Author: Mallika

  • ಸರ್ಕಾರಿ ವೈಮಾನಿಕ ಶಾಲೆ ಖಾಲಿ ಇರುವ ಹುದ್ದೆಗೆ ನೇಮಕ

    ಸರ್ಕಾರಿ ವೈಮಾನಿಕ ಶಾಲೆ ಖಾಲಿ ಇರುವ ಹುದ್ದೆಗೆ ನೇಮಕ

    ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆ : ಮುಖ್ಯ ವಿಮಾನ ಬೋಧಕರ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಅರ್ಹತೆ : ಡೈರೆಕ್ಟರ್ ಜನರಲ್ ‌ಆಫ್ ಸಿವಿಲ್ ಏವಿಯೇಷನ್ (DGCA) CAR SECTION-7 SERIES 1 PART V ISSUE II ,20TH February 2015, ರಲ್ಲಿನ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು.

    ನಿವೃತ್ತಿ ಹೊಂದಿದ ಏರ್ ಫೋರ್ಸ್ ಪೈಲೆಟ್ ಗಳು ಸಹ ಅರ್ಜಿಗಳನ್ನು ಸಲ್ಲಿಸಬಹುದು.

    ಒಟ್ಟು ಹುದ್ದೆ : 01

    ವಯೋಮಿತಿ : 65 ವರ್ಷ ದಿನಾಂಕ 30.03.2021 ರಂತೆ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-04-2021

    ಗುತ್ತಿಗೆ ಅವಧಿ : 3 ವರ್ಷಗಳು.

    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಇ-ಮೇಲ್ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿದೆ.

    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ನಿರ್ದೇಶಕರು, ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ, ಯಲಹಂಕ ಅಂಚೆ, ಬೆಂಗಳೂರು – 560064 ಇವರಿಗೆ ಕಳುಹಿಸಬೇಕು.

  • UPSC : 28 ಪ್ರೊಫೆಸರ್ ಹುದ್ದೆ: ಈ ಕೂಡಲೇ ಅರ್ಜಿ ಸಲ್ಲಿಸಿ

    UPSC : 28 ಪ್ರೊಫೆಸರ್ ಹುದ್ದೆ: ಈ ಕೂಡಲೇ ಅರ್ಜಿ ಸಲ್ಲಿಸಿ

    ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಶನ್ (ಯುಪಿಎಸ್ ಸಿ) ವಿವಿಧ ವಿಷಯಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಆಯೋಗವು ಒಟ್ಟು 28 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-04-2021
    ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ : 16-04-2021

    ಹುದ್ದೆಗಳ ವಿವರ : ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ಸ್)
    ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ (ಫಿಸಿಯಾಲಜಿ)
    ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ ( ಮನೋವೈದ್ಯ ಶಾಸ್ತ್ರ)
    ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ ( ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ)

    ವಿದ್ಯಾರ್ಹತೆ : ಅಭ್ಯರ್ಥಿಗಳು ಹುದ್ದೆಗಳಿಗನುಸಾರವಾಗಿ ಎಂ.ಬಿ.ಬಿ.ಎಸ್, ಎಂ.ಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಜೊತೆಗೆ ಕಾರ್ಯಾನುಭವವನ್ನು ಹೊಂದಿರಬೇಕು.

    ಈ‌ ಹುದ್ದೆಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಡಳಿತ ಇಲಾಖೆಯಲ್ಲಿ ನೇಮಕ‌‌ ಮಾಡಿಕೊಳ್ಳಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಪಶ್ಚಿಮ ಕೇಂದ್ರ ರೈಲ್ವೆ : 716 ಅಪ್ರೆಂಟಿಸ್ ಹುದ್ದೆ

    ಪಶ್ಚಿಮ ಕೇಂದ್ರ ರೈಲ್ವೆ : 716 ಅಪ್ರೆಂಟಿಸ್ ಹುದ್ದೆ

    ವೆಸ್ಟ್ ಸೆಂಟ್ರಲ್ ರೈಲ್ವೆನಲ್ಲಿ (ಪಶ್ಚಿಮ ಕೇಂದ್ರ ರೈಲ್ವೆ) ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 30 ಎಪ್ರಿಲ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಹುದ್ದೆಗಳ ವಿವರ : ವೆಸ್ಟರ್ನ್ ಸೆಂಟ್ರಲ್ ರೈಲ್ವೆ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ಒಟ್ಟು ಹುದ್ದೆ : 716

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-04-2021

    ಹುದ್ದೆಗಳ ವಿವರ: ಎಲೆಕ್ಟ್ರಿಶಿಯನ್-135
    ಫಿಟ್ಟರ್-102
    ವೆಲ್ಡರ್ – 43
    ಪೈಂಟರ್- 75
    ಮಸೋನ – 61
    ಕಾರ್ಪೆಂಟರ್ – 73
    ಎಲೆಕ್ಟ್ರಾನಿಕ್ಸ್ – 30
    ಪ್ಲಂಬರ್- 58
    ಫೋರ್ಜರ್ ಆಂಡ್ ಹೀಟ್ ಅಪರೇಟರ್- 63
    ವೈರ್ ಮ್ಯಾನ್- 50
    ಕಂಪ್ಯೂಟರ್ ಒಪರೇಟರ್ ಮತ್ತು ಪ್ರೊಗ್ರಾಮಿಂಗ್ ಅಸಿಸ್ಟೆಂಟ್ – 10
    ಮೆಶಿನಿಸ್ಟ್ -5
    ಟ್ಯೂನರ್ – 2
    ಲ್ಯಾಬ್ ಅಸಿಸ್ಟೆಂಟ್- 2
    ಕ್ರೇನ್ ಅಪರೇಟರ್ -2
    ಡ್ರಾಫ್ಟ್ ಮ್ಯಾನ್-5

    ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.100/-, ಇತರೆ ವರ್ಗದ ಅಭ್ಯರ್ಥಿಗಳಿಗೆ ರೂ.70/-

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ಹಾಗೂ ಗರಿಷ್ಠ 24 ವಯೋಮಿತಿ ಇರಬೇಕು.

    ವರ್ಗಾವಾರು ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಮೆಟ್ರಿಕ್ ನಂತರ ಐಟಿಐ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • KSCDRC ನಲ್ಲಿ‌ ವಿವಿಧ ಹುದ್ದೆ

    KSCDRC ನಲ್ಲಿ‌ ವಿವಿಧ ಹುದ್ದೆ

    ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕರ್ನಾಟಕ ರಾಜ್ಯದ ವಿವಿಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿನ ಅಧ್ಯಕ್ಷರು,‌ಸದಸ್ಯರು ಹಾಗೂ ಮಹಿಳಾ ಸದಸ್ಯರ ಹುದ್ದೆಗಳ ಮಹಿಳಾ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆ: ಅಧ್ಯಕ್ಷರು, ಸದಸ್ಯರು ಮತ್ತು ಮಹಿಳಾ ಸದಸ್ಯರು.

    ಹುದ್ದೆ ಸಂಖ್ಯೆ : 56

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-03-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಭ್ಯರ್ಥಿಗಳು ದಿನಾಂಕ 30-04-2021 ರಾತ್ರಿ 11.59ರವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ.250/- ಅರ್ಜಿ ಶುಲ್ಕವನ್ನು ಆನ್ಲೈನ್ ಅರ್ಜಿ ನಮೂನೆಯಲ್ಲಿ ಕಲ್ಪಿಸಿರುವಂತಹ ವಿಧಾನದಲ್ಲಿ ಪಾವತಿಸತಕ್ಕದ್ದು.

    ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಗಳನ್ನು ಆನ್ಲೈನ್ ನಲ್ಲಿ ಈ ಕೆಳಕಂಡ ಜಾಲತಾಣಗಳ ಮೂಲಕ ಸಲ್ಲಿಸಬಹುದು.

    https://aaharasachivalaya.karnataka.gov.in/

    https://kscdrc.kar.nic.in

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

    ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

    ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನ ವತಿಯಿಂದ 2020-21 ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರಾಗಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ‌.

    ಎಪ್ರಿಲ್ 19 ರಿಂದ ಒಂದು ವಾರಕ್ಕೆ 3 ಗಂಟೆಗಳ‌ ಕಾಲ ಪಾಠ ಪ್ರವಚನಗಳನ್ನು ಪೂರೈಸಲು ಎಲ್.ಎಲ್.ಬಿ ಮತ್ತು ಎಲ್.ಎಲ್.ಎಂ ಪದವಿ ಯೊಂದಿಗೆ ಬೋಧನಾನುಭವ ಹೊಂದಿರುವ ಉಪನ್ಯಾಸಕರು ಅರ್ಜಿ ಸಲ್ಲಿಸಬಹುದು.

    ಆಸಕ್ತರು ಎಪ್ರಿಲ್ 9ರ ಸಂಜೆ 4 ಗಂಟೆಯೊಳಗೆ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಚಾಮರಾಜೇಂದ್ರ ದೃಶ್ಯಕಲಾ‌ ಕಾಲೇಜಿನ ದೂರವಾಣಿ ಸಂಖ್ಯೆಯನ್ನು ( 0821-2438931) ಸಂಪರ್ಕಿಸಬಹುದು.

  • ಭಾರತೀಯ ಪ್ರಾಧಿಕಾರ, ಪ್ರಾದೇಶಿಕ ಕೇಂದ್ರ, ಬೆಂಗಳೂರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಭಾರತೀಯ ಪ್ರಾಧಿಕಾರ, ಪ್ರಾದೇಶಿಕ ಕೇಂದ್ರ, ಬೆಂಗಳೂರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಭಾರತೀಯ ಪ್ರಾಧಿಕಾರ, ಪ್ರಾದೇಶಿಕ ಕೇಂದ್ರ, ಬೆಂಗಳೂರು ಇವರು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಜ್ಯೂನಿಯರ್ ಕನ್ಸಲ್ಟೆಂಟ್ ಹುದ್ದೆಗಳಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ಬಾನಿಸುತ್ತಿದ್ದಾರೆ. ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ:

    ಹುದ್ದೆ: ಜ್ಯೂನಿಯರ್ ಕನ್ಸಲ್ಟೆಂಟ್ ( ಪರ್ಫಾಮೆನ್ಸ್ ಮಾನಿಟರಿಂಗ್) -03, ಜ್ಯೂನಿಯರ್ ಕನ್ಸಲ್ಟೆಂಟ್ ( ಇನ್ ಫ್ರಾ) -02 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಜ್ಯೂನಿಯರ್ ಕನ್ಸಲ್ಟೆಂಟ್ ( ಪರ್ಫಾಮೆನ್ಸ್ ಮಾನಿಟರಿಂಗ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಎ/ಪಿಜಿಡಿಎಂ(2 ವರ್ಷಗಳ) ಪದವಿ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ಜ್ಯೂನಿಯರ್ ಕನ್ಸಲ್ಟೆಂಟ್ ( ಇನ್ ಫ್ರಾ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ‌ವಿಶ್ವವಿದ್ಯಾಲಯದ‌ ಸಿವಿಲ್ ಇಂಜಿನಿಯರಿಂಗ್ ಬಿ.ಇ/ಬಿ.ಟೆಕ್ ಪದವಿಯನ್ನು ಹೊಂದಿರಬೇಕು.

    ವಯೋಮಿತಿ : ಈ ಜಾಹೀರಾತು ‌ಕೊನೆಯ ದಿನಾಂಕದನುಸಾರ 55 ವರ್ಷಗಳು.

    ವೇತನ ಶ್ರೇಣಿ : ತಿಂಗಳಿಗೆ ‌ರೂ. 75,000/- ರಿಂದ ರೂ. 1,00,000/- ರವರೆಗೆ ಮಾಸಿಕ ವೇತನವಿರುತ್ತದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 30-03-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-04-2021

    ಆನ್ಲೈನ್ ( ಇ-ಮೇಲ್) ಅರ್ಜಿಗಳನ್ನು ಪರಿಶೀಲಿಸಿದ ನಂತರ, ಸಂದರ್ಶನಕ್ಕಾಗಿ ಕರೆ ಪತ್ರವನ್ನು ಕಳುಹಿಸಲಾಗುವುದು.

    ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು [email protected] ಗೆ ಕಳುಹಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ‌ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.
    https://saisouthbengaluru.org/