Author: Mallika

  • BMRCL : ಸೀನಿಯರ್ ಅರ್ಬನ್ ಪ್ಲಾನರ್ ಹುದ್ದೆ

    ಬಿಎಂಆರ್ ಸಿಎಲ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹತೆ ಹೊಂದಿದ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

    ಹುದ್ದೆ: ಸೀನಿಯರ್ ಅರ್ಬನ್ ಪ್ಲಾನರ್ ( ಕನ್ಸಲ್ಟೆಂಟ್) – 01 ಹುದ್ದೆ

    ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : 15-07-2021 ರಂದು ಸಂಜೆ 5.00 ಗಂಟೆಗೆ.

    ದಾಖಲೆ ಪತ್ರಗಳೊಡನೆ ಸಹು ಮಾಡಿದ ಮುದ್ರಿತ ಅರ್ಜಿ ಸ್ವೀಕರಿಸಲು ಕಡೆಯ ದಿನಾಂಕ: 18-07-2021

    ವಿದ್ಯಾರ್ಹತೆ : ಬ್ಯಾಚುಲರ್ ಡಿಗ್ರಿ ಇನ್ ಪ್ಲ್ಯಾನಿಂಗ್/ ಆರ್ಕಿಟೆಕ್ಚರ್/ಸಿವಿಲ್ ಇಂಜಿನಿಯರಿಂಗ್/ಜಿಯೋಗ್ರಫಿ+ ಮಾಸ್ಟರ್ಸ್ ಡಿಗ್ರಿ ಇನ್ ಅರ್ಬನ್ ಪ್ಲಾನಿಂಗ್/ಡಿಸೈನ್ ಮಾಡಿರಬೇಕು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.75,000/- ರಿಂದ ರೂ.1,00,000/- ರವರೆಗೆ ವೇತನವಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ವಿತ್ತೀಯ ಕಾರ್ಯನೀತಿ ಸಂಸ್ಥೆ ( ವಿಕಾಸಂ) : ವಿವಿಧ ಹುದ್ದೆ

    ಯುನಿಸೆಫ್ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಸರಕಾರದ ಮಕ್ಕಳ ಆಯವ್ಯಯ ಮತ್ತು ಸಂಶೋಧನೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆ ವಿವರ ಈ ಕೆಳಗಿನಂತಿವೆ:

    ಹುದ್ದೆ : ಸಂಶೋಧನಾ ಅಧಿಕಾರಿಗಳು ಮತ್ತು ಆಡಳಿತ ಸಮನ್ವಯ ಅಧಿಕಾರಿಗಳ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಗುತ್ತಿಗೆ ಆಧಾರದಲ್ಲಿ ಆರು ತಿಂಗಳ ಅವಧಿಗಾಗಿ, ಅರ್ಹ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಪೂರ್ಣಗೊಳಿಸಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 15-07-2021

    ಸಂಶೋಧನಾ ಅಧಿಕಾರಿ : 4 ಹುದ್ದೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಸ್ಟರ್ಸ್ ಡಿಗ್ರಿಯನ್ನು ಎಕಾನಮಿಕ್ಸ್/ಎಕನಾಮಿಟ್ರಿಕ್ಸ್/ಸ್ಟಟಿಸ್ಟಿಕ್ಸ್/ಪಬ್ಲಿಕ್ ಪಾಲಿಸಿಯನ್ನು‌ ಶೇ.55 ಅಂಕಗಳೊಂದಿಗೆ ತೇರ್ಗಡೆಹೊಂದಿರಬೇಕು.‌ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.50,000/- ವೇತನವಿರುತ್ತದೆ.

    ಆಡಳಿತ ಸಮನ್ವಯ ಅಧಿಕಾರಿ :1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.45,000/- ವೇತನವಿರುತ್ತದೆ.ಅಭ್ಯರ್ಥಿಗಳು ಮಾಸ್ಟರ್ಸ್ ಡಿಗ್ರಿಯನ್ನು ಯಾವುದೇ ಅಂಗೀಕೃತ ಯುನಿವರ್ಸಿಟಿಯಿಂದ ಪಡೆದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಆಂಗ್ಲ ಮತ್ತು ಕರ್ನಾಟಕ ವಾದ್ಯಗಾರರ ಹುದ್ದೆ : ಅರ್ಜಿ ಅವಧಿ ವಿಸ್ತರಣೆ

    ಕೆ.ಎ.ಆರ್.ಪಿ.ಮೌಂಟೆಡ್ ಕಂಪನಿ, ಲಲಿತಮಹಲ್ ರಸ್ತೆ, ಮೈಸೂರು ಇಲ್ಲಿ ಖಾಲಿಯಿರುವ ಆಂಗ್ಲ ಮತ್ತು ಕರ್ನಾಟಕ ವಾದ್ಯಗಾರರ ಹುದ್ದೆಗಳನ್ನು ಭರ್ತಿ ಮಾಡಲು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿ, ದಿನಾಂಕ 01-06-2021 ರಿಂದ 25-06-2021 ರವರೆಗೆ ಮಾರಾಟ ಮತ್ತು ಸ್ವೀಕೃತಿಗಾಗಿ ಅವಧಿ ನಿಗಧಿಪಡಿಸಲಾಗಿತ್ತು. ಆಡಳಿತಾತ್ಮಕ ಕಾರಣದಿಂದ ದಿನಾಂಕ: 15-07-2021 ರವರೆಗೆ ಅರ್ಜಿ ಸ್ವೀಕೃತಿಗಾಗಿ ಅವಧಿ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಹಾಗೂ ಮಾಹಿತಿ/ ಸೂಚನೆಯನ್ನು ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ www.ksp.gov.in ನಲ್ಲಿ ಪಡೆದುಕೊಳ್ಳಬಹುದಾಗಿದೆ.

  • ಸರ್ಕಾರಿ ವೈಮಾನಿಕ ತರಬೇತಿ ಶಾಲೆ ( GFTS) : ವಿವಿಧ ಹುದ್ದೆ

    ಸರಕಾರಿ ವೈಮಾನಿಕ ತರಬೇತಿ ಶಾಲೆ ಇಲ್ಲಿ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಸಹಾಯಕ ವಿಮಾನ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳ ಆಹ್ವಾನಿಸಿದೆ.

    ಅರ್ಹತೆ : ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ ರವರ ಸಿವಿಲ್ ಏವಿಯೇಷನ್‌ ನಿಯಮ ( CAR) ವಿಭಾಗ 7 ರ ಸರಣಿ ಡಿ ವಿಭಾಗ 1 ರಲ್ಲಿನ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು.

    ಒಟ್ಟು ಹುದ್ದೆ : 2

    ವಯೋಮಿತಿ : 50 ವರ್ಷಗಳು( ದಿನಾಂಕ : 25-06-2021 ರಂತೆ)

    ಅರ್ಜಿದಾರರು ಇ- ಮೇಲ್ ಅಥವಾ ಅಂಚೆ ಮೂಲಕ ಅರ್ಜಿಗಳನ್ನು ದಿನಾಂಕ 11-07-2021 ರೊಳಗೆ ನಿರ್ದೇಶಕರು, ಸರಕಾರಿ ವೈಮಾನಿಕ ‌ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ, ಯಲಹಂಕ ಅಂಚೆ, ಬೆಂಗಳೂರು – 560064 ಇವರಿಗೆ ಕಳುಹಿಸಬೇಕು.

    ಗುತ್ತಿಗೆ ಅವಧಿ : 2 ವರ್ಷಗಳು

    ವೇತನ : ರೂ.82,000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಇ-ಮೇಲ್ ವಿಳಾಸ : [email protected]

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ www.getgnaa.com ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆಯಬಹುದಾಗಿದೆ.

  • ಗದಗ ವೈಜ್ಞಾನಿಕ ವಿಜ್ಞಾನಗಳ ಸಂಸ್ಥೆ : ಬಯೋ ಮೆಡಿಕಲ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

    ಗದಗ ವೈಜ್ಞಾನಿಕ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿನ ವಿವಿಧ ವೈದ್ಯಕೀಯ ಉಪಕರಣ ಹಾಗೂ ಯಂತ್ರೋಪಕರಣಗಳ‌ ನಿರ್ವಹಣೆ ಗಾಗಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ: ಬಯೋ ಮೆಡಿಕಲ್ ಇಂಜಿನಿಯರ್ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವುದಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಯ ವಿವರ: ಬಯೋ ಮೆಡಿಕಲ್ ಇಂಜಿನಿಯರ್ ( ಜೀವ ವೈದ್ಯಕೀಯ ಅಭಿಯಂತರರು)

    ವಿದ್ಯಾರ್ಹತೆ: ಬಯೋ ಮೆಡಿಕಲ್ ಇಂಜಿನಿಯರಿಂಗ್/ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

    ಹುದ್ದೆಗಳ ಸಂಖ್ಯೆ : 01

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,800/- ವೇತನವಿರುತ್ತದೆ.

    ವಯೋಮಿತಿ : ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.

    ಸಂದರ್ಶನದ ದಿನಾಂಕ : 08-07-2021 ರಂದು ಬೆಳಿಗ್ಗೆ 11.00 ಗಂಟೆಗೆ ನೇರ ನೇಮಕಾತಿ ಸಂದರ್ಶನ ಕರೆಯಲಾಗಿದ್ದು, ಅರ್ಹ ಇಚ್ಛೆಯುಳ್ಳ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಂಸ್ಥೆಯ ವೆಬ್‌ಸೈಟ್‌ www.karnataka.gov.in/gimsgadag ನಲ್ಲಿ ಲಭ್ಯವಿರುವ ಅರ್ಜಿಯೊಂದಿಗೆ ನೇರ ನೇಮಕಾತಿ ಸಂದರ್ಶನಕ್ಕೆ ಹಾಜರಾಗಬಹುದು.

  • 3533 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ( ನಾಗರಿಕ ) ( ಪುರುಷ ಮತ್ತು ಮಹಿಳಾ) ( ಮಿಕ್ಕುಳಿದ ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ( ಸ್ಥಳೀಯ ) ಹುದ್ದೆಗಳನ್ನು ಒಳಗೊಂಡಂತೆ 3533 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಅವಧಿ ಜು.12 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://recruitment.ksp.gov.in ನ್ನು ಸಂಪರ್ಕಿಸಬಹುದು. ಆಸಕ್ತರು ಜೂ.25 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಇದೀಗ ಜು.12 ರವರೆಗೆ ವಿಸ್ತರಿಸಲಾಗಿದೆ ಎಂದು ಪೊಲೀಸ್ ನೇಮಕಾತಿ ವಿಭಾಗದ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಮೃತ್ ಪಾಲ್ ತಿಳಿಸಿದ್ದಾರೆ.