Author: Mallika

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಹುದ್ದೆ

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆಯ ಹೆಸರು : ಕಾನೂನು ಅಧಿಕಾರಿ : ಹುದ್ದೆಯ ಸಂಖ್ಯೆ : 03 : ಅರ್ಹತೆ : ಕರ್ನಾಟಕ ನ್ಯಾಯಾಂಗ ಸೇವೆಯಲ್ಲಿ ಕಾರ್ಯನಿರ್ವಹಿಸಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶರು. ಅಥವಾ 2. ಕಾನೂನು ಇಲಾಖೆ ಅಥವಾ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವ ಸರಕಾರದ ಹೆಚ್ಚುವರಿ ಕಾರ್ಯದರ್ಶಿಗಳ ದರ್ಜೆಗಿಂತ ಕಡಿಮೆಯಿಲ್ಲದ ನಿವೃತ್ತ ಅಧಿಕಾರಿಗಳು. ನಿವೃತ್ತಿ ಹೊಂದಿದ ದಿನಾಂಕದಿಂದ ಐದು ವರ್ಷಗಳು ಮೀರಿರಬಾರದು. ವೇತನ : ಮಾಹೆಯಾನ ರೂ.1,00,000/- ಇತರೆ ಸೌಲಭ್ಯಗಳು : ಕಚೇರಿಯ ಕೆಲಸಕ್ಕಾಗಿ ಸಹಾಯಕ ಸಿಬ್ಬಂದಿಗಳು, ಕಾರು ಮತ್ತು ಚಾಲಕರನ್ನು ಒದಗಿಸಲಾಗುವುದು.

    ನೋಡಲ್ ಅಧಿಕಾರಿಗಳು‌: ಹುದ್ದೆಯ ಸಂಖ್ಯೆ : 07: ಅರ್ಹತೆ : ಕಾನೂನು ಪದವಿಯನ್ನು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿರುವ ಕಾನೂನು ಪದವೀಧರರು/ ಸ್ನಾತಕೋತ್ತರ ಪದವೀಧರರು / ವಕೀಲರು. ಕನಿಷ್ಠ 03 ವರ್ಷ ಅನುಭವ ಹೊಂದಿರಬೇಕು. ವಯಸ್ಸು : ಅರ್ಜಿ ಸಲ್ಲಿಸುವ ದಿನಾಂಕಕ್ಕೆ 45 ವರ್ಷಗಳು ಮೀರಿರಬಾರದು. ವೇತನ : ಮಾಹೆಯಾನ ರೂ.45,000 + 5000 ( ಸಂಭಾವನೆ ಮತ್ತು ದೂರವಾಣಿ ಶುಲ್ಕ + ಭತ್ಯೆ ಸೇರಿ)

    ಮೇಲ್ಕಂಡ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 12-07-2021

  • ಗಡಿ ಭದ್ರತಾ ಪಡೆಯಲ್ಲಿ ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ ಓದಿರುವವರಿಗೆ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ

    ಬಿಎಸ್ ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ನಲ್ಲಿ ವಿವಿಧ ಹುದ್ದೆಗಳಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆ : 65 ಅಸಿಸ್ಟೆಂಟ್ ಏರ್ ಕ್ರಾಫ್ಟ್ ಮೆಕ್ಯಾನಿಕ್, ಅಸಿಸ್ಟೆಂಟ್ ರೇಡಿಯೋ ಮೆಕ್ಯಾನಿಕ್ ಮತ್ತು ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಜುಲೈ 26 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ : 10 ನೇ ತರಗತಿ, ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

    ವಯೋಮಿತಿ : ಕನಿಷ್ಠ 20 ರಿಂದ 28 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.21,700/- ರಿಂದ ರೂ.92,300/- ಗಳವರೆಗೆ ವೇತನವನ್ನು ನೀಡಲಾಗುತ್ತದೆ.

    ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

    ವಿದ್ಯಾರ್ಹತೆ : 10 ನೇ ತರಗತಿ, ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅಭ್ಯರ್ಥಿಗಳು ರೂ.100/- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಇತರೆ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

  • KARTET -2021: ಆನ್ಲೈನ್ ಅರ್ಜಿ ಸಲ್ಲಿಕೆ ದಿನಾಂಕ ಪ್ರಕಟ

    2021 ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ದಿನಾಂಕ 22.08.2021 ರಂದು ರಾಜ್ಯಾದ್ಯಂತ ನಡೆಯಲಿರುವುದರಿಂದ, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 01-07-2021 ರಿಂದ 20-07-2021 ರವರೆಗೆ ಆಹ್ವಾನಿಸಲಾಗಿದೆ.

    ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ www.schooleducation.kar.nic.in ನಲ್ಲಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

    ಅಭ್ಯರ್ಥಿಗಳು ಅಧಿಸೂಚನೆ ಮತ್ತು ನೀಡಲಾದ ಸೂಚನೆಗಳನ್ನು ತಪ್ಪದೇ ಓದಿ ಅರ್ಥೈಸಿಕೊಂಡು ಅರ್ಜಿಯನ್ನು ಕ್ರಮಬದ್ಧವಾಗಿ ಭರ್ತಿ ಮಾಡಿ ಸಲ್ಲಿಸುವುದು.

  • ಕಲಬುರಗಿ 331 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

    ಕಲಬುರಗಿ ಜಿಲ್ಲೆಯ ಮಹಿಳಾ‌ ಮಕ್ಕಖ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 09 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 51+4=55 ಅಂಗನವಾಡಿ ಕಾರ್ಯಕರ್ತೆ ಮತ್ತು 276 ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭಿಕ ದಿನಾಂಕ: 01-07-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-07-2021

    ವಯೋಮಿತಿ : 18 ರಿಂದ 35 ವಯೋಮಿತಿಯೊಳಗಿನ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 4 ನೇ ತರಗತಿ ತೇರ್ಗಡೆಯಾಗಿದ್ದು ಹಾಗೂ 9 ನೇ ತರಗತಿ ತೇರ್ಗಡೆಯಾಗಿರಬೇಕು.

    ಅಭ್ಯರ್ಥಿಗಳು ಎಲ್ಲಾ ದಾಖಲೆಗಳೊಂದಿಗೆ ಸಂಬಂಧಿಸಿದ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 31-07-2021 ರ ಅಪರಾಹ್ನ 5.30 ಗಂಟೆಯೊಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

  • ದಿ.ರಾಜಾಜಿನಗರ ಕೋಅಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ದಿ.ರಾಜಾಜಿನಗರ ಕೋಅಪರೇಟಿವ್ ಬ್ಯಾಂಕ್ ಲಿಮಿಟೆಡ್ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14/07/2021 ರ ತನಕ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಸಹಾಯಕ ವ್ಯವಸ್ಥಾಪಕರು/ ಲೆಕ್ಕಿಗರು – 2 ಹುದ್ದೆ
    ಸಹಾಯಕ ಲೆಕ್ಕಾಧಿಕಾರಿ/ಆಂತರಿಕ ಲೆಕ್ಕಾಧಿಕಾರಿ/ಕ್ಷೇತ್ರಾಧಿಕಾರಿ/ಮೇಲ್ವಿಚಾರಕರು/ಮುಖ್ಯ ನಗದು ಅಧಿಕಾರಿ – 5 ಹುದ್ದೆಗಳು
    ಕಿರಿಯ ಸಹಾಯಕ – 2 ಹುದ್ದೆಗಳು
    ಭದ್ರತಾ ರಕ್ಷಕ/ವಾಹನ ಚಾಲಕರು – 4 ಹುದ್ದೆಗಳು

    ವಿದ್ಯಾರ್ಹತೆ : ಎಂ.ಸಿ.ಎ/ ಜೆ.ಡಿ.ಸಿ ಸಹಕಾರ ಬ್ಯಾಂಕ್ ಗಳಿಗೆ ಸಂಬಂಧಪಟ್ಟಂತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು, ಇತರೆ ಸಹಕಾರಿ ಬ್ಯಾಂಕ್ ಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇರುವವರು, ಕನ್ನಡ ಓದಲು, ಬರೆಯಲು, ಬೆರಳಚ್ಚು ಮಾಡಲು ಬರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    ಮುಚ್ಚಿದ ಲಕೋಟೆಯಲ್ಲಿ ಯಾವ ಹುದ್ದೆಗೆ ಎಂದು ಬರೆದು ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ವೈಯಕ್ತಿಕ‌ ವಿವರ, ಇತ್ತೀಚಿನ ಭಾವಚಿತ್ರ, ಇತರೆ ದಾಖಲೆಗಳ ಜೊತೆಗೆ ದಿನಾಂಕ 14/07/2021 ರ ಒಳಗೆ ಸಲ್ಲಿಸಬೇಕು.

    ಅರ್ಜಿ ಸಲ್ಲಿಸುವ ವಿಳಾಸ : ಪ್ರಧಾನ ವ್ಯವಸ್ಥಾಪಕರು, ಅಂಚೆಪೆಟ್ಟಿಗೆ 1036, ದಿ.ರಾಜಾಜಿನಗರ ಕೋ ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ರಾಜಾಜಿನಗರ ಪೋಸ್ಟ್ ಆಫೀಸ್, ರಾಜಾಜಿನಗರ, ಬೆಂಗಳೂರು – 560010

  • 1242 ಸಹಾಯಕ ಪ್ರಾಧ್ಯಾಪಕ ಮತ್ತು 310 ಪ್ರಾಂಶುಪಾಲ ಹುದ್ದೆಗಳ ನೇಮಕಕ್ಕೆ ಸರಕಾರ ಆದೇಶ

    ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರ ಹುದ್ದೆಗಳಿಗೆ ರಾಜ್ಯ ಸರಕಾರವು ನೇರ ನೇಮಕಾತಿ ಮಾಡಲು ಸೂಚನೆ ನೀಡಿದೆ. ಈ ಬಗ್ಗೆ ಸರಕಾರದ ಅಪರ ಕಾರ್ಯದರ್ಶಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದು, ವಿವಿಧ ವಿಶ್ವವಿದ್ಯಾಲಯಗಳು ಹೊರಡಿಸಿರುವ ಸುತ್ತೋಲೆಗಳಲ್ಲಿ, 2021-22 ಶೈಕ್ಷಣಿಕ ವರ್ಷ ಬರುವ ಆಗಸ್ಟ್ ನಿಂದ ನವೆಂಬರ್ ಒಳಗಾಗಿ ಪ್ರಾರಂಭಿಸುವುದಾಗಿ ತಿಳಿಸಿದರು.

    ಆನ್ಲೈನ್ ತರಗತಿಗಳು ಅನುದಾನಿತ ಪದವಿ ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆರಂಭವಾಗಿದ್ದು, ಸರಕಾರದ ಅನುಮತಿ ಮೇರೆಗೆ, ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಆದೇಶ ನೀಡುವಂತೆ ಸೂಚಿಸಿದೆ.

    ರಾಜ್ಯದ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರು ಮತ್ತು 310 ಪ್ರಾಂಶುಪಾಲರ ಹುದ್ದೆಗಳನ್ನು ನೇಮಕಾತಿ ಮಾಡಲು ಸರಕಾರ ಅನುಮತಿಯನ್ನು ನೀಡಿದೆ.