Author: Mallika

  • NABARD : ವಿವಿಧ ಹುದ್ದೆ

    NABARD : ವಿವಿಧ ಹುದ್ದೆ

    ನಬಾರ್ಡ್ ಕನ್ಸಲ್ಟೆನ್ಸಿ ಸರ್ವೀಸಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಹಿರಿಯ ಕನ್ಸಲ್ಟೆಂಟ್, ಕಿರಿಯ ಕನ್ಸಲ್ಟೆಂಟ್

    ಹುದ್ದೆ ಸಂಖ್ಯೆ : 20

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-05-2021

    ಹುದ್ದೆ ಸ್ಥಳ : ಆಯ್ಕೆಯಾದ ಅಭ್ಯರ್ಥಿಗಳು ಮುಂಬೈ, ಬೆಂಗಳೂರು ಮತ್ತು ಚೆನ್ನೈ ನಲ್ಲಿ ಕೆಲಸವಿರುತ್ತದೆ.

    ವಿದ್ಯಾರ್ಹತೆ : ಹಿರಿಯ ಕನ್ಸಲ್ಟೆಂಟ್ ಹುದ್ದೆಗೆ ಎಂಬಿಎ/ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ಈ ಹುದ್ದೆಗೆ 40 ರಿಂದ 50 ವರ್ಷಗಳು ನಿಗದಿಪಡಿಸಲಾಗಿದೆ. ಕಿರಿಯ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಎ/ ಪದವಿ ವಿದ್ಯಾರ್ಹತೆ ಮಾಡಿರಬೇಕು. ವಯೋಮಿತಿ 25-35 ವರ್ಷಗಳು.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ವೇತನ : ಹಿರಿಯ ಕನ್ಸಲ್ಟೆಂಟ್ ಹುದ್ದೆಗೆ ರೂ.1,50,000/- ಮತ್ತು ಕಿರಿಯ ಕನ್ಸಲ್ಟೆಂಟ್ ಹುದ್ದೆಗೆ ರೂ.40,000/- ವೇತನವನ್ನು ನಿಗದ ಪಡಿಸಲಾಗಿದೆ.

    ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪ್ರತಿಯನ್ನು ಅಪ್ ಲೋಡ್ ಮಾಡಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಪಶ್ಚಿಮ ರೈಲ್ವೆಯಲ್ಲಿ ಭರ್ಜರಿ ಉದ್ಯೋಗವಕಾಶ :    3591 ಹುದ್ದೆ : ಆಸಕ್ತರು ಅರ್ಜಿ ಸಲ್ಲಿಸಿ

    ಪಶ್ಚಿಮ ರೈಲ್ವೆಯಲ್ಲಿ ಭರ್ಜರಿ ಉದ್ಯೋಗವಕಾಶ : 3591 ಹುದ್ದೆ : ಆಸಕ್ತರು ಅರ್ಜಿ ಸಲ್ಲಿಸಿ

    ಮುಂಬೈ ಪಶ್ಚಿಮ ರೈಲ್ವೆಯ ನೇಮಕಾತಿ ಮಂಡಳಿಯ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತರು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

    ಹುದ್ದೆ : ಅಪ್ರೆಂಟಿಸ್ ಟ್ರೈನಿ

    ಒಟ್ಟು ಹುದ್ದೆ ಸಂಖ್ಯೆ :3591

    ವಿದ್ಯಾರ್ಹತೆ : ಮೆಟ್ರಿಕ್ಯುಲೇಷನ್ ಜೊತೆಗೆ ಎನ್ ಸಿವಿಟಿ / ಎಸ್ ಸಿವಿಟಿ ಐಟಿಐ ಸಂಬಂಧಿಸಿದ ಟ್ರೇಡ್ ನಲ್ಲಿ ಅರ್ಹತೆ ಹೊಂದಿರಬೇಕು.

    ವಯೋಮಿತಿ : ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷ ವಯೋಮಿತಿಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 25-05-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-06-2021

    ಅರ್ಜಿ ಶುಲ್ಕ : ಸಾಮಾನ್ಯ ಒಬಿಸಿ ಅಭ್ಯರ್ಥಿಗಳಿಗೆ ರೂ.100/-, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಮಹಿಳಾ ಅಭ್ಯರ್ಥಿಗಳು / ಪಿಡಬ್ಲ್ಯುಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.8000 ರಿಂದ ರೂ. 16,000/- ವೇತನ ನಿಗದಿಪಡಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • TRAI : ಹುದ್ದೆಗಳ ನೇಮಕ

    TRAI : ಹುದ್ದೆಗಳ ನೇಮಕ

    ಭಾರತೀಯ ದೂರಸಂವೇದಿ ನಿಯಂತ್ರಣಾ ಪ್ರಾಧಿಕಾರ ( TRAI) ( ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ) ಬೆಂಗಳೂರಿನ ಇದರ ಪ್ರಾದೇಶಿಕ ಕಚೇರಿಯಲ್ಲಿ ‌ನಿಯೋಜನೆಯ ಮೇರೆಗೆ ವಿದೇಶಿ ಸೇವಾ ಕರಾರುಗಳನ್ವಯ ದಿನಾಂಕ 29 ನೇ ಎಪ್ರಿಲ್, 2021 ರಂದು ಈವನ್ ಸಂಖ್ಯೆ ಖಾಲಿ ಹುದ್ದೆ ಆದೇಶದಡಿ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಟಿಆರ್ ಎಐ, ನವದೆಹಲಿ ಇವರು ಉಲ್ಲೇಖವನ್ನು ಕರೆದಿದ್ದಾರೆ.

    ಹುದ್ದೆ : ಜಂಟಿ ಸಲಹೆಗಾರ/ ಉಪ ಸಲಹೆಗಾರ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-06-2021

    ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರ ಮತ್ತು ಅರ್ಜಿ ನಮೂನೆಯನ್ನು ಟಿಆರ್ ಎಐ ವೆಬ್ಸೈಟ್ www.trai.gov.in ನಿಂದ ಪಡೆಯಬಹುದು.

  • NAL : ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

    NAL : ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

    ನ್ಯಾಷನಲ್ ಏರೋಸ್ಪೇಸ್ ಲ್ಯಾಬರಿಟರೀಸ್‌ ಖಾಲಿ ಇರುವ ಟೆಕ್ನಿಶಿಯನ್ ಅಸಿಸ್ಟೆಂಟ್, ಟೆಕ್ನಿಕಲ್ ಆಫೀಸರ್, ಸೀನಿಯರ್ ಟೆಕ್ನಿಕಲ್ ಆಫೀಸರ್, ಸೀನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಇದೀಗ ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆನ್ಲೈನ್ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಿದೆ.

    ಈ ಮೊದಲು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 21-05-2021 ನಿಗದಿಯಾಗಿತ್ತು. ಈಗ 22-05-2021 ರಿಂದ 06-06-2021 ರವರೆಗೆ ಅರ್ಜಿ ದಿನಾಂಕದ ಕಡೇ ದಿನಾಂಕವನ್ನು ನಿಗದಿಪಡಿಸಿದೆ.
    ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್‌ ಲಿಂಕ್ ಗಾಗಿ ಅಭ್ಯರ್ಥಿಗಳು www.nal.res.in ಗೆ ಭೇಟಿ ನೀಡಬಹುದು.

  • ICRI : ಉಚಿತ ಶಿಕ್ಷಣ : ವಿವರಗಳು ಇಲ್ಲಿದೆ

    ICRI : ಉಚಿತ ಶಿಕ್ಷಣ : ವಿವರಗಳು ಇಲ್ಲಿದೆ

    ಕೊರೊನಾದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡಲು ಮುಂದಾಗಿರುವ ಐಸಿಆರ್‌ಐ ( ಇನ್ಸ್ಟಿಟ್ಯೂಟ್ ಆಫ್ ಕ್ಲಿನಿಕಲ್ ರಿಸರ್ಚ್ ಇಂಡಿಯಾ) ಮುಂದಾಗಿದೆ. ಹೀಗಾಗಿ ಇಂತಹ ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ನೀಡಲು ಎನ್‌ಜಿಒ ಗಳು , ಸಂಘಗಳು ಮತ್ತು ಸರಕಾರಿ ಸಂಸ್ಥೆಗಳನ್ನು ಐಸಿಆರ್‌ಐ ಕೇಳಿದೆ.

    ಈ ಸಾಂಕ್ರಾಮಿಕ ರೋಗದಿಂದ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಅಂತಹ ಮಕ್ಕಳಿಗೆ ಸಹಾಯ ಮಾಡಲು ಮುಂದಾಗುತ್ತಿದೆ ಮತ್ತು ಅವರ ಭವಿಷ್ಯವನ್ನು ನಾವು ನಾಶವಾಗಲು ಬಿಡುವುದಿಲ್ಲ, ಹೆತ್ತವರ ನಿಧನದಿಂದಾಗಿ ಶಿಕ್ಷಣವನ್ನು ಕಳೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸುವುದು ನಮ್ಮಗುರಿ ಎಂದು ಐಸಿಆರ್‌ಐನ ಸಿಒಒ ಕನಿಷ್ಕ್ ದುಗಲ್ ಹೇಳಿದ್ದಾರೆ.

    ದೆಹಲಿ, ಮುಂಬೈ, ಪುಣೆ, ಜೈಪುರ, ಡೆಹ್ರಾಡೂನ್, ಭೋಪಾಲ್, ಮಂಗಳೂರು, ಬೆಂಗಳೂರು, ಜೈಪುರ, ಪುದುಚೇರಿ, ತಂಜಾವೂರು ಮತ್ತು ನಾಸಿಕ್ ನಲ್ಲಿರುವ ಯಾವುದೇ ಐಸಿಆರ್‌ಐ ಕ್ಯಾಂಪಸ್‌ಗಳಿಗೆ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಯಬಹುದು.

    ಈ ಯೋಜನೆಯಲ್ಲಿ ಶಿಕ್ಷಣವನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ತಮ್ಮ ಹೆತ್ತವರ ನಿಧನ ಹೊಂದಿರುವ ದಾಖಲೆಗಳು, ಆಧಾರ್ ಕಾರ್ಡ್‌, ಹಿಂದಿನ ಶೈಕ್ಷಣಿಕ ಪ್ರಮಾಣ ಪತ್ರಗಳು ಮತ್ತು ಉತ್ತೀರ್ಣರಾದ ಶಾಲೆಯಿಂದ ಪಡೆದ ಪ್ರಮಾಣ ಪತ್ರವನ್ನು ಒದಗಿಸಬೇಕಾಗುತ್ತದೆ ಎಂದು ಸಂಸ್ಥೆ ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮಂಡ್ಯ : ಹುದ್ದೆಗಳ ನೇಮಕ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮಂಡ್ಯ : ಹುದ್ದೆಗಳ ನೇಮಕ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮಂಡ್ಯ ಇಲ್ಲಿನ ಅಧೀನ ‌ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗದ ನಿರ್ವಹಣೆ ಸಮಯದಲ್ಲಿ ರಚಿಸಲಾದ 06 ಐಸಿಯು ಬೆಡ್ ಗಳನ್ನು ಕಾರ್ಯಗತಗೊಳಿಸಿ ನಿರ್ವಹಿಸಲು ಹೆಚ್ಚುವರಿ ಮಾನವ ಸಂಪನ್ಮೂಲವನ್ನು ‌ದಿನಾಂಕ‌ 30-09-2021 ರವರೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ / ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಆಯ್ಕೆ ಮಾಡಲು ನೇರ ಸಂದರ್ಶನವನ್ನು ಹಮ್ಮಿಕೊಂಡಿದ್ದು, ಆಸಕ್ತರು ದಿನಾಂಕ 22-05-2021 ರಂದು ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 2-00 ಗಂಟೆಯ ಒಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕೊಠಡಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವುದು.

    ಹುದ್ದೆ : ವೈದ್ಯಾಧಿಕಾರಿಗಳು

    ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮೂಲ ಅಂಕ ಪಟ್ಟಿಗಳು, ಎಲ್ಲಾ ಪ್ರಮಾಣ ಪತ್ರಗಳು, ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಗಳೊಂದಿಗೆ ಹಾಗೂ ಸದರಿ ದಾಖಲೆಗಳ 02 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಮೇಲೆ ತಿಳಿಸಿರುವ ದಿನಾಂಕದಂದು ನಿಗದಿತ ಸಮಯದೊಳಗೆ ಸಂದರ್ಶನಕ್ಕೆ ಹಾಜರಾಗುವುದು.

    ಹೆಚ್ಚಿನ ಮಾಹಿತಿಗಾಗಿ 08232-224027 ಇಲ್ಲಿ ಸಂಪರ್ಕಿಸಬಹುದು.