Author: Mallika

  • ಕೃಷಿ ವಿಶ್ವವಿದ್ಯಾಲಯ ಧಾರವಾಡ: ವಿವಿಧ ಹುದ್ದೆಗಳಿಗೆ ನೇಮಕ

    ಕೃಷಿ ವಿಶ್ವವಿದ್ಯಾಲಯ ಧಾರವಾಡ: ವಿವಿಧ ಹುದ್ದೆಗಳಿಗೆ ನೇಮಕ

    ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಚಾಲನೆಯಲ್ಲಿರುವ ಐಸಿಎಆರ್ – ಎನ್‌ಎಎಚ್‌ಇಪಿ ಯೋಜನೆ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ರಿಸರ್ಚ್ ಅಸೋಸಿಯೇಟ್ -01
    ಸೀನಿಯರ್ ರಿಸರ್ಚ್‌ಫೆಲೋ -01

    ಹುದ್ದೆ ಸಮಯ : ಈ ಮೇಲೆ ಕಾಣಿಸಿದ ವಿವಿಧ ಹುದ್ದೆಗಳಿಗೆ ಒಂದು ವರ್ಷ ಅಥವಾ ಯೋಜನೆಯ ಮುಕ್ತಾಯದವರೆಗೆ ಯಾವುದು ಮೊದಲು ಸಂಭವಿಸುತ್ತದೆ ಅಲ್ಲಿಯವರೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ರಿಸರ್ಚ್ ಅಸೋಸಿಯೇಟ್ ಹಾಗೂ ಸೀನಿಯರ್ ರಿಸರ್ಚ್‌ಫೆಲೋ ಹುದ್ದೆಗೆ ಆಯ್ಕೆಯಾದವರು ಮುಖ್ಯ ಆವರಣ ಕೃ.ವಿ.ವಿ ಧಾರವಾಡ ಇಲ್ಲಿ ಕಾರ್ಯನಿರ್ವಹಿಸಬೇಕು.

    ವಿದ್ಯಾರ್ಹತೆ : ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ ಕಂಪ್ಯೂಟರ ಸೈನ್ಸ್/ಐಟಿ/ಇ ಮತ್ತು ಸಿ ಜೊತೆಗೆ ಪ್ರೊಗ್ರಾಮಿಂಗ್ ನಲ್ಲಿ ಐದು ವರ್ಷಗಳ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 54,000/- + HRA ವೇತನವಿರುತ್ತದೆ.

    ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಎಂ.ಎಸ್ಸಿ(ಅಗ್ರಿ)/ ಎಂಬಿಎ ಹಾಗೂ 3 ವರ್ಷಗಳ ಅನುಭವವಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ತಿಂಗಳ ರೂ. 35,000/-+HRA ವೇತವನ್ನು ಪಡೆಯುತ್ತಾರೆ.

    ವಿಶ್ವವಿದ್ಯಾಲಯದಲ್ಲಿ ಸಲ್ಲಿಸಿದ ಸೇವೆಯನ್ನು ಖಾಯಂ ಹುದ್ದೆಗೆ ಪರಿಗಣಿಸಲು ಹಕ್ಕೆಂದು ಸಾಧಿಸಲು ಅವಕಾಶವಿಲ್ಲ. ಈ ಕುರಿತು ತಾತ್ಕಾಲಿಕವಾಗಿ ನೇಮಕಗೊಂಡ ಅಭ್ಯರ್ಥಿಗಳು ಸೇವೆಗೆ ಸೇರುವ ಮುನ್ನ ರೂ. 100/- ರ ಛಾಪಾ ಕಾಗದದ ಮೇಲೆ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪತ್ರ ಸಲ್ಲಿಸಬೇಕು.

    ಅಭ್ಯರ್ಥಿಗಳು ದಿನಾಂಕ 23-04-2021ರಂದು ಬೆಳಿಗ್ಗೆ 11 : 00 ಘಂಟೆಗೆ ಸಹ ಸಂಶೋಧನಾ ನಿರ್ದೇಶಕರ ಕಛೇರಿ , ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

    ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು: ಡಾ.ಪಿ.ಯು ಕೃಷ್ಣರಾಜ, ಸಂಯೋಜಕರು, NAHEP-IDP ಯೋಜನೆ, ಕೃವಿವಿ, ಧಾರವಾಡ. ದೂರವಾಣಿ ಸಂಖ್ಯೆ : 9845906301

  • ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ: ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

    ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ: ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

    ಬೆಂಗಳೂರು ನಗರ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ 2020-21 ನೇ ಸಾಲಿನಿಂದ 2024-25 ನೇ ಸಾಲಿನವರೆಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತದೆ. 2021-21 ನೇ ಸಾಲಿನಲ್ಲಿ ಸದರಿ ಯೋಜೆಯಡಿ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳಾದ ಮೀನು ಕೃಷಿ ಕೊಳಗಳ ನಿರ್ಮಾಣ, ಬಯೋ ಫ್ಲಾಕ್ ಕೊಳ ನಿರ್ಮಾಣ ಮೀನು ಮರಿ ಉತ್ಪಾದನೆ ಹಾಗೂ ಪಾಲನಾ ಕೇಂದ್ರಗಳ ಸ್ಥಾಪನೆ, ಶೈತೀಕರಿಸಿದ ಶಾಖ ನಿರೋಧಕ ವಾಹನ ಖರೀದಿ/ ಶೈತ್ಯಾಗಾರ/ ಮಂಜುಗಡ್ಡೆ ಸ್ಥಾವರ ನಿರ್ಮಾಣ ಮತ್ತು ಇತರೆ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 40 ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 60 ರಷ್ಟು ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ರವರುಗಳನ್ನು ಸಂಪರ್ಕಿಸಲು ಕೋರಿದೆ.

    2021-22ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ವಿವಿಧ ಯೋಜನೆಗಳ ಪ್ರಯೋಜನೆ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-05-2021 ಮುಂದುವರೆದು 2021-22ನೇ ಸಾಲಿನಲ್ಲಿ ಮೀನುಗಾರಿಕೆ ಇಲಖೆಯ ಕೇಂದ್ರ ವಲಯ/ ರಾಜ್ಯ ವಲಯ / ಜಿಲ್ಲಾ ವಲಯದ ವಿವಿಧ ಯೋಜನೆಗಳಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ಖರೀದಿ, ಮೀನುಮರಿ ಖರೀದಿಗೆ ಹಾಗೂ ಇತ್ಯಾದಿ ಯೋಜನೆಗಳಿಗೆ ಸಹಾಯಧನ ಪಡೆಯಲು ಆಸಕ್ತ ಒಳನಾಡು ಮೀನುಗಾರರು ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ರವರ ಕಛೇರಿಗೆ ಅರ್ಜಿಗಳನ್ನು ಸಲ್ಲಿಸಲು ಈ ಮೂಲಕ ತಿಳಿಯಪಡಿಸಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಕಚೇರಿಯನ್ನು ಸಂಪರ್ಕಿಸಬಹುದು.

    ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಬೆಂಗಳೂರು ನಗರಜಿಲ್ಲೆ – 9972189781
    ಮೀನುಗಾರಿಕೆ ಸಹಾಯಕ ನಿರ್ದೇಶಕರು ಬೆಂಗಳೂರು ದಕ್ಷಿಣ/ಪೂರ್ವ – 9448500385
    ಮೀನುಗಾರಿಕೆ ಸಹಾಯಕ ನಿರ್ದೇಶಕರು ಬೆಂಗಳೂರು ಉತ್ತರ – 9590135993
    ಮೀನುಗಾರಿಕೆ ಸಹಾಯಕ ನಿರ್ದೇಶಕರು ಆನೇಕಲ್ ತಾಲ್ಲೂಕು – 9448500385

  • BBMP : ಉದ್ಯೋಗವಕಾಶ

    BBMP : ಉದ್ಯೋಗವಕಾಶ

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ ಇತರ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಎಂಬಿಬಿಎಸ್ ಡಾಕ್ಟರ್ಸ್ , ಬಿಡಿಎಸ್ ಡಾಕ್ಟರ್ಸ್, ಆಯುಷ್ ಡಾಕ್ಟರ್ಸ್, ಸ್ಟಾಫ್ ನರ್ಸ್ ಫಾರ್ ವ್ಯಾಕ್ಸಿನೇಶನ್, ಸ್ವಾಬ್ ಕಲೆಕ್ಟರ್ಸ್

    ಎಂಬಿಬಿಎಸ್ ಡಾಕ್ಟರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ದಿಂದ ಎಂಬಿಬಿಎಸ್ ನ್ನು ಪಡೆದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.80,000/- ವೇತನವಿರುತ್ತದೆ.

    ಬಿಡಿಎಸ್ ಡಾಕ್ಟರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅಂಗೀಕೃತ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ದಿಂದ ಬಿಡಿಎಸ್ ಮಾಡಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 60,000/- ವೇತನ ನಿಗದಿಯಾಗಿದೆ.

    ಆಯುಷ್ ಡಾಕ್ಟರ್ಸ್ ಹುದ್ದೆಗೆ ಬಿಎಎಂಎಸ್/ಬಿಯುಎಂಎಸ್/ಬಿಎಸ್‌ಎಂಎಸ್/ಬಿಎಚ್‌ಎಂಎಸ್ ಆಯುರ್ವೇದ ಡಿಗ್ರಿಯನ್ನು ಪಡೆದಿರಬೇಕು. ಈ ಹುದ್ದೆ ಮಾಸಿಕ ರೂ. 60,000/- ವೇತನವಿರುತ್ತದೆ.

    ಸ್ಟಾಫ್ ನರ್ಸ್ ಫಾರ್ ವ್ಯಾಕ್ಸಿನೇಶನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಎಸ್ಸಿ/ಜಿಎನ್‌ಎಂ/ಡಿಪ್ಲೋಮಾ ನರ್ಸಿಂಗ್ ನ್ನು ರಿಜಿಸ್ಟರ್ಸ್ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ ನಿಂದ ಪಡೆದಿರಬೇಕು. ಈ ಹುದ್ದೆಗೆ ತಿಂಗಳ ರೂ.20,000/- ವೇತನವಿರುತ್ತದೆ.

    ಸ್ವಾಬ್ ಕಲೆಕ್ಟರ್ಸ್ ಈ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.19,000/- ವೇತನವಿರುತ್ತದೆ.

    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು 50 ವರ್ಷ ಮೀರಿರಬಾರದು.

    ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು, ಬರೆಯಲು ಓದಲು ತಿಳಿದಿರಬೇಕು.

    ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಈ ಹುದ್ದೆಯು 3 ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ.

    ವಿಳಾಸ : 3rd Floor South BBMP Zonal Office,Jayangara 2nd Block.
    ದಿನಾಂಕ 19-04-2021 ರಿಂದ 21-04-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನಂಬರನ್ನು ಸಂಪರ್ಕಿಸಿ : 8431816718

  • ರೈಲು ಗಾಲಿ ಕಾರ್ಖಾನೆ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ರೈಲು ಗಾಲಿ ಕಾರ್ಖಾನೆ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೋವಿಡ್- 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು – ಈ ಕೆಳಗಿನ ಪ್ರಾರಾಮೆಡಿಕಲ್ ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ಸ್ಟಾಫ್ ನರ್ಸ್ – 13
    ರೇಡಿಯೋಗ್ರಾಫರ್ / ಎಕ್ಸ್‌ – ರೇ ತಂತ್ರಜ್ಞ
    ಲ್ಯಾಬ್ ತಂತ್ರಜ್ಞ – 01
    ಆಸ್ಪತ್ರೆ ಪರಿಚಾರಕರು – 10

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆರ್‌ಡಬ್ಲ್ಯುಎಫ್ ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು.

    ಸಂದರ್ಶನ ದಿನಾಂಕ : 20-04-2021 ರಂದು 11.00 ಗಂಟೆಗೆ ತಾಂತ್ರಿಕ ತರಬೇತಿ ಕೇಂದ್ರ, ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು – 560064 ರಲ್ಲಿ ವಾಕ್‌- ಇನ್ ಸಂದರ್ಶನಕ್ಕೆ ಹಾಜರಾಗತಕ್ಕದ್ದು.

  • ವಿಟಿಯು : ಪರೀಕ್ಷೆ ಮುಂದೂಡಿಲ್ಲ

    ವಿಟಿಯು : ಪರೀಕ್ಷೆ ಮುಂದೂಡಿಲ್ಲ

    ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ (ವಿಟಿಯು)ದ ಬಿ.ಇ, ಬಿ.ಟೆಕ್‌, ಬಿ.ಆರ್ಕ್‌ ಹಾಗೂ ಬಿ.ಪ್ಲಾನ್ ಕೋರ್ಸ್‌ಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿಲ್ಲ. ಈ ಮೊದಲಿನ ವೇಳಾಪಟ್ಟಿಯಂತೆ ಏ.19 ರಿಂದ ಪರೀಕ್ಷೆ ಆರಂಭಗೊಳ್ಳಲಿದೆ ಎಂದು ಪ್ರಕಟಣೆಲ್ಲಿ ತಿಳಿಸಲಾಗಿದೆ.
    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಬೆಂಗಳೂರು ವಿಶ್ವವಿದ್ಯಾನಿಲಯ : ಪರೀಕ್ಷೆ ಮುಂದೂಡಿಕೆ

    ಬೆಂಗಳೂರು ವಿಶ್ವವಿದ್ಯಾನಿಲಯ : ಪರೀಕ್ಷೆ ಮುಂದೂಡಿಕೆ

    ಬೆಂಗಳೂರು ವಿಶ್ವವಿದ್ಯಾನಿಲಯವು ಎಪ್ರಿಲ್ 19 ರಂದು ನಡೆಸಬೇಕಾಗಿದ್ದ ಸ್ನಾತಕ, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಯನ್ನು ಮುಂದೂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

    ಎಪ್ರಿಲ್ 19 , 20 ಮತ್ತು 21 ರಂದು ನಡೆಯಬೇಕಾಗಿದ್ದ ವಿವಿಧ ಪರೀಕ್ಷೆಗಳನ್ನು ಸೋಂಕು ಹೆಚ್ಚಳ ಕಾರಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಮುಂದೂಡಿದೆ.

    ಏ.19 ರಂದು ಪ್ರಾರಂಭವಾಗಬೇಕಾಗಿದ್ದ ಎಲ್ಲಾ ಎಲ್ಲಾ ಯುಜಿ ಕೋರ್ಸ್‌ಗಳ 1 ಮತ್ತು 3ನೇ ಸೆಮಿಸ್ಟರ್ , ಯುವಿಸಿಇನ ಬಿ.ಆರ್ಕ್‌/ಬಿ.ಟೆಕ್ (ಸಿಬಿಸಿಎಸ್‌) 1,2,3 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.

    20 ರಿಂದ ಪ್ರಾರಂಭವಾಗಬೇಕಾಗಿದ್ದ ಎಂಬಿಎ/ಎಂಸಿಎ/ಎಂ.ಇಡಿ/ಎಂ.ಎಸ್ಸಿ ಆರಂಭವಾಗಬೇಕಾಗಿದ್ದ ಎಂಎ/ಎಂಎಸ್ಸಿ/ಎಂಎಎಸ್‌ಎಲ್‌ಪಿ ನ 3 ನೇ ಸೆಮಿಸ್ಟರ್ ಹಾಗಝೂ ಎಂಸಿಎ 5 ನೇ ಸೆಮಿಸ್ಟರ್ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದು ಬೆಂಗಳೂರು ವಿವಿ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.