Author: Mallika

  • ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರಿನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

    ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರಿನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

    ದಿ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಮೈಸೂರು( ಪ್ರಾದೇಶಿಕ ಶಿಕ್ಷಣ ಸಂಸ್ಥೆ ) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು 29-03-2021 ಮತ್ತು 30-03-2021 ನಡೆಯುವ ಸಂದರ್ಶನದಲ್ಲಿ ಭಾಗಿಯಾಗಬಹುದು. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಹುದ್ದೆ: ಗಣಿತ ಸಹಾಯಕ ಪ್ರಾಧ್ಯಾಪಕ -02
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಪೆಡಾಗೊಜಿ ಆಫ್ ಸೋಷಿಯಲ್ ಸೈನ್ಸ್-01
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಗೈಡೆನ್ಸ್ ಸೈಕಾಲಜಿ/ಕೌನ್ಸಿಲಿಂಗ್-01
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸ್ಪೆಷಲ್ ಎಜುಕೇಶನ್-01
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಕೆಮಿಸ್ಟ್ರಿ-01

    ಲ್ಯಾಬ್ ಅಸಿಸ್ಟೆಂಟ್– ಬಾಟನಿ (ಸಸ್ಯ ಶಾಸ್ತ್ರ)-01 ಹುದ್ದೆ
    ಫಿಸಿಕ್ಸ್ (ಭೌತಶಾಸ್ತ್ರ)-01
    ಸೈಕಾಲಜಿ (ಸೈಕಾಲಜಿ)-01
    ಕೆಮಿಸ್ಟ್ರಿ(ರಸಾಯನಶಾಸ್ತ್ರ)-01

    ವಿದ್ಯಾರ್ಹತೆ: ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಎಂ.ಇಡಿ, ಮಾಸ್ಟರ್ಸ್ ಡಿಗ್ರಿ, ಬಿಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.


    ವಯೋಮಿತಿ : ಅಸಿಸ್ಟೆಂಟ್ ಪ್ರೊಫೆಸರ್ ಇನ್ ಮ್ಯಾತ್ಸ್ ,
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಪೆಡಾಗೊಜಿ ಆಫ್ಸೋಷಿಯಲ್ ಸೈನ್ಸ್,
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಾಲಜಿ/ಕೌನ್ಸಲಿಂಗ್, ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸ್ಪೆಷಲ್ ಎಜುಕೇಶನ್ ಮತ್ತು
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಕೆಮಿಸ್ಟ್ರಿ ಹುದ್ದೆಗೆ ಯುಜಿಸಿ ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.
    ಲ್ಯಾಬ್ ಅಸಿಸ್ಟೆಂಟ್- ಬಾಟನಿ, ಫಿಸಿಕ್ಸ್ , ಸೈಕಾಲಜಿ , ಕೆಮಿಸ್ಟ್ರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 30 ವರ್ಷ ಮೀರಿರಬಾರದು.

    ಪರಿಶಿಷ್ಟ ಜಾತಿ/ಪಂಗಡ,ಒಬಿಸಿ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ : ಗಣಿತ ಸಹಾಯಕ ಪ್ರಾಧ್ಯಾಪಕ, ಅಸಿಸ್ಟೆಂಟ್ ಪ್ರೊಫೆಸರ್ ಇನ್ ಪೆಡಾಗೊಜಿ ಆಫ್ ಸೋಷಿಯಲ್ ಸೈನ್ಸ್,
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಾಲಜಿ/ಕೌನ್ಸಲಿಂಗ್, ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸ್ಪೆಷಲ್ ಎಜುಕೇಶನ್ ಮತ್ತು
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಕೆಮಿಸ್ಟ್ರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.45,000/- ವೇತನ ನಿಗದಿಪಡಿಸಲಾಗಿದೆ.
    ಲ್ಯಾಬ್ ಅಸಿಸ್ಟೆಂಟ್- ಬಾಟನಿ, ಫಿಸಿಕ್ಸ್ , ಸೈಕಾಲಜಿ , ಕೆಮಿಸ್ಟ್ರಿ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ರೂ.17,000/- ವೇತನವಿರುತ್ತದೆ.

    ಸಂದರ್ಶನ ದಿನಾಂಕ : ಗಣಿತ ಸಹಾಯಕ ಪ್ರಾಧ್ಯಾಪಕ-ದಿನಾಂಕ 29-03-2021 ಸಮಯ 10.00am
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಪೆಡಾಗೊಜಿ ಆಫ್ ಸೋಷಿಯಲ್ ಸೈನ್ಸ್,-ದಿನಾಂಕ 29-03-2021 ಸಮಯ 11.30 am
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಾಲಜಿ ದಿನಾಂಕ 29-03-2021 ಸಮಯ 02.30pm
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸ್ಪೆಷಲ್ ಎಜುಕೇಶನ್ ದಿನಾಂಕ 29-03-2021 ಸಮಯ 04.00pm
    ಅಸಿಸ್ಟೆಂಟ್ ಪ್ರೊಫೆಸರ್ ಇನ್ ಕೆಮಿಸ್ಟ್ರಿ ಹುದ್ದೆಗೆ ದಿನಾಂಕ 30-03-2021 ಸಮಯ 10.00am
    ಲ್ಯಾಬ್ ಅಸಿಸ್ಟೆಂಟ್-ಬಾಟನಿದಿನಾಂಕ 30-03-2021 ಸಮಯ 12.00 ಮಧ್ಯಾಹ್ನ,
    ಫಿಸಿಕ್ಸ್ ದಿನಾಂಕ 30-03-2021 ಸಮಯ 02.30pm
    ಸೈಕಾಲಜಿ ದಿನಾಂಕ 30-03-2021 ಸಮಯ 03.30pm
    ಕೆಮಿಸ್ಟ್ರಿ ದಿನಾಂಕ 30-03-2021 ಸಮಯ 04.30pm

    ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಂದರ್ಶನಕ್ಕೆ ಹಾಜರಾಗಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.riemysore.ac.in ಗೆ ಭೇಟಿ ನೀಡಬಹುದು

  • KSP DV ಪ್ರವೇಶ ಪತ್ರ ಪ್ರಕಟ

    KSP DV ಪ್ರವೇಶ ಪತ್ರ ಪ್ರಕಟ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹುದ್ದೆಗಳ ದಾಖಲೆ ಪರಿಶೀಲನೆಯ ಪ್ರವೇಶ ಪತ್ರ ಪ್ರಕಟಿಸಿದೆ.

    ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ನಂತರ srpc reserve police constable recruitment 2021 ಗೆ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ my application ಗೆ ಕ್ಲಿಕ್ ಮಾಡಿ, ಆನಂತರ ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಜನ್ಮ ದಿನಾಂಕ ನಮೂದಿಸಿ. ಪ್ರವೇಶ ಪತ್ರ ಪ್ರಕಟವಾಗುತ್ತದೆ.

    ಅಧಿಕೃತ ವೆಬ್‌ಸೈಟ್‌ ಲಿಂಕ್

  • ಆರ್ ಆರ್ ಸಿ ದಕ್ಷಿಣ ಮಧ್ಯ ರೈಲ್ವೆ 96 ಹುದ್ದೆ

    ಆರ್ ಆರ್ ಸಿ ದಕ್ಷಿಣ ಮಧ್ಯ ರೈಲ್ವೆ 96 ಹುದ್ದೆ

    ಆರ್ ಆರ್ ಸಿ ದಕ್ಷಿಣ ಮಧ್ಯ ರೈಲ್ವೆ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಎಪ್ರಿಲ್ 14 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-04-2021
    ಅರ್ಜಿ ಶುಲ್ಕ: ಅರ್ಜಿದಾರರು ಯಾವುದೇ ಅರ್ಜಿಯನ್ನು ಶುಲ್ಕ ಪಾವತಿಸುವಂತಿಲ್ಲ ‌

    ಹುದ್ದೆಗಳ ವಿವರ: ಜ್ಯೂನಿಯರ್ ಇಂಜಿನಿಯರ್, ಜ್ಯೂನಿಯರ್ ಟ್ರಾನ್ಸ್ ಲೇಟರ್, ಸ್ಟೆನೋಗ್ರಾಫರ್ ಗ್ರೇಡ್ 3 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಒಟ್ಟು ಹುದ್ದೆ : 96

    ವಿದ್ಯಾರ್ಹತೆ : ಡಿಪ್ಲೋಮಾ/ಬಿ.ಇ/ಬಿ.ಟೆಕ್/ಸ್ನಾತಕೋತ್ತರ ಪದವಿ, 12 ನೇ ತರಗತಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಯೋಮಿತಿ : ಜುಲೈ 1, 2021 ರ ಅನ್ವಯ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 42 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 45, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ 47 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ‌ನೀಡಿ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಎಪ್ರಿಲ್ 14 ರಾತ್ರಿ 11.59 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • SBI ಕ್ಲರ್ಕ್ ಫಲಿತಾಂಶ ಬಿಡುಗಡೆ

    SBI ಕ್ಲರ್ಕ್ ಫಲಿತಾಂಶ ಬಿಡುಗಡೆ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು, ಎಸ್‌ಬಿಐ ಕ್ಲರ್ಕ್ 2020 ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಎಸ್‌ಬಿಐ ಕ್ಲರ್ಕ್ 2020 ಪರೀಕ್ಷೆ ಬರೆದ ಅಭ್ಯರ್ಥಿಗಳು ಮೊದಲ ಕಾಯ್ದಿರಿಸಿದ ಪಟ್ಟಿಯನ್ನುsbi.co.in ವೆಬ್‌ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಲು ಅವಕಾಶವಿದೆ.

    ಎಸ್‌ಬಿಐ ಕ್ಲರ್ಕ್ 2020 ಫಲಿತಾಂಶವನ್ನು ಮುಖ್ಯ ಪರೀಕ್ಷೆಗೆ ಬಿಡುಗಡೆ ಮಾಡಿದೆ. ಈ ಪರೀಕ್ಷೆಯನ್ನು ನವಂಬರ್ 07 ಮತ್ತು ಡಿಸೆಂಬರ್ 31,2020 ರಂದು ಮಾಡಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆ ಮೂಲಕ 8000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಿಶೇಷ ನೇಮಕಾತಿ ಡ್ರೈವ್ ನಲ್ಲಿ 130 ಹುದ್ದೆಗಳನ್ನು. 7870 ಹುದ್ದೆಗಳನ್ನು ರೆಗ್ಯುಲರ್ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.

    ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಇತರೆ ದಾಖಲೆಗಳನ್ನು ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕದಂದು ನೀಡಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಎಸ್‌ಬಿಐ ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್ ವಿಭಾಗಕ್ಕೆ ಜೂನಿಯರ್ ಅಸಿಸ್ಟೆಂಟ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

  • ಜನರಲ್ ಇನ್‌ಶುರೆನ್ಸ್ ಕಾಪೋರೇಶನ್‌ ಆಫ್ ಇಂಡಿಯಾದಲ್ಲಿ ಹುದ್ದೆ

    ಜನರಲ್ ಇನ್‌ಶುರೆನ್ಸ್ ಕಾಪೋರೇಶನ್‌ ಆಫ್ ಇಂಡಿಯಾದಲ್ಲಿ ಹುದ್ದೆ

    ಜನರಲ್ ಇನ್‌ಶುರೆನ್ಸ್‌ ಕಾರ್ಪೋರೇಶನ್ ಆಫ್ ಇಂಡಿಯಾ ದಲ್ಲಿ ಹುದ್ದೆಗಳಿದ್ದು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಹುದ್ದೆ : ಅಸಿಸ್ಟೆಂಟ್ ಮ್ಯಾನೇಜರ್ ಆಪೀಸರ್(ಸ್ಕೇಲ್ I) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಒಟ್ಟು ಹುದ್ದೆಗಳ ಸಂಖ್ಯೆ : 44

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 29, 2021

    ಅರ್ಜಿ ಶುಲ್ಕ : ಅರ್ಜಿದಾರರು ರೂ. 850/- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

    ವಯೋಮಿತಿ : ಫೆಬ್ರವರಿ 1,2021 ರ ಅನ್ವಯ ಕನಿಷ್ಟ21 ರಿಂದ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ಅಭ್ಯರ್ಥಿಗಳಿಗೆ ನೀಡಲಾಗಿರುತ್ತದೆ.

    ವಿದ್ಯಾರ್ಹತೆ : ಪದವಿ,ಸಿಎ, ಎಲ್‌ಎಲ್‌ಬಿ.ಪಿಜಿ/ಡಿಪ್ಲೋಮಾ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮಾರ್ಚ್ 29,2021 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • 34 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆ: ವಿವರ ಇಲ್ಲಿದೆ

    34 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆ: ವಿವರ ಇಲ್ಲಿದೆ

    ಉಡುಪಿ ಜಿಲ್ಲೆಯ ನಾಲ್ಕು ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 16.04.2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23.03.2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-04-2021
    ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

    ಈಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ಹುದ್ದೆಗಳ ವಿವರ: ಉಡುಪಿ ಜಿಲ್ಲೆಯ ನಾಲ್ಕು ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ 7 ಅಂಗನವಾಡಿ ಕಾರ್ಯಕರ್ತೆ ಹಾಗೂ 27 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ‌.

    ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆಗೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು.
    ಅಂಗನವಾಡಿ ಸಹಾಯಕಿ ಹುದ್ದೆಗೆ ಕನಿಷ್ಠ 4 ನೇ ತರಗತಿ ಹಾಗೂ ಗರಿಷ್ಠ 9 ನೇ ತರಗತಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಕನಿಷ್ಠ 18 ಹಾಗೂ ಗರಿಷ್ಠ 35 ಆಯ್ಕೆ ವಯೋಮಿತಿ ಯ ಅದೇ ಗ್ರಾಮದ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ‌.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ಆನ್ಲೈನ್ ಅಪ್ಲಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ