Author: Mallika

  • ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರಲ್ಲಿ ಖಾಲಿ ಇರುವ ಹಾಗೂ ಅಗತ್ಯವಿರುವ ವಿವಿಧ ವೃಂದಗಳಲ್ಲಿನ ಹುದ್ದೆಗಳಿಗಾಗಿ ಪ್ರಕಟಣೆ ಹೊರಡಿಸಿದೆ. ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆಗಳ ವಿವರ : ಸಿವಿಲ್ ಇಂಜಿನಿಯರ್ ( ವ್ಯವಸ್ಥಾಪಕ ಶ್ರೇಣಿ) : 2 ಹುದ್ದೆ : ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ, ಕನಿಷ್ಠ ಎರಡು ವರ್ಷ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

    ಸಹಾಯಕರು : 16 ಹುದ್ದೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಸಹಕಾರಿ ವಿಷಯದಲ್ಲಿ ಪದವಿ ಹೊಂದಿರಬೇಕು.

    ಉಪ ಸಿಬ್ಬಂದಿ ಕಮ್ ವಾಹನ ಚಾಲಕ : 6 ಹುದ್ದೆ : ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್ ಎಸ್ ಎಲ್ ಸಿ ಅಥವಾ ಅಂಗೀಕೃತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    ಸಕ್ಷಮ ಪ್ರಾಧಿಕಾರದಿಂದ ಮೋಟಾರ್ ವಾಹನ ಪರವಾನಗಿ ಪಡೆದಿರತಕ್ಕದ್ದು. ಲಘುವಾಹನ ಚಾಲನೆಯಲ್ಲಿ ಎರಡು ವರ್ಷ ಅನುಭವ ಇರುವವರಿಗೆ ಆದ್ಯತೆ.

    ಉಪಸಿಬ್ಬಂದಿ ( ಪ್ಯೂನ್ / ಅಟೆಂಡರ್ ) : 6 ಹುದ್ದೆ : ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್ ಎಸ್ ಎಲ್ ಸಿ ಅಥವಾ ಅಂಗೀಕೃತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

    ಸ್ವೀಪರ್: 2 ಹುದ್ದೆ : ಏಳನೇ ತರಗತಿ ಉತ್ತೀರ್ಣರಾಗಿರಬೇಕು. ಕನ್ನಡ ಓದಲು ಮತ್ತು ಬರೆಯಲು ಬರತಕ್ಕದ್ದು.

    ಅರ್ಜಿ ಸಲ್ಲಿಕೆ ಪ್ರಾರಂಭಿಕ ದಿನಾಂಕ : 20-07-2021 ( 10.30 ರಿಂದ)
    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 21-08-2021 ( ಸಂಜೆ 5.30 ರವರೆಗೆ)

    ವಯೋಮಿತಿ : ಸಹಾಯಕ ಹುದ್ದೆಗೆ ಕನಿಷ್ಠ 18 ಹಾಗೂ ಗರಿಷ್ಠ 36 ವರ್ಷ ವಯೋಮಿತಿ ಮೀರಿರಬಾರದು.

    ಉಪಸಿಬ್ಬಂದಿ ಕಮ್ ವಾಹನ ಚಾಲಕ ಹುದ್ದೆಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 32 ವರ್ಷ ವಯೋಮಿತಿ ಮೀರಿರಬಾರದು.

    ಉಪಸಿಬ್ಬಂದಿ ಹುದ್ದೆಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.

    ಅರ್ಜಿ ಶುಲ್ಕ : ಸಿವಿಲ್ ಇಂಜಿನಿಯರ್ ಹಾಗೂ ಸಹಾಯಕ ಹುದ್ದೆಗೆ ರೂ.1000/-
    ಉಪ ಸಿಬ್ಬಂದಿ ( ಪ್ಯೂನ್ / ಅಟೆಂಡರ್) ಉಪಸಿಬ್ಬಂದಿ ಕಮ್ ವಾಹನ ಚಾಲಕ, ಸ್ವೀಪರ್ ಹುದ್ದೆಯ ಅರ್ಜಿ ಶುಲ್ಕ ರೂ.500/-

    ಅಭ್ಯರ್ಥಿಗಳು ಅರ್ಜಿಯನ್ನು ಅಂಚೆ/ ಕೊರಿಯರ್/ ಖುದ್ದಾಗಿ ಸಲ್ಲಿಸಬಹುದು. ‌

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್

  • ರಾಜ್ಯ ಸರಕಾರಿ ನೌಕರರಿಗೆ ಶೇ.11 ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ ಸಿಎಂ

    ರಾಜ್ಯದ ಸರಕಾರಿ ನೌಕರರಿಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಮಂಗಳವಾರ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ( ಡಿಎ) ಹೆಚ್ಚಳ ಮಾಡಿ ಸೂಚನೆಯನ್ನು ಹೊರಡಿಸಿದೆ.

    ಸಿಎಂ‌ ಬಿ.ಎಸ್.ಯಡಿಯೂರಪ್ಪ ಹಣಕಾಸು ಇಲಾಖೆಗೆ ಜುಲೈ 1, 2021 ರಿಂದ ಅನ್ವಯಿಸುವಂತೆ ರಾಜ್ಯ ಸರಕಾರಿ ನೌಕರರಿಗೆ ಶೇ.11 ರಷ್ಟು ಡಿಎ ( ತುಟ್ಟಿಭತ್ಯೆ) ನೀಡುವಂತೆ ಸೂಚಿಸಿದ್ದಾರೆ. ಅಧಿಕೃತ ಆದೇಶ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.

    ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆ ದರ ಶೇ.11.25% ಇದೆ. ಈಗ ಶೇ.11 ಹೆಚ್ಚಳದಿಂದಾಗಿ ಒಟ್ಟು 22.25 ರಷ್ಟು ತುಟ್ಟಿಭತ್ಯೆ ದೊರಕಲಿದೆ. ಇದರಿಂದಾಗಿ 1.50 ಲಕ್ಷ ಪಿಂಚಣಿದಾರರು ಸೇರಿದಂತೆ 6 ಲಕ್ಷ ನೌಕರರಿಗೆ ಅನುಕೂಲವಾಗಲಿದೆ.

  • ಬೆಂಗಳೂರು ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ(IWST)ಯಲ್ಲಿ ಉದ್ಯೋಗ, ನೇರ ಸಂದರ್ಶನ

    ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇರುವ ವುಡ್ ಸೈನ್ಸ್ ಟೆಕ್ನಾಲಜಿ ಸಂಸ್ಥೆ ( ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಸಂಸ್ಥೆಯು ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದೆ. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

    ಹುದ್ದೆಯ ವಿವರ : ರಿಸರ್ಚ್ ಅಸೋಸಿಯೇಟ್, ಜ್ಯೂನಿಯರ್ ರಿಸರ್ಚ್ ಫೆಲೋ, ಸೀನಿಯರ್ ಪ್ರಾಜೆಕ್ಟ್ ಫೆಲೋ, ಜ್ಯೂನಿಯರ್ ಪ್ರಾಜೆಕ್ಟ್ ಫೆಲೋ, ಪ್ರಾಜೆಕ್ಟ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲಿದೆ.

    ಮೇಲೆ ನೀಡಲಾಗಿರುವ ಹುದ್ದೆಗಳಿಗೆ ಜುಲೈ 29, 2021 ರಂದು ಪರೀಕ್ಷೆ ನಡೆಯುತ್ತದೆ. ಪ್ರಾಜೆಕ್ಟ್ ಫೆಲೋ ಹುದ್ದೆಗಳಿಗೆ ಮಾತ್ರ ಜುಲೈ 30, 2021 ರಂದು ಪರೀಕ್ಷೆ ನಡೆಯುತ್ತದೆ.

    ಹುದ್ದೆ ಅವಧಿ : 1 ರಿಂದ 3 ವರ್ಷಗಳವರೆಗೆ ಈ ಹುದ್ದೆಗಳ ಅವಧಿ ಇರುತ್ತದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಎನ್ ಇಟಿ, ಕೆಎಸ್ ಇ ಟಿ ಅರ್ಹತೆ ಹೊಂದಿರಬೇಕು.

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.19,000 ರಿಂದ ರೂ.31,000/- ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

    ಸಂದರ್ಶನದ ಸ್ಥಳ ಮತ್ತು ಸಮಯ : ಇನ್ಸ್ಟಿಟ್ಯೂಟ್ ಆಫ್ ವುಡ್ ಅಂಡ್ ಟೆಕ್ನಾಲಜಿ, ಮಲ್ಲೇಶ್ವರಂ, ಬೆಂಗಳೂರು – 560003, ಬೆಳಿಗ್ಗೆ 9.30 ರಿಂದ 10.30 ರವರೆಗೆ.

    ಸಂದರ್ಶನದ ಸಂದರ್ಭದಲ್ಲಿ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು : ಆಧಾರ್ ಕಾರ್ಡ್, ಶೈಕ್ಷಣಿಕ ದಾಖಲೆಗಳು( ಸ್ನಾತಕೋತ್ತರ ಪದವಿ, ಎನ್ ಇಟಿ ಪಾಸ್ ಸರ್ಟಿಫಿಕೇಟ್, ಕೆಎಸ್ಇಟಿ ಪಾಸ್ ಸರ್ಟಿಫಿಕೇಟ್ ಇತರೆ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬಯೋಡೇಟಾ

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾಗಿರುವ ನೋಟಿಫಿಕೇಶನ್ ನೋಡಿ

  • PGCIL ನಲ್ಲಿ 1110 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ( PGCIL) ನಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ದಕ್ಷಿಣ ಪ್ರಾದೇಶಿಕ ಕಚೇರಿಗಳ ಪೈಕಿ ಬೆಂಗಳೂರು ಶಾಖೆಯಲ್ಲಿಯೂ ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಲಿದೆ.

    ಒಟ್ಟು ಹುದ್ದೆಗಳ ಸಂಖ್ಯೆ‌: 1110, ಬೆಂಗಳೂರು ಪ್ರಾದೇಶಿಕ ಕೇಂದ್ರ : 114


    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 21-07-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-08-2021

    ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ ಮಿತಿಗೆ ವರ್ಗಾವಾರು ನಿಯಮ ಅನ್ವಯವಾಗಲಿದೆ.

    ವಿದ್ಯಾರ್ಹತೆ : ಐಟಿಐ ಅಪ್ರೆಂಟಿಸ್ ( ಐಟಿಐ ಎಲೆಕ್ಟ್ರಿಕಲ್)
    ಡಿಪ್ಲೋಮಾ ಅಪ್ರೆಂಟಿಸ್ : ಡಿಪ್ಲೋಮಾ ( ಸಿವಿಲ್ / ಇಲೆಕ್ಟ್ರಿಕಲ್ ಇಂಜಿನಿಯರ್)
    ಗ್ರಾಜ್ಯುಯೇಟ್ ಅಪ್ರೆಂಟಿಸ್ : ಬಿಇ/ಬಿಟೆಕ್/ ಬಿಎಸ್ಸಿ ( ಇಂಜಿನಿಯರ್)
    ಹೆಚ್ ಆರ್ ಎಕ್ಸಿಕ್ಯುಟಿವ್ : ಎಂಬಿಎ ( ಹೆಚ್ ಆರ್)/ ಎಂಎಸ್ ಡಬ್ಲ್ಯೂ/ ಪಿಜಿ/ಡಿಪ್ಲೋಮಾ( ಪರ್ಸನಲ್ ಮ್ಯಾನೇಜ್ಮೆಂಟ್/ ಪರ್ಸನಲ್ ಮ್ಯಾನೇಜ್ಮೆಂಟ್ ಮತ್ತು ಇಂಡಸ್ಟ್ರಿಯಲ್ ರಿಲೇಶನ್)

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್ 21-07-2021 ರಂದು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ನೀಡಲಾಗುತ್ತದೆ.

    ಬೆಂಗಳೂರು ಪ್ರಾದೇಶಿಕ ಕೇಂದ್ರದ ಹುದ್ದೆಯ ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.

  • CAPF ಅಸಿಸ್ಟೆಂಟ್ ಕಮಾಂಡೆಂಟ್ಸ್ ಎಕ್ಸಾಂ ಆಗಸ್ಟ್‌ 8 ಕ್ಕೆ

    ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಹಾಯಕ‌‌ ಕಮಾಂಡೆಟ್ಸ್ ನೇಮಕಾತಿಗಾಗಿ ಸಂಬಂಧಿಸಿದಂತೆ ಕೇಂದ್ರ ಲೋಕ ಸೇವಾ ಆಯೋಗವು ಆಗಸ್ಟ್ 8 ರಂದು ಪರೀಕ್ಷೆ ನಡೆಸಲು‌ ಪ್ರಕಟಣೆ ಹೊರಡಿಸಿದೆ.

    ಅಡ್ಮಿಟ್ ಕಾರ್ಡನ್ನು ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಯುಪಿಎಸ್ ಸಿ ವೆಬ್‌ಸೈಟ್‌ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

    ಇ-ಅಡ್ಮಿಟ್ ಕಾರ್ಡ್ ನಲ್ಲಿ ಯಾವುದೇ ಸಮಸ್ಯೆ ಗಳಿದ್ದಲ್ಲಿ ಆಯೋಗಕ್ಕೆ ಇಮೇಲ್ ಮೂಲಕ ತಿಳಿಸಬಹುದು. ಇ- ಮೇಲೆ ವಿಳಾಸ ಇಲ್ಲಿದೆ : [email protected]

    ಈ ನೇಮಕಾತಿಯಲ್ಲಿ ಸಿಐಎಸ್ ಎಫ್ ಗೆ 67, ಎಸ್ ಎಸ್ ಬಿ 1, ಸಿಆರ್ ಪಿಎಫ್ ಗೆ 36, ಸಿಐಎಸ್ ಎಫ್ ಗೆ 67 ಮತ್ತು ಐಟಿಬಿಪಿಗೆ 20 ಸೇರಿದಂತೆ ಒಟ್ಟು 159 ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ.

    ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ( ಸಹಾಯಕ ಕಮಾಂಡೆಂಟ್ಸ್) ಪರೀಕ್ಷೆಯ ಅಂತಿಮ ಫಲಿತಾಂಶ ಘೋಷಿಸುವವರೆಗೆ ಇ ಅಡ್ಮಿಟ್ ಕಾರ್ಡ್ ನ್ನು ಸುರಕ್ಷಿತವಾಗಿಡಬೇಕು. ಪರೀಕ್ಷೆಗೆ ಯಾವುದೇ ಪೇಪರ್ ಅಡ್ಮಿಟ್ ಕಾರ್ಡ್ ನೀಡಲಾಗುವುದಿಲ್ಲ.

    ಅಭ್ಯರ್ಥಿಗಳು ಪರೀಕ್ಷೆಯ ನಿಗದಿತ ಪ್ರಾರಂಭಕ್ಕೆ 10 ನಿಮಿಷಗಳ ಮೊದಲೇ ಪರೀಕ್ಷಾ ಕೇಂದ್ರ ಪ್ರವೇಶಿಸಬೇಕು. ಅಭ್ಯರ್ಥಿಗಳು ಬೆಳಗಿನ ಸೆಷನ್ ಪರೀಕ್ಷೆಗೆ 9.50 ರೊಳಗೆ ಹಾಜರಿರಬೇಕು. ಎರಡನೇ ಸೆಷನ್ ಪರೀಕ್ಷೆಗೆ ಹಾಜರಾಗಲು ಮಧ್ಯಾಹ್ನ 1.50 ರೊಳಗೆ ಪರೀಕ್ಷಾ ಕೇಂದ್ರವನ್ನು ತಲುಪ ಬೇಕೆಂದು ಸೂಚಿಸಲಾಗಿದೆ. ತಡವಾಗಿ ಪರೀಕ್ಷಾ ಸ್ಥಳಕ್ಕೆ ಪ್ರವೇಶಿಸಲು ಯಾವುದೇ ಅಭ್ಯರ್ಥಿಯನ್ನು ಅನುಮತಿಸಲಾಗುವುದಿಲ್ಲ.

    ಬ್ಲಾಕ್ ಬಾಲ್ ಪಾಯಿಂಟ್ ಪೆನ್ ನ್ನು ತರಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಉತ್ತರ ಪತ್ರಿಕೆ ಮತ್ತು ಹಾಜರಾತಿ ಪಟ್ಟಿಯನ್ನು ಬ್ಲ್ಯಾಕ್ ಬಾಲ್ ಪಾಯಿಂಟ್ ಪೆನ್ನೊಂದಿಗೆ ಮಾತ್ರ ಭರ್ತಿ ಮಾಡಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಇ – ಅಡ್ಮಿಟ್ ಕಾರ್ಡ್ ಜೊತೆಗೆ ಫೊಟೋ ಐಡಿ ಕಾರ್ಡ್ ನಮೂದಿಸಬೇಕು.

    ಪರೀಕ್ಷೆಯು ಲಿಖಿತ ರೂಪದಲ್ಲಿದ್ದು, ಎರಡು ಪತ್ರಿಕೆಗಳು ಇರುತ್ತವೆ. ಪೇಪರ್ -1 ಬಹು ಆಯ್ಕೆ ಪ್ರಶ್ನೆಗಳ ( ಎಂಸಿಕ್ಯೂ) ಆಧಾರದ ಮೇಲೆ ಅಭ್ಯರ್ಥಿಗಳ ಸಾಮಾನ್ಯ ಸಾಮಾರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಪರೀಕ್ಷಿಸಲಾಗುತ್ತದೆ. ಇಲ್ಲಿ ಒಟ್ಟು 250 ಅಂಕಗಳನ್ನು ಹೊಂದಿರುವ 200 ಪ್ರಶ್ನೆಗಳನ್ನು ಪೂರ್ಣಗೊಳಿಸಲು ಅಭ್ಯರ್ಥಿಗೆ ಒಟ್ಟು 2 ಗಂಟೆ ಅವಧಿ ಕಾಲಾವಕಾಶ ನೀಡಲಾಗಿದೆ. ಪೇಪರ್ 2 ವಿವರಣಾತ್ಮಕ ಪ್ರಶ್ನೆ ಹೊಂದಿದ್ದು, ಅಭ್ಯರ್ಥಿಯ ಭಾಷಾ ಪ್ರಾವೀಣ್ಯತೆಯನ್ನು ಪರೀಕ್ಷಿಸುತ್ತದೆ.ಇಲ್ಲಿ ಕೂಡಾ 200 ಅಂಕಗಳನ್ನು ಹೊಂದಿರುವ ವಿವರಣಾತ್ಮಕ ಪ್ರಕಾರದ ಪ್ರಶ್ನೆಗಳನ್ನು ಪೂರ್ಣಗೊಳಿಸಲು 3 ಗಂಟೆ ಸಮಯ ಇದೆ.

    ಸಾಂವಿಧಾನಿಕ ಮಂಡಳಿಯಾದ ಲೋಕಸೇವಾ ಆಯೋಗಬಯ ( ಯುಪಿಎಸ್ ಸಿ), ಗಡಿ ಭದ್ರತಾ ಪಡೆ ( ಬಿಎಸ್ ಎಫ್), ಕೇಂದ್ರ ಭದ್ರತಾ ಪಡೆ (ಸಿಐಎಸ್ ಎಫ್), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ( ಐಟಿಬಿಪಿ), ಕೇಂದ್ರ ಮೀಸಲು ಪೊಲೀಸ್ ಸಹಾಯಕ ಕಮಾಂಡೆಂಟ್ ಗಳ‌ ( ಗ್ರೂಪ್ ಎ), ಫೋರ್ಸ್ ( ಸಿಆರ್ಪಿಎಫ್) ಮತ್ತು ಸಶಸ್ತ್ರ ಸೀಮಾ ಪಡೆ ( ಎಸ್ ಎಸ್ ಬಿ) ಅಧಿಕಾರಿಗಳ ಅರ್ಹತೆ ಆಧಾರಿತ ಆಯ್ಕೆಗಾಗಿ ಸಿಎಪಿಎಫ್ ಪರೀಕ್ಷೆಯನ್ನು ನಡೆಸುತ್ತದೆ.

  • ಡಿಸಿಎಂ ಕೋರ್ಸ್ ಗೆ ನಾನಾ ವರ್ಗದ ಉದ್ಯೋಗಿಗಳಿಂದ ಅರ್ಜಿ ಆಹ್ವಾನ

    ಡಿಪ್ಲೊಮಾ ಇನ್ ಕೋ- ಅಪರೇಟಿವ್ ಮ್ಯಾನೇಜ್ಮೆಂಟ್ (ಡಿಸಿಎಂ) ಕೋರ್ಸ್ ಗೆ ನಾನಾ ವರ್ಗದ ಉದ್ಯೋಗಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ತರಬೇತಿ ಪಡೆಯಲು ಕನಿಷ್ಠ ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು. 16 ವರ್ಷ ಮೇಲ್ಪಟ್ಟವರು ಜು.31 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳ ಖಾಸಗಿ ಉದ್ಯೋಗಿಗಳು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿರುದ್ಯೋಗಿ ಅಭ್ಯರ್ಥಿಗಳು ಮತ್ತು ನಾನಾ ಸಹಕಾರ ಸಂಃ/ ಬ್ಯಾಂಕ್ ಗಳ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು.

    ತರಬೇತಿ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ತಿಂಗಳಿಗೆ 400 ರೂ. ಹಾಗೂ 30 ವರ್ಷದೊಳಗಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಮಾಸಿಕ ರೂ.500/- ಶಿಷ್ಯ ವೇತನ ನೀಡಲಾಗುತ್ತದೆ.

    ಡಿಸಿಎಂ ತರಬೇತಿಯ ಪಠ್ಯಕ್ರಮಗಳಲ್ಲಿ ಬೋಧಿಸಲಾಗುವುದು. ಕೆಎಎಸ್ ಪರೀಕ್ಷೆಯ ಗ್ರಾಮೀಣ ಅಭಿವೃದ್ಧಿ ವಿಷಯ ಹಾಗೂ ಸಹಕಾರ ಇಲಾಖೆಯ ಕೋ ಅಪರೇಟಿವ್ ಇನ್ಸ್ ಪೆಕ್ಟರ್ ಹುದ್ದೆ ಮತ್ತು ಇನ್ನಿತರೆ ಹುದ್ದೆಗಳ ನೇಮಕ ಪರೀಕ್ಷೆಗೂ ಇದು ಪೂರಕವಾಗಿದೆ.

    ಡಿಪ್ಲೋಮಾ ಕೋರ್ಸ್ ಪಡೆದ ಅಭ್ಯರ್ಥಿಗಳಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಮತ್ತು ಇತರೆ ಎಲ್ಲಾ ರೀತಿಯ ಸಹಕಾರ ಸಂಘ/ಬ್ಯಾಂಕುಗಳ ನೇಮಕಾತಿಗೆ ಸಹಕಾರ ಕಾಯಿದೆ ಮತ್ತು ನಿಯಮಗಳಿಗೆ ಅನುಸಾರವಾಗಿ ಪ್ರಥಮ ಆದ್ಯತೆ ನೀಡಲಾಗುವುದು.

    ಅರ್ಜಿಗಳಿಗಾಗಿ ಸಂಪರ್ಕಿಸುವ ವಿಳಾಸ : ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್, ಬೆಂಗಳೂರು ಸಹಕಾರ ಭವನ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಕಟ್ಟಡ, ನಂ. 1/3,2 ನೇ ಮಹಡಿ, 3 ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 18. ದೂ.26602046, 9902189872