Author: Mallika

  • KUIDFC ಹತ್ತು ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

    ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (KUIDFC) ಕೇಂದ್ರ ಕಚೇರಿ ಬೆಂಗಳೂರು ಇಲ್ಲಿ ಖಾಲಿ ಇರುವ ಹತ್ತು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಸಹಾಯಕ ಪ್ರಧಾನ ವ್ಯವಸ್ಥಾಪಕರು ( ಎಡಿಬಿ) ಯೋಜನಾ ಹಣಕಾಸು ವಿಭಾಗ – 1 ಹುದ್ದೆ
    ಉಪ ಪ್ರಧಾನ ವ್ಯವಸ್ಥಾಪಕರು/ ಸಹಾಯಕ ಪ್ರಧಾನ ವ್ಯವಸ್ಥಾಪಕರು ( ಟ್ರಸ್ಟ್‌) – 1 ಹುದ್ದೆ
    ವ್ಯವಸ್ಥಾಪಕರು ( ಸಾರ್ವಜನಿಕ ಮತ್ತು ಸಂಪರ್ಕ ವಿಭಾಗ ) – 1 ಹುದ್ದೆ
    ಸಹಾಯಕ ವ್ಯವಸ್ಥಾಪಕರು ( ಮೆಗಾಸಿಟಿ) ಹಣಕಾಸು ಮತ್ತು ಲೆಕ್ಕಪತ್ರ ವಿಭಾಗ – 1 ಹುದ್ದೆ
    ಸಹಾಯಕ ವ್ಯವಸ್ಥಾಪಕರು ( ಮಾನವ ಸಂಪನ್ಮೂಲ) ಆಡಳಿತ ವಿಭಾಗ – 1 ಹುದ್ದೆ
    ಶೀಘ್ರ ಲಿಪಿಗಾರರು – 3 ಹುದ್ದೆ
    ಕಿರಿಯ ಕಾರ್ಯ ನಿರ್ವಾಹಕ ಸಹಾಯಕರು ಆಡಳಿತ ವಿಭಾಗ – 2 ಹುದ್ದೆ

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 15/07/2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29/07/2021

    ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಭರ್ತಿ ಮಾಡಿ ಭಾವಚಿತ್ರ ಸಹಿಯೊಂದಿಗೆ ವಯೋಮಿತಿ, ವಿದ್ಯಾರ್ಹತೆ, ಮೀಸಲಾತಿ, ಅನುಭವ , ಕನ್ನಡ ಭಾಷಾ ಜ್ಞಾನ ಇತ್ಯಾದಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಅಪೂರ್ಣ/ ಅಸ್ಪಷ್ಟ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿಗಳನ್ನು ಅಂಚೆ/ ಕೊರಿಯರ್ ಮೂಲಕ ಸಲ್ಲಿಸಲು ಅವಕಾಶವಿಲ್ಲ.

    ನೇಮಕಾತಿ ವಿಧಾನ : ವಿದ್ಯಾರ್ಹತೆ, ಮೆರಿಟ್, ಅನುಭವದ‌ ಆಧಾರದ ಮೇಲೆ ಮೌಖಿಕ ಸಂದರ್ಶನಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಅರ್ಜಿ ನಮೂನೆಯನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ www.kuidfc.com/careers ನಲ್ಲಿ ಅಳವಡಿಸಲಾಗಿದೆ. ಅರ್ಜಿಯನ್ನು 29/07/2021 ರೊಳಗಾಗಿ ಆನ್ಲೈನ್ ಮೂಲಕ ಸಲ್ಲಿಸಬೇಕು.

  • ಅಪರ ಸರಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಒಂದು ಹುದ್ದೆಯನ್ನು ಕರ್ನಾಟಕ ಕಾನೂನು ಅಧಿಕಾರಿಗಳ ( ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977 ರನ್ವಯ ತುಂಬಲು ಸರಕಾರವು ಉದ್ದೇಶಿಸಿದ್ದು, ಏಳು ವರ್ಷ ವಕೀಲ ವೃತ್ತಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೆಳಗಿನಂತೆ ಸೂಚನೆ ನೀಡಲಾಗಿದೆ.

    ಅಭ್ಯರ್ಥಿಯು ಈ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 7 ವರ್ಷ ಅಥವಾ ಮೇಲ್ಪಟ್ಟು ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸಿರಬೇಕು. ಹಾಗೂ ಈ ಬಗ್ಗೆ ದೃಢೀಕರಿಸಿದ ದಾಖಲೆಗಳನ್ನು ಸಲ್ಲಿಸುವುದು. ಜನ್ಮ ದಿನಾಂಕದ ಬಗ್ಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ದೃಢೀಕೃತ ದಾಖಲಾತಿ ಸಲ್ಲಿಸುವುದು. ಪಾಸ್ ಪೋರ್ಟ್ ಸೈಜ್ ನ ಎರಡು ಭಾವಚಿತ್ರಗಳನ್ನು ಲಗತ್ತಿಸಬೇಕು. ಅರ್ಜಿಯನ್ನು ನಿಗದಿತ ನಮೂನೆಯಲ್ಲಿಯೇ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಕಚೇರಿ ಸಹಾಯಕರು, ಜಿಲ್ಲಾಧಿಕಾರಿಯವರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ : 104, 1 ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ ದೇವನಹಳ್ಳಿ ತಾಲ್ಲೂಕು ಇಲ್ಲಿಂದ ಪಡೆಯಬಹುದು ಮತ್ತು ಭರ್ತಿ ಮಾಡಿದ ಅರ್ಜಿಯನ್ನು ಇದೇ ವಿಳಾಸಕ್ಕೆ ಕಳುಹಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-08-2021

  • ದಿ ಹನುಮಂತನಗರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನಕ್ಕೆ ಆಹ್ವಾನ

    ದಿ ಹನುಮಂತನಗರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ಹುದ್ದೆ ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಸಂದರ್ಶನ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಹುದ್ದೆಯ ವಿವರ : ವ್ಯವಸ್ಥಾಪಕ ನಿರ್ದೇಶಕ

    ವಿದ್ಯಾರ್ಹತೆ : ಪದವಿ ಜೊತೆಗೆ (ಎ) ಸಿಎಐಐಬಿ/ ಡಿಬಿಎಫ್/ ಡಿಪ್ಲೋಮಾ ಇನ್ ಕೋ ಅಪರೇಟಿವ್ ಬಿಸಿನೆಸ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ಅರ್ಹತೆ. ಅಥವಾ ( ಬಿ) ಚಾರ್ಟಡ್/ ಕಾಸ್ಟ್ ಅಕೌಂಟೆಂಟ್ 🙁 ಸಿ) ಯಾವುದೇ ಸ್ನಾತಕೋತ್ತರ ಪದವಿ.

    ವಯಸ್ಸು : 35 ವರ್ಷ ಮೇಲ್ಪಟ್ಟು 65 ವರ್ಷದೊಳಗೆ.

    ವೇತನ : 67,550-1650-72500-1900-83900-2200-97100-2500-104600( negotiable)

    ಅನುಭವ :ಬ್ಯಾಂಕಿಂಗ್ ವಲಯದಲ್ಲಿ ಮಧ್ಯಮ/ ಹಿರಿಯ ಹಂತದಲ್ಲಿ ಕನಿಷ್ಠ ಎಂಟು ವರ್ಷಗಳ ಸೇವಾ ಅನುಭವ ಇರತಕ್ಕದ್ದು.

    ಅರ್ಜಿ ಶುಲ್ಕ :ರೂ.600/- ( including gst)

    ಅರ್ಜಿ ಸಲ್ಲಿಸುವ ಅವಧಿ : ದಿನಾಂಕ 17-07-2021 ರಿಂದ ದಿನಾಂಕ 31-07-2021 ಸಂಜೆ 5 ಗಂಟೆಯೊಳಗೆ.

    ಅರ್ಜಿ ಸಲ್ಲಿಸುವ ವಿಧಾನ : ಅರ್ಹ ಅಭ್ಯರ್ಥಿಗಳು ನಿಗದಿತ ವೆಬ್‌ಸೈಟ್‌ ಅರ್ಜಿ ನಮೂನೆಯನ್ನು www.hcb.org.in ನಿಂದ ಡೌನ್‌ಲೋಡ್ ಮಾಡಿಕೊಂಡು ಅಥವಾ ಬ್ಯಾಂಕಿನಿಂದ ಖುದ್ದು ಪಡೆದು ಭರ್ತಿ ಮಾಡಿ, ಅರ್ಜಿಯ ಜೊತೆ ಶುಲ್ಕವನ್ನು ‘ದಿ ಹನುಮಂತನಗರ ಸಹಕಾರಿ ಬ್ಯಾಂಕ್ ನಿಯಮಿತ’ ಈ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ NRFT/ pay order/ cash ಮೂಲಕ ಪಾವತಿಸಿ, ಅರ್ಜಿಯ ಜೊತೆ ಅಗತ್ಯ ದಾಖಲೆಗಳೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಬ್ಯಾಂಕಿನ ವಿಳಾಸಕ್ಕೆ ಕಳುಹಿಸುವುದು.

    ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 91 9449974455 / 9742573122, 080-26507976, 22428985

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    Email : [email protected]

  • ಆಡಳಿತ ತರಬೇತಿ ಸಂಸ್ಥೆ, ಮೈಸೂರು : 15 ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

    ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಖಾಲಿಯಿರುವ ಕೆಳಕಂಡ ಹುದ್ದೆಗಳನ್ನು ಗುತ್ತಿಗೆ/ ನಿಯೋಜನೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಸೂಚನೆ ‌ಹೊರಡಿಸಲಾಗಿದೆ.

    ಹುದ್ದೆ ವಿವರ : ಬೋಧಕರು ( ಸಾರ್ವಜನಿಕ ಆಡಳಿತ) -02
    ಬೋಧಕರು (ಅರ್ಥಶಾಸ್ತ್ರ ಮತ್ತು ಆಡಳಿತ ) -01
    ಬೋಧಕರು ( ಮಹಿಳಾ ಅಧ್ಯಯನ ) – 01
    ಬೋಧಕರು ( ಅಭಿವೃದ್ಧಿ ಅರ್ಥಶಾಸ್ತ್ರ ಮತ್ತು ಯೋಜನೆ)- 01
    ಬೋಧಕರು ( ನಡವಳಿ ವಿಜ್ಞಾನ ) -01

    ವಿಕೋಪ ನಿರ್ವಹಣಾ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ, ಮೈಸೂರು

    ಬೋಧಕರು ( ವಿ.ನಿ‌.ಕೇಂದ್ರ) – 2 ಹುದ್ದೆ
    ಕಮ್ಯುನಿಕೇಷನ್ – ಐಟಿ ಅಧಿಕಾರಿ (ವಿ.ನಿ.ಕೇಂದ್ರ) – 01
    ರಿಸರ್ಚ್ – ಟ್ರೈನಿಂಗ್ ಅಸೋಸಿಯೇಟ್ಸ್ : 02 ಹುದ್ದೆ
    ಸಿಸ್ಟಂ ಆಫೀಸರ್ – 02 ಹುದ್ದೆ
    ಅಸಿಸ್ಟೆಂಟ್ – 02 ಹುದ್ದೆ

    ಒಟ್ಟು ಹುದ್ದೆಗಳು : 15 ಹುದ್ದೆಗಳು

    ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ ವಿವರವು ಸಂಸ್ಥೆಯ ವೆಬ್‌ಸೈಟ್‌ www.atimysore.gov.in ನಲ್ಲಿ ಲಭ್ಯವಿರುತ್ತದೆ.

    ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಹಾನಿರ್ದೇಶಕರು, ಆ.ತ.ಸಂ.ಮೈಸೂರು ವಿಳಾಸಕ್ಕೆ ದಿನಾಂಕ 28-07-2021 ರೊಳಗಾಗಿ ನೊಂದಾಯಿತ ಅರ್ಜಿಯ ಮೂಲಕ ಹಾಗೂ ಸಾಫ್ಟ್ ಕಾಪಿಯನ್ನು ಇ-ಮೇಲ್ ಮೂಲಕ ಮತ್ತು [email protected] ಮತ್ತು [email protected] ವಿಳಾಸಕ್ಕೆ ಕಳುಹಿಸುವುದು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದು. ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿಯೆ ಹಾಜರಾಗುವುದು.

    ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವುದು :

    0821-2520906( ಆಫೀಸ್) , 2520905(R),

  • ಮಂಗಳೂರಿನ ಬಾಲಭವನದಲ್ಲಿ ಉದ್ಯೋಗವಕಾಶ

    ಮಂಗಳೂರು ಜಿಲ್ಲಾ ಬಾಲಭವನದ ಚಟುವಟಿಕೆ ಮತ್ತು ಕಾರ್ಯಕ್ರಮ ನಡೆಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ಸಹಾಯಕ/ ಸಂಯೋಜಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19, ಅಕ್ಟೋಬರ್ 2021

    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಮತ್ತು ಕಂಪ್ಯೂಟರ್ ಜ್ಞಾನದೊಂದಿಗೆ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಯಾವುದಾದರೊಂದು ಕಲಾ ಕ್ಷೇತ್ರಗಳಲ್ಲಿ ಕೌಶಲ್ಯ ಹೊಂದಿರಬೇಕು.

    ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15,000/- ಮಾಸಿಕ ವೇತನ ನೀಡಲಾಗುತ್ತದೆ.

    ಅಗತ್ಯ ದಾಖಲೆಗಳು : ಆಧಾರ್ ಕಾರ್ಡ್, ಪದವು ಪಾಸ್ ಸರ್ಟಿಫಿಕೇಟ್, ಈ ಹಿಂದೆ ಉದ್ಯೋಗ ಮಾಡಿದ್ದಲ್ಲಿ ಪ್ರಮಾಣ ಪತ್ರ, ಇತರೆ ಅಗತ್ಯ ದಾಖಲೆಗಳು.

    ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾರ್ಯದರ್ಶಿಗಳು, ಜಿಲ್ಲಾ ಬಾಲಭವನ ಸಮಿತಿ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

    ದೂರವಾಣಿ ಸಂಖ್ಯೆ : 0824-2451254

  • ಸೇನಾ ಪ್ರವೇಶ ಪರೀಕ್ಷೆ ಜುಲೈ 25 ಕ್ಕೆ

    ಭಾರತೀಯ ಸೇನೆಯು ನಡೆಸುವ ಸಾಮಾನ್ಯ ಪರೀಕ್ಷೆಯು ( ಸಿಇಇ) ಜುಲೈ 25 ರಂದು ರಾಜ್ಯದ ಮೂರು ಕೇಂದ್ರಗಳಲ್ಲಿ ನಡೆಯಲಿದೆ.
    ವೈದ್ಯಕೀಯ ಸಾಮರ್ಥ್ಯ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಲಿಖಿತ ಪರೀಕ್ಷೆಗೆ ಹಾಜರಾಗಬಹುದು.

    ಈ ಮೊದಲು ಎಪ್ರಿಲ್ 25 ರಂದು ಸಿಇಇ ನಿಗದಿ ಪಡಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು.

    ಬೆಂಗಳೂರಿನ ಕಾಮರಾಜ ರಸ್ತೆಯಲ್ಲಿರುವ ಸೇನಾ ಶಾಲೆ, ಮಂಗಳೂರಿನ ಮೂಡುಬಿದಿರೆಯಲ್ಲಿರುವ ಆಳ್ವಾಸ್ ಸಂಸ್ಥೆ, ಬೆಳಗಾವಿಯ ಕೆಎಲ್ ಇ ಸೊಸೈಟಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಸೇನಾ ಪ್ರಕಟಣೆ ತಿಳಿಸಿದೆ.