Author: Mallika

  • ನಿರ್ಮಿತಿ ಕೇಂದ್ರ, ಚಾಮರಾಜನಗರ ಯೋಜನಾ ವ್ಯವಸ್ಥಾಪಕರ ಹುದ್ದೆ ನೇಮಕಾತಿ ರದ್ದು

    ನಿರ್ಮಿತಿ ಕೇಂದ್ರ, ಚಾಮರಾಜನಗರ ಇವರಿಂದ ದಿನಾಂಕ 31-03-2021 ರಂದು ಹೊರಡಿಸಲಾಗಿದ್ದ ಯೋಜನಾ ವ್ಯವಸ್ಥಾಪಕರ ಹುದ್ದೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಲಾಗಿತ್ತು‌.

    ದಿನಾಂಕ 31-03-2021 ನ್ನು ಕಾರಣಾಂತರಗಳಿಂದ ರದ್ದುಪಡಿಸಿದೆ. ಮುಂದಿನ ಸೂಕ್ತ ಸಮಯದಲ್ಲಿ ನೇಮಕಾತಿ ವಿಷಯದಲ್ಲಿ ಪ್ರಕಟಿಣೆ ಹೊರಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ ವಿವಿಧ ಹುದ್ದೆ, ಎಸ್ ಎಸ್ ಎಲ್ ಸಿ ಪಾಸಾದವರಿಗೂ ಆದ್ಯತೆ

    ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳಿ ಓದಿ ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 22, 2021

    ಹುದ್ದೆಗಳ ವಿವರ : ಅಧಿಕಾರಿ ಹುದ್ದೆಗಳು- 06 ಹುದ್ದೆಗಳು
    ಅಕೌಂಟೆಂಟ್ – 06 ಹುದ್ದೆಗಳು
    ಕಚೇರಿ ಸಹಾಯಕರು – 11 ಹುದ್ದೆಗಳು
    ಆಪ್ತ ಸಹಾಯಕರು – 05 ಹುದ್ದೆಗಳು
    ಡಾಟಾ ಎಂಟ್ರಿ ಅಪರೇಟರ್ – 10 ಹುದ್ದೆಗಳು
    ಟೆಲಿಫೋನ್ ಅಪರೇಟರ್ – 01 ಹುದ್ದೆ
    ವಾಹನ ಚಾಲಕರು – 12 ಹುದ್ದೆಗಳು
    ಅಟೆಂಡರ್ – 12 ಹುದ್ದೆಗಳು
    ಜವಾನರು – 05 ಹುದ್ದೆಗಳು

    ಚಿತ್ರದುರ್ಗ ಹಾಗೂ ಬೆಂಗಳೂರು ಕಚೇರಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಾಗುವುದು.

    ವಿದ್ಯಾರ್ಹತೆ : ಈ ಮೇಲ್ಕಂಡ ಹುದ್ದೆಗಳಿಗೆ‌ ಅನುಸಾರವಾಗಿ ಸಂಬಂಧಿತ ವಿಷಯದಲ್ಲಿ ಎಸ್ ಎಸ್ ಎಲ್ ಸಿ / ಪಿಯುಸಿ/ ಡಿಪ್ಲೋಮಾ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

    ವೇತನ : ರಾಜ್ಯ ಸರಕಾರ್ ವೇತನ ಆಯೋಗದ ಪ್ರಕಾರವಾಗಿ ವೇತನ ನೀಡಲಾಗುವುದು.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ‌18 ವರ್ಷ ಹಾಗೂ ಗರಿಷ್ಠ 35 ವರ್ಷ ಆಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ‌ ಅಭ್ಯರ್ಥಿಗಳಿಗೆ 38 ವರ್ಷ, ಎಸ್ ಸಿ/ಎಸ್ ಟಿ/ ಪ್ರವರ್ಗ – 1 ಅಭ್ಯರ್ಥಿಗಳಿಗೆ ‌40 ವರ್ಷ.

    ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ನಿಗಮದ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಜುಲೈ 22, 2021ರೊಳಗೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • UAS ಧಾರವಾಡ : ಪಾರ್ಟ್ ಟೈಂ ಟೀಚರ್ ಹುದ್ದೆ ಗೆ ನೇರ ಸಂದರ್ಶನ

    ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಧಾರವಾಡದಲ್ಲಿ 2020-21 ನೇ ಸಾಲಿನ 2 ನೇ‌ ಸೆಮಿಸ್ಟರ್ ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಗ್ರಿಕಲ್ಚರ್ ಪ್ರೊಡಕ್ಷನ್ ಎಕಾನಮಿಕ್ಸ್ ವಿಷಯವನ್ನು ಬೋಧಿಸಲು ಈ ಕೆಳ ಕಾಣಿಸಿದ ವಿದ್ಯಾರ್ಹತೆಯನ್ನು ಹೊಂದಿರುವ ” ಅರೆಕಾಲಿಕ ಉಪನ್ಯಾಸಕರು ” ಹುದ್ದೆಗೆ 179 ದಿನಗಳ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಪಾರ್ಟ್ ಟೈಂ ಟೀಚರ್
    ಹುದ್ದೆ ಸಂಖ್ಯೆ : 01
    ವಿದ್ಯಾರ್ಹತೆ : Ph.D ಇನ್ ಅಗ್ರಿಕಲ್ಚರ್ ಎಕಾನಮಿಕ್ಸ್ ಮತ್ತು ಪಿಜಿ ಟೀಚರ್ ಎಕ್ಸ್ ಪೀರಿಯನ್ಸ್ ಹೊಂದಿರಬೇಕು.

    ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯ ಎರಡು ಪ್ರತಿಯೊಂದಿಗೆ ದಿನಾಂಕ : 20-07-2021 ರಂದು 11.00 ಗಂಟೆಗೆ.

    ಸಂದರ್ಶನಕ್ಕೆ ಡೀನ್ ( ಕೃಷಿ) ರವರ ಕಚೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡದಲ್ಲಿ ಹಾಜರಾಗಲು ತಿಳಿಸಲಾಗಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಎರಡು ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಲು ತಿಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು.

  • ಹಾಸನ ಅಂಗನವಾಡಿಯಲ್ಲಿ 109 ಹುದ್ದೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ ಜಿಲ್ಲೆಯ 8 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ‌ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ‌ಕೇಂದ್ರಗಳಲ್ಲಿ ಖಾಲಿಯಿರುವ 22 ಅಂಗನವಾಡಿ ಕಾರ್ಯಕರ್ತೆ ಯರು ಮತ್ತು 87 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆದೇಶ ಹೊರಡಿಸಿದೆ.

    ಆದೇಶ ಮತ್ತು ಮಾರ್ಗಸೂಚಿ ಪ್ರಕಾರ ಗೌರವಧನ ಸೇವೆಯ ಆಧಾರದಲ್ಲಿ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ‌ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 07-07-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-08-2021 ಗಂಟೆ 5.30

    ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.

    ವಯೋಮಿತಿ ‌18 ರಿಂದ 35 ವರ್ಷ ( ಈ ಅಧಿಸೂಚನೆಯ ಕೊನೆಯ ದಿನಾಂಕಕ್ಕೆ 35 ವರ್ಷ ಮೀರಿರಬಾರದು, ಮತ್ತು ವಿಕಲಚೇತನ ‌ಅಭ್ಯರ್ಥಿಗಳಿಗೆ 10/ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಹಾಗೂ ಎಸ್ ಎಸ್ ಎಲ್ ಸಿ‌ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ ಮಾತ್ರ ಪರಿಗಣಿಸಲಾಗುವುದು.

    ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು.

    ಅಂಗನವಾಡಿ ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ಉತ್ತೀರ್ಣರಾಗಿರಬೇಕು. ಗರಿಷ್ಠ 9 ನೇ ತರಗತಿಯವರೆಗೆ ತೇರ್ಗಡೆ ಯಾಗಿರಬೇಕು. 9 ನೇ ತರಗತಿಯಿಂದ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಲ್ಲಿ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

    ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಯು ವಿಧವೆ ಆದಲ್ಲಿ ‌ಪತಿಯ ಮರಣ ಪ್ರಮಾಣ ಪತ್ರ ಲಗತ್ತಿಸಬೇಕು. ಆಸಿಡ್ ದಾಳಿಗೆ ತುತ್ತಾದ ಮಹಿಳೆಯರು ‌ಸಹಾಯಕಿ‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ‌ ಸಂಬಂಧಿಸಿದ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.

    ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತೆ ಹುದ್ದೆಗೆ ವಿಕಲಚೇತನ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ.

  • ಲೈಂಗಿಕ ಅಲ್ಪಸಂಖ್ಯಾತರಿಗೆ ಗುಡ್ ನ್ಯೂಸ್, ಸರಕಾರಿ ಉದ್ಯೋಗದಲ್ಲಿ ಮೀಸಲಾತಿ

    ಲೈಂಗಿಕ ಅಲ್ಪಸಂಖ್ಯಾತರಿಗೆ ಸಂತೋಷದ ವಿಚಾರವನ್ನು ನೀಡುವ ಮೂಲಕ ಕರ್ನಾಟಕ ರಾಜ್ಯ ಸರಕಾರ ಮಹತ್ತರವಾದ ಘೋಷಣೆಯನ್ನು ಮಾಡಿದೆ.

    ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳುವ ಎಲ್ಲಾ ವರ್ಗದ ಉದ್ಯೋಗಗಳಲ್ಲಿ ಶೇ.1 ರಷ್ಟು ಮೀಸಲಾತಿಯನ್ನು ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡಬೇಕೆಂದು ಸರಕಾರ ಆದೇಶ ಹೊರಡಿಸಿದೆ.

    1977 ರ ಕರ್ನಾಟಕ ನಾಗರಿಕ ಸೇವೆಗಳ ( ಸಾಮಾನ್ಯ ನೇಮಕಾತಿ ) ನಿಯಮಗಳ ನಿಯಮ 9 ನ್ನು ತಿದ್ದುಪಡಿ ಮಾಡಲಾಗಿದೆ.

    ರಾಜ್ಯದಲ್ಲಿ ನಡೆಯುವ ಎಲ್ಲಾ ನೇಮಕಾತಿಗಳಲ್ಲಿ ಸಾಮಾನ್ಯ ಅರ್ಹತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳ ಪ್ರತಿಯೊಂದು ವಿಭಾಗಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶೇ. 1 ರಷ್ಟು ಮೀಸಲಾತಿ ನೀಡಲಾಗಿದೆ.

    ಸರಕಾರಿ ನೇರ ನೇಮಕಾತಿಯ ಸಂದರ್ಭದಲ್ಲಿ ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಶೇ.1 ರಷ್ಟು ಸಂಖ್ಯೆಗೆ ಸೂಕ್ತ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅಂತಹ ಹುದ್ದೆಗಳನ್ನು ಅದೇ ಪ್ರವರ್ಗಕ್ಕೆ ಸೇರಿದ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.

  • ಬೆಂಗಳೂರು ಯುನಿವರ್ಸಿಟಿ : ಬ್ಯಾಕ್ ಲಾಗ್ ಹುದ್ದೆಗೆ ಅರ್ಜಿ ಆಹ್ವಾನ

    ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳು ಮತ್ತು ಯು.ವಿ.ಸಿ.ಇ ಕಾಲೇಜಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿವರಗಳು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳ ( ಬ್ಯಾಕ್ ಲಾಗ್) ಭರ್ತಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಂದ ಅರ್ಜಿ ( ಎಂಟು ಪ್ರತಿ) ಆಹ್ವಾನಿಸಲಾಗಿದೆ.

    ಅರ್ಜಿಗಳನ್ನು ನಿಗದಿತ ಶುಲ್ಕದೊಂದಿಗೆ ಈ ತಿಂಗಳ 30 ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

    ಹುದ್ದೆ: ಪ್ರೊಫೆಸರ್ , ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್

    ಅರ್ಜಿ ಶುಲ್ಕ : ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ರೂ. 250/-, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಪ್ರೊಫೆಸರ್ ಹುದ್ದೆಗೆ ರೂ.500/-,ಜೊತೆಗೆ ಅಪ್ಲಿಕೇಶನ್ ಫೀಸ್ ರೂ.100/- ನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-07-2021( 30th July 2021) 5.00 ಗಂಟೆಯೊಳಗೆ.