Author: Mallika

  • SSC ಸೆಲೆಕ್ಷನ್ ಪೋಸ್ಟ್ : ದಾಖಲೆಗಳನ್ನು ಸಲ್ಲಿಸಲು ಅವಧಿ ವಿಸ್ತರಣೆ

    SSC ಸೆಲೆಕ್ಷನ್ ಪೋಸ್ಟ್ : ದಾಖಲೆಗಳನ್ನು ಸಲ್ಲಿಸಲು ಅವಧಿ ವಿಸ್ತರಣೆ

    ಸಿಬ್ಬಂದಿ ನೇಮಕಾತಿ ಆಯೋಗವು, 2020 ನೇ ಸಾಲಿನ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ ಎಸ್ ಸಿ) ಸೆಲೆಕ್ಷನ್ ಪೋಸ್ಟ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಲು ಅವಧಿಯನ್ನು ವಿಸ್ತರಿಸಿದೆ.

    ಎಪ್ರಿಲ್ 30 ರವರೆಗೆ ದಾಖಲೆಗಳನ್ನು ಸಲ್ಲಿಸಲು ಅವಧಿ ನೀಡಲಾಗಿತ್ತು. ಪ್ರಸ್ತುತ ಮೇ.31 ರವರೆಗೆ ಅವಧಿಯನ್ನು ವಿಸ್ತರಿಸಿದೆ.

    ಕೋವಿಡ್ ನ ಎರಡನೇ ಅಲೆ ಪರಿಣಾಮದಿಂದ ಎಸ್ ಎಸ್ ಸಿ ಯು ದಾಖಲೆಗಳನ್ನು ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿದೆ.

    ದಾಖಲೆಗಳನ್ನು ನೀಡುವ ಕುರಿತು ಅಧಿಕೃತ ನೋಟಿಸನ್ನು ಅಭ್ಯರ್ಥಿಗಳು ಸ್ಟಾಫ್ ಸೆಲೆಕ್ಷನ್ ಕಮಿಷನ್ ವೆಬ್‌ಸೈಟ್‌ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಭಾರತೀಯ ಸೈನ್ಯ ಕ್ಕೆ ಸೇರಿರಿ

    ಭಾರತೀಯ ಸೈನ್ಯ ಕ್ಕೆ ಸೇರಿರಿ

    ಭಾರತೀಯ ಸೈನ್ಯ ಈ ಸಂಸ್ಥೆಯ ಕಿರು ಸೇವಾ ಕಮಿಷನ್ (NT) JAG ಗಳ ಕಾನೂನು ಪದವಿ ಪುರುಷ ಹಾಗೂ ಮಹಿಳೆಯರಿಗಾಗಿ 27 ನೇ ಕೋರ್ಸ್ ಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಆನ್ಲೈನ್ ಮೂಲಕ‌ ಅರ್ಜಿ ಸಲ್ಲಿಸಲು 06 ಮೇ 2021 ರಿಂದ 4 ನೇ ಜೂನ್ 2021 ರವರೆಗೆ ತೆರೆದಿರುತ್ತದೆ.

  • CRPF : ಭರ್ಜರಿ ಉದ್ಯೋಗವಕಾಶ

    CRPF : ಭರ್ಜರಿ ಉದ್ಯೋಗವಕಾಶ

    ಸಿಆರ್ ಪಿಎಫ್ ನಿವೃತ್ತ ಸಿಎಸಿಎಫ್ ಸಿಬ್ಬಂದಿಯಿಂದ ಸಿಎಸಿಎಫ್‌ ಮತ್ತು ಅಸ್ಸಾಂ ರೈಫಲ್ ನಲ್ಲಿ ಪ್ಯಾರಾಮೆಡಿಕಲ್ ವರ್ಗದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಒಂದು ನೋಡಲ್ ಪಡೆಯಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ಘೋಷಿಸಿದೆ.

    ವಯೋಮಿತಿ : 60. ವರ್ಷ ವಯಸ್ಸಿನೊಳಗಿದ್ದು ಒಂದು ವರ್ಷದ ಅವಧಿಗಾಗಿ 62 ವರ್ಷಗಳವರೆಗೆ ಪ್ಯಾರಾಮೆಡಿಕಲ್ ವರ್ಗದ ಕೆಲಸದಲ್ಲಿ ನಿಯೋಜಿತವಾಗಬೇಕು.

    ಹುದ್ದೆ :ಎಆರ್ : ಸಿಸ್ಟರ್ -01
    ನೈಬ್ ಸುಬೇದಾರ್/ ಸಿಬ್ಬಂದಿ ನರ್ಸ್- 52
    ವಾರಂಟ್ ಆಫೀಸರ್ ಫಾರ್ಮಸಿಸ್ಟ್- 26
    ರೈಫಲ್ ಮ್ಯಾನ್ ಲ್ಯಾಬ್ ಅಸಿಸ್ಟೆಂಟ್ – 11
    ರೈಫಲ್ ಮ್ಯಾನ್ ನರ್ಸಿಂಗ್ ಅಸಿಸ್ಟೆಂಟ್ – 46
    ಆರ್ ಎಫ್ ಡಬ್ಲ್ಯು ಮಹಿಳಾ ಅಟೆಂಡೆಂಟ್ – 08
    ಆರ್ ಎಫ್ ಡಬ್ಲ್ಯೂ ಆಯಾ – 05
    ಆರ್ ಎಫ್ ಡಬ್ಲ್ಯೂ ಮಹಿಳಾ ಸಫಾಯಿ – 07

    ಬಿಎಸ್ ಎಫ್ : ಎಸ್ಐ /ಸಿಬ್ಬಂದಿ ನರ್ಸ್ -49
    ಎಎಸ್ ಐ / ಲ್ಯಾಬ್ ಟೆಕ್ – 40
    ಹೆಚ್ ಸಿ ( ಜೆಆರ್) ಎಕ್ಸ್ ರೇ ಅಸಿಸ್ಟೆಂಟ್ -41
    ಹೆಚ್ ಸಿ/ಫಿಸಿಯೋಥೆರಪಿ ಅಸಿಸ್ಟೆಂಟ್ – 44
    ಸಿಒಎನ್ ಎಸ್ ಟಿ – 192

    ಸಿಆರ್ ಪಿಎಫ್ : ಸಿಬ್ಬಂದಿ ನರ್ಸ್ – 231
    ರೇಡಿಯೋಗ್ರಾಫರ್ – 17
    ಫಿಸಿಯೊಥೆರಪಿಸ್ಟ್ – 100
    ಫಾರ್ಮಸಿಸ್ಟ್ – 123
    ಡಯೆಟಿಷಿಯನ್ – 01
    ಬ್ಲಡ್ ಬ್ಯಾಂಕ್ ಟೆಕ್ -01
    ಲ್ಯಾಬ್ ಟೆಕ್ನಿಶಿಯನ್ – 110
    ಇಸಿಜಿ ಟೆಕ್ನಿಶಿಯನ್ – 01
    ಡೆಂಟಲ್ ಟೆಕ್ನಿಶಿಯನ್ – 05
    ಡಬ್ಲ್ಯೂ ಬಿ/ಎನ್ ಎ- 590
    ಎಕ್ಸ್ ರೇ ಟೆಕ್ನಿಶಿಯನ್ – 93
    ಎಲೆಕ್ಟ್ರಿಶಿಯನ್- 01
    ಡಯಾಲಿಸಿಸ್ ಟೆಕ್ನಿಶಿಯನ್-08
    ಸಿಟಿ/ಕಿಚನ್ ಸರ್ವಿಸ್ -125
    ಸಿಟಿ/ಡಬ್ಲ್ಯೂ ಎಂ – 04
    ಸಿಟಿ /ಎಸ್ ಕೆ – 128

    ಐಟಿಬಿಪಿ : ಸಿಬ್ಬಂದಿ ನರ್ಸ್- 18
    ಮೆಡಿಕ್ಸ್ – 67
    ಫಾರ್ಮಸಿಸ್ಟ್ – 11
    ಲ್ಯಾಬ್ ಟೆಕ್ – 01
    ಎಎನ್ಎಂ- 15
    ರೇಡಿಯೋಗ್ರಾಫರ್- 01

    ಎಸ್ ಎಸ್ ಬಿ: ಎಸ್ ಎಂ (ಸಿಸ್ಟರ್ ಐ/ಸಿ)- 01
    ಇನ್ಸ್ ಫೆಕ್ಷನ್ ( ಸಿಸ್ಟರ್ ಐ/ಸಿ) 03
    ಎಸ್ ಐ ( ಸಿಬ್ಬಂದಿ ನರ್ಸ್ ) 39
    ಎಸ್ ಐ (ಫಾರ್ಮಸಿಸ್ಟ್) – 01
    ಎಎಸ್ ಐ ಫಾರ್ಮಸಿಸ್ಟ್ – 19
    ಎಸ್ ಐ ರೇಡಿಯೋಗ್ರಾಫರ್ – 01
    ಎಎಸ್ ಐ ರೇಡಿಯೋಗ್ರಾಫರ್ – 09
    ಎಎಸ್ ಐ (ಲ್ಯಾಬ್ ಟೆಕ್)- 12
    ಎಎಸ್ಐ (ಒಟಿ) – 02
    ಎಎಸ್ ಐ ( ಡೆಂಟಲ್ ಟೆಕ್) – 02
    ಹೆಚ್ ಸಿ( ಉಸ್ತುವಾರಿ)- 02
    ಸಿಟಿ (ಆಯಾ)- 05
    ಸಿಟಿ ( ಲ್ಯಾಬ್ ಅಸಿಸ್ಟೆಂಟ್ )-23
    ಹೆಚ್ ಸಿ ( ಫಿಸಿಯೋಥೆರಪಿ)-15


    ಹೆಚ್ ಸಿ ( ಎಕ್ಸ್ ರೇ ಅಸಿಸ್ಟೆಂಟ್) – 15
    ಸಿಟಿ ( ಎನ್ಎ /ಮೆಡಿಕ್) -47
    ಎಎಸ್ ಐ ಮೆಡಿಕ್ – 29
    ಎಎಸ್ ಐ ( ಎಕ್ಸ್ ರೇ ಟೆಕ್) – 01
    ಹೆಚ್ ಸಿ ಮೆಡಿಕ್ -02
    ಹಾಸ್ಪಿಟಲ್ ಕುಕ್ -06
    ಜವಾನ- 09

    ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.crpf.gov.in ಗೆ ಭೇಟಿ ನೀಡಬಹುದು.

  • ಜಿಲ್ಲಾ ಪಂಚಾಯತ್ ಚಾಮರಾಜನಗರ: 149 ಹುದ್ದೆ: ಈ ಕೂಡಲೇ ಅರ್ಜಿ ಸಲ್ಲಿಸಿ

    ಜಿಲ್ಲಾ ಪಂಚಾಯತ್ ಚಾಮರಾಜನಗರ: 149 ಹುದ್ದೆ: ಈ ಕೂಡಲೇ ಅರ್ಜಿ ಸಲ್ಲಿಸಿ

    ಕೋವಿಡ್ -19 ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಚಾಮರಾಜನಗರ ಈ ಕಚೇರಿಯ ಅಧೀನ ಸಂಸ್ಥೆಗಳಲ್ಲಿ ಖಾಲಿ ಇರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕ -111 ಹುದ್ದೆಗಳು ಹಾಗೂ ಗ್ರೂಪ್ ಡಿ-29 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ಮೆರಿಟ್ ಕಂ ರೋಸ್ಟರ್ ಮೂಲಕ ದಿನಾಂಕ : 30-09-2021 ರವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಾತಿ ಮಾಡಲು ಹಾಗೂ ಈ ಕಚೇರಿಯ ಅಧೀನ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ‌ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ವೈದ್ಯಾಧಿಕಾರಿ – 03 ಹುದ್ದೆಗಳು
    ಶುಶ್ರೂಷಾಧಿಕಾರಿ : 03 ಹುದ್ದೆಗಳು
    ಕಿರಿಯ ಆರೋಗ್ಯ ಸಹಾಯಕರು ( ಮಹಿಳೆ) : 111 ಹುದ್ದೆಗಳು
    ಗ್ರೂಪ್ ಡಿ : 32 (03+29)

    ಸಂದರ್ಶನ ದಿನಾಂಕ : ವೈದ್ಯಾಧಿಕಾರಿ ಹಾಗೂ ಶುಶ್ರೂಷಾಧಿಕಾರಿ ಹುದ್ದೆಗಳಿಗೆ 15-05-2021 ಸಮಯ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ ‌2.00 ಗಂಟೆಯವರೆಗೆ.

    ಕಿರಿಯ ಆರೋಗ್ಯ ಸಹಾಯಕರು ( ಮಹಿಳೆ) ಹಾಗೂ ಗ್ರೂಪ್ ಡಿ ಹುದ್ದೆಗಳಿಗೆ ದಿನಾಂಕ 17-05-2021 ಸಮಯ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ

    ನೇರ ಸಂದರ್ಶನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಕೊಠಡಿ ಸಂಖ್ಯೆ :312, ಮೂರನೇ ಮಹಡಿ, ಜಿಲ್ಲಾಡಳಿತ ಭವನ, ಚಾಮರಾಜನಗರ ಇಲ್ಲಿ ಏರ್ಪಡಿಸಲಾಗಿದೆ.

  • ಉಡುಪಿ : 100 ಡಾಟಾ ಅಪರೇಟರ್ ಹುದ್ದೆ

    ಉಡುಪಿ : 100 ಡಾಟಾ ಅಪರೇಟರ್ ಹುದ್ದೆ

    ಗುತ್ತಿಗೆ ಆಧಾರದ ಮೇಲೆ ಉಡುಪಿ ಜಿಲ್ಲೆಯಲ್ಲಿ ಈ ಕೆಳಕಂಡ ತಾಲೂಕುಗಳಲ್ಲಿ ಡಾಟಾ ಎಂಟ್ರಿ ಅಪರೇಟರ್ಸ್ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ.

    ಹುದ್ದೆ : ಡಾಟಾ ಅಪರೇಟರ್ – ಕಾಪು , ಕಾರ್ಕಳ, ಬೈಂದೂರು, ಬ್ರಹ್ಮಾವರ

    ಒಟ್ಟು ಹುದ್ದೆ- 100

    ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9108690946 ಸದಾಶಿವ ಜಿ.ಕೆ

  • DCE ಯಿಂದ ಹೆಚ್ಚುವರಿ ಅತಿಥಿ ಉಪನ್ಯಾಸಕರ ನೇಮಕ

    DCE ಯಿಂದ ಹೆಚ್ಚುವರಿ ಅತಿಥಿ ಉಪನ್ಯಾಸಕರ ನೇಮಕ

    ಕರ್ನಾಟಕ ಕಾಲೇಜು ಶಿಕ್ಷಣ ವ್ಯಾಪ್ತಿಯಲ್ಲಿ ಬರುವ ಸರಕಾರಿ ಪ್ರಥಮ ದರ್ಜೆ ಕಾಲೇಜು 2020-21 ನೇ ಶೈಕ್ಷಣಿಕ ಸಾಲಿನ 2,4,6 ನೇ ಸೆಮಿಸ್ಟರ್ ಅವಧಿಯ ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಹೆಚ್ಚುವರಿ ಬೋಧನಾ ಕಾರ್ಯಕ್ಕಾಗಿ ಹೆಚ್ಚು ಉಪನ್ಯಾಸಕರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.

    ಆಯಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಂದ‌ ಕಾಲೇಜಿನ ಹಂತದಲ್ಲಿ ಅರ್ಜಿಯನ್ನು ಪಡೆದು, ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ವಿಷಯಗಳ ವಿಭಾಗದ ಮುಖ್ಯಸ್ಥರು/ಹಿರಿಯ ಅಧ್ಯಾಪಕರು ಮತ್ತು ಆಡಳಿತ ವಿಭಾಗದ ಅಧಿಕಾರಿ/ಸಿಬ್ಬಂದಿ ವರ್ಗದವರನ್ನೊಳಗೊಂಡ ಆಯ್ಕೆ ಸಮಿತಿಯು ಪರಿಶೀಲಿಸಿ ಮಾನದಂಡಗಳ ಅನ್ವಯ ಮೆರಿಟ್ ಲಿಸ್ಟ್ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದೆ.

    ಕಾಲೇಜು ಶಿಕ್ಷಣ ಇಲಾಖೆಯು 2020-21 ನೇ ಸಾಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯ್ಕೆ‌ಮಾಡಿಕೊಳ್ಳಲು ಅನುಮತಿ ನೀಡಲಾಗಿರುವ ಅತಿಥಿ‌ ಉಪನ್ಯಾಸಕರ ಕಾಲೇಜುವಾರು ಸಂಖ್ಯೆಯ ಲಿಸ್ಟನ್ನು ಪ್ರಕಟಿಸಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ