Author: Mallika

  • GIMS ಗದಗ : ನರ್ಸಿಂಗ್ ಅಭ್ಯರ್ಥಿಗಳಿಗೆ ಅವಕಾಶ, ನೇರ ನೇಮಕಾತಿ ಅಧಿಸೂಚನೆ ಪ್ರಕಟ

    ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೋವಿಡ್ – 19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶ್ರುಶ್ರೂಷಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಮಾನ್ಯ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ಇವರು ಅನುಮತಿ ನೀಡಿರುತ್ತಾರೆ.

    ಗದಗ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ ( ಜಿಲ್ಲಾ ಆಸ್ಪತ್ರೆಯಲ್ಲಿ) ಖಾಲಿ ಇರುವ 05 ಶುಶ್ರೂಷಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ದಿನಾಂಕ 30-09-2021 ರ ವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿ ಆಗುವವರೆಗೆ ವರ್ಗಾವಣೆ ಮೂಲಕ ಹುದ್ದೆಗಳು ಭರ್ತಿ ಆಗುವ ಅಥವಾ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲು ಅಲ್ಲಿಯವರೆಗೆ.

    ಹುದ್ದೆ: 05 ಶ್ರುಶ್ರೂಷಾಧಿಕಾರಿಗಳ ಹುದ್ದೆ.

    ಅರ್ಜಿಯ ಜೊತೆಗೆ ರೂ.500/- ಗಳ ಡಿಡಿಯನ್ನು ನಿರ್ದೇಶಕರು, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಸಲ್ಲಿಸುವುದು.

    ಅಭ್ಯರ್ಥಿಯು ಕಡ್ಡಾಯವಾಗಿ ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು.

    ವಯೋಮಿತಿ : ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.

    ಪ್ರತಿ ಮಾಸಿಕ ರೂ.25,000/- ರಂತೆ ವೇತನ ನಿಗದಿಪಡಿಸಿ ದಿನಾಂಕ 08-06-2021 ರ ಬೆಳಿಗ್ಗೆ 10.00 ಗಂಟೆಗೆ ನೇರ ನೇಮಕಾತಿ ಸಂದರ್ಶನ ಏರ್ಪಡಿಸಿದೆ.

    ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ www.karnataka.gov.in/gimsgadag. ನಲ್ಲಿ ಲಭ್ಯವಿರುವ ನಮೂನೆಯೊಂದಿಗೆ ನೇರ ನೇಮಕಾತಿ ಸಂದರ್ಶನಕ್ಕೆ ಹಾಜರಾಗಬಹುದು.

  • ಹುನಗುಂದ ಆರೋಗ್ಯ ಕೇಂದ್ರದಲ್ಲಿ ವಿವಿಧ ಹುದ್ದೆ, ನೇರ ಸಂದರ್ಶನದ ಮೂಲಕ ನೇಮಕ

    ಕೋವಿಡ್ ನಿಯಂತ್ರಣಕ್ಕಾಗಿ ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ.

    ಹುನಗುಂದ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆಗಳ ವಿವರ :ಶ್ರುಶೂಷಾಧಿಕಾರಿಗಳು- 10, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ – 1, ಗಣಕಯಂತ್ರ ದತ್ತಾಂಶ ನಮೂದಕ – 1, ಗ್ರೂಪ್ ಡಿ ಹುದ್ದೆ – 15, ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 1, ಫಾರ್ಮಸಿ ಅಧಿಕಾರಿ – 1

    ನೇರ ಸಂದರ್ಶನ ದಿನಾಂಕ ಮತ್ತು ಸಮಯ : ಈ ಮೇಲಿನ ಎಲ್ಲಾ ಹುದ್ದೆಗಳಿಗೆ ದಿನಾಂಕ ಜೂನ್ 07 ರಂದು, ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಹುನಗುಂದ ತಾಲೂಕಿನ ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಸಲಿದೆ.

    ಈ ಹುದ್ದೆಯು ತಾತ್ಕಾಲಿಕವಾಗಿದ್ದು 5 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಗತ್ಯ ದಾಖಲೆಗಳೊಂದಿಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. 99001131419

  • ಕೃಷಿ ವಿಶ್ವವಿದ್ಯಾಲಯ ಧಾರವಾಡ: ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

    ಕೃಷಿ ವಿಶ್ವವಿದ್ಯಾಲಯ, ಧಾರವಾಡ ಅಧಿಕಾರಿ ವೃಂದದ ವಿವಿಧ ಹುದ್ದೆಗಳಿಗೆ ( ನಿಶ್ಚಿತಾವಧಿಯ ಹುದ್ದೆಗಳು) ನೇರ ನೇಮಕಾತಿಯ ಬಗ್ಗೆ ಅರ್ಜಿ ಸಲ್ಲಿಸಲು 24-06-2021 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಈಗ ಅರ್ಜಿ ಸಲ್ಲಿಕೆಯ ಅವಧಿಯನ್ನು 02-07-2021 ರವರೆಗೆ ವಿಸ್ತರಿಸಲಾಗಿದೆ. ಹಾಗೂ ಹೈದರಾಬಾದ್ ಕರ್ನಾಟಕ( ಕಲ್ಯಾಣ ಕರ್ನಾಟಕ) ಪ್ರದೇಶದ ವ್ಯಕ್ತಿಗಳಿಗೆ ಹುದ್ದೆಗಳನ್ನು ಮೀಸಲಿಡಲು ಕೆಲವೊಂದು ತಿದ್ದುಪಡಿಯನ್ನು ಮಾಡಲಾಗಿದೆ.

    ಹುದ್ದೆಗಳ ವಿವರ: ಡೈರೆಕ್ಟರ್ ಆಫ್ ರಿಸರ್ಚ್, ಡೈರೆಕ್ಟರ್ ಆಫ್ ಎಕ್ಸ್ ಟೆನ್ ಶನ್, ಡೀನ್ ಆಫ್ ಸ್ಟೂಡೆಂಟ್ ವೆಲ್ ಫಾರ್, ಯುನಿವರ್ಸಿಟಿ ಲೈಬ್ರೇರಿಯನ್, ಡೀನ್ ( ಪೋಸ್ಟ್ ಗ್ರಾಜ್ಯುಯೇಟ್ ಸ್ಟಡೀಸ್, ಡೀನ್ ( ಅಗ್ರಿಕಲ್ಚರ್ ಕಾಲೇಜು ಧಾರವಾಡ), ಡೀನ್ ( ಅಗ್ರಿ ಕಲ್ಚರ್ ಕಾಲೇಜು, ಹನುಮನಕಟ್ಟಿ), ಡೀನ್ ( ಅಗ್ರಿಕಲ್ಚರ್ ಕಾಲೇಜು, ವಿಜಯಪುರ) , ಡೀನ್ ( ಕಂಮ್ಯುನಿಟಿ ಸೈನ್ಸ್ ಕಾಲೇಜು ಧಾರವಾಡ), ಡೀನ್ ( ಫಾರೆಸ್ಟ್ರಿ ಆಫ್ ಕಾಲೇಜು, ಶಿರಸಿ), ಡೀನ್ ( ಕಂಮ್ಯುನಿಟಿ ಸೈನ್ಸ್ ಕಾಲೇಜು ಧಾರವಾಡ) (ಹೆಚ್ ಕೆ)

    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು:

    ವಿಳಾಸ: To The Registrar, University Of Agricultural Sciences, Dharwad-580005 ( Karnataka)

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • PMFME ಯೋಜನೆಯಡಿಯಲ್ಲಿ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರಕಾರದ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯವು ಪಿಎಂಎಫ್ಎಂಇ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ.

    ಧಾರವಾಡದಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಮಹತ್ತರವಾದ ಪಾತ್ರ ನಿಭಾಯಿಸಲು ಅವಕಾಶ ಇದೆ.

    ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆಯ ಯೋಜನೆಯು ಅನುಷ್ಠಾನಗೊಳ್ಳುತ್ತಿದೆ.

    ಸಂಪನ್ಮೂಲ ವ್ಯಕ್ತಿ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ನಿಗದಿತ ವೇತನವನ್ನು ನೀಡಲಾಗುವುದಿಲ್ಲ. ಪ್ರತಿ ಫಲಾನುಭವಿಯನ್ನು ಆಧರಿಸಿ, ಮಂಜೂರಾದ ಪ್ರತಿ ಸಾಲದ ಮೇಲೆ ಗರಿಷ್ಠ ರೂ.20,000/- ಗಳನ್ನು 2 ಕಂತುಗಳಲ್ಲಿ ಪಾವತಿಸಲಾಗುತ್ತದೆ.

    ಇದರಲ್ಲಿ 50% ಮೊತ್ತವನ್ನು ಬ್ಯಾಂಕಿನಿಂದ ಸಾಲ ಮಂಜೂರಾದ ‌ನಂತರ ಹಾಗೂ ಉಳಿದ 50% ಹಣವನ್ನು ಘಟಕಗಳು ಜಿ.ಎಸ್.ಟಿ ಮತ್ತು ಉದ್ಯೋಗ ಆಧಾರ್ ನೋಂದಣಿಗಳನ್ನು ಹೊಂದಿ ಎಫ್.ಎಸ್.ಎಸ್.ಎ.ಐ ನಿಂದ ಪ್ರಮಾಣಿತ ಅನುಸರಣೆಯು ಸಿಕ್ಕ ನಂತರ ನೀಡಲಾಗುತ್ತದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು ಆಹಾರ ತಂತ್ರಜ್ಞಾನ, ಆಹಾರ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ, ಪದವಿಯನ್ನು ಹೊಂದಿರಬೇಕು.

    ಬ್ಯಾಂಕಿಂಗ್, ಡಿಪಿಆರ್ ಸಿದ್ಧಪಡಿಸುವಿಕೆ ಹಾಗೂ ತರಬೇತಿ, ಆಹಾರ ಸಂಸ್ಕರಣ ಕೈಗಾರಿಕೆ ಯಲ್ಲಿ ಅನುಭವವುಳ್ಳ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುತ್ತದೆ.

    ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಜೂನ್,06,2021 ರೊಳಗಾಗಿ ಅರ್ಜಿಯನ್ನು ಧಾರವಾಡ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

  • NCBS : ಕ್ಲರ್ಕ್ ಹುದ್ದೆ

    ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (ಎನ್ ಸಿಬಿಎಸ್) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-06-2021

    ಹುದ್ದೆ : ಕ್ಲರ್ಕ್

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿ ‌/ ಇನ್ಸ್ಟಿಟ್ಯೂಟ್ ನಿಂದ ಯಾವುದೇ ಪದವಿಯನ್ನು 50% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಕಂಪ್ಯೂಟರ್ ಮತ್ತು ಟೈಪಿಂಗ್ ಜ್ಞಾನ ಇರಬೇಕು. ಕ್ಲೆರಿಕಲ್ ಡ್ಯೂಟಿ ವಿಷಯದಲ್ಲಿ ಒಂದು ವರ್ಷ ಅನುಭವ ಇರಬೇಕು.

    ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ವಯೋಮಿತಿ ಮೀರಿರಬಾರದು. ಇಡ್ಬ್ಲುಎಸ್ ಮತ್ತು ಅನ್ ರಿಸರ್ವ್ಡ್ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ಮೀರಿರಬಾರದು.

    ಹುದ್ದೆ ಸಂಖ್ಯೆ : ಪರಿಶಿಷ್ಟ ಜಾತಿ – 02 ಹುದ್ದೆ
    ಇಡ್ಬ್ಯುಎಸ್ – 01 ಹುದ್ದೆ
    ಅನ್ ರಿಸರ್ವ್ಡ್ – 02 ಹುದ್ದೆ

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸ್ಕಿಲ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಹ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ದಿನಾಂಕ 15-06-2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • PMKVY : ತರಬೇತಿಗೆ ಅರ್ಜಿ ಆಹ್ವಾನ

    ಆರೋಗ್ಯ ವಲಯದಲ್ಲಿ ಕೊರೊನಾ ನಿಯಂತ್ರಿಸುವ ಸಲುವಾಗಿ ಹೆಚ್ಚಿನ ಪರಿಣಿತ ಸಹಾಯಕ ತಾಂತ್ರಿಕ ಸಿಬ್ಬಂದಿಯ ಅವಶ್ಯಕತೆ ಇದೆ. ಇದಕ್ಕಾಗಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ತರಬೇತಿಯನ್ನು ನೀಡುತ್ತಿದ್ದು, ಆಸಕ್ತರು ಅರ್ಜಿಯನ್ನು ಹಾಕಬಹುದು.

    ಜನರಲ್ ಡ್ಯೂಟಿ ಅಸಿಸ್ಟೆಂಟ್ (ಜಿಡಿಎ), ಜನರಲ್ ಡ್ಯೂಟಿ ಅಸಿಸ್ಟೆಂಟ್ ಅಡ್ವಾನ್ಸಡ್ ( ಕ್ರಿಟಿಕಲ್ ಕೇರ್) ಹಾಗೂ ಹೋಮ್ ಹೆಲ್ತ್ ಏಡ್ ತರಬೇತಿ ನೀಡಲಾಗುತ್ತದೆ. ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು.

    ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಬೇಸಿಕ್, ಫ್ಲೆಬೊಟೊಮಿಸ್ಟ್ ಹಾಗೂ ಮೆಡಿಕಲ್ ರೆಕಾರ್ಡ್‌ ಅಸಿಸ್ಟೆಂಟ್ ತರಬೇತಿಗೆ ಪಿಯುಸಿ ತೇರ್ಗಡೆಯಾಗಿರಬೇಕು ಮತ್ತು ಮೆಡಿಕಲ್ ಇಕ್ವಿಪ್ ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ ತರಬೇತಿಗೆ ಎಸ್ ಎಸ್ ಎಲ್ ಸಿ/ಐಟಿಐ/ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.

    ಆಸಕ್ತ ಅಭ್ಯರ್ಥಿಗಳು ಈ ವಿವಧ ಕೋರ್ಸ್‌ಗಳ ತರಬೇತಿಗೆ ಸಂಬಂಧಿಸಿದ ವಿವರಗಳಿಗಾಗಿ ಫಾರ್ಮ್ ಲಿಂಕ್ www.koppal.nic.in ನಲ್ಲಿ ಪಡೆಯಬಹುದು.