Author: Mallika

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ಹುದ್ದೆ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ಹುದ್ದೆ

    ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಎರಡನೇ ಅಲೆಯಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ 19 ಪ್ರಕರಣಗಳನ್ನಜ ಸಮರ್ಪಕವಾಗಿ ನಿಭಾಯಿಸಲು ಡಿ.ಸಿ.ಹೆಚ್.ಸಿ ಮತ್ತು ಸಿ.ಸಿ.ಸಿ. ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಪ್ರಯೋಗ ಶಾಲಾ ತಂತ್ರಜ್ಞರು – 23 ಹುದ್ದೆಗಳು
    ಕ್ಷ – ಕಿರಣ ತಂತ್ರಜ್ಞರು – 11 ಹುದ್ದೆಗಳು
    ಗ್ರೂಪ್ – ಡಿ – 58 ಹುದ್ದೆಗಳು
    ಡಾಟಾ ಎಂಟ್ರಿ ಅಪರೇಟರ್ – 21 ಹುದ್ದೆಗಳು
    40 ವರ್ಷ ವಯೋಮಿತಿಯೊಳಗಿನ ಅಭ್ಯಯ ಅರ್ಜಿಯನ್ನು ಸಲ್ಲಿಸಬಹುದು.

    ದಿನಾಂಕ‌ 06-05-2021 ರ 11.00 ಗಂಟೆಯಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. 08194-235464

  • ಧಾರವಾಡ ಜಿಲ್ಲಾ ಆಸ್ಪತ್ರೆ : 80 ಹುದ್ದೆ

    ಧಾರವಾಡ ಜಿಲ್ಲಾ ಆಸ್ಪತ್ರೆ : 80 ಹುದ್ದೆ

    ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ಹಲವು ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ.

    ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಹುದ್ದೆ : ಶ್ರುಶ್ರೂಷಕರು : 30 ಹುದ್ದೆಗಳು.
    ಫಾರ್ಮಸಿಸ್ಟ್ : 3 ಹುದ್ದೆ.
    ಡಿ.ವರ್ಗ‌ ನೌಕರರು : 30 ಹುದ್ದೆಗಳು
    ಭದ್ರತಾ ಸಿಬ್ಬಂದಿ : 15 ಹುದ್ದೆ
    ಕಂಪ್ಯೂಟರ್ ಅಪರೇಟರ್ : 2 ಹುದ್ದೆಗಳು
    ಒಟ್ಟು ಹುದ್ದೆಗಳ ಸಂಖ್ಯೆ : 80

    ವಯೋಮಿತಿ : 18 ವರ್ಷದಿಂದ ಗರಿಷ್ಠ 40 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ನೇಮಕಾತಿ ನಿಯಮಾನುಸಾರ ವೇತನ‌ ನಿಗದಿಪಡಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಲಗತ್ತಿಸಿ ಮೇ 4 ಮತ್ತು ಮೇ 5, 2021ರಂದು ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 4.30 ಗಂಟೆಯವರೆಗೆ ಧಾರವಾಡ ಜಿಲ್ಲಾ ಆಸ್ಪತ್ರೆಯ ಸಭಾಭವನದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

  • 2672 KSRP PC ನೇಮಕ : ಆಯ್ಕೆ ಪಟ್ಟಿ ಪ್ರಕಟ

    2672 KSRP PC ನೇಮಕ : ಆಯ್ಕೆ ಪಟ್ಟಿ ಪ್ರಕಟ

    ಕರ್ನಾಟಕ ಪೊಲೀಸ್ ಇಲಾಖೆಯು 2672 ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಹಾಗೆ ವಿವಿಧ ವಲಯಗಳಿಗೆ ಅಂತಿಮ‌ ಪಟ್ಟಿಯನ್ನು ಭಾಗಶಃ ಪ್ರಕಟಿಸಿದೆ. ಈ ಆಯ್ಕೆ ಪಟ್ಟಿಯನ್ನು ಕೆಎಸ್ ಪಿ ವೆಬ್‌ಸೈಟ್‌ ನಲ್ಲಿ ವೀಕ್ಷಿಸಬಹುದು.

    ಪ್ರಸ್ತುತ ಬೆಂಗಳೂರು ವಲಯದ 4 ನೇ ಪಡೆ ಮತ್ತು 3 ನೇ ಪಡೆ ಕೆಎಸ್ ಆರ್ ಪಿ ಯ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾಗಶಃ ಪ್ರಕಟಿಸಲಾಗಿದೆ.

    ಅಭ್ಯರ್ಥಿಗಳು ಸದರಿ ಆಯ್ಕೆ ಪಟ್ಟಿಯನ್ನು ಈ ಲಿಂಕ್ ಕ್ಲಿಕ್ ಮಾಡಬಹುದು

  • ಗೂಗಲ್: ವಿವಿಧ ಹುದ್ದೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

    ಗೂಗಲ್: ವಿವಿಧ ಹುದ್ದೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

    ಗೂಗಲ್ ಇಂಡಿಯಾವು ವಿವಿಧ ಅನುಭವಿ ಪ್ರೊಫೆಷನಲ್ ಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ : ಗೂಗಲ್ ಮೆಟ್ರೋ ನೆಟ್ವರ್ಕ್ ಡೆಪ್ಲಾಯ್ಮೆಂಟ್ ಇಂಜಿನಿಯರ್, ಕಸ್ಟಮರ್ ಇಂಜಿನಿಯರ್- ಡಾಟಾ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್ ( ಗೂಗಲ್ ಕ್ಲೌಡ್), ಕಸ್ಟಮರ್ ಇಂಜಿನಿಯರ್ – ಸೆಕ್ಯುರಿಟಿ (ಗೂಗಲ್ ಕ್ಲೌಡ್) ಹುದ್ದೆಗಳನ್ನು ಭರ್ತಿ ಮಾಡಲಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ವೊಡಾಫೋನ್: ಉದ್ಯೋಗವಕಾಶ

    ವೊಡಾಫೋನ್: ಉದ್ಯೋಗವಕಾಶ

    ವೊಡಫೊನ್ ಫ್ರೆಶರ್ ಇಂಜಿನಿಯರ್ ತರಬೇತುದಾರರನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಬಿಇ, ಬಿಟೆಕ್,ಎಂಇ, ಎಂಟೆಕ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ ಸ್ಥಳ : ಪುಣೆ

    ಡಿಸೈನಿಂಗ್, ಹೊಸಮಾದರಿ, ಡ್ಯಾಶ್ ಬೋರ್ಡ್, ಬ್ಯುಸಿನೆಸ್ ತಂತ್ರಗಳು, ತಾಂತ್ರಿಕ ಸಲಹೆಗಳಿಗೆ ಸಂಬಂಧಿಸಿದಂತೆ ಡೆಲಿವರಿ ಟಾಸ್ಕ್ ನ್ನು ಮಾಡಬೇಕು. ತಮ್ಮ ಐಡಿಯಾಗಳು, ಮಾಹಿತಿಗಳನ್ನು ಕಂಪನಿಯ ಒಳಿತಿಗಾಗಿ ಹಂಚಿಕೊಳ್ಳಬೇಕು. ಡಾಟಾ ಮಾಡಲಿಂಗ್, ಡಾಟಾ ವಿಸ್ಯುವಲೈಸೇಶನ್, ಡಾಟಾ ಅನಾಲಿಟಿಕ್ಸ್ ಮತ್ತು ಇನ್ ಸೈಟ್ಸ್, ಡಾಟಾ ಮ್ಯಾನೇಜ್ಮೆಂಟ್ ಮತ್ತು ಟ್ರಾನ್ಸ್ ಫೋರ್ಮೇಶನ್, ಎಐ- ಡೀಪ್ ಅಂಡ್ ಮೆಷಿನ್ ಲರ್ನಿಂಗ್ ಈ ಅಗತ್ಯ ಕೌಶಲ್ಯಗಳನ್ನು ಅಭ್ಯರ್ಥಿಗಳು ಹೊಂದಿರಬೇಕು.

    ಆನ್ಲೈನ್ ಅಪ್ಲೈಗಾಗಿ ಇಲ್ಲಿ ಕ್ಲಿಕ್ ಮಾಡಿ

  • ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ: ವಿವರ ಇಲ್ಲಿದೆ

    ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ: ವಿವರ ಇಲ್ಲಿದೆ

    ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ, 2020-21 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ” ಮೆಟ್ರಿಕ್ -ನಂತರದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ” ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, 30-04-2021 ಕ್ಕೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಕೆಲವೊಂದು ವಿಶ್ವವಿದ್ಯಾನಿಲಯಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೊಂದಣಿ ಸಂಖ್ಯೆಯನ್ನು ಒದಗಿಸಿರದ ಕಾರಣ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗಿರುವುದಿಲ್ಲ. ಹಾಗೂ ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ದಿನಾಂಕ 12-05-2021 ರವರೆಗೂ ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಪ್ರಯುಕ್ತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 15-05-2021 ರವರೆಗೆ ವಿಸ್ತರಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-05-2021
    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್‌ ವಿಳಾಸ : www.ssp.postmatric.karnataka.gov.in