ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ನಿಯಮಿತ ದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕರ್ನಾಟಕ ಸರಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾದ ಕೆ-ರೈಡ್ ಸಂಸ್ಥೆಯು ಈ ಕೆಳಗಿನ ಹುದ್ದೆಗಳಿಗೆ ನಿಯೋಜನೆ/ ಒಪ್ಪಂದದ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ ವಿವರ : ಪ್ರಧಾನ ವ್ಯವಸ್ಥಾಪಕರು, ಸೀನಿಯರ್ ಡಿಜಿಯಂ/ಜಿಜಿಎಂ/ಎಜಿಎಂ ಡಿಸೈನ್ (ಸಿವಿಲ್), ವ್ಯವಸ್ಥಾಪಕರು, ಸಹಾಯಕ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಕಾರ್ಯನಿರ್ವಾಹಕ, ನಿರ್ದೇಶಕ ಬಿಡಿ& ಎಫ್ ರವರಿಗೆ ಕಾರ್ಯ ನಿರ್ವಾಹಕ ಸಹಾಯಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 21-05-2021
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.kride.in ಗೆ ಭೇಟಿ ನೀಡಬಹುದು
ಮೈಸೂರಿನ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಮತ್ತು ಸಹಾಯಕ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ.
ಹುದ್ದೆ : ಸಹಾಯಕ ಆಯುಕ್ತರ ಕಚೇರಿಯಲ್ಲಿ ಲೆಕ್ಕಿಗರು, ಕಚೇರಿ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಈ ಪ್ರಕಟಣೆ ಹೊರಡಿಸಿದ 7 ದಿನದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ವಿದ್ಯಾರ್ಹತೆ : ಬಿ.ಕಾಂ, ಬಿಬಿಎಂ ಪದವಿ ಪಡೆದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವ ಮತ್ತು ಬರೆಯುವ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ, ಟ್ಯಾಲಿ ತಂತ್ರಾಂಶ ಉಪಯೋಗಿಸುವ ಜ್ಞಾನ ಇತ್ಯಾದಿ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ರೂ.16,000/- ಗೌರವಧನ ನಿಗದಿಪಡಿಸಲಾಗಿದೆ.
ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಲೆಕ್ಕ ಪತ್ರಗಳನ್ನು ನಿರ್ವಹಿಸುವಲ್ಲಿ ಮತ್ತು ಅಕೌಂಟೆಂಟ್ ಹುದ್ದೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕುವೆಂಪು ನಗರದ ಅಕ್ಷಯ ಭಂಡಾರ ವೃತ್ತದ ಬಳಿ ಇರುವ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿ ಮತ್ತು ಬಾಲಕಾರ್ಮಿಕ ಯೋಜನಾ ಸೊಸೈಟಿ ಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಆಸಕ್ತರು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ : 0821-2541942
ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ : ಜವಾನ( Peon) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆ : 34 ಹುದ್ದೆಗಳು.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 19-04-2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-05-2021(11.59 ರಾತ್ರಿ)
ವಿದ್ಯಾರ್ಹತೆ : ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಕನ್ನಡ ಓದಲು ಬರೆಯಲು ತಿಳಿದಿರಬೇಕು.
ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ವಯೋಮಿತಿಯವರಾಗಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪ್ರವರ್ಗ-I ರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಾಧಿಕಾರ ನೀಡುವ ಜಾತಿ ಧೃಢೀಕರಣ ಪತ್ರ ಹೊಂದಿದ್ದಲ್ಲಿ ಗರಿಷ್ಠ 40 ವರ್ಷ.
ಪ್ರವರ್ಗ 2 ಎ, 2 ಬಿ, 3 ಎ, 3 ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಾಧಿಕಾರ ನೀಡುವ ಜಾತಿ ಪ್ರಮಾಣ ಪತ್ರ ಹೊಂದಿದ್ದಲ್ಲಿ ಗರಿಷ್ಠ 38 ವರ್ಷ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ.
ಅರ್ಜಿ ಶುಲ್ಕ : ಸಾಮಾನ್ಯ ವರ್ಗ, 2ಎ, 2 ಬಿ, 3 ಎ, 3 ಬಿ ಸೇರಿದ ಅಭ್ಯರ್ಥಿಗಳಿಗೆ ರೂ. 200/-, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1 ಹಾಗೂ ಎಲ್ಲಾ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಆನ್ಲೈನ್ ಹೊರತು ಪಡಿಸಿ ಬೇರೆ ಯಾವುದೇ ಬೇರೆ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ವಿಪತ್ತು ನಿರ್ವಹಣಾ ಯೋಜನೆ ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 26 ಮಧ್ಯಾಹ್ನ 1.30 ರೊಳಗೆ. ಕೊನೆ ದಿನದ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹುದ್ದೆ : ಜಿಲ್ಲಾ ವಿಪತ್ತು ನಿರ್ವಹಣೆಗಾರ ( district disaster Professional ) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಯೋಮಿತಿ : ಅಭ್ಯರ್ಥಿಗಳು ವಯೋಮಿತಿಯು 65 ವರ್ಷ ಮೀರಿರಬಾರದು.
ಕೆಲಸದ ಅವಧಿ : 12 ತಿಂಗಳ ಅವಧಿಯ ಮೇರೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಪತ್ತು ನಿರ್ವಹಣೆ, ಸಾಮಾಜಿಕ ಕಾರ್ಯ, ಸಮಾಜ ಶಾಸ್ತ್ರ, ಕೃಷಿ, ವಾಸ್ತುಶಿಲ್ಪ, ಇಂಜಿನಿಯರಿಂಗ್ ನಗರ ಯೋಜನೆ ಹಾಗೂ ಇನ್ನಿತರ ಸಾಮಾಜಿಕ ವಿಜ್ಞಾನದಲ್ಲಿ ಪದವಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುವುದು. 5 ವರ್ಷಗಳ ಅನುಭವ ಇರಬೇಕು. ಪಿಎಚ್ಡಿ ಪಡೆದ ಅಭ್ಯರ್ಥಿಗಳಿಗೆ 3 ವರ್ಷಗಳ ಅನುಭವ ಇರಬೇಕು.
ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಉತ್ತಮ ಹಿಡಿತ ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
ಎಂ.ಎಸ್.ಆಫೀಸ್ ಮತ್ತು ಇಂಟರ್ನೆಟ್ ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು. ಪ್ರತಿ ಮಾಹೆಗೆ ರೂ. 44,000/- ವೇತನ ನೀಡಲಾಗುವುದು.
ಅಭ್ಯರ್ಥಿಗಳು ಇತ್ತೀಚಿನ ಸ್ವ ವಿವರಗಳೊಂದಿಗೆ ಸ್ವಯಂ ದೃಢೀಕರಿಸಿದ ಶೈಕ್ಷಣಿಕ ಮತ್ತು ಅನುಭವ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ಜಿಲ್ಲಾಧಿಕಾರಿಗಳು( ವಿಪತ್ತು ನಿರ್ವಹಣಾ ಕೋಶ ) ಕಲಬುರಗಿ -585102 ನೋಂದಾಯಿತ ಅಂಚೆ ಮೂಲಕ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂ.ಸಂಖ್ಯೆ 08472- 278677 ಗೆ ಸಂಪರ್ಕಿಸಬಹುದು.
ಭಾರತ ಸರಕಾರದಿಂದ ಸ್ಥಾಪಿತವಾದ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಡಿಯ ಒಂದ ನಿಗಮವೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ನಿಯಮಿತರವರು ಈಶಾನ್ಯ ವಲಯದ ಹಾಗೂ ನಮ್ಮ ನೆರೆಯ ದೇಶಗಳನ್ನು ಹಂಚಿಕೊಳ್ಳುವ ಅಂತರಾಷ್ಟ್ರೀಯ ಗಡಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ/ಮೇಲ್ದರ್ಜೆ/ಅಗಲೀಕರಣಕ್ಕಾಗಿ ಅತ್ಯಂತ ಶೀಘ್ರಗತಿಯಲ್ಲಿ ಮಾಡಲು ಉದ್ದೇಶಿಸಿದೆ.
ಕೇಂದ್ರ ಸರಕಾರದ ಸಚಿವಾಲಯಗಳು/ಇಲಾಖೆಗಳಿಂದ ಸೈನ್ಯ, ನೌಕಾಪಡೆ, ವಾಯುಪಡೆ, ಬಿಆರ್‌ಒ ( ಜಿಆರ್‌ಇಎಫ್), ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯ ಸ್ವಾಮಕ್ಕೋಳಟ್ಟಿರುವಂತಹುಗಳು, ರಾಜ್ಯ ಸರಕಾರದ ಇಲಾಖೆಗಳು ಹಾಗೂ ರಾಜ್ಯ ಸರಕಾರದ ಸಾರ್ವಜನಿಕ ವಲಯ ಸ್ವಾಮ್ಯಕ್ಕೊಳಪಟ್ಟಿರುವಂತಹುಗಳ ಅತ್ಯಂತಕ್ರಿಯಾತ್ಮಕ, ಪರಿಣಾಮಕಾರಿ ಹಾಗೂ ಅನುಭವೀ ಅರ್ಹ ನಿವೃತ್ತ ಅಧಿಕಾರಿಗಳಿಂದ ಗುತ್ತಿಗೆ ಆಧಾರದ ಮೇಲೆ ಈ ಕೆಳಗಿನ ಷರತ್ತು ಹಾಗೂ ನಿಯಮಗಳಂತೆ ಅರ್ಜಿಗಳನ್ನು ಆಹ್ವಾನಿಸುತ್ತಿದ್ದಾರೆ.
ಹುದ್ದೆ : 1. ಜನರಲ್ ಮ್ಯಾನೇಜರ್ (ಟಿ/ಪಿ) (ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 13 (ಪುರ್ವ ಪರಿಷ್ಕೃತ ಪಿಬಿ- 4 ಆಫ್ ರೂ.37,400/-67,000/- ಮತ್ತು ಗ್ರೇಡ್ ವೇತನ ರೂ.8,700/-)
ಡೆಪ್ಯುಟಿ ಜನರಲ್ ಮ್ಯಾನೇಜರ್ ( (ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 12 (ಪುರ್ವ ಪರಿಷ್ಕೃತ ಪಿಬಿ- 3 ಆಫ್ ರೂ./- 15,600/-, 39100/-ಮತ್ತು ಗ್ರೇಡ್ ವೇತನ ರೂ.7600/-) ವೇತನವಿರುತ್ತದೆ. ಇಲ್ಲಿ ಒಟ್ಟು ಇಪ್ಪತ್ತು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಡೆಪ್ಯುಟಿ ಜನರಲ್ ಮ್ಯಾನೆಜರ್ (ಫಿನಾನ್ಸ್) ಲಡಖ್, (Leh), (J&k, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ.,ಯಲ್ಲಿರುವ NHIDCL ವಲಯಾಧಿಕಾರಿ ಕಚೇರಿಗಳು ). ಈ ಹುದ್ದೆಗೆಗೆ 7ನೇ ವೇತನ ಆಯೋಗದ ವೇತನ ಮ್ಯಾಟ್ರಕ್ಸ್ ಲೆವೆಲ್ 11 ( (ಪುರ್ವ ಪರಿಷ್ಕೃತ ಪಿಬಿ- 3 ಆಫ್ ರೂ./- 15,600/-, 39100/-ಮತ್ತು ಗ್ರೇಡ್ ವೇತನ ರೂ.7600/-) ವೇತನವಿರುತ್ತದೆ. ಇಲ್ಲಿ ಒಟ್ಟು 05 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮ್ಯಾನೇಜರ್ (ಟಿ/ಪಿ) (ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 11 ( (ಪುರ್ವ ಪರಿಷ್ಕೃತ ಪಿಬಿ- 3 ಆಫ್ ರೂ./- 15,600/-, 39100/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.6,600/-) ವೇತನವಿರುತ್ತದೆ. ಇಲ್ಲಿ ಒಟ್ಟು 20 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
5. ಮ್ಯಾನೇಜರ್ (ಫೈನಾನ್ಸ್) ( ಲಡಾಖ್,(Leh) ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆಗೆ 7ನೇ ವೇತನ ಆಯೋಗದ ವೇತನ ಮ್ಯಾಟ್ರಕ್ಸ್ ಲೆವೆಲ್ 12 (ಪುರ್ವ ಪರಿಷ್ಕೃತ ಪಿಬಿ- 3 ಆಫ್ ರೂ./- 15,600/-, 39100/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.6,600/-) ವೇತನವಿರುತ್ತದೆ. ಇಲ್ಲಿ ಒಟ್ಟು 05 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮ್ಯಾನೇಜರ್ (ಲೀಗಲ್) (ಲಡಾಖ್, ( Leh), J&K,ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 12 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 15,600/-, 39100/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.6,600/-) ವೇತನವಿರುತ್ತದೆ. ಇಲ್ಲಿ ಒಟ್ಟು 01 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮ್ಯಾನೇಜರ್ (ಟಿ/ಪಿ) (ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 08 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 9,300/-, 34,800/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.4,800/-) ವೇತನವಿರುತ್ತದೆ. ಇಲ್ಲಿ ಒಟ್ಟು 02 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜ್ಯೂನಿಯರ್ ಮ್ಯಾನೇಜರ್ (ಹೆಚ್‌ಆರ್) (ಲಡಾಕ್,(Leh), J&Kಈಶಾನ್ಯ ರಾಜ್ಯಗಳು, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 6 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 9,300/-, 34,800/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.4,200/-) ವೇತನವಿರುತ್ತದೆ. ಇಲ್ಲಿ ಒಟ್ಟು 06 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜ್ಯೂನಿಯರ್ ಮ್ಯಾನೇಜರ್ (ಲೀಗಲ್) (ಲಡಾಖ್, (Leh), J&K,ಈಶಾನ್ಯ ರಾಜ್ಯಗಳು, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 06 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 9,300/-, 34,800/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.4,200/-) ವೇತನವಿರುತ್ತದೆ. ಇಲ್ಲಿ ಒಟ್ಟು 01 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜ್ಯೂನಿಯರ್ ಮ್ಯಾನೇಜರ್ (ರಾಜ್ಯ ಸಭಾ) ಪ್ರಧಾನ ಕಚೇರಿಗಳು NHIDCL) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 06 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 9,300/-, 34,800/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.4,200/-) ವೇತನವಿರುತ್ತದೆ. ಇಲ್ಲಿ ಒಟ್ಟು 01 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-05-2021 ರಂದು ( ಸೋಮವಾರ) 18.00 ಗಂಟೆಯವರೆಗೂ ವಿವರವಾದ ಷರತ್ತು ಹಾಗೂ ನಿಯಮಗಳಿಗೆ ಅಭ್ಯರ್ಥಿಗಳು www.nhidcl.com ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.
ಸೂಚನೆ : ಇದೀಗ ಕೇಂದ್ರ ಸರಕಾರದ ಸಚಿವಾಲಯಗಳು/ಇಲಾಖೆಗಳಿಂದ, ಸೈನ್ಯ ವಾಯುಪಡೆ, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯ, ಸ್ವಾಮ್ಯಕ್ಕೊಳಪಟ್ಟಿರುವಂತಹುಗಳು, ರಾಜ್ಯ ಸರಕಾರದ ಇಲಾಖೆಗಳು ಹಾಗೂ ರಾಜ್ಯಸರಕಾರದ ಸಾರ್ವಜನಿಕ ವಲಯ ಸ್ವಾಮ್ಯಕ್ಕೊಳಪಟ್ಟಿರುವಂತಹುಗಳಲ್ಲಿ ಹಾಲಿ ಸೇವ ಸಲ್ಲಿಸುತ್ತಿರುವವರು ಹಾಗೂ ಸೂಚಿತ ಅರ್ಹತಾ ಮಾನದಂಡಗಳನ್ನು ತೃಪ್ತಿಪಡಿಸುವಂತಹವೂ ಸಹಾ ಮೇಲಿನ ಹುದ್ದೆಗಳಿಗೆ ನಿಯೋಜಿತ ಆಧಾರದ ಮೇಲೆ ಅರ್ಜಿ ಸಲ್ಲಿಸುವವರು ಕಳೆದ ಐದು ವರ್ಷಗಳಿಗೆ ಯಾವುದೇ ಆಕ್ಷೇಪಣೆ ಇಲ್ಲದ ಪ್ರಮಾಣ ಪತ್ರ, (ಎನ್‌ಒಸಿ), ಹಾಗೂ ವಿಜಿಲೆನ್ಸ್ ಪ್ರಮಾಣ ಪತ್ರ (ವಿಸಿ) ನಕಲುಗಳನ್ನು ಲಗತ್ತಿಸಿ ಸೂಚಿತ ನಮೂನೆಯ ಮೂಲಕ ಸಹಾ ಅರ್ಜಿ ಸಲ್ಲಿಸಬಹುದು. ನಿಯೋಜಿತ(On deputation ) ಆಧಾರದ ಮೇಲೆ ಹುದ್ದೆಗೆ ಸಲ್ಲಿಸುವವರಿಗೆ ಯಾವುದೇ ವಯೋಮಿತಿ ಇಲ್ಲ. ಅವರ ನಿವೃತ್ತಿಗೆ ಅನುಗುಣವಾಗಿರುವಂತಹವರನ್ನು ಗುತ್ತಿಗೆ ಆಧಾರದ ಮೇಲೆ ಎನ್‌ಎಚ್‌ಐಡಿಸಿಎಲ್ ನಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಮುಂದುವರಿಯಬಹುದು. ಇಂದು ವೇಳೆ ತಮ್ಮ ಮೂಲ ಸಂಸ್ಥೆ ಸದರಿಯವರ ನಿವೃತ್ತಿಯ ನಿಯಮಾನುಷ್ಠಾನವನ್ನು ಹಿಂತಿರುಗಿಸಿದ್ದಲ್ಲಿ, ಅಂತವರನ್ನು ಒಂದು ವಾರದವರೆಗೂ ಮೂಲಸಂಸ್ಥೆಯಲ್ಲಿ ಅವರು ಸೇವೆ ಮಾಡುವುದಕ್ಕೆ ಅನುಮತಿಸಲಾಗುವುದು. ತದನಂತರ ಅವರು ಗುತ್ತಿಗೆ ಆಧಾರದ ಮೇಲೆ ಗುತ್ತಿಗೆ ನೌಕರರಿಗೆ ಅನ್ವಯಿಸುವ ಷರತ್ತು ಹಾಗೂ ನಿಯಮಗಳಿಗೆ ಬದ್ಧರಾಗಿ ಆಯ್ಕೆಯಾದ ತಮ್ಮ ಹುದ್ದೆಯನ್ನು ಮುಂದುವರಿಸಬಹುದು. ಖಾಲಿ ಹುದ್ದೆಯ ಸುತ್ತೋಲೆಯ ಬಗ್ಗೆ ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗಳಿದ್ದಲ್ಲಿ ಎನ್‌ಎಚ್‌ಐಡಿಸಿಎಲ್ ವೆಬ್‌ಸೈಟ್ನಲ್ಲಿ ಮಾತ್ರ ಪ್ರಕಟಿಸಲಾಗುವುದು. ಅಪೂರ್ಣಗೊಂಡ ಅರ್ಜಿಗಳು ಅಥವಾ ಸೂಚಿತ ದಿನಾಂಕದ ನಂತರ ಸ್ವೀಕೃತವಾದ ಅರ್ಜಿಗಳನ್ನು ಒಟ್ಟಾರೆ ತಿರಸ್ಕರಿಸಲಾಗುವುದು.
ನ್ಯಾಷನಲ್ ಹೆಲ್ತ್ ಸಿಸ್ಟಮ್ಸ್ ರಿಸೋರ್ಸ್ ಸೆಂಟರ್ ( ಎನ್ ಎಚ್ ಎಸ್ ಆರ್ ಸಿ), ನ್ಯೂ ಡೆಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.