Author: Mallika

  • ವಿಜಯನಗರ ನಿರ್ಮಿತಿ ಕೇಂದ್ರದಲ್ಲಿ ಉದ್ಯೋಗವಕಾಶ

    ವಿಜಯನಗರ ನಿರ್ಮಿತಿ ಕೇಂದ್ರ ವಿಜಯನಗರ ಇವರು ಈ ಕೆಳಕಾಣಿಸಿದ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಮಾತ್ರ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆಯ ಹೆಸರು : ತಾಂ ಸಹಾಯಕರು- 01
    ಯೋಜನಾ ಅಭಿಯಂತರರು- 03

    ಸಂಬಂಧಿಸಿದ ಕ್ಷೇತ್ರಗಳಲ್ಲಿ ಹೆಚ್ಚಿನ ವಿದ್ಯಾರ್ಹತೆ ಮತ್ತು ಅನುಭವವುಳ್ಳವರಿಗೆ ಆದ್ಯತೆ ‌ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ದಿನಾಂಕ 05-11-2021 ಸಮಯ ಸಾಯಂಕಾಲ 5.30 ರೊಳಗೆ Ballari Nic.in ಈ ವೆಬ್ಸೈಟಿಗೆ ಮೇಲ್ ಮಾಡಲು ಕೋರಿದೆ. ಅಂಚೆ ಮೂಲಕವಾಗಲಿ ಮತ್ತು ಖುದ್ದಾಗಿಯಾಗಲಿ ಸಲ್ಲಿಸಲು ಅವಕಾಶವಿರುವುದಿಲ್ಲ.

    ಅರ್ಜಿ ನಮೂನೆ ಹಾಗೂ ಇತರೆ ವಿವರಗಳಿಗಾಗಿ Ballari.Nic.in ವೆಬ್ಸೈಟ್ ನ್ನು ಸಂಪರ್ಕಿಸಲು ಕೋರಿದೆ.

  • BMRCL : 37 ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    ಬೆಂಗಳೂರು ಮೆಟ್ರೋ ರೈಲು‌ ನಿಗಮ ಮಂಡಳಿಯು ( ಬಿಎಂಆರ್ ಸಿ ಎಲ್ ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 37 ಸಹಾಯಕರು ಸೆಕ್ಯುರಿಟಿ ಅಧಿಕಾರಿ ( ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 18-10-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-11-2021

    ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ( ಪೋಸ್ಟ್ ಆಫೀಸ್ / post( ಮೂಲಕ ಅರ್ಜಿ ಹಾಕಬೇಕು.

    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾದ ಮಾಹಿತಿ ಇಲ್ಲಿದೆ :

    ಹುದ್ದೆಯ ಹೆಸರು : ಸಹಾಯಕ ಭದ್ರತಾ ಅಧಿಕಾರಿ

    ಒಟ್ಟು ಹುದ್ದೆಗಳು : 37

    ಸ್ಥಳ : ಬೆಂಗಳೂರು

    ವಯೋಮಿತಿ : 62 ವರ್ಷ

    ಸಂಬಳ : ಮಾಸಿಕ ರೂ.30,000

    ಆಯ್ಕೆ ಪ್ರಕ್ರಿಯೆ : ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಅರ್ಹತೆ : ಮೆಟ್ರೋ ನಿಲ್ದಾಣಗಳು, ಡಿಪೋಗಳಲ್ಲಿ ಭದ್ರತೆ ಮತ್ತು ಇತರೆ ಸಂಬಂಧಿತ ಕೆಲಸಗಳನ್ನು ನೋಡಿಕೊಳ್ಳಲು ಬಿಎಂಆರ್ ಸಿಎಲ್ ನ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದಲ್ಲಿ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು.

    ಸೆಕ್ಯುರಿಟಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಿವೃತ್ತ ಸಿಬ್ಬಂದಿಯಾಗಿರಬೇಕು.

    ಕರ್ನಾಟಕ ಸರಕಾರದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರಬೇಕು.

    ಸೈನ್ಯ, ವಾಯುಪಡೆ ಮತ್ತು ಸೆಂಟ್ರಲ್ ‌ಪೊಲೀಸ್ ಸಶಸ್ತ್ರ ಪಡೆಗಳಲ್ಲಿ ನಿವೃತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುಬೇದಾರ್ ಆಗಿರಬೇಕು.

    ಬಿಎಂ ಆರ್ ಸಿ ಎಲ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಆಫ್ ಲೈನ್/ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಲಕೋಟೆಯಲ್ಲಿ ” ಸಹಾಯಕ ಭದ್ರತಾ ಅಧಿಕಾರಿಯ ಹುದ್ದೆಗೆ ಅರ್ಜಿ” ಎಂದು ನಮೂದಿಸಿ ಕಳುಹಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 17/11/2021 ಸಂಜೆ 4 ಗಂಟೆ.

    ವಿಳಾಸ : General Manager ( HR )
    Bangalore Metro Rail Corporation Limited
    ||| rd Floor, BMTC Complex, K.H.Road, Shantinagar, Bangalore – 560027

    ನೋಟಿಫಿಕೇಶನ್

  • ಬೆಂಗಳೂರು : ಕೇಂದ್ರ ಕಾರಾಗೃಹದಲ್ಲಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ನ. 15ರೊಳಗೆ ಅರ್ಜಿ ಸಲ್ಲಿಸಿ

    ಬೆಂಗಳೂರು : ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಖಾಲಿ ಇರುವ ಐದು ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ ಹುದ್ದೆಗಳಿಗೆ 11 ತಿಂಗಳ ಅವಧಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪ್ರಮಾಣ ಪತ್ರ, ಸ್ನಾತಕೋತ್ತರ ಪದವಿಯಲ್ಲಿ ಅಧಿಕ ಅಂಕ ಗಳಿಸಿದವರು, ಮಾನಸಿಕ ಮತ್ತು ಮನೋವೈದ್ಯಕೀಯ ವಿಷಯದ ಮೇಲೆ ಸ್ನಾತಕೋತ್ತರ ಕಲಿತು ಭಾರತೀಯ ಪುನರ್ವಸತಿ ಮಂಡಳಿ ಮಾನ್ಯತೆ ಪಡೆದವರು ಅರ್ಹರು. ಮಾಸಿಕ ರೂ.25 ಸಾವಿರ ಇರಲಿದೆ. 45 ವರ್ಷ ವಯೋಮಿತಿ ಮೀರದವರು ನ. 15 ರೊಳಗೆ ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ, ಪರಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ , ಬೆಂಗಳೂರು – 560100 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.08025733809 ಗೆ ಸಂಪರ್ಕಿಸಬಹುದು.

  • ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಲಿ., ಬೆಂಗಳೂರು : ಲೆಕ್ಕ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ.,ಬೆಂಗಳೂರು ಇಲ್ಲಿ ವಿವಿಧ ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

    ಹುದ್ದೆ : ಲೆಕ್ಕ ಸಹಾಯಕರು, ಹಿರಿಯ ಸಹಾಯಕರು, ಕಿರಿಯ ಸಹಾಯಕರು

    ಅರ್ಜಿ ಸಲ್ಲಿಕೆ ಅವಧಿ :

    ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 18-10-2021 ( ಬೆಳಿಗ್ಗೆ 10.30 ರಿಂದ )

    ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30-10-2021 ಸಂಜೆ 5.30 ಗಂಟೆಯೊಳಗೆ

    ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರವಾದ ಅಧಿಸೂಚನೆ, ಅರ್ಜಿ ನಮೂನೆಯನ್ನು www.swabhimanisouharda.com ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಿ ಅರ್ಜಿ ಸಲ್ಲಿಸಬಹುದಾಗಿದೆ.

    ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ

  • KSEEB : ವಕೀಲ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

    ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಮತ್ತು ಮೈಸೂರು ವಿಭಾಗ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸಂಬಂಧಪಟ್ಟ ರಾಜ್ಯದ ನ್ಯಾಯಾಲಯದ ವಿವಿಧ ಹಂತಗಳಲ್ಲಿರುವ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸರಕಾರಿ ವಕೀಲರಿಗೆ ಸಹಾಯಕರಾಗಿ ಮತ್ತು ಇಲಾಖೆಗೆ ಕಾನೂನು ಸಮಾಲೋಚಕರಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಹಿರಿಯ ವಕೀಲರು ಮತ್ತು ಕಿರಿಯ ವಕೀಲರುಗಳ ಸೇವೆಗೆ ಅರ್ಜಿ ಆಹ್ವಾನಿಸಿದೆ.

    ಹುದ್ದೆ : ವಕೀಲರು

    ಹುದ್ದೆ ಸಂಖ್ಯೆ : ಹಿರಿಯ ವಕೀಲ 02, ಕಿರಿಯ ವಕೀಲ – 03

    ವಕೀಲರ ನೇಮಕಾತಿ ಆಯ್ಕೆಯು ಸಂಪೂರ್ಣವಾಗಿ ಸಮಾಲೋಚನೆ ಹಾಗೂ ಸಂದರ್ಶನ ಆಧಾರಿತವಾಗಿದ್ದು, ಅರ್ಜಿ ಸಲ್ಲಿಸಲು ಅಂತಿಮ, ದಿನಾಂಕ : 30-10-2021 ಆಗಿರುತ್ತದೆ. ಆಸಕ್ತ ಅರ್ಹ ವಕೀಲರು ಸಂದರ್ಶನಕ್ಕೆ ಹಾಜರಾಗಲು ಮತ್ತು ವಕೀಲರ ಸಂಭಾವನೆ, ಅರ್ಹತೆ, ಅನುಭವ ಮತ್ತು ಇತರೆ ಮಾನದಂಡ ಹಾಗೂ ಷರತ್ತುಗಳು ಒಳಗೊಂಡಿರುವ ವಕೀಲರ ನೇಮಕಾತಿ ಅರ್ಜಿ ಆಹ್ವಾನ, ದಸ್ತಾವೇಜು ಮಂಡಳಿಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುತ್ತದೆ.

  • HPCL : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಒಂದು ಮಹಾರತ್ನ ಕಂಪನಿ, ನಿಗಮದ ವಿವಿಧ ಸಂಶೋಧನಾ ಯೋಜನೆಗಳಿಗೆ ಸಹಾಯ ಮಾಡಲು ತನ್ನ ಹೆಚ್ ಪಿ ಗ್ರೀನಗ ಆರ್ & ಡಿ ಸೆಂಟರ್, ಬೆಂಗಳೂರಿನಲ್ಲಿ ನಿಶ್ಚಿತ ಅವಧಿಯ ಸಂಶೋಧನಾ ಸಹಯೋಗಿಗಳನ್ನು ( FTRA) ಮತ್ತು ನಿಶ್ಚಿತ ಅವಧಿಯ ಯೋಜನಾ ಸಹಯೋಗಿಗಳನ್ನು ( FTPA) ತೊಡಗಿಸಿಕೊಳ್ಳಲು ಯೋಜಿಸಿದೆ.

    ವಿವರಗಳಿಗಾಗಿ ಮತ್ತು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನಮ್ಮ ವೆಬ್ಸೈಟ್ www.hindustanpetroleum.com ಗೆ ಭೇಟಿ ನೀಡಿ. ಆನ್ಲೈನ್ ನಲ್ಲಿ ಅರ್ಜಿಯ ಪ್ರಾರಂಭದ ದಿನಾಂಕ : 11-10-2021 ಮತ್ತು‌ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-10-2021