Author: Mallika

  • KIMS ಹುಬ್ಬಳ್ಳಿ: ವಿವಿಧ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

    ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹುಬ್ಳಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು.

    ಸಂದರ್ಶನ ದಿನಾಂಕ ಹಾಗೂ ಸಮಯ : 24-06-2021 ಸಮಯ 10.30 ಬೆಳಿಗ್ಗೆ

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು KIMS ಅಡ್ಮಿನ್ ಆಫೀಸ್ 0836-2370057 ಗೆ ಸಂಪರ್ಕಿಸಬಹುದು.

    ವೆಬ್‌ಸೈಟ್‌ www.kimshubballi.org

  • ದೈಹಿಕ ಶಿಕ್ಷಣ ಶಿಕ್ಷಕರಿಗೆ ಪರಿವೀಕ್ಷಕರ ಹುದ್ದೆಗೆ ಭಡ್ತಿ : ಎಸ್.ಸುರೇಶ್ ಕುಮಾರ್ ಹೇಳಿಕೆ

    ಸರಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್ -1 ಹುದ್ದೆಯಿಂದ ಗ್ರೂಪ್ ಬಿ ವೃಂದದ 148 ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗಳಿಗೆ ಮುಂಬಡ್ತಿಯನ್ನು ನೀಡಿದೆ. ಈ ರೀತಿಯಾಗಿ ಕರ್ನಾಟಕ ರಾಜ್ಯ ಸರಕಾರಿ ಪ್ರೌಢ ಶಾಲಾ ದೈಹಿಕ ಸಂಘದ ಬಹುದಿನಗಳ ಬೇಡಿಕೆಯನ್ನು ಪೂರೈಸಿದೆ.

    ದೈಹಿಕ ಶಿಕ್ಷಣ ಶಿಕ್ಷಕರ ಪದೋನ್ನತಿ ಪ್ರಕ್ರಿಯೆಯು 2016 ರಲ್ಲಿ ನಡೆದಿತ್ತು. ಈ ಬಡ್ತಿ ಪ್ರಕ್ರಿಯೆಯು 5 ವರ್ಷಗಳ ಬಳಿಕ ನಡೆದಿದ್ದು , ಆಡಳಿತಾತ್ಮಕ ಸಮಸ್ಯೆಯನ್ನು ಬಗೆಹರಿಸಿದೆ ಎಂದಿದ್ದಾರೆ.

    ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗಳಿಗೆ ಜೂನ್ 21 ರಂದು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗುತ್ತಿದ್ದು, ಕೋವಿಡ್ ನಿಯಮಗಳನ್ನು ಅನುಸರಿಸಿ ದೈಹಿಕ ಶಿಕ್ಷಕರು ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿದರು ಮತ್ತು ಆಸಕ್ತಿಯುಳ್ಳ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

  • KSP : ಆಂಗ್ಲ ಹಾಗೂ ಕರ್ನಾಟಕ ವಾದ್ಯಗಾರರ ಹುದ್ದೆಗಳ ನೇಮಕಾತಿ

    ಕೆ.ಎ.ಆರ್.ಪಿ ಮೌಂಟೆಡ್ ಮೈಸೂರು ಇಲ್ಲಿ‌ ಆಂಗ್ಲ ಮತ್ತು ಕರ್ನಾಟಕ ವಾದ್ಯಗಾರರ ಹುದ್ದೆಗಳಿಗೆ ನೇಮಕಾತಿಗಾಗಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು ಲಿಪಿಕ ವೃಂದ ಸೇರಿದಂತೆ (ನೇಮಕಾತಿ) ನಿಯಮಗಳು 2004 ರ ಹಾಗೂ ಸರಕಾರದ ಅಧಿಸೂಚನೆ ಅನ್ವಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 01-06-2021 ಬೆಳಗ್ಗೆ 10 ಗಂಟೆಯಿಂದ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2021 ಸಂಜೆ 5.00 ಗಂಟೆಯವರೆಗೆ

    ಹುದ್ದೆ : ಆಂಗ್ಲ ವಾದ್ಯವೃಂದದ ವಾದ್ಯಗಾರರ ಹುದ್ದೆ

    ಹುದ್ದೆಗಳ ಸಂಖ್ಯೆ :17
    ಹುದ್ದೆ ಸ್ಥಳ : ಕರ್ನಾಟಕ
    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 23,500/- ರಿಂದ ರೂ.47, 650/- ವೇತನ ನಿಗದಿಪಡಿಸಲಾಗಿದೆ.

    ವಯೋಮಿತಿ: ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಹಾಗೂ 30 ವರ್ಷಗಳನ್ನು ಮೀರಿರಬಾರದು.

    ಅರ್ಜಿ ಶುಲ್ಕ : ಸಾಮಾನ್ಯ ವರ್ಗ, 2( ಎ), 2 ( ಬಿ) , 3 ( ಎ) , 3 ( ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.250/-, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ,ಪ್ರವರ್ಗ -1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/-

    ಅರ್ಜಿಗಳನ್ನು ಕಮಾಂಡೆಂಟ್ , ಕೆ.ಆರ್.ಪಿ ಮೌಂಟೆಡ್ ಕಂಪನಿ, ಲಲಿತಮಹಲ್ ರಸ್ತೆ, ಮೈಸೂರು – 570011 ರವರ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕೊನೆಯ ದಿನಾಂಕದೊಳಗೆ ಕಚೇರಿಗೆ ತಲುಪುವಂತೆ ತಲುಪಿಸುವುದು.

    ನಿಗದಿತ ಶುಲ್ಕಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಅಧಿಕೃತ ಶಾಖೆಯಿಂದ ಡಿಡಿಯನ್ನು ” ಕಮಾಂಡೆಂಟ್, ಕೆಎಆರ್ ಪಿ, ಮೌಂಟೆಡ್ ಕಂಪನಿ, ಮೈಸೂರು ರವರ ಹೆಸರಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸುವುದು.

    ನಿಗದಿತ ಮಾಹಿತಿ/ ಸೂಚನೆಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ www.ksp.gov.in ನಲ್ಲಿ ಪ್ರಕಟಿಸಲಾಗಿದೆ.

    ಅರ್ಜಿ ನಮೂನೆಯನ್ನು ಅಭ್ಯರ್ಥಿಗಳು ತಮ್ನ ವೈಯಕ್ತಿಕ ಖರ್ಚಿನಲ್ಲಿ ಬೆರಳಚ್ಚು ಮಾಡಿಸಿ, ಇತ್ತೀಚಿನ ಪಾಸ್ ಪೋರ್ಟ್ ಅಳತೆತ ಬಣ್ಣದ ಭಾವಚಿತ್ರ ಹಾಗೂ ಸಹಿಯೊಂದಿಗೆ ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಸಮರ್ಪಕವಾಗಿ ಭರ್ತಿ ಮಾಡಿ ಕೆ.ಎ. ಆರ್.ಪಿ ಮೌಂಟೆಡ್ ಕಂಪನಿ ಮೈಸೂರು ಇವರಿಗೆ ಸಲ್ಲಿಸುವುದು.

    ನೋಟಿಫಿಕೇಶನ್

  • ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಲಬುರಗಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಲಬುರಗಿ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-07-2021

    ಹುದ್ದೆ : ಗ್ರೂಪ್ ಡಿ ದಲಾಯತರ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಹತೆ ; ಮಾಜಿ ಸೈನಿಕರಾಗಿರಬೇಕು.10 ನೇ ತರಗತಿ ಪಾಸಾಗಿರಬೇಕು. 18 ರಿಂದ 52 ವರ್ಷಗಳ ಒಳಗೆ ಇರಬೇಕು.

    ಅರ್ಜಿ ನಮೂನೆಯನ್ನು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಚೇರಿಯಿಂದ ಜೂನ್ 15 ರಿಂದ 30 ರೊಳಗೆ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯನ್ನು ಉಪ‌ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಿನಿವಿಧಾನಸೌಧ, ಕಲಬುರಗಿ ಇಲ್ಲಿಗೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ 08472225003 ಗೆ ಸಂಪರ್ಕಿಸಬಹುದು.

  • ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗಕ್ಕಾಗಿ ಸಾಲಸೌಲಭ್ಯ ಹಾಗೂ ಸಹಾಯ ಧನ

    ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೊರೊನಾ ಸೋಂಕಿನಿಂದ ಮರಣ ಹೊಂದಿರುವ ಪರಿಶಿಷ್ಟ ಜಾತಿಯ ಕುಟುಂಬದ ಅವಲಂಬಿತರಿಗೆ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಹಾಗೂ ಸಾಲಸೌಲಭ್ಯ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಈ ಸಹಾಯಧನ ಸಾಲಸೌಲಭ್ಯ ಪಡೆಯಲು ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 60 ವರ್ಷ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳಿಗೆ ಸಹಾಯಧನ ರೂ.1.00 ಲಕ್ಷ, ಎನ್ ಎಸ್ ಎಫ್ ಡಿಸಿ ಅವಧಿ ಸಾಲ ರೂ. 4 ಲಕ್ಷ ಸೇರಿ ಒಟ್ಟು ರೂ.5.00 ಲಕ್ಷಗಳನ್ನು ನೀಡಲಾಗುತ್ತದೆ.

    ಕೋವಿಡ್ ನಿಂದ ಮರಣ ಹೊಂದಿರುವ ಪರಿಶಿಷ್ಟ ಜಾತಿಯ ಕುಟುಂಬದ ಅವಲಂಬಿತರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( ಆದಾಯ ಗರಿಷ್ಠ 3.00 ಲಕ್ಷ ಒಳಗಿರಬೇಕು) ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್, ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಕೋವಿಡ್ ನಿಂದ ಮರಣ ಹೊಂದಿದ ದೃಢೀಕರಣ ಪತ್ರ, ಮೂರು ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021

    ಅರ್ಜಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಹಾವೇರಿ ಜಿಲ್ಲಾ ಕಚೇರಿ ಇಲ್ಲಿ ಸಂಪರ್ಕಿಸಲು ಸೂಚಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08375-249012 ಸಂಪರ್ಕಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಪಶು ವೈದ್ಯಕೀಯ ಇಲಾಖೆಯಲ್ಲಿ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ 2020 ನೇ ಸಾಲಿನ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಪಶುವೈದ್ಯಕೀಯ ಪರೀಕ್ಷಕರು -32
    ಪಶುವೈದ್ಯಕೀಯ ಸಹಾಯಕರು (ಗ್ರೂಪ್ ಸಿ) – 83

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 16-06-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-08-2021
    ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 16-08-2021

    ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.520/-, ಎಸ್ ಸಿ, ಎಸ್ ಟಿ ಪ್ರವರ್ಗ – 1 ರ ಅಭ್ಯರ್ಥಿಗಳಿಗೆ ರೂ.270/-. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಪಾವತಿಸಬೇಕು.

    ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 38 ವರ್ಷ, ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ 40 ವರ್ಷ

    ಪ್ರಾಣಿ ಶಾಸ್ತ್ರವನ್ನು ಮುಖ್ಯ ವಿಷಯವಾಗಿ ಹೊಂದಿರುವ ಪದವಿಯ ಅಂಕಗಳ ಮೇಲೆ ಹಾಗೂ ರೋಸ್ಟರ್ ವಿಧಾನವನ್ನು ಅನುಸರಿಸಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು.
    ಪಶುವೈದ್ಯಕೀಯ ಸಹಾಯಕರ ಹುದ್ದೆಗೆ ಕಾನೂನಿನ ಮೂಲಕ ಸ್ಥಾಪಿಸಲಾದ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ಅಥವಾ ಪಶು ಆರೋಗ್ಯ ಡಿಪ್ಲೋಮಾ ಪರೀಕ್ಷೆ ಪಾಸ್ ಮಾಡಿರಬೇಕು.

    ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಹಾಗೂ ರೋಸ್ಟರ್ ವಿಧಾನವನ್ನು ಅನುಸರಿಸಿ ಆಯ್ಕೆಪಟ್ಟಿಯನ್ನು ಮಾಡಲಾಗುತ್ತದೆ.

    ಭರ್ತಿ ಮಾಡಿದ ಅರ್ಜಿಯನ್ನು ಆನ್ಲೈನ್ ಮುಖಾಂತರ ಆಗಸ್ಟ್ 16, 2021ರ ಸಂಜೆ 5-30 ರೊಳಗೆ ಸಲ್ಲಿಸಬೇಕು.

    ಅರ್ಜಿ ಶುಲ್ಕವನ್ನು ಕರ್ನಾಟಕ ರಾಜ್ಯದ ಯಾವುದೇ ಅಂಚೆ ಕಚೇರಿಗಳಲ್ಲಿ ಆನ್ಲೈನ್ ಗೇಟ್ ವೇ ಮುಖಾಂತರ ಪಾವತಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ