Author: Mallika

  • UPSC : ಪರೀಕ್ಷೆ ಮುಂದೂಡಿಕೆ

    UPSC : ಪರೀಕ್ಷೆ ಮುಂದೂಡಿಕೆ

    ನಾಗರಿಕ ಸೇವಾ ಆಯೋಗಗಳಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿರುವ ಸಂದರ್ಶನ ದಿನಾಂಕವನ್ನು ಮುಂದೂಡಲಾಗಿದೆ ಎಂದು ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್ ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

    ದೂರ ಪ್ರದೇಶಗಳಿಂದ ಪ್ರವಾಸ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಮುಂದೂಡಲಾಗಿದೆ.

    15 ದಿನಗಳ ಮುಂಚಿತವಾಗಿ ಪರಿಷ್ಕೃತ ದಿನಾಂಕವನ್ನು ಯುಪಿಎಸ್ ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

    2020 ನೇ ಸಾಲಿನ ಇಂಡಿಯನ್ ಎಕನಾಮಿಕ್ ಸರ್ವಿಸ್ / ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ ಬರೆದ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಎ‌.20 ರಿಂದ 23 ರವರೆಗೆ ನಡೆಯಬೇಕಿತ್ತು. 2020ನೇ ಸಾಲಿನ ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಏ.26 ರಿಂದ ಜೂನ್ 18 ರವರೆಗೆ ನಡೆಯಬೇಕಿತ್ತು.

  • ರೈಲು ಗಾಲಿ ಕಾರ್ಖಾನೆ ಯಲ್ಲಿ 3 ಹುದ್ದೆ

    ರೈಲು ಗಾಲಿ ಕಾರ್ಖಾನೆ ಯಲ್ಲಿ 3 ಹುದ್ದೆ

    ಬೆಂಗಳೂರಿನ ಯಲಹಂಕದಲ್ಲಿರುವ ರೈಲು ಗಾಲಿ ಕಾರ್ಖಾನೆಯಲ್ಲಿ ಕೋವಿಡ್ 19 ಸಾಂಕ್ರಾಮಿಕವನ್ನು ಎದುರಿಸಲು, ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆ : ಆಲೋಪತಿ ವೈದ್ಯರನ್ನು ನೇಮಕಾತಿ ಮಾಡಲು ಇಚ್ಛಿಸಿದೆ.

    ಹುದ್ದೆ ಸಂಖ್ಯೆ : 03

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅರ್ಹತೆಯುಳ್ಳ ವೈದ್ಯರು ಎಪ್ರಿಲ್ 21, 2021 ರ 11 ಗಂಟೆಗೆ ತಾಂತ್ರಿಕ ತರಬೇತಿ ಕೇಂದ್ರ, ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು -560064 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಶ್ರೀ ನಾರಾಯಣಗುರು ಕೋ-ಅಪರೇಟಿವ್ ಸೊಸೈಟಿ ಬೆಂಗಳೂರು : ವಿವಿಧ ಹುದ್ದೆಗೆ ಕರೆ

    ಶ್ರೀ ನಾರಾಯಣಗುರು ಕೋ-ಅಪರೇಟಿವ್ ಸೊಸೈಟಿ ಬೆಂಗಳೂರು : ವಿವಿಧ ಹುದ್ದೆಗೆ ಕರೆ

    ಶ್ರೀ ನಾರಾಯಣ ಗುರು ಕೋಅಪರೇಟಿವ್ ಸೊಸೈಟಿ,ಬೆಂಗಳೂರು ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ನುರಿತ ಹಾಗೂ ಕೋಅಪರೇಟಿವ್ ಸೊಸೈಟಿಯಲ್ಲಿ ಅನುಭವವುಳ್ಳ ವ್ಯವಸ್ಥಾಪಕರು( ಮ್ಯಾನೇಜರ್) ಹಾಗೂ ಕರ್ನಾಟಕ ರಾಜ್ಯದ 31 ಜಿಲ್ಲೆಗಳು ಮತ್ತು 226 ತಾಲೂಕು ಮಟ್ಟದಲ್ಲಿ ಸೊಸೈಟಿಗೆ ಪಿಗ್ಮಿ ಹಣ ಸಂಗ್ರಹಿಸುವ ಸಿಬ್ಬಂದಿಗಳು ಬೇಕಾಗಿದ್ದಾರೆ.

    ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು [email protected] ಇ-ಮೇಲ್ ವಿಳಾಸಕ್ಕೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08041241685 ಗೆ ಕರೆ ಮಾಡಬಹುದು

  • UPSC EPFO ಪ್ರವೇಶ ಪತ್ರ ಬಿಡುಗಡೆ

    UPSC EPFO ಪ್ರವೇಶ ಪತ್ರ ಬಿಡುಗಡೆ

    ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಎನ್‌ಫೋರ್ಸ್‌ಮೆಂಟ್ ಆಫೀಸರ್ ಅಕೌಂಟ್ಸ್ ಆಫೀಸರ್ ಪರೀಕ್ಷೆಗೆ ಅಭ್ಯರ್ಥಿಗಳ ಪ್ರವೇಶ ಪತ್ರ ಬಿಡುಗಡೆ ಮಾಡಿದೆ.

    ಇಪಿಎಫ್‌ಒ ಪರೀಕ್ಷೆಯ ಪ್ರವೇಶ ಪತ್ರವನ್ನು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ದಿನಾಂಕ ಮೇ, 09, 2021 ರವರೆಗೆ ಡೌನ್‌ಲೋಡ್‌ ಮಾಡಲು ಅವಕಾಶವಿದೆ. ಅಭ್ಯರ್ಥಿಗಳು upsc.gov.in ವೆಬ್‌ಸೈಟ್ ಗೆ ಲಾಗಿನ್ ಆಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

    ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಕಡ್ಡಾಯ. ನೀಡಲಾಗಿರುವ ಮಾರ್ಗಸೂಚಿಗಳನ್ನು ಫಾಲೋ ಮಾಡಬೇಕು. ಪರೀಕ್ಷೆ ದಿನಾಂಕ, ಪರೀಕ್ಷಾ ಕೇಂದ್ರ ಇತ್ಯಾದಿ ಮಾಹಿತಿಗಳನ್ನು ಪ್ರವೇಶ ಪತ್ರದಲ್ಲಿ ನೀಡಲಾಗುತ್ತದೆ. ಪ್ರವೇಶ ಪತ್ರದ ಜೊತೆಗೆ ಇತರೆ ಇನ್ನೊಂದು ಅಧಿಕೃತ ಗುರುತಿನ ಚೀಟಿಯನ್ನು ಅಭ್ಯರ್ಥಿಗಳು ತರಬೇಕು.

    ಯುಪಿಎಸ್‌ಸಿ ಇಪಿಎಫ್‌ಒ ಪರೀಕ್ಷೆಯನ್ನು ಮೇ. 09,2021 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12ಗಂಟೆ ವರೆಗೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

  • SAI : 320 ಹುದ್ದೆಗಳಿಗೆ ಅರ್ಜಿ ಆಹ್ವಾನ

    SAI : 320 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಲಿದ್ದು, ಮೇ 20, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ :

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20-04-2021
    ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-05-2021

    ಹುದ್ದೆ : ಅಸಿಸ್ಟೆಂಟ್ ಕೋಚ್ – 220
    ಕೋಚ್ – 100

    ಹುದ್ದೆ ಸ್ಥಳ : ಆಲ್ ಇಂಡಿಯಾ (ಭಾರತದೆಲ್ಲೆಡೆ)

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಬೋರ್ಡ್/ ಯುನಿವರ್ಸಿಟಿಯಿಂದ ಡಿಪ್ಲೋಮಾ ತೇರ್ಗಡೆ ಹೊಂದಿರಬೇಕು.

    ಅಸಿಸ್ಟೆಂಟ್ ಕೋಚ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.41,420/-ರಿಂದ 1,12,400/- ರೂ. ವೇತನವಿರುತ್ತದೆ. ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಮೀರಿರಬಾರದು.
    ಕೋಚ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.1,05,000/- ರಿಂದ ರೂ.1,50,000/- ವೇತನವಿರುತ್ತದೆ. ಅಭ್ಯರ್ಥಿಗಳು ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ : ಈ ಹುದ್ದೆಗೆ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಮೌಖಿಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು.

    ಅಧಿಕೃತ ವೆಬ್‌ಸೈಟ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಕೋಚ್ ಹುದ್ದೆ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
    ಅಸಿಸ್ಟೆಂಟ್ ಕೋಚ್ ಹುದ್ದೆಗಳ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು : ವಿವಿಧ ಹುದ್ದೆ : ಎಪ್ರಿಲ್ 22 ಕಡೇ ದಿನಾಂಕ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು : ವಿವಿಧ ಹುದ್ದೆ : ಎಪ್ರಿಲ್ 22 ಕಡೇ ದಿನಾಂಕ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾದ್ಯಂತ ಕೋವಿಡ್ -19 ನಿಯಂತ್ರಣ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಲು ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಲ್ಯಾಬ್ ಟೆಕ್ನಿಶಿಯನ್ – 03
    ಫಾರ್ಮಸಿಸ್ಟ್ – 08

    ಹುದ್ದೆ ಸಮಯ : ಸೆ. 30 ರವರೆಗೆ ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಏಪ್ರಿಲ್‌ 22 ರಂದು ಬೆಳಗ್ಗೆ 11 ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ನೇರ ಸಂದರ್ಶನ‌ ನಡೆಯಲಿದೆ.

    ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲೋಕೋಪಯೋಗಿ ಕಟ್ಟಡ ‌ಸಂಕೀರ್ಣ, ನೆಹರು ಮೈದಾನ ರಸ್ತೆ, ಮಂಗಳೂರು ಸಂಪರ್ಕಿಸಬಹುದು.