Author: Mallika

  • ಸರಕಾರಿ ಕಚೇರಿಗಳ ಸಮಯ ಬದಲಾವಣೆ

    ಸರಕಾರಿ ಕಚೇರಿಗಳ ಸಮಯ ಬದಲಾವಣೆ

    ಬಿಸಿಲಿನ ತಾಪಮಾನ ಗರಿಷ್ಠಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳಲ್ಲಿ ಸಮಯದ ಬದಲಾವಣೆ ಮಾಡಲು ಸರಕಾರದ ಅಧೀನ ಕಾರ್ಯದರ್ಶಿ ಬಿ ಎಸ್ ರವಿಕುಮಾರ್‌ ಆದೇಶವನ್ನು ಹೊರಡಿಸಿದ್ದಾರೆ.

    ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು, ವಿಜಯನಗರ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಗಳಲ್ಲಿ ಸರಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

    ಈ ಮೇಲಿನ ಸರಕಾರಿ ಕಚೇರಿಗಳು ಏ.12 ರಿಂದ ಮೇ. 31 ರವರೆಗೆ ಬದಲಾದ ವೇಳಾಪಟ್ಟಿ ಪ್ರಕಾರದಲ್ಲಿ ಕೆಲಸ ನಿರ್ವಹಿಸಲಿದೆ. ಸರಕಾರಿ ಕಚೇರಿಗಳ ಕೆಲಸದ ಸಮಯವು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಇರಲಿದೆ.

    ಕೊರೊನಾ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನದಂತೆ ಕೆಲಸವನ್ನು ನಿರ್ವಹಿಸಲು ತಯಾರಿರಬೇಕು ಎಂದು ಸರಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

  • BECIL : 463 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    BECIL : 463 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸರಕಾರಿ ಸ್ವಾಮ್ಯದ ಬ್ರಾಡ್ ಕಾಸ್ಟ್‌ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್‌ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್‌) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ವಿವರಗಳನ್ನು ಈ ಕೆಳಗೆ ನೀಡಲಾಗಿದ್ದು, ಪರಿಶೀಲಿಸಬಹುದು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 11-04-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-04-2021

    ಇನ್ವೆಸ್ಟಿಗೇಟರ್ -3೦೦, ಸುಪರ್‌ವೈಸರ್ – 5೦, ಸಿಸ್ಟಮ್‌ ಅನಾಲಿಸ್ಟ್ – 04, ಸೂಪರ್ ಡೊಮೈನ್ ಎಕ್ಸ್‌ಪರ್ಟ್-29, ಜೂನಿಯರ್ ಡೊಮೈನ್ ಎಕ್ಸ್‌ಪರ್ಟ್‌ – 41, ಯುಡಿಸಿ-04, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಎಂಟಿಎಸ್‌ – 18, ಸಬ್ಜೆಕ್ಟ್ ಮ್ಯಾಟರ್ ಎಕ್ಸ್‌ಪರ್ಟ್ ಎಸ್‌ಎಂಇ- 07, ಯಂಗ್ ಪ್ರೊಫೆಶನಲ್ಸ್‌ – 10 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.

    ಇನ್ವೆಸ್ಟಿಗೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಡಿಗ್ರಿಯನ್ನು ಪಡೆದಿರಬೇಕು. ಹಾಗೂ ಸ್ಥಳೀಯ ಭಾಷಾ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಅಭ್ಯರ್ಥಿಗಳಿಗೆ 45 ವರ್ಷ ಮೀರಿರಬಾರದು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.24,000/- ವೇತನವಿರುತ್ತದೆ.

    ಸುಪರ್‌ವೈಸರ್ ಹುದ್ದೆಗೆ ಗ್ರಾಜ್ಯುಯೆಟ್ ಡಿಗ್ರಿ ಜೊತೆಗೆ ಎರಡು ವರ್ಷ ಕೇಂದ್ರ ಸರಕಾರ/ರಾಜ್ಯ ಸರಕಾರ/ಪಿಎಸ್‌ಯುಎಸ್/ಬ್ಯಾಂಕ್/ಪ್ರೈವೇಟ್ ಕಂಪನಿಯಿಂದ ಸರ್ವೆಗೆ ಸಂಬಂಧಿತ ಕೆಲಸದ ಅನುಭವವಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 50 ವರ್ಷ ಮೀರಿರಬಾರದು. ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ. 30,000/- ವೇತನವಿರುತ್ತದೆ.

    ಸಿಸ್ಟಮ್ ಅನಾಲಿಸ್ಟ್ ಹುದ್ದೆಗೆ ಮಾನ್ಯತೆ ಪಡೆದ ಯುನಿವರ್ಸಿಟಿ/ಇನ್ಸ್ಟಿಟ್ಯೂಟ್ ನಿಂದ ಬ್ಯಾಚುಲರ್/ಮಾಸ್ಟರ್ಸ್ ಡಿಗ್ರಿ ಕಂಪ್ಯೂಟರ್/ಇನ್‌ಫೋರ್ಮೇಶನ್ ಟೆಕ್ನಾಲಜಿ ಇಂಜಿನಿಯರಿಂಗ್/ಎಂಸಿಎ/ಎಂ.ಟೆಕ್(ಕಂಪ್ಯೂಟರ್ ಸೈನ್ಸ್‌) ನ್ನು ಅಭ್ಯರ್ಥಿಗಳು ಹೊಂದಿರಬೇಕು. ಸಂಬಂಧಿತ ಕ್ಷೇತ್ರಲ್ಲಿ 8 ವರ್ಷಗಳ ಅನುಭವ ಇರಬೇಕು. ಈ ಹುದ್ದೆಗೆ 50 ವರ್ಷ ಮೀರರಬಾರದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 1 ಲಕ್ಷ ವೇತನವಿರುತ್ತದೆ.

    ಸೀನಿಯರ್ ಡೊಮೈನ್ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯ/ಇನ್ಸ್ಟಿಟ್ಯೂಟ್ ನಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಗ್ರಿಯನ್ನು ಎಕಾನಮಿಕ್ಸ್/ಅಪ್ಲೈಡ್ ಎಕಾನಮಿಕ್ಸ್/ಬಿಸ್‌ನೆಸ್ ಎಕಾನಮಿಕ್ಸ್‌/ಎಕಾನಮಿಕ್ಸ್‌ ಸಬ್ಜೆಕ್ಟ್ ನ್ನು ಪಡೆದಿರಬೇಕು. ಅಥವಾ ಪೋಸ್ಟ್ ಗ್ರಾಜ್ಯುಯೇಟ್ ಡಿಗ್ರಿಯನ್ನು ಸ್ಟಟಟಿಕ್ಸ್/ಮ್ಯಾತ್ಸ್/ಕಾಮರ್ಸ್ ಪಡೆದಿರಬೇಕು. ಅಭ್ಯರ್ಥಿಗಳಿಗೆ 50 ವರ್ಷ ಮೀರಿರಬಾರದು.( 64ವರ್ಷ ರಿಟೈರ್ ಅಭ್ಯರ್ಥಿಗಳಿಗೆ). ಈ ಹುದ್ದೆಗೆ ತಿಂಗಳಿಗೆ ರೂ.80,000/- ವೇತನ ನಿಗದಿಯಾಗಿದೆ.

    ಜ್ಯೂನಿಯರ್ ಡೊಮೈನ್ ಎಕ್ಸ್‌ಪರ್ಟ್ ಹುದ್ದೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಗ್ರಿ ಇನ್ ಎಕಾನಮಿಕ್ಸ್‌/ಅಪ್ಲೈಡ್ ಎಕಾನಮಿಕ್ಸ್‌/ಬಿಸಿನೆಸ್ ಎಕಾನಮಿಕ್ಸ್‌/ಎಕಾನಮಿಕ್ಸ್‌ ಸಬ್ಜೆಕ್ಟ್ ಅಥವಾ ಪೋಸ್ಟ್ ಗ್ರಾಜ್ಯುಯೇಟ್ ಡಿಗ್ರಿಯನ್ನು ಸ್ಟಾಟಟಿಕ್ಸ್/ಮ್ಯಾತ್ಸ್/ಕಾಮರ್ಸ್ ಸಬ್ಜೆಕ್ಟ್ ನ್ನು ಪಡೆದಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ 8 ವರ್ಷಗಳ ಅನುಭವವಿರಬೇಕು. ಅಭ್ಯರ್ಥಿಗೆ 50 ವರ್ಷ ಮೀರಿರಬಾರದು. ರೂ.60,000/- ಮಾಸಿಕ ವೇತನವಿರುತ್ತದೆ.

    ಯುಡಿಸಿs ಹುದ್ದೆಗೆ ಅಭ್ಯರ್ಥಿಗಳು ಬ್ಯಾಚುಲರ್ ಡಿಗ್ರಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಭ್ಯರ್ಥಿಗೆ 45 ವರ್ಷ ಮೀರಿರಬಾರದು. ರೂ.22,000/- ವೇತನವಿರುತ್ತದೆ.

    ಮಲ್ಟಿ ಟಾಸ್ಕಿಂಗ್ ಸ್ಟಾಫ್ – ಎಂಟಿಎಸ್ ಹುದ್ದೆಗೆ ಮೆಟ್ರಿಕ್ಯುಲೇಶನ್ ಪಾಸಾಗಿರಬೇಕು. ಅಭ್ಯರ್ಥಿಗಳು 60ವರ್ಷ ಮೀರಿರಬಾರದು. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.15,000/- ವೇತನ ನಿಗದಿಯಾಗಿದೆ.

    ಸಬ್ಜೆಕ್ಟ್ ಮ್ಯಾಟರ್ ಎಕ್ಸ್‌ಪರ್ಟ್ ಎಸ್‌ಎಂಇ ಹುದ್ದೆಗೆ ಅಭ್ಯರ್ಥಗಳು ಮಾನ್ಯತೆ ಪಡೆದ ಯುನಿವರ್ಸಿಟಿಯಿಂದ ಪೋಸ್ಟ್ ಗ್ರಾಜ್ಯುಯೇಶನ್ ಡಿಗ್ರಿ ಸ್ಟಟಿಸ್ಟಿಕ್ಸ್ ಅಥವಾ ಎಕಾನಮಿಕ್ಸ್ ಅಥವಾ ಡಾಟಾ ಸೈನ್ಸ್ ಅಥವಾ ಸಂಬಂಧಿತ ವಿಷಯದಲ್ಲಿ ಫಸ್ಟ್ ಕ್ಲಾಸ್ ಪಾಸಾಗಿರಬೇಕು. ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ರೂ. 80,000/- ವೇತನವಿರುತ್ತದೆ.

    ಯಂಗ್ ಪ್ರೊಫೆಶನಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೋಸ್ಟ್ ಗ್ರಾಜ್ಯುಯೇಟ್ ಡಿಗ್ರಿ ಯನ್ನು ಸ್ಟಟಿಸ್ಟಿಕ್ಸ್ ಅಥವಾ ಎಕಾನಮಿಕ್ಸ್/ಅಪ್ಲೈಡ್ ಎಕಾನಮಿಕ್ಸ್ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ಸೋಶಿಯಲ್ ಸೈನ್ಸ್( ಮ್ಯಾತಮ್ಯಾಟಿಕ್ಸ್ /ಸಬ್ಜೆಕ್ಟ್ ಯುಜಿ ಲೆವಲ್) ನ್ನು ಅಂಗೀಕೃತ ಯುನಿವರ್ಸಿಟಿಯಿಂದ ಪಡೆದಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ45 ವರ್ಷ ಮೀರಿರಬಾರದು. ಈ ಹುದ್ದೆಗೆ ಆಯ್ಕೆಯಾದವರಿಗೆ ರೂ.70,000/- ಮಾಸಿಕ ವೇತನವಿರುತ್ತದೆ.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿ/ಇಡ್ಬ್ಲುಎಸ್/ಪಿಹೆಚ್ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಎಪ್ರಿಲ್ 22 , 2021 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ನಿಗದಿತ ದಿನದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ಅಭ್ಯರ್ಥಿಗಳು www.becil.com ಹಾಗೂ https://becilmol.cbtexam.in ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

    ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್ ಮಾಡಿ

  • SAI : ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    SAI : ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 12-04-2021 (11 am)
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-04-2021( 5.00pm)

    ಹುದ್ದೆ : ಯಂಗ್ ಪ್ರೊಫೆಷನಲ್ ಹುದ್ದೆ -05

    ಯಂಗ್ ಪ್ರೊಫೆಷನಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮಾ ಕೋರ್ಸ್ ನ್ನು ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಅಥವಾ ಬಿ.ಟೆಕ್/ಎಂಬಿಎ/ಪಿಜಿಡಿಎಂ( ೨ ವರ್ಷ) ನ್ನು ಮಾನ್ಯತೆ ಪಡೆದ ಯುನಿವರ್ಸಿಟಿಯಿಂದ ಪಡೆದಿರಬೇಕು. ವಯೋಮಿತಿಯು 35 ವರ್ಷ ಮೀರಿರಬಾರದು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ. 4೦,೦೦೦/- ರಿಂದ ರೂ.6೦,೦೦೦/- ರವರೆಗೆ ನಿಗದಿಯಾಗಿರುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಲಾಗಿನ್ ಆಗಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆನ್‌ಲೈನ್‌ ಮೂಲಕ ಅರ್ಜಿಯನ್ನು ಇ-ಮೇಲ್ [email protected] ಮೂಲಕ ಸಲ್ಲಿಸಬೇಕು.
    ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಬೇರೆ ಮಾಧ್ಯಮದ ಮೂಲಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • NAL : ವಿವಿಧ ಹುದ್ದೆ

    NAL : ವಿವಿಧ ಹುದ್ದೆ

    ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಯು (ಸಿಎಸ್‌ಐಆರ್‌-ಎನ್‌ಎಎಲ್‌) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭವಾಗಲಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 16-04-2021
    ಅರ್ಜಿ ಸಲ್ಲಿಕೆಗೆ ಕೊನೆಯ ದಿನಂಕ : 21-05-2021

    ಹುದ್ದೆ : ಟೆಕ್ನೀಷಿಯನ್ ಅಸಿಸ್ಟಂಟ್-19
    ಟೆಕ್ನಿಕಲ್ ಆಫೀಸರ್-1
    ಸೀನಿಯರ್ ಟೆಕ್ನಿಕಲ್ ಆಫೀಸರ್-2
    ಸೀನಿಯರ್ ಟೆಕ್ನಿಕಲ್ ಆಫೀಸರ್-2
    ಸೀನಿಯರ್ ಟೆಕ್ನಿಕಲ್ ಆಫೀಸರ್ -4

    ವಿದ್ಯಾರ್ಹತೆ : ಈ ಮೇಲಿನ ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಬಿಇ/ಬಿ.ಟೆಕ್ ಇಂಜಿನಿಯರಿಂಗ್ ಪದವಿಯನ್ನು ಮೆಕ್ಯಾನಿಕಲ್, ಪ್ರೊಡಕ್ಷನ್, ಇಂಡಸ್ಟ್ರಿಯಲ್, ಏರೋಸ್ಪೇಸ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಕಂಮ್ಯುಮಿಕೇಷನ್, ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಷಯಗಳಲ್ಲಿ ಶೇ.೫೫ ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

    ವೇತನ : ಹುದ್ದೆಗಳಿನುಸಾರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 54,000/- ರೂ.67,000/- ರೂ.87,000/- ರೂ.1,03,000/- ವೇತನ ನೀಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ದೂರದರ್ಶನದಲ್ಲಿ ವಿವಿಧ ಹುದ್ದೆ : ಹೆಚ್ಚಿನ ಮಾಹಿತಿ ಇಲ್ಲಿದೆ

    ದೂರದರ್ಶನದಲ್ಲಿ ವಿವಿಧ ಹುದ್ದೆ : ಹೆಚ್ಚಿನ ಮಾಹಿತಿ ಇಲ್ಲಿದೆ

    ದೂರದರ್ಶನ ನ್ಯೂಸ್ ವಾಹಿನಿ (ಸರಕಾರಿ ಸ್ವಾಮ್ಯದ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪ್ರಸಾರ ಭಾರತಿ ಅರ್ಜಿಗಳನ್ನು ಆಹ್ವಾನಿಸಿದೆ.

    ಒಟ್ಟು ಹುದ್ದೆ : ಸರಕಾರಿ ಸ್ವಾಮ್ಯದ ಡಿಡಿ ಇಂಡಿಯಾ(ಇಂಗ್ಲೀಷ್ ನ್ಯೂಸ್ ಚಾನೆಲ್) ದಲ್ಲಿ ಇರುವ 15 ಹುದ್ದೆಗಳಿಗೆ ಪ್ರಸಾರ ಭಾರತಿ ಅರ್ಜಿ ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-04-2021 ಸಂಜೆ 05.೦೦ ಗಂಟೆ

    ಹುದ್ದೆಗಳ ವಿವರ : ಅಸೈನ್ಮೆಂಟ್ ಕೋಆರ್ಡಿನೇಟರ್ – 04, ಬ್ರಾಡ್ಕಾಸ್ಟ್‌ ಎಕ್ಸಿಕ್ಯೂಟಿವ್ ಗ್ರೇಡ್ 1 – 05, ಕಾಪಿ ರೈಟರ್ ಗ್ರಾಡ್ 2- 04 , ಗೆಸ್ಟ್ ಕೋ ಆರ್ಡಿನೇಟರ್ ಗ್ರೇಡ್ 1 – 1, ಗೆಸ್ಟ್ ಕೋ ಆರ್ಡಿನೇಟರ್ ಗ್ರೇಡ್ 2-1, ಹುದ್ದೆಗಳಿಗೆ ಸರಕಾರಿ ಸ್ವಾಮ್ಯದ ದೂರದರ್ಶನವು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.

    ಅಸೈನ್ಮೆಂಟ್ ಕೋಆರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಸಾಮೂಹಿಕ ಸಂವಹನ ಅಥವಾ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಕನಿಷ್ಠ 5 ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಗರಿಷ್ಠ 40 ವರ್ಷ ವಯೋಮಿತಿಯನ್ನು ಅಭ್ಯರ್ಥಿಯು ಮೀರಿರಬಾರದು.

    ಕಾಪಿ ರೈಟರ್ ಗ್ರೇಡ್ 2 ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಸಾಮೂಹಿಕ ಸಂವಹನ/ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಅಥವಾ ಸಂಬಂಧಿತ ವಿಷಯದಲ್ಲಿ ಪದವಿಯನ್ನು ಅಭ್ಯರ್ಥಿಯು ಪಡೆದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವವಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಅಭ್ಯರ್ಥಿಯ ವಯೋಮಿತಿಯು 4೦ ವರ್ಷಕ್ಕಿಂತ ಹೆಚ್ಚಿರಬಾರದು.

    ಬ್ರಾಡ್ಕಾಸ್ಟ್‌ ಎಕ್ಸಿಕ್ಯೂಟಿವ್ ಗ್ರೇಡ್ 1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ರೇಡಿಯೋ/ ಟೆಲಿವಿಷನ್ ಪ್ರೊಡಕ್ಷನ್‌ನಲ್ಲಿ ಪದವಿ ಅಥವಾ ವೃತ್ತಿಪರ ಡಿಪ್ಲೋಮಾ ಮಾಡಿರಬೇಕು. ಇಂಗ್ಲೀಷ್‌ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕನಿಷ್ಠ 3 ವರ್ಷ ಅನುಭವವಿರಬೇಕು. ವಯೋಮಿತಿ 4೦ ಮೀರಿರಬಾರದು.

    ಗೆಸ್ಟ್‌ ಕೋಆರ್ಡಿನೇಟರ್ ಗ್ರೇಡ್ 1 ಹುದ್ದೆಗೆ ಬಿಎ ಪದವೀಧರರು ಅರ್ಜಿ ಸಲ್ಲಿಸಬಹುದು. ಪ್ರತಿಷ್ಠಿತ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಾರ್ವಜನಿಕ ಸಂಪರ್ಕ/ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಆಗಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಪಡೆದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಠ 7 ವರ್ಷ ಅನುಭವ ಹೊಂದಿರಬೇಕು. ವಯೋಮಿತಿಯು 45 ವರ್ಷ ಮೀರಿರಬಾರದು.

    ಗೆಸ್ಟ್‌ ಕೋಆರ್ಡಿನೇಟರ್ ಗ್ರೇಡ್ 2 ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದ ಬಿಎ ಪದವೀಧರರಾಗಿರಬೇಕು. ಪ್ರತಿಷ್ಠಿತ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಾರ್ವಜನಿಕ ಸಂಪರ್ಕ/ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದಿರಬೇಕು. ಕನಿಷ್ಠ 3 ವರ್ಷ ಅನುಭವವರಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು. ವಯೋಮಿತಿ 45 ವರ್ಷ ಮೀರಿರಬಾರದು.

    ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಉಪನಿರ್ದೇಶಕರು (ಎಚ್‌ಆರ್‌), ಕೊಠಡಿ ಸಂಖ್ಯೆ 413, 4 ನೇ ಮಹಡಿ, ದೂರದರ್ಶನ ಭವನ, ಟವರ್ ಬಿ ಕೋಪರ್ನಿಕಸ್ ಮಾರ್ಗ, ನವದೆಹಲಿ -110001 ಇಲ್ಲಿಗೆ ಪೋಸ್ಟ್/ಕೊರಿಯರ್/ಡ್ರಾಪ್‌ ಬಾಕ್ಸ್‌ ಮೂಲಕ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • KSET ಅರ್ಹತಾ ಪರೀಕ್ಷೆ ಮುಂದೂಡಿಕೆ

    KSET ಅರ್ಹತಾ ಪರೀಕ್ಷೆ ಮುಂದೂಡಿಕೆ

    ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯು ದಿನಾಂಕ 11.04.2021 ರಂದು ನಡೆಯಬೇಕಾಗಿದ್ದು, ಮುಂದೂಡಿಕೆಯಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶನಿವಾರ ಹೊರಬಿದ್ದಿದೆ. ಮುಂದಿನ ಕೆಸೆಟ್ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

    ಎಪ್ರಿಲ್ 11, 2021ರಂದು ವಿಶ್ವವಿದ್ಯಾಲಯವು ಕೆಸೆಟ್ ಪರೀಕ್ಷೆಯನ್ನು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಕೆಸೆಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಮುಂದಿನ ಕೆಸೆಟ್ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.