಟೆಂಟ್ ಮ್ಯಾನೇಜರ್ 2, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ 1, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ (ಗುಣನಿಯಂತ್ರಣ) 1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ‌.

    ವಯೋಮಿತಿ : ಜನರಲ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 40 ಗರಿಷ್ಠ 52 ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ
    ಕನಿಷ್ಠ 18 ಹಾಗೂ ಗರಿಷ್ಠ 40 ವಯೋಮಿತಿ.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ 1 – 40 ವರ್ಷ ವರ್ಷ, ಹಿಂದುಳಿದ ಜಾತಿ/ ಸಮುದಾಯಕ್ಕೆ 38 ವರ್ಷ, ಸಾಮಾನ್ಯ ವರ್ಗದವರಿಗೆ‌ 35 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.

    ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.500/- ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.1000/- ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಅಭ್ಯರ್ಥಿಗಳಿಗೆ ಕನ್ನಡ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.ಮುಕ್ತ ವಿಶ್ವವಿದ್ಯಾಲಯದಿಂದ ಪಡೆದ ಪದವಿಯನ್ನು ಪರಿಗಣಿಸುವುದಿಲ್ಲ.

    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಕೆಲಸದ ಅನುಭವ, ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಅರ್ಹತೆಯ ಆಧಾರದ ‌ಮೇಲೆ ಆಯ್ಕೆ ಮಾಡಲಾಗುತ್ತದೆ.

    ವೆಬ್‌ಸೈಟ್‌ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
    ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ಕೆಸಿಒಜಿಎಫ್.ಲಿ.,ನಂ.11,4ನೇ ಮಹಡಿ, ಬ್ಲೂ ಕ್ರಾಸ್ ಛೇಂಬರ್ಸ್, ಇನ್ಫ್ರೆಂಟ್ರಿ ಅಡ್ಡ ರಸ್ತೆ ಬೆಂಗಳೂರು -01

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ