Author: Mallika

  • ASRB : ಉದ್ಯೋಗ ಅಧಿಸೂಚನೆ ಪ್ರಕಟ

    ASRB : ಉದ್ಯೋಗ ಅಧಿಸೂಚನೆ ಪ್ರಕಟ

    ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯು (ಎಎಸ್‌ಆರ್‌ಬಿ) ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್‌(ಎನ್‌ಇಟಿ), ಅಗ್ರಿಕಲ್ಚರಲ್ ರಿಸರ್ಚ್ ಸರ್ವೀಸ್‌( ಎಆರ್‌ಎಸ್‌) ಸೀನಿಯರ್ ಟೆಕ್ನಿಕಲ್ ಆಫೀಸರ್ ( ಎಸ್‌ಟಿಒ) ಪರೀಕ್ಷೆಗಳಿಗೆ ನೋಟಿಫಿಕೇಶನ್ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ವಿವರಗಳನ್ನು ತಿಳಿದುಕೊಂಡು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

    ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 05-04-2021
    ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-04-2021
    ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 25-04-2021 (ಸಂಜೆ 5 ಗಂಟೆ)
    ಕಂಬೈನ್ಡ್ ಪ್ರಿಲಿಮಿನರಿ ಎಕ್ಸಾಮ್‌ – 21-04-2021 ರಿಂದ 27-06-2021
    ಎಆರ್‌ಎಸ್‌- 2021 ಮುಖ್ಯ ಪರೀಕ್ಷೆ – 19-09-2021
    ಸೀನಿಯರ್ ಟೆಕ್ನಿಕಲ್ ಆಫೀಸರ್ ಸಂದರ್ಶನ್, ಎಆರ್‌ಎಸ್ ಸಂದರ್ಶನ – ಬಿಡುಗಡೆ ಮಾಡಬೇಕಿದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು ಮಾಸ್ಟರ್ ಡಿಗ್ರಿಯನ್ನು ತೇರ್ಗಡೆ ಹೊಂದಿರಬೇಕು.

    ವಯೋಮಿತಿ : ಕನಿಷ್ಠ 21 ವರ್ಷ, 31 ಗರಿಷ್ಠ ವರ್ಷ ವಯೋಮಿತಿ ಮೀರಿರಬಾರದು. ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
    ಹುದ್ದೆಗಳ ವಿವರ : ಅಗ್ರಿಕಲ್ಚರ್ ರಿಸರ್ಚ್ ಸರ್ವೀಸ್ (ಎಆರ್‌ಎಸ್‌)- 222
    ಸೀನಿಯರ್ ಟೆಕ್ನಿಕಲ್ ಆಫೀಸರ್ (ಎಸ್‌ಟಿಒ) – 65

    ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ ರೂ.1000/-,
    ಒಬಿಸಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ ರೂ.500/-
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡ್ಬ್ಲ್ಯುಡಿ/ ಮಹಿಳಾ ಅಭ್ಯರ್ಥಿಗಳಿಗೆ ರೂ.250/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • RDPR  : ವಿವಿಧ ಹುದ್ದೆ

    RDPR : ವಿವಿಧ ಹುದ್ದೆ

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ‌ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಹಾಗೂ ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ /ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿಯನ್ನು ಕರೆಯಲಾಗಿದೆ.

    ಹುದ್ದೆಗಳ ವಿವರ : 1. ಕೇಂದ್ರ ಕಚೇರಿ- a. ಸಮಾಲೋಚಕರು – 03 b. ಐ.ಟಿ‌.ಸಮಾಲೋಚಕರು- 01 c. ಡಬ್ಲ್ಯೂ.ಕ್ಯೂ.ಎಮ್.ಎಸ್ ಸಮಾಲೋಚಕರು I – 01. d. ಡಬ್ಲ್ಯೂ. ಕ್ಯೂ.ಎಮ್.ಎಸ್ ಸಮಾಲೋಚಕರು 4,5,6 – 03 e. ಡಬ್ಲ್ಯೂ. ಕ್ಯೂ.ಎಮ್.ಎಸ್ ಐ.ಎಮ್.ಐ.ಎಸ್ ಸಮಾಲೋಚಕರು‌- 01

    1. ವೃತ್ತ ಕಚೇರಿ – ಜಲಜೀವನ ಮಿಷನ್
      a. ಹಿರಿಯ ಸಮಾಲೋಚಕರು- 04

    3. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ – ಜಲಜೀವನ‌ಮಿಷನ್
    a. ಜಿಲ್ಲಾ ಯೋಜನಾ ವ್ಯವಸ್ಥಾಪಕ – 02
    b. ಜಿಲ್ಲಾ MIS ಸಮಾಲೋಚಕರು- 05
    c. ನೀರಿನ ಮಾದರಿಗಳ ಸಂಗ್ರಹಕೋಶದ ಉಸ್ತುವಾರಿ – 32
    d. ಸೂಕ್ಷ್ಮಾಣುಜಿವಿ ಶಾಸ್ತ್ರಜ್ಞ – 80
    e. ಹಿರಿಯ ವಿಶ್ಲೇಷಣೆಗಾರ – 04
    f. ವಿಶ್ಲೇಷಣೆಗಾರ – 06
    g. ಕಿರಿಯ ವಿಶ್ಲೇಷಣೆಗಾರ – 09

    1. ಜಿಲ್ಲಾ ಪಂಚಾಯಿತಿ ಕಛೇರಿ – ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)
      a. ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು -01
      b. ಜಿಲ್ಲಾ MIS ಸಮಾಲೋಚಕರು -01
      c. ಜಿಲ್ಲಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರು – 01

    ಗುತ್ತಿಗೆ ಅಥವಾ ಹೊರಗುತ್ತಿಗೆ ಅವಧಿ : ಮೇಲಿನ ಹುದ್ದೆ ಸಂಪೂರ್ಣವಾಗಿ ತಾತ್ಕಾಲಿಕ ‌ಹುದ್ದೆಯಾಗಿದ್ದು, ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆಯ ಆಧಾರದ ಮೇಲೆ‌ ನೇಮಿಸಿಕೊಳ್ಳಲಾಗುವುದು ನಂತರ ಕಾಲಕಾಲಕ್ಕೆ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ನವೀಕರಿಸಲಾಗುವುದು. ಒಂದೊಮ್ಮೆ ಅಭ್ಯರ್ಥಿಯ ಕಾರ್ಯಕ್ಷಮತೆ ನಿರೀಕ್ಷಿತ ‌ಮಟ್ಟದಲ್ಲಿ ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳ ಕರಾರು ಒಪ್ಪಂದವನ್ನು ಒಂದು ತಿಂಗಳ ನೋಟಿಸ್ ನೀಡಿ ರದ್ದು ಪಡಿಸಲಾಗುವುದು.

    ವಯೋಮಿತಿ : ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷಗಳ ಮೀರಿರಬಾರದು.

    ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯ ಗಳು, ಹಾಗೂ ಅರ್ಜಿ ಜೊತೆಗೆ ” ನಿಗದಿತ ಈ ಹುದ್ದೆಗೆ ಯಾವ ರೀತಿ ಸೂಕ್ತನಾಗಿದ್ದೇನೆ ” ಎಂಬುದರ ಬಗ್ಗೆ ಒಂದು ಪುಟದಲ್ಲಿ ಟಿಪ್ಪಣಿ ಬರೆದು ಅರ್ಜಿಯನ್ನು ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2 ನೇ ಮಹಡಿ, ಕೆ.ಹೆಚ್.ಬಿ.ಕಟ್ಟಡ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು – 5600-009 ಈ ವಿಳಾಸಕ್ಕೆ ಅರ್ಜಿಯ ಹಾರ್ಡ್ ಪ್ರತಿಯನ್ನು ದಿನಾಂಕ : 28-04-2021 ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು. ನಂತರ ಬಂದಂತಹ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ವಿದ್ಯಾರ್ಹತೆ : ಸ್ನಾತಕೋತ್ತರ/ಸ್ನಾತಕ ಪದವಿಯನ್ನು ದೂರ ಶಿಕ್ಷಣ ಮುಖಾಂತರ ಪಡೆದಿದ್ದರೆ, ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

    ಆಯ್ಕೆ ಪ್ರಕ್ರಿಯೆ : ಕಿರು ಪಟ್ಟಿ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ ದೂರವಾಣಿ ಮುಖಾಂತರ ತಿಳಿಸಲಾಗುವುದು.

    ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಕೇಂದ್ರ ಕಛೇರಿ ಹಾಗೂ ಆಯಾ ಜಿಲ್ಲಾ ಪಂಚಾಯತಿ ಕಛೇರಿಯಲ್ಲಿ ವಿಡಿಯೋ ಸಂವಾದದ ಮೂಲಕ ನಡೆಸಲಿದ್ದು‌ ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಹಾಜರಾಗುವುದು ಹಾಗೂ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಪರೀಕ್ಷೆಗೆ ಹಾಜರಾಗುವುದು.

    RDPR website: https://rdpr.karnataka.gov.in ಮತ್ತು https://swachhamevajayate.org ( ನೇಮಕಾತಿ ಲಿಂಕ್) ನಲ್ಲಿ ಲಭ್ಯವಿರುತ್ತದೆ.

    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕೆಪಿಎಸ್ ಸಿ ಪಿಟ್ಟರ್ ಹುದ್ದೆಗಳ ದಾಖಲೆ ಪರಿಶೀಲನೆಗೆ ಆಯ್ಕೆ ಪಟ್ಟಿ ಬಿಡುಗಡೆ

    ಕೆಪಿಎಸ್ ಸಿ ಪಿಟ್ಟರ್ ಹುದ್ದೆಗಳ ದಾಖಲೆ ಪರಿಶೀಲನೆಗೆ ಆಯ್ಕೆ ಪಟ್ಟಿ ಬಿಡುಗಡೆ

    ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿಗಳಲ್ಲಿನ ಫಿಟ್ಟರ್ ಹುದ್ದೆಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ ಗೆ ಭೇಟಿ ನೀಡಿ ಪರಿಶೀಲಿಸಬಹುದು.

    ಜನ್ಮದಿನಾಂಕ, ರಿಜಿಸ್ಟರ್ ನಂಬರ್, ಹೆಸರು ವಿವರಗಳನ್ನು ಕೆಪಿಎಸ್ ಸಿ ಪಟ್ಟಿಯಲ್ಲಿ ನೀಡಿದೆ. ಆಯೋಗ ನಿಗದಿಪಡಿಸಿದ ದಿನಾಂಕದಂದು ಮೂಲದಾಖಲೆಗಳೊಂದಿಗೆ ಅಭ್ಯರ್ಥಿಗಳು ಹಾಜರಾಗಬೇಕು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಈ ಲಿಂಕ್ ಕ್ಲಿಕ್ ಮಾಡಿ

  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು : ಉದ್ಯೋಗವಕಾಶ

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು : ಉದ್ಯೋಗವಕಾಶ

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ‘ ಕಾನೂನು ಸಲಹೆಗಾರ’ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಕೇವಲ 2 ವರ್ಷಗಳ ಅವಧಿಗೆ ಒಪ್ಪಂದದ ಆಧಾರದ ಮೇಲೆ ಹಿಂದಿನ ವರ್ಷದ ಕಾರ್ಯಕ್ಷಮತೆಯ ಪರಿಶೀಲನೆಯ ನಂತರ ಒಂದು ವರ್ಷದವರೆಗೆ ವಿಸ್ತರಿಸಬಹುದಾಗಿದೆ. ಕೆಲಸಕ್ಕೆ ಸಂಭಾವನೆ ಸೂಕ್ತವಾಗಿದೆ.

    ಅರ್ಹತಾ ಮಾನದಂಡಗಳು :

    1.ಅಭ್ಯರ್ಥಿಯು ಬಾರ್ ಕೌನ್ಸಿಲ್ ಕರ್ನಾಟಕದಲ್ಲಿ ನೊಂದಾಯಿಸಿರಬೇಕು.
    2.ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು.
    3.ಕೆಎಟಿ ಮತ್ತು ಹೈಕೋರ್ಟ್ ನಲ್ಲಿ ಆಡಳಿತ ಮತ್ತು ಕಾನೂನು ವಿಷಯಗಳನ್ನು ನಿರ್ವಹಿಸುವಲ್ಲಿ ಅನುಭವ ಹೊಂದಿರಬೇಕು.
    4. ಅಭ್ಯರ್ಥಿಯು ಕಾನೂನು ಸೇವೆಗಳಲ್ಲಿ ಕನಿಷ್ಠ 15 ವರ್ಷಗಳ ಅನುಭವವನ್ನು ಹೊಂದಿರಬೇಕು.
    5. ಅಭ್ಯರ್ಥಿಯು 60 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿರಬೇಕು.
    6. ಅಭ್ಯರ್ಥಿಯು ಅರ್ಜಿಯ ಹಾರ್ಡ್ ಕಾಪಿಯನ್ನು ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸುವುದು.

    ಮುಖ್ಯ ಆಡಳಿತಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು – 560023

    ಅರ್ಜಿದಾರರು ಸ್ಕ್ಯಾನ್ ಮಾಡಿದ ದಾಖಲಾತಿಗಳನ್ನು ಇ- ಮೇಲ್ [email protected] ಗೆ ಕಳುಹಿಸತಕ್ಕದ್ದು.
    ಕಾನೂನು ಸಲಹೆಗಾರರ ಕಛೇರಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು – ಈ ಆವರಣದಲ್ಲಿರುತ್ತದೆ.
    ಅರ್ಜಿ ಸಲ್ಲಿಸಲು‌ಕೊನೆಯ ದಿನಾಂಕ : 12-04-2021 ರ‌ ಸಂಜೆ 05.00 ಗಂಟೆಯವರೆಗೆ.

    ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗಾಗಿ ಅರ್ಜಿದಾರರು ಇ – ಮೇಲ್ [email protected] ಗೆ ಕಳುಹಿಸಬಹುದು

  • Indian Air Force : 1515 ವಿವಿಧ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    Indian Air Force : 1515 ವಿವಿಧ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ಈ ನೇಮಕಾತಿ ಪ್ರಕ್ರಿಯೆ ಮೂಲಕ ಐಎಎಫ್ ಸಂಸ್ಥೆಯಲ್ಲಿ ಖಾಲಿ ಇರುವ ಸ್ಟೆನೋ, ಕುಕ್‌, ಹೌಸ್‌ ಕೀಪಿಂಗ್ ಸ್ಟಾಫ್, ಎಂಟಿಎಸ್‌. ಎಲ್‌ಡಿಸಿ, ಸಿಎಸ್‌ ಮತ್ತು ಎಸ್‌ಎಂಡಬ್ಲ್ಯು, ಕಾರ್ಪೆಂಟರ್, ಲ್ಯಾಂಡ್ರಿಮ್ಯಾನ್, ಆಯಾ, ಹಿಂದಿ ಟೈಪಿಸ್ಟ್ ಸೇರಿ ಹಲವು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಒಟ್ಟು ಹುದ್ದೆ : 1515 ಗ್ರೂಪ್‌ ಸಿ ನಾಗರಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಪಶ್ವಿಮ ಏರ್‌ಕಮಾಂಡ್ ಯೂನಿಟ್‌ನಲ್ಲಿ 362 ಹುದ್ದೆಗಳು, ಟ್ರೈನಿಂಗ್ ಕಮಂಡ್ ಯೂನಿಟ್ 407 ಹುದ್ದೆಗಳು, ಏರ್ ಕಮಾಂಡ್ ಯೂನಿಟ್ 132 ಹುದ್ದೆಗಳು, ಕೇಂದ್ರಿಯ ಏರ್ ಕಮಾಂಡ್ ಯೂನಿಟ್ 116 ಹುದ್ದೆಗಳು, ಮೇಂಟೆನನ್ಸ್ ಏರ್ ಕಮಾಂಡ್ ಯೂನಿಟ್ 479 ಹುದ್ದೆಗಳು, ದಕ್ಷಿಣ ಏರ್ ಕಮಾಂಡ್ ಯೂನಿಟ್ 28 ಹುದ್ದೆಗಳಿಗೆ ಗ್ರೂಪ್‌ ಸಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಎಪ್ರಿಲ್ 03, 2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 02, 2021

    ವಿದ್ಯಾರ್ಹತೆ : ಕುಕ್‌ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್‌ನಿಂದ ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು. ಕ್ಯಾಟರಿಂಗ್‌ನಲ್ಲಿ ಡಿಪ್ಲೋಮಾ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

    ಪೇಂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10 ನೇ ತರಗತಿ ತೇರ್ಗಡೆಹೊಂದಿರಬೇಕು. ಪೇಂಟರ್ ವಿಭಾಗದಲ್ಲಿ ಐಟಿಐ ಸರ್ಟಿಫಿಕೇಟ್ ಪಡೆದಿರಬೇಕು.

    ಲೋಯರ್ ಡಿವಿಷನ್ ಕ್ಲರ್ಕ್, ಟೈಪಿಸ್ಟ್‌ : ಈ ಹುದ್ದೆಗಳಿಗೆ ಅಭ್ಯರ್ಥಿಗಳು 12 ನೇ ತರಗತಿ ಜೊತೆಗೆ ಇಂಗ್ಲೀಷ್ ಟೈಪಿಂಗ್ ನಿಮಿಷಕ್ಕೆ 35 ಪದ ಹಾಗೂ ಹಿಂದಿಯಲ್ಲಿ 30 ಪದ ಟೈಪ್‌ ಸ್ಪೀಡ್ ಇರಬೇಕು.

    ಸೀನಿಯರ್ ಕಂಪ್ಯೂಟರ್ ಅಪೇಟರ್ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗಣಿತ ಅಥವಾ ಸಂಖ್ಯಾಶಾಸ್ತ್ರದಲ್ಲಿ ಪದವಿಯನ್ನು ಹೊಂದಿರಬೇಕು. ಇದರ ಜೊತೆಗೆ ಎಲೆಕ್ಟ್ರಾನಿಕ್ ಡಾಟಾ ಪ್ರೊಸೆಸಿಂಗ್‌ನಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು.

    ಸ್ಟ್ರೆನೋ ಗ್ರೇಡ್ -2 : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ನೇ ತರಗತಿ ತೇರ್ಗಡೆಹೊಂದಿರಬೇಕು.

    ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಸಾಮಾನ್ಯ ಜ್ಞಾನ, ಸಂಖ್ಯಾತ್ಮಕ ಆಪ್ಟಿಟ್ಯೂಡ್, ಜನರಲ್ ಇಂಗ್ಲೀಷ್, ಸಾಮಾನ್ಯ ಜಾಗೃತಿ ಕುರಿಯ ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು. ಪ್ರಶ್ನೆ ಪ್ರತ್ರಿಕೆಯು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಇರುತ್ತದೆ.

    ಶಾರ್ಟ್ ಲಿಸ್ಟ್ ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌಶಲ್ಯ/ದೈಹಿಕ/ಪ್ರಾಕ್ಟಿಕಲ್ ಪರೀಕ್ಷೆಗೆ ಕರೆಯಲಾಗುತ್ತದೆ.

    ಆಸಕ್ತ ಅಭ್ಯರ್ಥಿಗಳು ನಿಗದಿತ ಪ್ರಕ್ರಿಯೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

    ಅಭ್ಯರ್ಥಿಗಳು ತಾವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ ಎಂಬ ಬಗ್ಗೆ ದೊಡ್ಡದಾಗಿ ಲಕೋಟೆ ಮೇಲೆ ನಮೂದಿಸಿರಬೇಕು.

    ಆನ್ಲೈನ್‌ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದು.

    ಇಂಗ್ಲೀಷ್/ಹಿಂದಿಯಲ್ಲಿ ಟೈಪ್ ಮಾಡಲಾದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ 30 ದಿನಗಳ ಒಳಗೆ ( ಮೇ 2, 2021) ವಾಯುಪಡೆಯ ಸಂಬಂಧಪಟ್ಟ ವಿಳಾಸಕ್ಕೆ ಕಳುಹಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಕಲಬುರಗಿ : ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

    ಕಲಬುರಗಿ : ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

    ಸೇಡಂ ತಾಲೂಕಿನ ಕೋಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಅತಿಥಿ ಶಿಕ್ಷಕರ ನೇಮಕಾತಿ

    ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ಎಪ್ರಿಲ್ 10, 2021

    ಸಮಾಜ ಕಲ್ಯಾಣ ಇಲಾಖೆ ( ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ವ್ಯಾಪ್ತಿಯಲ್ಲಿ ಕೋಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಖಾಲಿ ಇರುವ ಸಮಾಜ ವಿಜ್ಞಾನ ( ಆಂಗ್ಲ ಮಾಧ್ಯಮ ) ಅತಿಥಿ ಶಿಕ್ಷಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

    ವಿದ್ಯಾರ್ಹತೆ : ಅರ್ಜಿಗಳನ್ನು ಸಲ್ಲಿಸುವವರು ಬಿ.ಎ, ಬಿ.ಇಡಿ ಪಾಸಾಗಿರಬೇಕು. ಶಿಕ್ಷಕರನ್ನು ಗೌರವ ಧನದ ಆಧಾರದ ಮೇಲೆ ಶಾಲಾ ಹಂತದಲ್ಲಿ ನಿಯಮಾವಳಿಗೆ ಒಳಪಟ್ಟು ನೇಮಕ ಮಾಡಲಾಗುವುದು. ನಿವೃತ ಶಿಕ್ಷಕರು ಕೂಡಾ ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಶೈಕ್ಷಣಿಕ ದಾಖಲೆಗಳೊಂದಿಗೆ 2021, ಎಪ್ರಿಲ್ 10 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೋಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ : 8747924789