Author: Mallika

  • ಬ್ಯಾಂಕ್ ಆಫ್ ಬರೋಡ ವಿವಿಧ ಹುದ್ದೆಗೆ ನೇಮಕ

    ಬ್ಯಾಂಕ್ ಆಫ್ ಬರೋಡ ವಿವಿಧ ಹುದ್ದೆಗೆ ನೇಮಕ

    ಬ್ಯಾಂಕ್ ಆಫ್ ಬರೋಡಾನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಚೀಫ್ ಎಕಾನಮಿಸ್ಟ್ -01
    ಪಬ್ಲಿಕ್ ರಿಲೇಷನ್ ಆಫೀಸರ್ – 01
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29-04-2021

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಅರ್ಜಿಶುಲ್ಕವನ್ನು ಆನ್‌ಲೈನ್‌ ನಲ್ಲಿ ಪಾವತಿಸಬಹುದು.
    ಜನರಲ್, ಒಬಿಸಿ, ಇಡ್ಬ್ಲುಎಸ್, ಅನ್‌ರಿಸರ್ವ್‌ಡ್ ಅಭ್ಯರ್ಥಿಗಳಿಗೆ ರೂ.6೦೦/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ. ಪಿಡ್ಬ್ಲುಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ. 1೦೦/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಡಬ್ಲುಎಸ್ ಪೋಸ್ಟ್‌ ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಚೀಫ್ ಎಕಾನಮಿಸ್ಟ್ ಪೋಸ್ಟ್‌ ನೋಟಿಫಿಕೇಶನ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ : ಎಸ್ಎಸ್ಎಲ್ ಸಿ ಪಾಸಾದವರಿಗೂ ಅವಕಾಶ

    ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ : ಎಸ್ಎಸ್ಎಲ್ ಸಿ ಪಾಸಾದವರಿಗೂ ಅವಕಾಶ

    ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ.

    ಹುದ್ದೆ : ಇನ್ಕಂಟ್ಯಾಕ್ಸ್ ಇನ್ಸ್ ಪೆಕ್ಟರ್- 01
    ಟ್ಯಾಕ್ಸ್ ಅಸಿಸ್ಟೆಂಟ್ – 4
    ಸ್ಟೆನೋಗ್ರಾಫರ್ ಗ್ರೇಡ್ 2 – 3
    ಮಲ್ಟಿ ಟಾಸ್ಕಿಂಗ್ ಸ್ಟಾಫ್ – 06

    ವಯೋಮಿತಿ : ಎಲ್ಲಾ ಹುದ್ದೆಗಳಿಗೆ ಕನಿಷ್ಠ 18 ವರ್ಷ. ಇನ್ಕಂಟ್ಯಾಕ್ಸ್ ಹುದ್ದೆಗೆ ಗರಿಷ್ಠ 30 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 27 ವರ್ಷ.

    ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವಿದ್ಯಾರ್ಹತೆ : SSLC , ಪಿಯುಸಿ, ದ್ವಿತೀಯ ಪಿಯುಸಿ ಪಡೆದಿರಬೇಕು. ಟ್ಯಾಕ್ಸ್ ಅಸಿಸ್ಟೆಂಟ್ ಗೆ ಪ್ರತಿ ಗಂಟೆಗೆ 8000 ಪದಗಳ ಡೇಟಾ ಎಂಟ್ರಿಗಳ ವೇಗ ಹೊಂದಿರಬೇಕು. ಸ್ಟೆನೋಗ್ರಾಫರ್ ಗೆ ಡಿಕ್ಟೇಷನ್ ಪ್ರತಿ ನಿಮಿಷಕ್ಕೆ 80 ಪದಗಳ ವೇಗ ಹೊಂದಿರಬೇಕು. ಪ್ರತಿ ನಿಮಿಷಕ್ಕೆ ಇಂಗ್ಲೀಷ್ ನಲ್ಲಿ 50 ಪದ, 65 ಹಿಂದಿ ಪದಗಳ ಪ್ರತಿಲೇಖನ ಕೌಶಲ ಹೊಂದಿರಬೇಕು.

    ಹುದ್ದೆ ಸ್ಥಳ : ದೆಹಲಿಯ ಮುಖ್ಯ ಆಯುಕ್ತರ ಕಛೇರಿ.

    ಎರಡು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅರ್ಹ ಆಸಕ್ತ ಅಭ್ಯರ್ಥಿಗಳು ದಿನಾಂಕ‌ 15-04-2021 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

    ವೇತನ : ಇನ್ಕಂಟ್ಯಾಕ್ಸ್ ಆಫೀಸರ್ ಗೆ ಮಾಸಿಕ ರೂ.34,800/- , ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ ರೂ.20,200/- ವೇತನ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ : ಶಾರ್ಟ್ ಲಿಸ್ಟ್ ಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ನೇರಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸ್ಥಳ, ಸಮಯ ಇತ್ಯಾದಿಗಳನ್ನು ಶಾರ್ಟ್ ಲಿಸ್ಟ್ ಗೆ ಆಯ್ಕೆಯಾದ ಅಭ್ಯರ್ಥಿಗಳ ಮೇಲ್ ಗೆ ಕಳುಹಿಸಲಾಗುವುದು.

    ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ಯಾವ ಹುದ್ದೆಗೆ ಅರ್ಜಿ ಸಲ್ಲಿಸುವುದು ಹಾಗೂ ಕ್ರೀಡಾ ವಿಭಾಗದಲ್ಲಿ ಯಾವ ಕ್ರೀಡೆ ಎಂಬುದನ್ನು ಸ್ಪಷ್ಟವಾಗಿ ಬರೆಯ ಬೇಕು.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳನ್ನು ಈ ವಿಳಾಸಕ್ಕೆ ಸಲ್ಲಿಸಬೇಕು.

    The Deputy Commissioner Of Income Tax (Hqrs- Personnel), Room No.378A, C.R.Building, I.P.Estate, New Delhi – 110002

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಗ್ರಂಥಾಲಯ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

    ಗ್ರಂಥಾಲಯ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಗ್ರಂಥಾಲಯ ಟ್ರೈನಿ

    ಹುದ್ದೆ ಅವಧಿ : 11 ತಿಂಗಳ ಅವಧಿಗೆ

    ವಿದ್ಯಾರ್ಹತೆ : ಈ ಹುದ್ದೆಗಳಿಗೆ 2018 ರ ನಂತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ರೂ.15,000/- ಮಾಸಿಕ ಸ್ಟೈಫೆಂಡ್ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ದಿನಾಂಕ 27-04-2021 ರೊಳಗೆ ಸಲ್ಲಿಸತಕ್ಕದ್ದು.

    ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಲಕೋಟೆ ಮೇಲೆ ‘ಗ್ರಂಥಾಲಯ ಟ್ರೈನಿ’ ಎಂದು ನಮೂದಿಸಿರಬೇಕು.

    ಅರ್ಜಿಯನ್ನು ಅಭ್ಯರ್ಥಿಗಳು [email protected] ಇ-ಮೇಲ್ ಗೆ ಸಾಫ್ಟ್‌ ಕಾಪಿ ಕಳುಹಿಸಬಹುದು. ಅಥವಾ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೂ ಸಲ್ಲಿಸಬಹುದು.

    ಅಗತ್ಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ಸ್ವಯಂ ದೃಡೀಕೃತ ಹೆಚ್‌.ಎಸ್‌.ಸಿ ಯಿಂದ ಪ್ರಾರಂಭವಾಗುವ ಶೈಕ್ಷಣಿಕ ಅರ್ಹತೆಗಳನ್ನು ಹಾಗೂ ಒಂದು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರವನ್ನು 27-04-2021 ರೊಳಗೆ ಸಲ್ಲಿಸತಕ್ಕದ್ದು.

    ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ : ನಿರ್ದೇಶಕರು, ಗ್ರಂಥಾಲಯ,ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ,ಕರ್ನಾಟಕ, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು -560041

  • HPCL ಉದ್ಯೋಗವಕಾಶ: ಎಪ್ರಿಲ್ 15 ಕೊನೆಯ ದಿನಾಂಕ

    HPCL ಉದ್ಯೋಗವಕಾಶ: ಎಪ್ರಿಲ್ 15 ಕೊನೆಯ ದಿನಾಂಕ

    ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್ ಪಿಸಿಎಲ್ ) ನಲ್ಲಿ ವಿವಿಧ ಹುದ್ದೆಗಳಿದ್ದು ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆ : ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್ ವಿಭಾಗಗಳ ಇಂಜಿನಿಯರ್ ಪೋಸ್ಟ್ ಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹೆಚ್ ಪಿಸಿಎಲ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಪ್ರಿಲ್ 15, 2021 ಕೊನೆಯ ದಿನಾಂಕವಾಗಿದೆ.

    ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 03-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-04-2021

    ಹುದ್ದೆಗಳ ವಿವರ : ಮೆಕ್ಯಾನಿಕಲ್ ಇಂಜಿನಿಯರ್ -120
    ಸಿವಿಲ್ ಇಂಜಿನಿಯರ್ -30
    ಇಲೆಕ್ಟ್ರಿಕಲ್ ಇಂಜಿನಿಯರ್- 25
    ಇನ್ಸ್ಟ್ರುಮೆಂಟೇಶನ್-25

    ಅರ್ಜಿ ಶುಲ್ಕ : ಸಾಮಾನ್ಯ/ಒಬಿಸಿ/ಇಡ್ಬ್ಯುಎಸ್ ಅಭ್ಯರ್ಥಿಗಳಿಗೆ ರೂ. 1800/- ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

    ಅಪ್ಲಿಕೇಶನ್ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಸಲ್ಲಿಸಬಹುದು.

    ಆಯ್ಕೆ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ, ಗ್ರೂಪ್ ಟಾಸ್ಕ್, ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • NTPC ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ

    NTPC ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ

    ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿ. ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಿದೆ. ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಒಟ್ಟು ಹುದ್ದೆ : 35

    ಹುದ್ದೆ ವಿವರ : ಖಾಲಿ ಇರುವ 35 ಹುದ್ದೆಗಳ ಪೈಕಿ, 25 ಎಕ್ಸಿಕ್ಯೂಟಿವ್ ಸೇಫ್ಟಿ ಹುದ್ದೆಗಳು, 8 ಐಟಿ ಡೇಟಾ ಮತ್ತು ಡೇಟಾ ರಿಕವರಿ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇವೆ.

    ಈ ನೇಮಕಾತಿ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಾಹಕ (ಸುರಕ್ಷತೆ), ಕಾರ್ಯನಿರ್ವಾಹಕ (ಐಟಿ ಡಾಟಾ ಕೇಂದ್ರ ಮತ್ತು ಡೇಟಾ ರಿಕವರಿ), ಹಿರಿಯ ಕಾರ್ಯನಿರ್ವಾಹಕ (ಸೌರ) ಮತ್ತು ತಜ್ಞ (ಸೌರ) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಅಧಿಕೃತವಾಗಿ ಅಧಿಸೂಚನೆಯಲ್ಲಿ ಪ್ರಕಟಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಲಾಗಿನ್ ಆಗಿ, ಎಪ್ರಿಲ್ 15 ರೊಳಗೆ ಅರ್ಹತೆ ಬಗ್ಗೆ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.

    ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿ.(ಎನ್‌ಟಿಜಿಸಿ)ಇಲ್ಲಿ ಆಯ್ಕೆ ಮಾಡಿಕೊಳ್ಳುವ ಹುದ್ದೆಗಳು ಮೂರು ವರ್ಷಗಳ ಕಾಂಟ್ರಾಕ್ಟ್‌ ಅವಧಿಯಾದ್ದಾಗಿದೆ.

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 71,000/-ರೂ. ಸಂಬಳ ನಿಗದಿಯಾಗಿರುತ್ತದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತ ಸರಕಾರದಿಂದ ಮಾನ್ಯತೆ ಪಡೆದ ಮತ್ತು ಅಂಗೀಕರಿಸಲ್ಪಟ್ಟ ವಿಶ್ವವಿದ್ಯಾಲಯಗಳು/ ಸಂಸ್ಥೆಗಳಿಂದ ಅಗತ್ಯವಾದ ಅರ್ಹತೆಗಳನ್ನು ಹೊಂದಿರಬೇಕು.

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ದಾಖಲೆಗಳನ್ನು ಅಂಚೆ ಮೂಲಕ ಕಳುಹಿಸುವ ಅಗತ್ಯವಿರುವುದಿಲ್ಲ. ಯಾವುದೇ ಕೋಟಾದಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದಕ್ಕೆ ಅಗತ್ಯವಾದ ಪ್ರಮಾಣಪತ್ರಗಳನ್ನು ಒದಗಿಸಬೇಕು. ಪ್ರತಿ ಹುದ್ದೆಯ ಅವಶ್ಯಕತೆಗಳು ವಿಭಿನ್ನವಾಗಿರುತ್ತದೆ.

    ಅರ್ಜಿ ಶುಲ್ಕ : ಸಾಮಾನ್ಯ ವರ್ಗ, ಇಡಬ್ಲ್ಯೂಎಸ್ ಅಥವಾ ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ರೂ. 300 ಅರ್ಜಿ ಶುಲ್ಕವನ್ನು ಪಾವತಿಸಬೇಕು.( ಈ ಶುಲ್ಕ ಮರುಪಾವತಿಸಲಾಗುವುದಿಲ್ಲ)

    ಬೇರೆ ಯಾವುದೇ ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಭ್ಯರ್ಥಿಗಳು ಆನ್‌ಲೈನ್‌ ಅಥವಾ ಆಫ್‌ಲೈನ್ ಮೂಲಕ ಪಾವತಿ ಮಾಡಬಹುದು. ಶುಲ್ಕ ಪಾವತಿಸಿದ ನಂತರ, ಅಭ್ಯರ್ಥಿಗಳು ಭಾವಚಿತ್ರ, ಶುಲ್ಕ ರಸೀದಿ, ಸಹಿ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಸಹ ಅಪಲೋಡ್ ಮಾಡಬೇಕಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಅಧಿಕೃತ ವೆಬ್‌ಸೈಟ್ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

  • ದಾವಣಗೆರೆ : 80 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ

    ದಾವಣಗೆರೆ : 80 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ

    ದಾವಣಗೆರೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 05 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 17 ಅಂಗನವಾಡಿ ಕಾರ್ಯಕರ್ತೆ ಮತ್ತು 63 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ : 08-04-2021
    ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 07-05-2021 ಸಂಜೆ 5.30 ಗಂಟೆ

    ವಯೋಮಿತಿ : 18 ರಿಂದ 35 ವರ್ಷದೊಳಗಿನ ಸಾಮಾನ್ಯ ವರ್ಗದವರು ಮತ್ತು ಕಾರ್ಯಕರ್ತೆಯರ ನೇಮಕಾತಿಗೆ 18 ರಿಂದ 45 ವರ್ಷದೊಳಗಿನ ವಿಕಲಚೇತನ ವರ್ಗದ ಅರ್ಹ ಸ್ಥಳೀಯ ( ಅದೇ ಗ್ರಾಮದ) ಮಹಿಳಾ ಅಭ್ಯರ್ಥಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಅಂಗನವಾಡಿ ಕಾರ್ಯಕರ್ತೆಯಾಗಲು ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯಾಗಲು ಕನಿಷ್ಠ 4 ನೇ ತರಗತಿ ತೇರ್ಗಡೆಯಾಗಿದ್ದು, ಗರಿಷ್ಠ ವಿದ್ಯಾರ್ಹತೆ 9 ನೇ ತರಗತಿ ತೇರ್ಗಡೆ.

    ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ ಗೆ ಭೇಟಿ ಅಲ್ಲಿ ಮಾಹಿತಿಗಳನ್ನು ಓದಿ, ಅಧಿಕೃತ ದಾಖಲೆಗಳೊಂದಿಗೆ ಸಂಬಂಧಿತರು ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 07-05-2021 ರ ಸಂಜೆ 5.30 ಗಂಟೆಯೊಳಗೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ಅಧಿಕೃತ ವೆಬ್‌ಸೈಟ್ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ