Author: Mallika

  • ಜಿಲ್ಲಾ ಆರೋಗ್ಯ ಮತ್ತು ಕು.ಕ.ಕಚೇರಿ ಉಡುಪಿ : ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ

    2021-22 ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಈ ಕೆಳಗೆ ಖಾಲಿಯಿರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

    ಹುದ್ದೆ : ಪಂಚಕರ್ಮ ತಜ್ಞ ವೈದ್ಯರು ( ಜಿಲ್ಲಾ ಆಸ್ಪತ್ರೆ ಉಡುಪಿ) : ಈ ಹುದ್ದೆಗೆ ಎಂಡಿ ಪಂಚಕರ್ಮ ಹೊಂದಿರಬೇಕು. 1 ಹುದ್ದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.20,790/- ವೇತನ ನಿಗದಿಪಡಿಸಲಾಗಿದೆ.

    ಆಡಿಯೋಲಾಜಿಸ್ಟ್ ( ಜಿಲ್ಲಾ ಆಸ್ಪತ್ರೆ ಉಡುಪಿ) : 1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನ ನಿಗದಿಪಡಿಸಲಾಗಿದೆ.

    ಇನ್ಸ್ಟ್ರಕ್ಟರ್ : 1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15,000/- ವೇತನ ನಿಗದಿಪಡಿಸಲಾಗಿದೆ.

    ಡೆಂಟಲ್ ಹೈಜಿನಿಸ್ಟ್ : ( ಜಿಲ್ಲಾ ಆಸ್ಪತ್ರೆ ಉಡುಪಿ ): 1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15,000/- ವೇತನ ನಿಗದಿಪಡಿಸಲಾಗಿದೆ.

    LHV ( ನಗರ ಆರೋಗ್ಯ ಕೇಂದ್ರ ಉಡುಪಿ) : 1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.12,600/- ವೇತನ ನಿಗದಿಪಡಿಸಲಾಗಿದೆ.

    ಸ್ಟಾಫ್ ನರ್ಸ್ : ( ಸಾರ್ವಜನಿಕ ಆಸ್ಪತ್ರೆ ಕುಂದಾಪುರ ( ಎಸ್.ಎನ್.ಸಿ.ಯು) : 1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.13,225/- ವೇತನ ನಿಗದಿಪಡಿಸಲಾಗಿದೆ.

    ಸ್ಟಾಫ್ ನರ್ಸ್ : ( ಸಾರ್ವಜನಿಕ ಆಸ್ಪತ್ರೆ, ಕಾರ್ಕಳ ) 1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.13,225/- ವೇತನ ನಿಗದಿಪಡಿಸಲಾಗಿದೆ.

    ANM ( ನಗರ ಆರೋಗ್ಯ ಕೇಂದ್ರ ಉಡುಪಿ ) 1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.11,500/- ವೇತನ ನಿಗದಿಪಡಿಸಲಾಗಿದೆ.

    ANM : ( ಗ್ರಾಮೀಣ ಪ್ರದೇಶದ ಆರೋಗ್ಯ ಸಂಸ್ಥೆ ) 3 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.11,500/- ವೇತನ ನಿಗದಿಪಡಿಸಲಾಗಿದೆ.

    ಕಿರಿಯ ಪುರುಷ ಆರೋಗ್ಯ ಸಹಾಯಕ : 1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.11,500/- ವೇತನ ನಿಗದಿಪಡಿಸಲಾಗಿದೆ.

    ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸುವುದು.
    ಅರ್ಹ ಅಭ್ಯರ್ಥಿಗಳಿಂದ ದಿನಾಂಕ 08-07-2021 ರಂದು 10.30 am ನಿಂದ 01:30 ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕು.ಕ.ಕಚೇರಿ ಉಡುಪಿ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

  • ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ನೇಮಕ, ಜುಲೈ 30ರಂದು ಸಂದರ್ಶನ

    ಕಾರ್ಮಿಕರ ರಾಜ್ಯ ವಿಮಾ ನಿಗಮ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಕ್ಕೆ ಆಹ್ವಾನಿಸಿದೆ.

    ಹುದ್ದೆ : ಪಾರ್ಟ್ ಟೈಂ ಮೆಡಿಕಲ್ ರೆಫರೀ ( part time medical referee) ಹುದ್ದೆಯನ್ನು ತಾತ್ಕಾಲಿಕ ನೆಲೆಯಲ್ಲಿ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸ್ಥಳ : ಮಲ್ಲೇಶ್ವರಂ( ಬೆಂಗಳೂರು), ಬೊಮ್ಮಸಂದ್ರ, ಶಿವಮೊಗ್ಗ/ಭದ್ರಾವತಿ, ಗುಲ್ಬರ್ಗ, ಮಂಗಳೂರು, ಬೆಳಗಾವಿ, ತುಮಕೂರು, ಬಿಜಾಪುರ, ಮೈಸೂರು ಮತ್ತು ನಂಜನಗೂಡು, ಶಹಬಾದ್, ಕಾರವಾರ, ಹುಬ್ಬಳ್ಳಿ, ತೋರಂಗಲ್ಲು, ಹಾಸನ.( ತಲಾ ಒಂದು ಹುದ್ದೆ ಎಲ್ಲಾ ಕಡೆ)

    ನೇರ ಸಂದರ್ಶನ ನಡೆಯುವ ದಿನಾಂಕ : 30-07-2021( ಇಂಟರ್ವ್ಯೂ ಗೆ ರಿಜಿಸ್ಟರ್ ಮಾಡಲು ಸಮಯ 10:00 am to 11:00 am)

    ಸಂದರ್ಶನ ನಡೆಯುವ ಸ್ಥಳ : 1&2. Region Office, ESI. Corporation, Binnypet,Bangalore

    1. Branch Office, ESI Corporation, Shivamogga
    2. Sub Regional Office, ESI Corporation, Gulbarga
    3. Sub Regional Office, ESI Corporation, Mangalore
    4. Branch Office, ESI Corporation, Belagavi
    5. Branch Office, ESI Corporation, Tumkur
    6. Branch Office, ESI Corporation,Bijapur
    7. Sub Regional Office ESI Corporation, Mysore
    8. Branch Office, ESI Corporation, Shahabad
    9. Dispensary Cum Branch Office, ESI corporation, Karwar
    10. Sub regional office, ESI Corporation, Hubli
    11. Branch Office, ESI Corporation, Torangallu
    12. Branch Office, ESI Corporation, Hassan

    ವಿದ್ಯಾರ್ಹತೆ : ಎಂಬಿಬಿಎಸ್ ಡಿಗ್ರಿಯನ್ನು ಮೆಡಿಕಲ್ ಕೌನ್ಸಿಲ್ ನಿಂದ ಅಭ್ಯರ್ಥಿಗಳು ಪಡೆದುಕೊಂಡಿರಬೇಕು.

    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 64 ವರ್ಷ ಮೀರಿರಬಾರದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://www.esic.nic.in ಭೇಟಿ ನೀಡಬಹುದು.

  • MSIL ನಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

    ಕರ್ನಾಟಕ ಸರಕಾರದ ಉದ್ಯಮವಾದ ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್ ( ಎಂಎಸ್ ಐಎಲ್) ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಹುದ್ದೆ : ಟ್ಯಾಕ್ಸ್ ಕನ್ಸಲ್ಟೆಂಟ್ ರನ್ನು ನಿಯೋಜನೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

    ಟ್ಯಾಕ್ಸ್ ಅಕೌಂಟೆಂಟ್ ಅಥವಾ ಟ್ಯಾಕ್ಸ್ ಅನಾಲಿಸ್ಟ್ ಆಗಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರುವ ಮತ್ತು ಕೇಂದ್ರ ಮತ್ತು ರಾಜ್ಯ ತೆರಿಗೆ ಕಾನೂನುಗಳು, ನೇರ ಮತ್ತು ಪರೋಕ್ಷ ತೆರಿಗೆ ನಿಯಮಗಳು ಮತ್ತು ನಿಬಂಧನೆಗಳ ವಿಚಾರದಲ್ಲಿ ನಿಷ್ಣಾತರಾಗಿರುವ ಹಾಗೂ ವಿವಿಧ ತೆರಿಗೆಗೆ ಸಂಬಂಧಿಸಿದ ವಿಚಾರಗಳಲ್ಲಿ ಅನುಭವ ಹೊಂದಿರುವ, ಲೆಕ್ಕ ನಿರ್ವಹಣೆ ಮತ್ತು ಬುಕ್ ಕೀಪಿಂಗ್ ಕ್ರಮಾವಳಿಗಳ ಪರಿಜ್ಞಾನ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್ ರನ್ನು ಎಂಎಸ್ ಐಎಕ್ 1 ವರ್ಷ ಅವಧಿಯವರೆಗೆ ಗುತ್ತಿಗೆ ಆಧಾರದ ಮೇಲೆ ಟ್ಯಾಕ್ಸ್ ಕನ್ಸಲ್ಟೆಂಟ್ ಆಗಿ ನಿಯೋಜನೆ ಮಾಡಿಕೊಳ್ಳುವುದು.

    ವಿವರಗಳು ಮತ್ತು ಇತರೆ ನಿಯಮಗಳು ಮತ್ತು ನಿಬಂಧನೆಗಳನ್ನು ಇ- ಪ್ರೊಕ್ಯುರ್ಮೆಂಟ್ ಪೋರ್ಟಲ್ https://eproc.karnataka.gov.in ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ನಿಗದಿತ ದಿನಾಂಕ ಮತ್ತು ಸಮಯದ ಒಳಗೆ ಸಂಬಂಧಪಟ್ಟ ದಾಖಲೆಗಳನ್ನು‌ ಅಪ್ಲೋಡ್ ಮಾಡತಕ್ಕದ್ದು.

    ಅಪ್ಲೋಡ್ ಮಾಡುವ ಕಡೆಯ ದಿನಾಂಕ ಮತ್ತು ಸಮಯ : 28-07-2021 ( ಮಧ್ಯಾಹ್ನ 3 ಗಂಟೆಗೆ)
    ಅರ್ಜಿ ತೆರೆಯುವ ದಿನಾಂಕ 30-07-2021 ( ಸಂಜೆ 4 ಗಂಟೆಗೆ)

  • ಕರ್ನಾಟಕ ಮಾಹಿತಿ ಆಯೋಗ : ಬೆಂಗಳೂರು ಮತ್ತು ಕಲಬುರಗಿ ಪೀಠದಲ್ಲಿ ಹುದ್ದೆ

    ಕರ್ನಾಟಕ ಮಾಹಿತಿ ಆಯೋಗದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಮೂರು ಆಯುಕ್ತರ‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ( ಒಂದು ಹುದ್ದೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠಕ್ಕೆ ಹಾಗೂ ಎರಡು ಹುದ್ದೆಗಳು ಕರ್ನಾಟಕ ಮಾಹಿತಿ ಆಯೋಗ ಬೆಂಗಳೂರು ಇಲ್ಲಿಗೆ)

    ಕಾನೂನು, ವಿಜ್ಞಾನ, ತಂತ್ರಜ್ಞಾನ, ಸಮಾಜ ಸೇವೆ, ನಿರ್ವಹಣೆ ( ಮ್ಯಾನೇಜ್ಮೆಂಟ್), ಪತ್ರಿಕೋದ್ಯಮ, ಸಮೂಹ ‌ಮಾಧ್ಯಮ ಅಥವಾ ಆಡಳಿತ ( ಅಡ್ಮಿನಿಸ್ಟ್ರೇಶನ್ ಮತ್ತು ಗವರ್ನೆನ್ಸ್) ನಲ್ಲಿ ವಿಶಾಲ ತಿಳುವಳಿಕೆ ಮತ್ತು ಅನುಭವ ಹೊಂದಿರುವ ಹಾಗೂ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕಾತಿ ಮಾಡಲು ಅವಕಾಶವಿದೆ.

    ಮಾಹಿತಿ ಆಯುಕ್ತರಾಗಿ ನೇಮಕಾತಿ ಹೊಂದಲು ನಿಗದಿತ ಮಾನದಂಡಗಳನ್ನು ಪೂರೈಸಿರುವವರು ಮತ್ತು ನೇಮಕಗೊಳ್ಳಲು ಆಸಕ್ತರಾದವರು ತಮ್ಮ ವ್ಯಕ್ತಿಗತ ವಿವರಗಳನ್ನು ಈ ಅಧಿಸೂಚನೆಗೆ ಲಗತ್ತಿಸಿರುವ ನಮೂನೆಯಲ್ಲಿ ಅಂಚೆ ಮೂಲಕ ಅಥವಾ ಖುದ್ದಾಗಿ ಸರಕಾರದ ಅಧೀನ ಕಾರ್ಯದರ್ಶಿ-1, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ( ಜನಸ್ಪಂದನ), 3 ನೇ ಮಹಡಿ, ಪೋಡಿಯಂ ಬ್ಲಾಕ್ , ವಿಶ್ವೇಶ್ವರಯ್ಯ ‌ಗೋಪುರ, ಡಾ||ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು – 560001 ಇವರಿಗೆ ವಿಳಾಸಿಸಿ ದಿನಾಂಕ 04-08-2021 ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬಹುದಾಗಿದೆ. ಕೇಂದ್ರ/ ರಾಜ್ಯ ಸರಕಾರದಲ್ಲಿ ಅಥವಾ ಯಾವುದೇ ಇತರೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ವಿವರಗಳನ್ನು ಸಮುಚಿತ ಮಾರ್ಗದ ಮೂಲಕ ನಿಗದಿತ ನಮೂನೆಯಲ್ಲಿ ಸಲ್ಲಿಸಬಹುದಾಗಿದೆ.

  • ಮೈಸೂರು ಜಿಲ್ಲಾ ಪಂಚಾಯತಿನಲ್ಲಿ 14 ಹುದ್ದೆಗಳು: ವಿವರ ಇಲ್ಲಿದೆ

    ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿಯಿರುವ ಎಡಿಪಿಸಿ ಮತ್ತು ತಾಂತ್ರಿಕ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ NIC ಯ ಜಿಲ್ಲಾ ವೆಬ್‌ಸೈಟ್‌ ನಲ್ಲಿ ನಿಗದಿತ ನಮೂನೆಯು ಲಭ್ಯವಿದ್ದು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ವೆಬ್‌ಸೈಟ್‌ mysore.nic.in ಆಗಿರುತ್ತದೆ. ಸದರಿ ಹುದ್ದೆಗಳು ತಾತ್ಕಾಲಿಕವಾಗಿರುತ್ತದೆ.

    ಹುದ್ದೆ : ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ( ಎಡಿಪಿಸಿ ) 01ಹುದ್ದೆ: ಅಭ್ಯರ್ಥಿಗಳು ಈ ಹುದ್ದೆಗೆ ಬಿ.ಇ/ಬಿಟೆಕ್ ಅಥವಾ ಎಂಬಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು. ವಯೋಮಿತಿ ಗರಿಷ್ಠ 35 ವರ್ಷ. ಅಭ್ಯರ್ಥಿಗಳು ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 36 ತಿಂಗಳ ಅನುಭವ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.38,000/- ವೇತನವಿರುತ್ತದೆ.

    ತಾಂತ್ರಿಕ ಸಹಾಯಯ ಇಂಜಿನಿಯರ್ – 13 ಹುದ್ದೆಗಳು. ಇಂಜಿನಿಯರಿಂಗ್ ಪದವೀಧರರು (ಸಿವಿಲ್) ಗಣಕಯಂತ್ರ ಜ್ಞಾನ ಕಡ್ಡಾಯ. ಈ ಹುದ್ದೆಗೆ ಮಾಸಿಕ ರೂ.24,000/- ವೇತನವಿರುತ್ತದೆ. ವಯೋಮಿತಿ ಗರಿಷ್ಠ 35 ಹೊಂದಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 2,3 ವರ್ಷ ಅನುಭವ ಇರಬೇಕು. ಡಿಪ್ಲೋಮಾ ಇನ್ ಸಿವಿಲ್ ( ಗಣಕಯಂತ್ರ ಜ್ಞಾನ ಕಡ್ಡಾಯ) ಪಡೆದಿರಬೇಕು. ವಯೋಮಿತಿ ಗರಿಷ್ಠ 35 ಹೊಂದಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 2,3 ವರ್ಷ ಅನುಭವ ಇರಬೇಕು. ಈ ಹುದ್ದೆಗೆ ಮಾಸಿಕ ರೂ. 19,000/- ವೇತನವಿರುತ್ತದೆ.

    ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-07-2021
    ದಾಖಲಾತಿ ಪರಿಶೀಲನೆ: 13-07-2021

  • CSG : 50 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ( ಸಿಎಸ್ ಜಿ) ಮಾಹಿತಿ ತಂತ್ರಜ್ಞಾನ ( IT/ICT) ಕ್ಷೇತ್ರಕ್ತ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆಸ್ ಸಂಸ್ಥೆಯಲ್ಲಿ ಕೆಳಕಂಡ ಹುದ್ದೆಗಳಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಹೆಚ್.ಆರ್.ಮ್ಯಾನೇಜರ್ -01 ಹುದ್ದೆ
    ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ – 07 ಹುದ್ದೆಗಳು.
    ಸಾಫ್ಟ್‌ವೇರ್ ಇಂಜಿನಿಯರ್ – 42 ಹುದ್ದೆಗಳು

    ಆಸಕ್ತ ಅಭ್ಯರ್ಥಿಗಳು ತಮ್ಮ ಸಿವಿಗಳನ್ನು [email protected] ಗೆ ಕಳುಹಿಸಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಭ್ಯರ್ಥಿಗಳು 30-07-2021 ರೊಳಗೆ ಇ-ಮೇಲ್ ಮುಖಾಂತರ ಕಳುಹಿಸತಕ್ಕದ್ದು.

    ವಿದ್ಯಾರ್ಹತೆ ಮತ್ತು ಸೇವಾ ಅವಧಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ https://csg.karnataka.gov.in ಗೆ ಭೇಟಿ ನೀಡುವುದು.

    ಎಲ್ಲಾ ಹುದ್ದೆಗಳನ್ನು 03 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಮತ್ತು ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ಗುತ್ತಿಗೆ ಅವಧಿಯನ್ನು ಮುಂದುವರೆಸಬಹುದಾಗಿರುತ್ತದೆ.