Author: Mallika

  • ರಾಜ್ಯದ 4000 ಪೊಲೀಸ್ ಕಾನ್ಸ್‌ಟೇಬಲ್ ಟೇಬಲ್ ಹುದ್ದೆಗಳ ಮರುಹಂಚಿಕೆ, ಇಲ್ಲಿದೆ ಪೂರ್ತಿ ವಿವರ

    ರಾಜ್ಯದ 4000 ಪೊಲೀಸ್ ಕಾನ್ಸ್‌ಟೇಬಲ್ ಟೇಬಲ್ ಹುದ್ದೆಗಳ ಮರುಹಂಚಿಕೆ, ಇಲ್ಲಿದೆ ಪೂರ್ತಿ ವಿವರ

    2021-22 ನೇ ಸಾಲಿನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿ ಮಾಡುವ ಮೂಲಕ ಹಂಚಿಕೆ ಮಾಡಿ ಆದೇಶಿಸಿದ ಆದೇಶವನ್ನು ಭಾಗಶಃ ಮಾರ್ಪಡಿಸಿ, ಈ ಕೆಳಕಂಡಂತೆ ಮರು ಹಂಚಿಕೆ ಮಾಡಿ ಆದೇಶಿಸಿದೆ.

    ಮರು ಹಂಚಿಕೆ ಮಾಡಲಾದ‌ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ವರ್ಗೀಕರಣದ ವಿವರಗಳನ್ನು ಮಾರ್ಪಡಿಸಲಾದ ಹಾಗೂ ಹೊಸದಾಗಿ ಹಂಚಿಕೆ ಮಾಡಲಾದ ಕಮಿಷನರೇಟ್/ ವಲಯ/ಘಟಕಗಳಿಂದ ಪಡೆದು 2021-22 ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸಿದೆ.

    ಒಟ್ಟ ಹುದ್ದೆಗಳು : 4000

  • ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ : 1000ಕ್ಕೂ ಅಧಿಕ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ : 1000ಕ್ಕೂ ಅಧಿಕ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಬಳ್ಳಾರಿ ಜಿಲ್ಲಾಡಳಿತ ಕಚೇರಿಯಿಂದ ಜಿಲ್ಲೆಯಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅಗತತ್ಯ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಯು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಿದ್ದು ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ :

    ಹುದ್ದೆಗಳ ವಿವರ : ಫಿಸಿಷಿಯನ್, ನರ್ಸ್, ಲ್ಯಾಬ್ ಟೆಕ್ನಿಷಿಯನ್, ಡಾಕ್ಟರ್, ಗ್ರೂಪ್ ಡಿ ನೌಕರರು, ಡಯಟೀಷಿಯನ್, ಸ್ಟೋರ್ ಕೀಪರ್, ಮನಃಶಾಸ್ತ್ರಜ್ಞ, ರೇಡಿಯೋಲಾಜಿ, ನರ್ಸಿಂಗ್ ಸೂಪರ್‌ವೈಸರ್, ಕೌನ್ಸಲರ್‌ಗಳು ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದ್ದಾರೆ.

    ಒಟ್ಟು ಹುದ್ದೆಗಳ ಸಂಖ್ಯೆ : 1000 ಕ್ಕೂ ಅಧಿಕ ಇರುತ್ತದೆ.

    ಸಂದರ್ಶನದ ದಿನಾಂಕ : 04-05-2021 ರಿಂದ 11-05-2021 ರವರೆಗೆ

    ಸಂದರ್ಶನದ ಸಮಯ : ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

    ಮೂರು ತಿಂಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ನಂತರ ಮೂರು ತಿಂಗಳು ಮುಂದೂಡುವ ಅವಕಾಶ ಇರುತ್ತದೆ.

    ಹುದ್ದೆಗಳಿಗೆ ಸಂದರ್ಶನ ಪ್ರಕ್ರಿಯೆಗಳನ್ನು ಆಯಾ ತಾಲೂಕಿನ ತಹಶೀಲ್ದಾರ ಕಛೇರಿಯಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಹೆಚ್ಚಿನ ವಿವರಗಳನ್ನು ಬಳ್ಳಾರಿಯ ಜಿಲ್ಲಾಡಳಿತ ಕಚೇರಿಯಲ್ಲಿ ಪಡೆಯಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು : 08392277100

    ಜಿಲ್ಲಾ ಆಸ್ಪತ್ರೆ, ವಿಮ್ಸ್ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಶುಶ್ರೂಷಕರಿಗೆ ಹಾಗೂ ಮೆಡಿಕಲ್ ಸಿಬ್ಬಂದಿಗಳಿಗೆ ಅವಶ್ಯಕತೆ ಇದ್ದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.

  • ಸೌಥ್ ವೆಸ್ಟರ್ನ್ ರೈಲ್ವೆ : ಅಗತ್ಯ ಸ್ಟಾಫ್ ಗಳ ನೇಮಕ

    ಸೌಥ್ ವೆಸ್ಟರ್ನ್ ರೈಲ್ವೆ : ಅಗತ್ಯ ಸ್ಟಾಫ್ ಗಳ ನೇಮಕ

    ಆಗ್ನೇಯ ರೈಲ್ವೆಯು (ಸೌಥ್ ವೆಸ್ಟರ್ನ್ ರೈಲ್ವೆ ) ಅಗತ್ಯ ಸ್ಟಾಫ್ ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ನೋಟಿಫಿಕೇಶನ್ ಪ್ರಕಟಿಸಿದೆ.

    ಹುದ್ದೆಗಳ ವಿವರ : ಸ್ಟಾಫ್ ನರ್ಸ್ – 20
    ಡ್ರೆಸ್ಸರ್ – 05
    ಹಾಸ್ಪಿಟಲ್ ಅಟೆಂಡಂಟ್ (ಪುರುಷ ) – 06
    ಹಾಸ್ಪಿಟಲ್ ಅಟೆಂಡಂಟ್ ( ಮಹಿಳೆ )/ ಆಯಾ – 07
    ಹೌಸ್ ಕೀಪಿಂಗ್ ಅಸಿಸ್ಟೆಂಟ್ – 15

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-05-2021 ರ ಸಂಜೆ 06 ಗಂಟೆಯೊಳಗೆ

    ಸಂದರ್ಶನ ವಿಧಾನ : ಟೆಲಿಫೋನಿಕ್ ಅಥವಾ ಆನ್‌ಲೈನ್ ಮೂಲಕ ಸಂದರ್ಶನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ : ಬಿಎಸ್ಸಿ ನರ್ಸಿಂಗ್/ ಎಸ್‌ಎಸ್‌ಎಲ್‌ಸಿ ಜತೆಗೆ ಡ್ರೆಸ್ಸಿಂಗ್ ಕೋರ್ಸ್ ಪ್ರಮಾಣ ಪತ್ರ/ ಐಟಿಐ ಶೈಕ್ಷಣಿಕ ಅರ್ಹತೆ ಪಾಸ್ ಮಾಡಿರಬೇಕು.

    ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 33 ವರ್ಷ ಮೀರಿರಬಾರದು.

    ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ನೋಟೆಫಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

  • ಮೈಸೂರು ವೈದ್ಯಕೀಯ  ಕಾಲೇಜು : ಉದ್ಯೋಗವಕಾಶ

    ಮೈಸೂರು ವೈದ್ಯಕೀಯ ಕಾಲೇಜು : ಉದ್ಯೋಗವಕಾಶ

    ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಇಲ್ಲಿ ಚಿಕಿತ್ಸಾ ಆಸ್ಪತ್ರೆಗಳಲ್ಲಿ 06 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗರ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಸೀನಿಯರ್ ರೆಸಿಡೆಂಟ್ ( ಮಡಿಸಿನ್), ಸೀನಿಯರ್ ರೆಸಿಡೆಂಟ್( ಪುಲ್ಮಾ), ಸೀನಿಯರ್ ರೆಸಿಡೆಂಟ್ ( ಅನಸ್ತೇಶಿಯ) ಜ್ಯೂನಿಯರ್ ರೆಸಿಡೆಂಟ್, ಐಸಿಯು ಟೆಕ್ನಿಷಿಯನ್, ಎಮರ್ಜೆನ್ಸಿ ಮೆಡಿಸಿನ್, ಇಕೋ ಟೆಕ್ನಿಶಿಯನ್ಸ್‌, ಎಕ್ಸ್‌ರೇ ಟೆಕ್ನಿಷಿಯನ್, ಸೈಕೊಥೆರಪಿಸ್ಟ್‌, ರೆಸ್ಪಿರೇಟರ್ ಕೇರ್ ಟೆಕ್ನಿಶಿಯನ್ಸ್‌, ವೆಂಟಿಲೇಟರ್ ಟೆಕ್ನಿಷಿಯನ್ಸ್‌, ಆಕ್ಸಿಜನ್ ಟೆಕ್ನಿಶಿಯನ್ಸ್‌, ಸ್ವಾಬ್‌ ಕಲೆಕ್ಟರ್ಸ್, ಸ್ಟಾಫ್ ನರ್ಸ್‌, ಡಾಟಾ ಎಂಟ್ರಿ ಅಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ಜನರಲ್ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು. 38 ವರ್ಷ ಒಬಿಸಿ ಅಭ್ಯರ್ಥಿಗಳಿಗೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.

    ಸಂದರ್ಶನದ ದಿನಾಂಕ ಮತ್ತು ಸಮಯ : 07-05-2021 7.30 ರಿಂದ 9.30 ರ ವರೆಗೆ.

  • ರೈಲು ಗಾಲಿ ಕಾರ್ಖಾನೆ : ಹುದ್ದೆಗೆ ಅರ್ಜಿ‌ ಆಹ್ವಾನ

    ರೈಲು ಗಾಲಿ ಕಾರ್ಖಾನೆ : ಹುದ್ದೆಗೆ ಅರ್ಜಿ‌ ಆಹ್ವಾನ

    ರೈಲು ಗಾಲಿ ಕಾರ್ಖಾನೆ, ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ: ವೈದ್ಯರ ನೇಮಕಾತಿ

    ಸಂದರ್ಶನದ ದಿನಾಂಕ ಮತ್ತು ಸಮಯ : 07-05-2021 ರಂದು 10.00 ಗಂಟೆಗೆ

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.rwf.Indianrailways.gov.in ಗೆ ಭೇಟಿ ನೀಡಬಹುದು.

  • HAL : ಉದ್ಯೋಗವಕಾಶ

    HAL : ಉದ್ಯೋಗವಕಾಶ

    ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( ಹೆಚ್ ಎಎಲ್) ನವರತ್ನ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಮೆಡಿಕಲ್ ಪ್ರೊಫೆಷನಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ನೇರ ಸಂದರ್ಶನಕ್ಕೆ ಅಭ್ಯರ್ಥಿಗಳು ದಿನಾಂಕ 08-05-2021 (ಶನಿವಾರ) ಸಮಯ ಬೆಳಿಗ್ಗೆ 8.30 ರಂದು ಈ ಕೆಳಗಿನ ವಿಳಾಸದಲ್ಲಿ ಹಾಜರಿರತಕ್ಕದ್ದು.

    HAL Hospital, Vimanapura Post, Bangalore -17