Author: Mallika

  • DSIIDC ನಲ್ಲಿ 119 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    DSIIDC ನಲ್ಲಿ 119 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ದೆಹಲಿ ಸ್ಟೇಟ್ ಇಂಡಸ್ಟ್ರಿಯಲ್ ಆಂಡ್ ಇಂಪ್ರಾಸ್ಟ್ರಕ್ಚರ್ ಡೆವಲೆಪ್‌ಮೆಂಟ್ ಕೋರ್ಪರೇಶನ್ ಲಿಮಿಟೆಡ್(ಡಿಎಸ್‌ಐಐಡಿಸಿ) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಅಸಿಸ್ಟೆಂಟ್, ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ : 119

    ಹುದ್ದೆ ಸ್ಥಳ : ದೆಹಲಿ

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-04-2021

    ಹುದ್ದೆಗಳ ವಿವರ : ಸುಪರಿಂಟೆಂಡಿಂಗ್ ಇಂಜಿನಿಯರ್ (ಸಿವಿಲ್ ಮತ್ತು ಎಲೆಕ್ಟ್ರಿಕಲ್ )- 3
    ಎಕ್ಸಿಕ್ಯುಟಿವ್ ಇಂಜಿನಿಯರ್ -2
    ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್-14
    ಚೀಫ್ ಮ್ಯಾನೇಜರ್-1
    ಡಿವಿಶನಲ್ ಮ್ಯಾನೇಜರ್-3, ಸೀನಿಯರ್ ಮ್ಯಾನೇಜರ್- 9, ಮ್ಯಾನೇಜರ್- 15, ಅಸಿಸ್ಟೆಂಟ್ ಗ್ರೇಡ್-(I)-30, ಡಿವಿಶನಲ್ ಅಕೌಂಟ್ಸ್ ಆಫೀಸರ್ -4
    ಅಸಿಸ್ಟೆಂಟ್ ಕರ್ಮಶಿಯಲ್ ಅಕೌಂಟೆಂಟ್-8, ಅಕೌಂಟ್ಸ್‌ ಅಸಿಸ್ಟೆಂಟ್‌-30

    ವಿದ್ಯಾರ್ಹತೆ : ಸುಪರಿಂಟೆಂಡಿಂಗ್ ಇಂಜಿನಿಯರ್ (ಸಿವಿಲ್ ಮತ್ತು ಎಲೆಕ್ಟ್ರಿಕಲ್ ) , ಎಕ್ಸಿಕ್ಯುಟಿವ್ ಇಂಜಿನಿಯರ್ ,ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಡಿಗ್ರಿ ಪಡೆದಿರಬೇಕು.
    ಚೀಫ್ ಮ್ಯಾನೇಜರ್, ಡಿವಿಶನಲ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಎ/ಎಂಎ/ಎಂಸಿಎ ಪಡೆದಿರಬೇಕು. ಮ್ಯಾನೇಜರ್- ಅಸಿಸ್ಟೆಂಟ್ ಗ್ರೇಡ್-(I ) ಹುದ್ದೆಗಳಿಗೆ ಬ್ಯಾಚುಲರ್ಸ್‌ ಡಿಗ್ರಿ ಹೊಂದಿರಬೇಕು. ಡಿವಿಶನಲ್ ಅಕೌಂಟ್ಸ್ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳು ಸಿಎ/ಸಿಎಂಎ,ಎಂಬಿಎ ಮಾಡಿರಬೇಕು.
    ಅಸಿಸ್ಟೆಂಟ್ ಕರ್ಮಶಿಯಲ್ ಅಕೌಂಟೆಂಟ್ ಹಾಗೂ ಅಕೌಂಟ್ಸ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಬಿ.ಕಾಂ ಪದವಿ ಹೊಂದಿರಬೇಕು.

    ವಯೋಮಿತಿ : ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 56 ವರ್ಷ ಮೀರಿರಬಾರದು.

    ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್‌ ಅಥವಾ ರಿಜಿಸ್ಟರ್ ಪೋಸ್ಟ್‌ ಮೂಲಕ ಸಲ್ಲಿಸಬೇಕು.

    ವಿಳಾಸ : N-36, Bombay Life Building, Cannaught Circus, New Delhi _ 110001

    ಅಧಿಕೃತ ವೆಬ್‌ಸೈಟ್ ಲಿಂಕ್‌ ಗಾಗಿ ಇಲ್ಲಿ ಕ್ಲಿಕ್ ಮಾಡಿ.

    ನೋಟಿಫಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

  • ಜೆಇಇ : ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನ

    ಜೆಇಇ : ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನ

    ಜೆಇಇ ಎಪ್ರಿಲ್ ಮತ್ತು ಮೇ ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಜೆಇಇ ಎಪ್ರಿಲ್ ಸೆಷನ್‌ನಲ್ಲಿ ಪೇಪರ್ 2 ಪರೀಕ್ಷೆ ಇರುವುದಿಲ್ಲ. ಆದ್ದರಿಂದ ಮೇ ಸೆಷನ್ ಪರೀಕ್ಷೆಯಲ್ಲಿ ಪೇಪರ್ 2 (ಬಿ.ಆರ್ಕಿಟೆಕ್ಚರ್ ಅಥವಾ ಬಿ.ಪ್ಲಾನಿಂಗ್) ತೆಗೆದುಕೊಳ್ಳಬಹುದು.

    ಆಸಕ್ತ ಅಭ್ಯರ್ಥಿಗಳು ಮಾರ್ಚ್‌ 25, 2021 ರಿಂದ ಎಪ್ರಿಲ್ 04, 2021 ರೊಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

    ಜೆಇಇ ಮೇನ್ 2021 ರ್ಯಾಕಿಂಗ್ ಪಟ್ಟಿಯನ್ನು ಮೇ ಸೆಷನ್ ಪರೀಕ್ಷೆ ಫಲಿತಾಂಶದ ನಂತರ ಬಿಡುಗಡೆ ಮಾಡಲಾಗುತ್ತದೆ. ಮೇ ಸೆಷನ್ ಜೆಇಇ ಎಪ್ರಿಲ್ ಸೆಷನ್ ಫಲಿತಾಂಶ ನಂತರ ಮತ್ತೊಮ್ಮೆ ರಿಜಿಸ್ಟ್ರೇಶನ್ ವಿಂಡೋ ತೆರೆಯಲಾಗುತ್ತದೆ.

    ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯನ್ನು ಜುಲೈ 3,2021 ರಂದು ನಡೆಸಲು ದಿನಾಂಕ ನಿಗದಿಯಾಗಿದೆ.

    ಜೆಇಇ ಮೇನ್ 2021 ಎಪ್ರಿಲ್, ಮೇ ಪರೀಕ್ಷೆಯ ಪ್ರಮುಖ ದಿನಾಂಕ :
    ಜೆಇಇ ಮೇನ್ 2021: ಎಪ್ರಿಲ್ ಪರೀಕ್ಷೆಯು ಎಪ್ರಿಲ್ 27, 28 ,29 ಮತ್ತು 30 ರಂದು ನಡೆಯಲಿದೆ.
    ಜೆಇಇ ಮೇನ್ 2021 : ಮೇ ಪರೀಕ್ಷೆಯು ಮೇ 24 ರಿಂದ ಮೇ 28, 2021 ರವರೆಗೆ ನಡೆಯಲಿದೆ.

    ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿಸಲ್ಲಿಸುವ ಬಗೆ ಈ ರೀತಿ ಇದೆ :

    ಅಭ್ಯರ್ಥಿಗಳು ಜೆಇಇ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಹೋಂ ಪೇಜ್‌ನಲ್ಲಿ ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನಂತರ ರಿಜಿಸ್ಟ್ರೇಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿದ ಮೇಲೆ ಅಭ್ಯರ್ಥಿಗಳು ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ನೀಡಿ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಶುಲ್ಕ ಪಾವತಿಸಿ. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಲ್ಲಿಸಿದ ಬಳಿಕ ಪ್ರಿಂಟೌಟ್ ತೆಗೆಯಿರಿ.

    ಅಧಿಕೃತ ವೆಬ್‌ಸೈಟ್ ಲಿಂಕ್‌ ಗಾಗಿ ಇಲ್ಲಿ ಕ್ಲಿಕ್ ಮಾಡಿ.

    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

  • ದಾವಣಗೆರೆ ಜಿಲ್ಲಾ ಪಂಚಾಯತ್ : ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

    ದಾವಣಗೆರೆ ಜಿಲ್ಲಾ ಪಂಚಾಯತ್ : ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

    ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಸೇವೆ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ: ತಾಂತ್ರಿಕ ಸಹಾಯಕ (ಅರಣ್ಯ)-03
    ತಾಂತ್ರಿಕ ಸಹಾಯಕ (ಕೃಷಿ) – 04
    ತಾಂತ್ರಿಕ ಸಹಾಯಕ (ತೋಟಗಾರಿಕೆ) -03
    ತಾಂತ್ರಿಕ ಸಹಾಯಕ (ಸಿವಿಲ್) -04
    ತಾಲೂಕು ಎಂಇಎಸ್ ಸಂಯೋಜಕರು -01 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-03-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-04-2021

    ವಿದ್ಯಾರ್ಹತೆ: ತಾಂತ್ರಿಕ ಸಹಾಯಕ (ಅರಣ್ಯ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ (ಅರಣ್ಯ)/ಎಂಎಸ್ಸಿ (ಅರಣ್ಯ) ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ 2-3 ವರ್ಷಗಳ ಅನುಭವ.
    ತಾಂತ್ರಿಕ ಸಹಾಯಕ (ಕೃಷಿ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ (ಕೃಷಿ)/ಎಂಎಸ್ಸಿ (ಕೃಷಿ) ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ 2-3 ವರ್ಷಗಳ ಅನುಭವ.
    ತಾಂತ್ರಿಕ ಸಹಾಯಕ (ತೋಟಗಾರಿಕೆ) ಬಿ.ಎಸ್ಸಿ ( ತೋಟಗಾರಿಕೆ )/ಎಂಎಸ್ಸಿ (ತೋಟಗಾರಿಕೆ) ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ 2-3 ವರ್ಷಗಳ ಅನುಭವ.
    ತಾಂತ್ರಿಕ ಸಹಾಯಕ (ಸಿವಿಲ್) – ಈ‌ ಹುದ್ದೆಗೆ ಬಿಇ(ಸಿವಿಲ್)/ಬಿಟೆಕ್(ಸಿವಿಲ್) ಇಂಜಿನಿಯರಿಂಗ್ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ, ಕಂಪ್ಯೂಟರ್ ಅನುಭವ ಇರಬೇಕು. ತಾಲೂಕು ಎಂಇಎಸ್ ಸಂಯೋಜಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಸಿಎ/ಬಿಎಸ್ಸಿ ( ಕಂಪ್ಯೂಟರ್ ಸೈನ್ಸ್) ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್ ಜೊತೆಗೆ ಸಂಬಂದಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ, ಕಂಪ್ಯೂಟರ್ ಅನುಭವ, ಎಂಎಸ್ ಆಫೀಸ್, ಎಕ್ಸೆಲ್ ಅನುಭವ ಹೊಂದಿರಬೇಕು.

    ವಯೋಮಿತಿ : ಅಭ್ಯರ್ಥಿಗಳು ಹುದ್ದೆಗಳಿಗನುಸಾರವಾಗಿ ಕನಿಷ್ಠ 21 ರಿಂದ ಗರಿಷ್ಠ 45 ವರ್ಷ ರೊಳಗಿನವರಾಗಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಸೂಲಿಬೆಲೆ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಹುದ್ದೆ

    ಸೂಲಿಬೆಲೆ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಹುದ್ದೆ

    ಸೂಲಿಬೆಲೆ ಗ್ರಾಮ ಪಂಚಾಯತಿ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಹುದ್ದೆ : ವಾಟರ್ ಮನ್- 01
    ಪೌರಕಾರ್ಮಿಕರು -02
    ಟ್ರಾಕ್ಟರ್ ಚಾಲಕ -01 ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-04-2021

    ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ವಿವರಗಳಿಗಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ : 8277122171

    ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಗೌರವಧನ ಆಧಾರದ ಮೇಲೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ‌ ಮಾಡಲಾಗುತ್ತದೆ.

  • ಕೊಪ್ಪಳದಲ್ಲಿ ಏ.3 ರಂದು ಸಂದರ್ಶನ

    ಕೊಪ್ಪಳದಲ್ಲಿ ಏ.3 ರಂದು ಸಂದರ್ಶನ

    ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಎಪ್ರಿಲ್ 3 ರಂದು ಬೆಳಗ್ಗೆ 10.30ಕ್ಕೆ ವಾಕ್ ಇನ್ ಇಂಟರ್ವ್ಯೂ ನ್ನು ಕೊಪ್ಪಳದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.

    ಇಂಡಿಯನ್ ಮನಿ ಪ್ರೈ.ಲಿ ಹುಬ್ಬಳ್ಳಿ ಅವರು ಭಾಗವಹಿಸಿ ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

    ಈ ಸಂದರ್ಶನದಲ್ಲಿ ಭಾಗವಹಿಸಲು ಅರ್ಜಿ ಶುಲ್ಕವಿರುವುದಿಲ್ಲ. ಎಲ್ಲರಿಗೂ ಉಚಿತ ಪ್ರವೇಶವಿದೆ.

    ಅರ್ಹತೆ : ಪಿಯುಸಿ,ಡಿಪ್ಲೋಮಾ ಮತ್ತು ಯಾವುದೇ ಪದವೀಧರರು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. (ಬಿ. ಇ ಹೊರತುಪಡಿಸಿ)

    ವಯೋಮಿತಿ: 18 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಈ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.

    ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲಾ ಮೂಲ ಪ್ರಮಾಣ ಪತ್ರಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ, 1 ರಿಂದ 3 ಬಯೋಡೇಟಾ ಪ್ರತಿಗಳು, 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಡಳಿತ ಕೇಂದ್ರ, ಮೊದಲನೇ ಮಹಡಿ, ಕೊಪ್ಪಳ.
    ದೂ.ಸಂಖ್ಯೆ : 08539-220859, 9353515518 ಹಾಗೂ 6364397640 ಸಂಪರ್ಕಿಸಬಹುದು.

  • ಸಾರಸ್ವತ ಬ್ಯಾಂಕ್ ಆನ್ಲೈನ್   ಪ್ರವೇಶ ಪತ್ರ ಪ್ರಕಟ

    ಸಾರಸ್ವತ ಬ್ಯಾಂಕ್ ಆನ್ಲೈನ್ ಪ್ರವೇಶ ಪತ್ರ ಪ್ರಕಟ

    ಸಾರಸ್ವತ್ ಬ್ಯಾಂಕ್ ಜ್ಯೂನಿಯರ್ ಆಫೀಸರ್ ಹುದ್ದೆಗಳ ನೇಮಕಾತಿಯ ಆನ್ಲೈನ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪ್ರಕಟ ಮಾಡಿದೆ.

    ಮಾರ್ಚ್ 19, 2021ರಂದು ಸಾರಸ್ವತ್ ಬ್ಯಾಂಕ್ 150 ಜ್ಯೂನಿಯರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿತ್ತು.

    ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆಯ ಮೂಲಕ ಪ್ರವೇಶ ಪತ್ರವನ್ನು ಪ್ರಕಟ ಮಾಡಲಾಗಿದೆ.

    ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಹೋಂ ಪೇಜ್ ಮೇಲಿರುವ careers ಮೇಲೆ ಕ್ಲಿಕ್ ಮಾಡಿ. ನಂತರ recruitment for the post of junior officer 2021 ಮೇಲೆ ಕ್ಲಿಕ್ ಮಾಡಿ. ನಂತರ ಮತ್ತೊಂದು ಪುಟಕ್ಕೆ ಹೋಗುವಿರಿ. ಅಲ್ಲಿ registration number/roll number ಮತ್ತು password/date of birth ನ್ನು ನಮೂದಿಸಿ. ಪ್ರವೇಶ ಪತ್ರ ಸ್ಕ್ರೀನ್ ಮೇಲೆ ಮೂಡುವುದು. ಸೇವ್ ಮಾಡಿಟ್ಟುಕೊಳ್ಳಿ.

    ಅಧಿಕೃತ ವೆಬ್‌ಸೈಟ್‌ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.

    ನೇರವಾಗಿ ಪ್ರವೇಶ ಪತ್ರವನ್ನು ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ