ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಇಲ್ಲಿ ಕೋವಿಡ್ – 19 ಚಿಕಿತ್ಸಾ ಆಸ್ಪತ್ರೆಗಳಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ( ಯಾವುದೇ ಮೊದಲೊ ಅಲ್ಲಿಯವರೆಗೆ) ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ನೇರ ಸಂದರ್ಶನ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಕೆಳಕಂಡಂತೆ ನಿರ್ದೇಶಕರು ಮತ್ತು ಡೀನ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಈ ಕಛೇರಿಯನ್ನು ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಸೀನಿಯರ್ ರೆಸಿಡೆಂಟ್ಸ್ (ಮೆಡಿಸಿನ್)-18
ಸೀನಿಯರ್ ರೆಸಿಡೆಂಟ್ಸ್ (ಪುಲ್ಮೋ)-14
ಸೀನಿಯರ್ ರೆಸಿಡೆಂಟ್ಸ್ ( ಅನಸ್ತೇಶಿಯ)-22
ಜ್ಯೂನಿಯರ್ ರೆಸಿಡೆಂಟ್ – 35
ಸ್ಟಾಫ್ ನರ್ಸಸ್ – 276
ಸಂದರ್ಶನ ದಿನಾಂಕ ಮತ್ತು ಸಮಯ: 13-05-2021 ರಂದು ಬೆಳಿಗ್ಗೆ 10.30ಕ್ಕೆ.
ಈ ಮೇಲ್ಕಂಡ ಹುದ್ದೆಗಳಿಗೆ ಎಲ್ಲಾ ಪ್ರಮಾಣ ಪತ್ರಗಳು, ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಗಳೊಂದಿಗೆ ಹಾಗೂ ಇವುಗಳ 02 ಜೆರಾಕ್ಸ್ ಪ್ರತಿಗಳೊಂದಿಗೆ ತಿಳಿಸಿರುವ ದಿನಾಂಕದಂದು ನಿಗದಿತ ಸಮಯದೊಳಗೆ ಸಂದರ್ಶನಕ್ಕೆ ಬರತಕ್ಕದ್ದು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ : ಸಹಾಯಕ ನಿರ್ದೇಶಕರು (ಕವಿವಿ ಮುದ್ರಣಾಲಯ) – 01 (ಸಾಮಾನ್ಯ) ಕಾರ್ಯಗಾರ ಅಧಿಕಾರಿಗಳು/ವ್ಯವಸ್ಥಾಪಕರು -01 ( ಸಾಮಾನ್ಯ) ಕಿರಿಯ ಇಂಜಿನಿಯರ್ (ಸಿವಿಲ್) -02 ( 01 – ಪರಿಶಿಷ್ಟ ಜಾತಿ, 01- ಸಾಮಾನ್ಯ) ವರ್ಕ್ ಸುಪರ್ ವೈಸರ್ – 02 ( ಪರಿಶಿಷ್ಟ ಜಾತಿ -01, ಸಾಮಾನ್ಯ – 01)
ಎಲೆಕ್ಟ್ರಿಶಿಯನ್ : 3 ಹುದ್ದೆ ( ಪರಿಶಿಷ್ಟ ಜಾತಿ -1, ಸಾಮಾನ್ಯ -1, ಪರಿಶಿಷ್ಟ ಪಂಗಡ -1)
ಫಿಟ್ಟರ್ – 1 ( ಸಾಮಾನ್ಯ)
ಸಹಾಯಕ ತೋಟಗಾರಿಕೆ – 1 ( ಸಾಮಾನ್ಯ )
ಸಹಾಯಕ – 1 ( ಸಾಮಾನ್ಯ )
ಪ್ಲೇಸ್ ಮೆಂಟ್ ಅಧಿಕಾರಿ – 1 ( ಸಾಮಾನ್ಯ )
ಆಯ್ಕೆ ಮಾಡುವ ವಿಧಾನ : ಪೂರ್ಣ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಿದ ಮತ್ತು ಎಲ್ಲಾ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ವಯೋಮಿತಿ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 40 ವಯೋಮಿತಿ ಹೊಂದಿರಬೇಕು.
ಪ್ರವರ್ಗ 2a, 2b, 3a,3b ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 38 ವಯೋಮಿತಿ ಇರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ 18 ಹಾಗೂ 35 ವಯೋಮಿತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ www.kud.ac.in ರ ನೋಟಿಫಿಕೇಶನ್ ಕಾಲಂ ನಿಂದ ಪಡೆದುಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 05-06-2021 ಅಥವಾ ಸದರಿ ದಿನಾಂಕ ಮತ್ತು ನಂತರದಲ್ಲಿಯೂ ಸಹ ಲಾಕ್ ಡೌನ್ ಇದ್ದಲ್ಲಿ ಲಾಕ್ ಡೌನ್ ಮುಗಿದ ದಿನಾಂಕದಿಂದ ಮುಂದಿನ 10 ಕರ್ತವ್ಯದ ದಿನಗಳೊಳಗಾಗಿ ಕಚೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಅವಕ ವಿಭಾಗದಲ್ಲಿ ಸಲ್ಲಿಸುವುದು.
ಕೃಷಿ ಇಲಾಖೆಯ ಬೆಳೆ ವಿಮಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ರಾಜ್ಯಮಟ್ಟದ ತಾಂತ್ರಿಕ ಉತ್ತೇಜನ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ ಮಾಹಿತಿ ಇಲ್ಲಿದೆ :
ಹುದ್ದೆ : ರಾಜ್ಯ ತಾಂತ್ರಿಕ ಘಟಕದ ಮುಖ್ಯಸ್ಥರು – 1 ಹುದ್ದೆ ಕಾರ್ಯಕ್ರಮ ಸಂಯೋಜಕರು – 1 ಹುದ್ದೆ ಸಂವಹನ ಅಧಿಕಾರಿ – 1 ಹುದ್ದೆ ಸಾಮರ್ಥ್ಯ ವೃದ್ಧಿ ಅಧಿಕಾರಿ – 1 ಹುದ್ದೆ ಮಾಹಿತಿ ತಂತ್ರಜ್ಞಾನ ಮತ್ತು ನಿರ್ವಹಣಾ ವ್ಯವಸ್ಥೆ ತಜ್ಞರು -1 ಹುದ್ದೆ ದತ್ತಾಂಶ ವಿಜೇತರು – 1 ಹುದ್ದೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ತಜ್ಞರು – 1 ಹುದ್ದೆ ತೋಟಗಾರಿಕಾ ತಜ್ಞರು – 1 ಹುದ್ದೆ ಗುಮಾಸ್ತ – 1 ಹುದ್ದೆ ಡೇಟಾ ಎಂಟ್ರಿ ಅಪರೇಟರ್ – 1 ಹುದ್ದೆ
ಹುದ್ದೆಗಳಿಗೆ ತತ್ಸಮಾನ ವಿದ್ಯಾರ್ಹತೆ ಹಾಗೂ ಅನುಭವವುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ನೇರವಾಗಿ ಅಥವಾ ಅಂಚೆಯ ಮೂಲಕ ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲೆ ಹುದ್ದೆಯ ವಿವರಗಳನ್ನು ನಮೂದಿಸಿ ಕೃಷಿ ಆಯುಕ್ತರು, ಕೃಣಿ ಆಯುಕ್ತಾಲಯ, ಶೇಷಾದ್ರಿ ರಸ್ತೆ, ಬೆಂಗಳೂರು – 560001 ರವರಿಗೆ ಅಥವಾ ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಮೂಲ ಪ್ರಮಾಣ ಪತ್ರಗಳು ಮತ್ತು ಅನುಭವ
ಕುರಿತು ಸ್ಕ್ಯಾನ್ ಮಾಡಿ ಇ-ಮೇಲ್ ಗೆ ದಿನಾಂಕ 17-05-2021 ಸಮಯ ಸಂಜೆ 4-00 ಗಂಟೆಯೊಳಗೆ ತಲುಪಿಸುವುದು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯದ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಫಿಸಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಡಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ವೇತನ ರೂ. 1,10,000/- ವೇತನವಿರುತ್ತದೆ. ಈ ಹುದ್ದೆಗೆ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿರಬೇಕು. ಕೆಎಂಸಿಯ ನೋಂದಣಿಯನ್ನು ಹೊಂದಿರತಕ್ಕದ್ದು. ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ ಡಿಗ್ರಿ ಸರ್ಟಿಫಿಕೇಟ್ ನ್ನು ಪಡೆದಿರಬೇಕು.
ತಜ್ಞ ವೈದ್ಯರು ಹುದ್ದೆಗೆ ಎಂಡಿ/ಡಿ.ಎನ್.ಬಿ ವಿದ್ಯಾರ್ಹತೆ ಹಾಗೂ ಈ ಹುದ್ದೆಗೆ ರೂ. 1,10,000/- ವೇತನವಿರುತ್ತದೆ.
ವೈದ್ಯಾಧಿಕಾರಿಗಳು ಈ ಹುದ್ದೆಗೆ ಎಂಬಿಬಿಎಸ್ ಮಾಡಿರಬೇಕು. ಈ ಹುದ್ದೆಗೆ ರೂ.35,000/- ಮಾಸಿಕ ವೇತನ ಇರುತ್ತದೆ.
ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು ಹುದ್ದೆಗೆ ಎಂಬಿಬಿಎಸ್/ಬಿಎಎಂಎಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಶ್ರುಶ್ರೂಷ ಅಧಿಕಾರಿಗಳು(ಎನ್ ಸಿಡಿ) ಈ ಹುದ್ದೆಗೆ ಡಿಪ್ಲೋಮಾ ಇನ್ ನರ್ಸಿಂಗ್/ಬಿಎಸ್ಸಿ ನರ್ಸಿಂಗ್ ಮಾಡಿರಬೇಕು. ಈ ಹುದ್ದೆಗೆ ರೂ. 14,000/-ಮಾಸಿಕ ಸಂಭಾವನೆ ಇರುತ್ತದೆ.
ಶ್ರುಶ್ರೂಷ ಅಧಿಕಾರಿಗಳು(ತಾಯಿ ಆರೋಗ್ಯ ಮತ್ತು ಮಕ್ಕಳ ಆರೋಗ್ಯ) ಈ ಹುದ್ದೆಗೆ ಡಿಪ್ಲೋಮಾ ಇನ್ ನರ್ಸಿಂಗ್/ಬಿಎಸ್ಸಿ ನರ್ಸಿಂಗ್ ಮಾಡಿರಬೇಕು. ಈ ಹುದ್ದೆಗೆ ರೂ. 11,500/-ಮಾಸಿಕ ಸಂಭಾವನೆ ಇರುತ್ತದೆ.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗೆ ರೂ.10,000/- ವೇತನವಿರುತ್ತದೆ.
ಕಿರಿಯ ಪುರುಷ ಆರೋಗ್ಯ ಸಹಾಯಕರು ಹುದ್ದೆಗೆ ಮಾಸಿಕ ರೂ.10,000/- ವೇತನವಿರುತ್ತದೆ.
ನೇತ್ರ ಸಹಾಯಕರು ಈ ಹುದ್ದೆಗೆ ಎರಡು ವರ್ಷದ ಡಿಪ್ಲೋಮಾ ಇನ್ ಒಪ್ಟೋಮೆಟ್ರಿ ಅಥವಾ ನೇತ್ರಸಹಾಯಕರು/ಬಿ ಫಾರ್ಮ/ ಡಿ ಫಾರ್ಮ ವಿದ್ಯಾರ್ಹತೆ ಹೊಂದಿದ್ದು, ರೂ. 12,000/- ಮಾಸಿಕ ವೇತನವಿರುತ್ತದೆ.
ಸೈಕಿಯಾಟ್ರಿಕ್ ಸ್ಟಾಫ್ ನರ್ಸ್ ಡಿಪ್ಲೋಮಾ ಇನ್ ನರ್ಸಿಂಗ್ / ಬಿಎಸ್ಸಿ ನರ್ಸಿಂಗ್ ಅರ್ಹತೆಯನ್ನು ಹೊಂದಿರಬೇಕು. ರೂ.14,000 ವೇತನವಿರುತ್ತದೆ.
ಕಮ್ಯುನಿಟಿ ನರ್ಸ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಹೊಂದಿದ್ದು, ರೂ. 14,000 ವೇತನವಿರುತ್ತದೆ.
ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್ ಅಶ್ಯುರೆನ್ಸ್ ಹುದ್ದೆಗೆ ಎಂಬಿಬಿಎಸ್/ಬಿಡಿಎಸ್/ನರ್ಸಿಂಗ್ ಗ್ರಾಜ್ಯುಯೇಟ್/ಪಿಜಿ ಮಾಸ್ಟರ್ಸ್ ಇನ್ ಹೆಲ್ತ್ ಅಡ್ಮಿನಿಸ್ಟ್ರೇಶನ್/ಹೆಲ್ತ್ ಮ್ಯಾನೇಜ್ಮೆಂಟ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ರೂ.45,000/- ಮಾಸಿಕ ವೇತನವಿರುತ್ತದೆ.
ಇನ್ಸ್ಟಕ್ಟರ್ ಫಾರ್ ಇಂಪಾರ್ಡ್ ಚಿಲ್ಡ್ರನ್ ಹುದ್ದೆಗೆ ಡಿಪ್ಲೋಮಾ ಇನ್ ಟ್ರೈನಿಂಗ್ ಯಂಗ್ ಡೆಫ್ ಮತ್ತು ಹಿಯರಿಂಗ್ ಹ್ಯಾಂಡಿಕ್ಯಾಪ್ಡ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗೆ ರೂ. 15,000/- ವೇತನವಿರುತ್ತದೆ.
ಸದರಿ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಎಲ್ಲಾ ಮೂಲ ದಾಖಲಾತಿಗಳೊಂದಿಗೆ ದಿನಾಂಕ 15/05/2021 ರ ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಸಂದರ್ಶನದ ಸ್ಥಳದಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು.
ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತೈಲ ಗಾಲಿ ಕಾರ್ಖಾನೆ, ಬೆಂಗಳೂರು ಇವರು ಈ ಕೆಳಗಿನ ಹುದ್ದೆಗಳನ್ನು ನಿರ್ವಹಿಸಲು ಅರೆ ವೈದ್ಯಕೀಯ ವರ್ಗದವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಉದ್ದೇಶಿಸಿದ್ದಾರೆ.
ಹುದ್ದೆ : ರೇಡಿಯೋಗ್ರಾಫರ್/ ಎಕ್ಸ್ ರೇ ಟೆಕ್ನಿಶಿಯನ್ – 01 ಲ್ಯಾಬ್ ಟೆಕ್ನಿಶಿಯನ್ – 01
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10, ಮೇ 2021 ಬೆಳಿಗ್ಗೆ 10:00 ಗಂಟೆಗೆ ತಾಂತ್ರಿಕ ತರಬೇತಿ ಕೇಂದ್ರ, ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು- 560064 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ನೇಮಕಾತಿ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ದಿನಾಂಕ 28/05/2021 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹುದ್ದೆಗಳ ವಿವರ, ಅರ್ಜಿ ಶುಲ್ಕ ಇತರೆ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ಹುದ್ದೆ : ತಾಂತ್ರಿಕಾಧಿಕಾರಿ, ವಿಸ್ತರಣಾಧಿಕಾರಿ, ಡೈರಿ ಸುಪರ್ ವೈಸರ್, ಲೆಕ್ಕ ಸಹಾಯಕರು, ಆಡಳಿತ ಸಹಾಯಕರು, ಮಾರುಕಟ್ಟೆ ಸಹಾಯಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಯೋಮಿತಿ : 18-35(ಸಾಮಾನ್ಯ), 18-38 (ಪ್ರವರ್ಗ 2ಎ, 2ಬಿ, 3ಎ, 3ಬಿ), 18-40 ( ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ)
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ