Author: Mallika

  • ದಕ್ಷಿಣ ರೈಲ್ವೆ : 191 ಹುದ್ದೆಗಳು ಖಾಲಿ : ಅಪ್ಲೈ ಮಾಡಿ ಎಪ್ರಿಲ್ 30 ರೊಳಗೆ

    ದಕ್ಷಿಣ ರೈಲ್ವೆ : 191 ಹುದ್ದೆಗಳು ಖಾಲಿ : ಅಪ್ಲೈ ಮಾಡಿ ಎಪ್ರಿಲ್ 30 ರೊಳಗೆ

    ದಕ್ಷಿಣ ರೈಲ್ವೆ ವಲಯವು ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಿದೆ. ಅರ್ಹ ಅಭ್ಯರ್ಥಿಗಳಿಂದ ಪ್ಯಾರಾ ಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

    ಹುದ್ದೆ ಸಂಖ್ಯೆ : ಒಟ್ಟು 191 ಅರೆ ವೈದ್ಯಕೀಯ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ನೇಮಕಾತಿ ಮಾಡಿಕೊಳ್ಳಲಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 30, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

    ಆಯ್ಕೆಯಾಗುವ ಅಭ್ಯರ್ಥಿಗಳು ಚೆನ್ನೈನ ಪೆರಂಬೂರಿನಲ್ಲಿರೋ ರೈಲ್ವೇ ಆಸ್ಪತ್ರೆಯ ಹೆಡ್‌ಕ್ವಾಟ್ರಸ್‌ಗೆ ನೇಮಕಾತಿ ಮಾಡಿಕೊಳ್ಳಲಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕ ಮೀರುವ ಮೊದಲು ಅರ್ಜಿ ಸಲ್ಲಿಸುವುದು ಒಳ್ಳೆಯದು.

    ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ರೂ. 83 , ಫಿಸಿಯೋಥೆರಪಿಸ್ಟ್‌ 1 ಹುದ್ದೆ, ಇಸಿಜಿ ಟೆಕ್ನಿಷಿಯನ್ 4 ಹುದ್ದೆ, ಹಿಮೋಡಯಾಲಿಸಿಸ್ ಟೆಕ್ನಿಷಿಯನ್ 3 ಹುದ್ದೆ, ಹಾಸ್ಪಿಟಲ್ ಅಸಿಸ್ಟೆಂಟ್ 48 ಹುದ್ದೆ, ಹೌಸ್ ಕೀಪಿಂಗ್ ಅಸಿಸ್ಟೆಂಟ್ (ಮೆಡಿಕಲ್ ) 40 ಹುದ್ದೆ, ಲ್ಯಾನ್ ಅಸಿಸ್ಟೆಂಟ್ ಗ್ರೇಡ್ – 2 – 29 ಹುದ್ದೆ, ಹಾಗೂ ರೇಡಿಯೋಗ್ರಾಫರ್ 3 ಹುದ್ದೆಗಳಿಗೆ ಈ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು.

    ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೊದಲು ಫಿಟ್‌ನೆಸ್‌ಗಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಅರೆ ವೈದ್ಯಕೀಯ ಸಿಬ್ಬಂದಿಯ ಅಭ್ಯರ್ಥಿಗಳ ಆಯ್ಕೆಯಾಗಿ ದೂರವಾಣಿ ಸಂದರ್ಶನ ನಡೆಸಲಾಗುವುದು. ಒಪ್ಪಂದದ ಪ್ರಕಾರ ಅಭ್ಯರ್ಥಿಗಳು ತಮ್ಮಸ್ವಂತ ಖರ್ಚಿನಲ್ಲಿ ಆಡಳಿತಾತ್ಮಕ ಅಗತ್ಯಗಳಿಗೆ ಅನುಗುಣವಾಗಿ ಡ್ರೆಸ್ ಕೋಡ್ ನ್ನು ಅನುಸರಿಸಬೇಕು.

    ವೇತನ : ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ರೂ. 44,900/-, ಫಿಸಿಯೋಥೆರಪಿಸ್ಟ್‌ ಹುದ್ದೆಗೆ ರೂ.35,400/- ಇಸಿಜಿ ಟೆಕ್ನಿಷಿಯನ್ ಗೆ ರೂ.25,500/-, ಹಿಮೋಡಯಾಲಿಸಿಸ್ ಟೆಕ್ನಿಷಿಯನ್ ಹುದ್ದೆಗೆ ರೂ.35,400/-, ಹಾಸ್ಪಿಟಲ್ ಅಸಿಸ್ಟೆಂಟ್ ಹುದ್ದೆಗೆ ರೂ. 18,000/-, ಹೌಸ್ ಕೀಪಿಂಗ್ ಅಸಿಸ್ಟೆಂಟ್ (ಮೆಡಿಕಲ್ ) ರೂ.18,000/- , ಲ್ಯಾನ್ ಅಸಿಸ್ಟೆಂಟ್ ಗ್ರೇಡ್ – 2 ರೂ. 21,700/- ಹಾಗೂ ರೇಡಿಯೋಗ್ರಾಫರ್ ಹುದ್ದೆಗೆ ರೂ. 29,200 ಸಂಬಳ ದೊರಕಲಿದೆ.ಇದರಲ್ಲಿ ಡಿಎ ಹಾಗೂ ಇನ್ನಿತರೆ ಅಲವೆನ್ಸ್‌ ಇರಲಿವೆ.

    ಪ್ಯಾರಾ ವೈದ್ಯಕೀಯ ಸಿಬ್ಬಂದಿಯ ಒಪ್ಪಂದವು ಸೆಪ್ಪೆಂಬರ್ 30, 2021 ರವರೆಗೆ ಗುತ್ತಿಗೆ ಆಧಾರದಲ್ಲಿರುತ್ತದೆ.

    ಆಸಕ್ತ ಅಭ್ಯರ್ಥಿಗಳು ಮೊದಲು ಆಯ್ಕೆ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಬೇಕು. ದಕ್ಷಿಣ ರೈಲ್ವೆಯ ಅಧಿಕೃತ ವೆಬ್‌ಸೈಟ್ ಗೆ ಲಾಗಿನ್ ಆಗಿ ಅರ್ಜಿಯನ್ನು ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಅಧಿಕೃತ ವೆಬ್‌ಸೈಟ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

  • DFCCIL : 1072 ಹುದ್ದೆ

    DFCCIL : 1072 ಹುದ್ದೆ

    ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೋರೇಷನ್ ಆಪ್ ಇಂಡಿಯಾ ಲಿಮಿಟೆಡ್ (ಡಿಎಫ್ ಸಿಸಿಐಎಲ್) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು 23, ಮೇ, 2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24-04-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-05-2021
    ಅರ್ಜಿ ಶುಲ್ಕ: ಡಿಮಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಹುದ್ದೆ : ಎಕ್ಸಿಕ್ಯುಟಿವ್, ಮ್ಯಾನೇಜರ್

    ಹುದ್ದೆ ಸಂಖ್ಯೆ : 1072

    ಹುದ್ದೆ ಸ್ಥಳ : ಭಾರತದೆಲ್ಲೆಡೆ

    ವೇತನ : ಈ ಹುದ್ದೆಗಳಿಗೆ ಆಯ್ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ರಿಂದ ರೂ. 1,60,000/- ವೇತನವಿರುತ್ತದೆ.

    ವಿದ್ಯಾರ್ಹತೆ : ಎಕ್ಸಿಕ್ಯುಟಿವ್ ಹುದ್ದೆಗೆ ಡಿಪ್ಲೋಮಾ ಮತ್ತು ಗ್ರಾಜ್ಯುಯೇಶನ್ ಮಾಡಿರಬೇಕು. ಜ್ಯೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗೆ ಹತ್ತನೇ ತರಗತಿ ಪಾಸಾಗಿರಬೇಕು.ಜ್ಯೂನಿಯರ್ ಮ್ಯಾನೇಜರ್ ಹುದ್ದೆಗೆ ಬ್ಯಾಚುಲರ್ ಡಿಗ್ರಿ, ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಡಿಎಂ ನ್ನು ತೇರ್ಗಡೆ ಹೊಂದಿರಬೇಕು.

    ಎಕ್ಸಿಕ್ಯುಟಿವ್ – 442 ಹುದ್ದೆಗಳು
    ಜ್ಯೂನಿಯರ್ ಎಕ್ಸಿಕ್ಯುಟಿವ್-519
    ಜ್ಯೂನಿಯರ್ ಮ್ಯಾನೇಜರ್ -113

    ವಯೋಮಿತಿ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 27 ವರ್ಷ ವಯೋಮಿತಿ ಇರಬೇಕು.

    ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ. ಜ್ಯೂನಿಯರ್ ಮ್ಯಾನೇಜರ್ ಹುದ್ದೆಗೆ ರೂ‌.1000/-, ಎಕ್ಸಿಕ್ಯುಟಿವ್ ಹುದ್ದೆಗೆ ರೂ.900/-, ಜ್ಯೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗೆ ರೂ. 700/-, ಅರ್ಜಿ ಶುಲ್ಕ ಪಾವತಿಸಬೇಕು.
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡ್ಬ್ಯುಬಿಡಿ/ ಎಕ್ಸ್ ಸರ್ವಿಸ್ ಮ್ಯಾನ್ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್: ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್: ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನುಆಹ್ವಾನಿಸಲಾಗಿದೆ.

    ಹುದ್ದೆ : ಆರ್ಥಿಕ ಸಲಹೆಗಾರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 16, 2021

    ಆರ್ಥಿಕ ಸಲಹೆಗಾರ ಹುದ್ದೆ ತಾತ್ಕಾಲಿಕವಾಗಿದ್ದು, ಮೂರು ವರ್ಷಗಳವರೆಗೆ ಇರುತ್ತದೆ. ಅಭ್ಯರ್ಥಿಗಳು ಮಂಡ್ಯ, ಚಾಮರಾಜನಗರ, ತುಮಕೂರು, ಯಾದಗಿರಿ ಈ ಜಿಲ್ಲೆಗಳಲ್ಲಿ ಕೆಲಸ ಮಾಡಬೇಕಾಗಿರುತ್ತದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರು ಅಥವಾ ನಿವೃತ್ತ/ಸ್ವಯಂ ನಿವೃತ್ತಿ ಪಡೆದ ಬ್ಯಾಂಕ್ ಅಧಿಕಾರಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಂಕಿಂಗ್ ಜ್ಞಾನದೊಂದಿಗೆ ಹಣಕಾಸಿನ ಸೇವೆಗಳ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ತಿಳುವಳಿಕೆಯುಳ್ಳ 62 ವರ್ಷದೊಳಗಿನವರು ಅರ್ಜಿಯನ್ನು ಸಲ್ಲಿಸಬಹುದು.

    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

    ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ: Karnataka Gramin Bank, Branch Office, Ballari, Karnataka ಈ ವಿಳಾಸಕ್ಕೆ ರಿಜಿಸ್ಟರ್, ಸ್ಪೀಡ್ ಪೋಸ್ಟ್ ಮೂಲಕ ಅರ್ಜಿ ಹಾಕಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 22-04-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-05-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ : 08392-236428

  • ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ : ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

    ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ : ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

    ಐ.ಡಿ.ಎಸ್‌.ಪಿ , ಎನ್‌.ಸಿ.ಡಿ ಕ್ಲಿನಿಕ್, ಎನ್‌.ಪಿ.ಹೆಚ್.ಸಿ ( ಹಿರಿಯ ನಾಗರಿಕರ ವಾರ್ಡ್ ) ಕಾರ್ಯಕ್ರಮದಡಿಯಲ್ಲಿ ಈ ಕೆಳಕಂಡ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ಅಭಿಯಾನದ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ : ಡಾಟಾ ಮ್ಯಾನೇಜರ್- 01, ಡಾಕ್ಟರ್ (ಜನರಲ್ ಫಿಸಿಶಿಯನ್)- 01, ಡಾಕ್ಟರ್ ( ಕನ್ಸಲ್ಟೆಂಟ್ ಮೆಡಿಸಿನ್) – 01 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನುಆಹ್ವಾನಿಸಲಾಗಿದೆ.

    ಡಾಟಾ ಮ್ಯಾನೇಜರ್ (ಐಡಿಎಸ್‌ಪಿ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೋಸ್ಟ್ ಗ್ರಾಜ್ಯುಯೇಶನ್ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಬಿಇ ಇನ್ ಐಟಿ/ ಎಲೆಕ್ಟ್ರಾನಿಕ್ಸ್ ನ್ನು ಹೊಂದಿರಬೇಕು. ಹಾಗೂ ಸದರಿ ಹುದ್ದೆಯಲ್ಲಿ ಒಂದು ವರ್ಷಗಳ ಅನುಭವವಿರಬೇಕು. ಹೆಲ್ತ್ ಅಥವಾ ಸೋಷಿಯಲ್ ಸೆಕ್ಟರ್ ನಲ್ಲಿಅನುಭವವಿರುವರಿಗೆ ಆದ್ಯತೆ ನೀಡಲಾಗುವುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 22,050/- ಮಾಸಿಕ ವೇತನವಿರುತ್ತದೆ.

    ಡಾಕ್ಟರ್ (ಜನರಲ್ ಪಿಸಿಶಿಯನ್)(ಎನ್‌ಸಿಡಿ ಕ್ಲಿನಿಕ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂ.ಇ.ಎಸ್‌.ಎಸ್‌, ಎಂಡಿ (ಇಂಟರ್ನಲ್ ಮೆಡಿಸಿನ್) ಹೊಂದಿರಬೇಕು. ಸದರಿ ಹುದ್ದೆಯಲ್ಲಿ 3 ವರ್ಷಗಳ ಅನುಭವ ಇರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.1,10,000/- ಅಥವಾ ರೂ. 50,000/- ಮಾಸಿಕ ವೇತನವಿರುತ್ತದೆ.

    ಡಾಕ್ಟರ್ (ಕನ್ಸಲ್ಟೆಂಟ್ ಮೆಡಿಸಿನ್)(ಎನ್‌ಪಿಎಚ್‌ಸಿಇ ವಾರ್ಡ್) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಂಬಿಬಿಎಸ್ ಗ್ರಾಜ್ಯುಯೇಟ್ ಮಾಡಿರಬೇಕು. 3 ವರ್ಷಗಳ ಅನುಭವವಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.50,000/- ಮಾಸಿಕ ವೇತನ ನಿಗದಿ ಪಡಿಸಲಾಗಿದೆ.

    ಈ ಮೇಲ್ಕಂಡ ಎಲ್ಲಾ ಹುದ್ದೆಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ದಿನಾಂಕ 29-04-2021 ರಿಂದ 05-05-2021 ರವರೆಗೆ ಅರ್ಜಿಗಳನ್ನು ದೃಢೀಕರಣ ಸಹಿಯೊಂದಿಗೆ ನೇರವಾಗಿ ಮೇಲ್ಕಂಡ ಕಛೇರಿಯಲ್ಲಿ ಸಲ್ಲಿಸಲು ಸೂಚಿಸಿದೆ.

    ಹೆಚ್ಚಿನ ಮಾಹಿತಿಗಾಗಿ ಕಾರ್ಯಾಯಾಲಯದ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ. ಕಛೇರಿಯ ಸಮಯ ಬೆಳಿಗ್ಗೆ : 11.00 ರಿಂದ ಸಂಜೆ 5.00 ರವರೆಗೆ.

  • ಜ್ಯೂನಿಯರ್ ಅಸಿಸ್ಟೆಂಟ್ ಕಮ್ ಸೇಲ್ಸ್ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

    ಜ್ಯೂನಿಯರ್ ಅಸಿಸ್ಟೆಂಟ್ ಕಮ್ ಸೇಲ್ಸ್ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

    ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ. ಈ ಸಂಘದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸಂಘವು ಪೂರೈಸುವ ಮೂಲ ಅರ್ಜಿಯೊಂದಿಗೆ ಪೂರಕ ದಾಖಲೆಗಳ ನಕಲುಗಳನ್ನು ಸ್ವಯಂ ದೃಢೀಕರಿಸಿ, ದಿನಾಂಕ : 24-05-2021 ರಂದು ಸಂಜೆ 5.00 ಘಂಟೆ ಒಳಗಾಗಿ ಸಂಘಕ್ಕೆ ತಲುಪುವಂತೆ ಸಲ್ಲಿಸತಕ್ಕದ್ದು.

    ಹುದ್ದೆಯ ಹೆಸರು : ಕಿರಿಯ ಸಹಾಯಕ ಕಂ ಮಾರಾಟ ಗುಮಾಸ್ತ ( ಜ್ಯೂನಿಯರ್ ಅಸಿಸ್ಟೆಂಟ್ ಕಮ್ ಸೇಲ್ಸ್ ಕ್ಲರ್ಕ್‌)

    ಸಾಮಾನ್ಯ ಅಭ್ಯರ್ಥಿ – 3
    ಪರಿಶಿಷ್ಟ ಜಾತಿ-1
    ಪ್ರವರ್ಗ-2A- 1
    ಒಟ್ಟು 5 ಹುದ್ದೆಗಳು.

    ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯನ್ನು ಕಲಿತಿರಬೇಕು ಹಾಗೂ ಭಾಷಾ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ಕಂಪ್ಯೂಟರ್ ಅಪರೇಷನ್ ಮತ್ತು ಅಪ್ಲಿಕೇಶನ್ಸ್ ತರಬೇತಿ ಮತ್ತು ಜ್ಞಾನ ಹೊಂದಿರಬೇಕು.

    ವಯೋಮಿತಿ : ಅಭ್ಯರ್ಥಿಗೆ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೂ ಈ ಕೆಳಕಂಡಂತೆ ಗರಿಷ್ಠ ವಯೋಮಿತಿಗೊಳಪಟ್ಟಿರಬೇಕು.
    ಅ) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು
    ಆ) 2ಎ, 2ಬಿ, 3ಎ, 3ಬಿ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷಗಳು.
    ಇ) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು.
    ಅರ್ಜಿ ಸಲ್ಲಿಸುವ ವಿಧಾನ : ಸಂಘದ ಕೇಂದ್ರ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಅರ್ಜಿಯನ್ನು ವಿತರಿಸಲಾಗುವುದು. ರೂ.1000/- ಪಾವತಿ ಮಾಡಿ ಅರ್ಜಿಯನ್ನು ಪಡೆಯಬಹುದು. ಈ ಹಣವನ್ನು ಹಿಂದಿರುಗಿಸಲಾಗುವುದಿಲ್ಲ. ಸಂಘದಿಂದ ಪೂರೈಸಿದ ಮೂಲ ಅರ್ಜಿಯಲ್ಲಿ ಭರ್ತಿ ಮಾಡಿ ಅರ್ಜಿಯೊಂದಿಗೆ ಪೂರಕ ದಾಖಲೆಗಳ ನಕಲುಗಳನ್ನು ಸ್ವಯಂ ದೃಢೀಕರಿಸಿ ಸದಸ್ಯ ಕಾರ್ಯದರ್ಶಿ,ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ.ಸರ್ಜಾಪುರ -562125, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ, ಇವರಿಗೆ ದಿನಾಂಕ : 24-05-2021ರಂದು ಸಂಜೆ 5.00 ಒಳಗಾಗಿ ಖುದ್ದಾಗಿ ಸಲ್ಲಿಸತಕ್ಕದ್ದು.

  • RITES : 146 ವಿವಿಧ ಹುದ್ದೆ

    RITES : 146 ವಿವಿಧ ಹುದ್ದೆ

    ರೈಲ್ ಇಂಡಿಯಾ ಟೆಕ್ನಿಕಲ್ ಆಂಡ್ ಎಕಾನಾಮಿಕ್ ಸರ್ವಿಸ್ ( ಆರ್ ಐಟಿಇಎಸ್) ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮೇ,12,2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-04-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-05-2021
    ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

    ಹುದ್ದೆ: ಗ್ರಾಜ್ಯುಯೇಟ್ ಅಪ್ರೆಂಟಿಸ್ – 96, ಡಿಪ್ಲೋಮಾ ಅಪ್ರೆಂಟಿಸ್ – 15, ಟ್ರೇಡ್ ಅಪ್ರೆಂಟಿಸ್ – 35 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ

    ಹುದ್ದೆ ಸಂಖ್ಯೆ : 146

    ಹುದ್ದೆ ಸ್ಥಳ : ಭಾರತದೆಲ್ಲೆಡೆ

    ಹುದ್ದೆ ವಿವರ: ಗ್ರಾಜ್ಯುಯೇಟ್ ಅಪ್ರೆಂಟಿಸ್ ಹುದ್ದೆಗೆ ಬಿ.ಇ/ಬಿ.ಟೆಕ್, ಬಿ‌ಎ/ಬಿಬಿಎ / ಬಿ.ಕಾಂ ತೇರ್ಗಡೆ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.14,000/-ಮಾಸಿಕ ವೇತನ ಇರುತ್ತದೆ.

    ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗೆ ಡಿಪ್ಲೋಮಾ ತೇರ್ಗಡೆ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.12,000/-ಮಾಸಿಕ ವೇತನ ಇರುತ್ತದೆ.

    ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಐಟಿಐ ಪಾಸಾಗಿರಬೇಕು. ಹಾಗೂ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.10,000/-ವೇತನವಿರುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ‌ ನೀಡಿ ಅರ್ಜಿ ಭರ್ತಿ ಮಾಡಿ, ಇ-ಮೇಲ್ ಮಾಡಬೇಕು.
    ಇ- ಮೇಲ್ ವಿಳಾಸ : [email protected] ಗೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ