Author: Mallika

  • ಕರ್ನಾಟಕ ನೀರಾವರಿ ನಿಗಮ ನಿಯಮಿತದಲ್ಲಿ ಕಂಪನಿ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ನೀರಾವರಿ ನಿಗಮ ನಿಯಮಿತವು ( ಕನೀನಿನಿ) ಕರ್ನಾಟಕ ಸರಕಾರದ ಉದ್ಯಮವಾಗಿದ್ದು, ರಾಜ್ಯದ ಬೃಹತ್ ಮತ್ತು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

    ನಿಗಮವು ನೋಂದಾಯಿತ ಕಚೇರಿಯಲ್ಲಿ ಕಂಪನಿ ಕಾರ್ಯದರ್ಶಿ ( grade 1 or grade III ) ( on contract basis) ಹುದ್ದೆಗೆ ಸೂಕ್ತ ಅಭ್ಯರ್ಥಿಯ ಆಯ್ಕೆಗಾಗಿ ಈ ಅಧಿಸೂಚನೆಯನ್ನು ಹೊರಡಿಸಿದೆ.

    ಆಸಕ್ತಿಯುಳ್ಳ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಕನೀನಿನಿ ವೆಬ್ಸೈಟ್ http://www.knnlindia.com ನಲ್ಲಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-08-2021 ಸಂಜೆ 5.30 ರವರೆಗೆ ಆಗಿದ್ದು, ನೋಂದಾಯಿತ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

  • ನಾರ್ಥ್ ಸೆಂಟ್ರಲ್ ರೈಲ್ವೆಯಲ್ಲಿ 1664 ಅಪ್ರೆಂಟಿಸ್ ಗಳ ನೇಮಕ

    ಉತ್ತರ ಕೇಂದ್ರ ರೈಲ್ವೆಯ ವಿವಿಧ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ‌ಮಂಡಳಿಯು ಪ್ರಕಟಣೆ ಬಿಡುಗಡೆ ಮಾಡಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 02-08-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 01, 2021

    ಹುದ್ದೆಯ ಹೆಸರು : ಪ್ರಯಾಗ್ರಾಜ್ – ಮೆಕ್ಯಾನಿಕಲ್ ವಿಭಾಗ – 364 ಹುದ್ದೆಗಳು
    ಪ್ರಯಾಗ್ರಾಜ್ – ಇಲೆಕ್ಟ್ರಾನಿಕ್ ವಿಭಾಗ – 339 ಹುದ್ದೆ
    ಜಾನ್ಸಿ ಡಿವಿಷನ್ – 480 ಹುದ್ದೆ
    ಜಾನ್ಸಿ ವರ್ಕ್ಶಾಪ್ – 185 ಹುದ್ದೆ
    ಆಗ್ರಾ ಡಿವಿಷನ್ – 296 ಹುದ್ದೆ
    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 15 ವರ್ಷ ಹಾಗೂ ಗರಿಷ್ಟ 24 ವರ್ಷ ಮೀರಿರಬಾರದು.

    ವಿದ್ಯಾರ್ಹತೆ : ಅಭ್ಯರ್ಥಿಗಳು ಐಟಿಐ ಪಾಸ್ ಮಾಡಿರಬೇಕು.

    ಆಯ್ಕೆ ಪ್ರಕ್ರಿಯೆ : ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ತದನಂತರ ಸ್ಕಿಲ್ ಟೆಸ್ಟ್, ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ.100/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಮಹಿಳಾ ಅಭ್ಯರ್ಥಿಗಳು/ಎಸ್ ಸಿ/ಎಸ್ಸಿ/ಪಿಡ್ಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

    ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ.

    ನೋಟಿಫಿಕೇಶನ್

  • ಕೊಡಗು ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

    ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಮತ್ತು ಪೊನ್ನಂಪೇಟೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸಲು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾದ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಿ, ಪ್ರಕಟಣೆ ಹೊರಡಿಸಲಾಗಿದೆ. ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 01-08-2021 ರಿಂದ ಪ್ರಾರಂಭವಾಗಿ 31-08-2021 ಸಂಜೆ 5.30 ಘಂಟೆಯೊಳಗೆ ಅಥವಾ ಮುಂಚಿತವಾಗಿ www.anganawadirecruit.kar.nic.in ರಲ್ಲಿ ಆನ್ಲೈನ್ ಮುಖಾಂತರ ಸಲ್ಲಿಸಲು ಸೂಚಿಸಲಾಗಿದೆ.

    ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕ 31-08-2021 ಕ್ಕೆ ಅಭ್ಯರ್ಥಿಯ ವಯಸ್ಸು 18 ರಿಂದ 35 ವಯೋಮಿತಿಯೊಳಗಿರಬೇಕು. ವಿಕಲಚೇತನ ಅಭ್ಯರ್ಥಿಯಾಗಿದ್ದಲ್ಲಿ ವಯಸ್ಸು 45 ವಯೋಮಿತಿಯೊಳಗಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

  • NRLM ನಲ್ಲಿ ವಿವಿಧ ಹುದ್ದೆ

    ಬೆಂಗಳೂರು ನಗರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಖಾಲಿಯಿರುವ ಹುದ್ದೆಗಳ ವಿವರ ಈ ಕೆಳಕಂಡಂತಿರುತ್ತವೆ :
    1.ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟೆಂಟ್ ಕಮ್ ಡಿಇಒ – 1 ಗ್ರಾಜ್ಯುಯೇಟ್ – ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 45 ವರ್ಷಗಳವರೆಗೆ.

    ತಾಲ್ಲೂಕು ಪ್ರೊಗ್ರಾಮ್ ಮ್ಯಾನೇಜರ್ – 4 ಹುದ್ದೆ-
    ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 45 ವರ್ಷಗಳವರೆಗೆ.

    ಕ್ಲಸ್ಟರ್ ಸುಪರ್ ವೈಸರ್ – 7 ಹುದ್ದೆ – ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 45 ವರ್ಷಗಳವರೆಗೆ.

    ಒಟ್ಟು ಹುದ್ದೆ : 12 ಹುದ್ದೆಗಳು

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಖಾಲಿಯಿರುವ ಹುದ್ದೆಗಳ ವಿವರ ಈ ಕೆಳಕಂಡಂತಿರುತ್ತವೆ.

    ಡಿಸ್ಟ್ರಿಕ್ಟ್‌ ಪ್ರೋಗ್ರಾಂ ಮ್ಯಾನೇಜರ್ – 1 ಹುದ್ದೆ
    ಡಿಸ್ಟ್ರಿಕ್ಟ್ ಮ್ಯಾನೇಜರ್ ಸ್ಕಿಲ್ಸ್ ಆಂಡ್ ಎಂಟ್ರಪ್ರಿನರ್ಶಿಪ್ – 1 ಹುದ್ದೆ
    ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟೆಂಟ್ ಕಮ್ ಡಿಇಒ – 1 ಹುದ್ದೆ
    ತಾಲ್ಲೂಕು ಪ್ರೋಗ್ರಾಂ ಮ್ಯಾನೇಜರ್ – 4 ಹುದ್ದೆ
    ಕ್ಲಸ್ಟರ್ ಸುಪರ್ ವೈಸರ್ – 4 ಹುದ್ದೆ

    ಈ ಮೇಲಿನ ಹುದ್ದೆಗಳಿಗೆ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 07-08-2021 ರ ಕೊನೆಯ ದಿನಾಂಕದ ಒಳಗಾಗಿ ಸಲ್ಲಿಸಬೇಕಾಗಿ ಮತ್ತು ಆಯ್ಕೆಯ ಎಲ್ಲಾ ವಿಧಾನಗಳು ಆನ್ಲೈನ್ ಮೂಲಕ ಜರಗುವುದು.

    ವೆಬ್ಸೈಟ್ ಲಿಂಕ್ ಅಪ್ಲಿಕೇಶನ್

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 8095325897

  • ವಿಶೇಷ ಭೂಸ್ವಾಧಿನಾಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಗಳ ಕಚೇರಿಯಲ್ಲಿ 45 ವಿವಿಧ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

    ವಿಶೇಷ ಭೂಸ್ವಾಧಿನಾಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಿಗಳ ಕಚೇರಿ, ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ಹೆಬ್ಬಾಳ, ಬೆಂಗಳೂರು ಕಚೇರಿಯ ವ್ಯಾಪ್ತಿಗೆ ಒಳಪಡುವ ಹೊಸಕೋಟೆ, ಮಾಲೂರು, ಕೋಲಾರ, ಬಂಗಾರಪೇಟೆ, ಕೆ.ಜಿ.ಎಫ್ ತಾಲ್ಲೂಕುಗಳಲ್ಲಿ ವಿವಿಧ ಯೋಜನೆಗಳಿಗೆ ಕಂದಾಯ ಇಲಾಖೆ/ ಸರ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಶಿರಸ್ತೇದಾರರು, ಪ್ರಥಮ ದರ್ಜೆ ಸಹಾಯಕರು/ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು ಮತ್ತು ಭೂಮಾಪಕರುಗಳ ಅವಶ್ಯಕತೆಯಿರುತ್ತದೆ. ಗುತ್ತಿಗೆ ಆಧಾರದ ಮೇರೆಗೆ ತಾತ್ಕಾಲಿಕವಾಗಿ ಈ ಕೆಳಕಂಡ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಲಾಗುವುದು.

    ಶಿರಸ್ತೇದಾರರು – 5 ಹುದ್ದೆ
    ರಾಜಸ್ವ ನಿರೀಕ್ಷಕರು – 10 ಹುದ್ದೆ
    ಭೂಮಾಪಕರು – 10 ಹುದ್ದೆ
    ಪ್ರಥಮ ದರ್ಯ ಸಹಾಯಕರು – 10 ಹುದ್ದೆ
    ಗ್ರಾಮಲೆಕ್ಕಿಗರು – 10 ಹುದ್ದೆ

    ಪ್ರಾಧಿಕಾರದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೇಲ್ಕಂಡ ತಾಲ್ಲೂಕುಗಳಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ನೌಕರರು ಎಲ್ಲಾ ಸೇವಾ ದಾಖಲೆಗಳೊಂದಿಗೆ ದಿನಾಂಕ 02-08-2021 ಮತ್ತು 07-08-2021 ರವರೆಗೆ ನಡೆಯುವ walk in interview ಗೆ ಕಚೇರಿ ವೇಳೆಯಲ್ಲಿ ಈ ಕೆಳಕಂಡ ವಿಳಾಸದಲ್ಲಿ ಖುದ್ದು ಹಾಜರಾಗತಕ್ಕದ್ದು.

    ಕಚೇರಿ ವಿಳಾಸ : ವಿಶೇಷ ಭೂಸ್ವಾಧಿನಾಧಿಕಾರಿಗಳು ಹಾಗೈ ಸಕ್ಷಮ ಪ್ರಾಧಿಕಾರಿಗಳು, ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ನಂ.678/3, ನೀರುಬಾವಿ ಕೆಂಪಣ್ಣ ಲೇಔಟ್ ಹೆಬ್ಬಾಳ, ಬೆಂಗಳೂರು – 560024, ದೂರವಾಣಿ ಸಂಖ್ಯೆ -: 9880414634

  • ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕ

    ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಗ್ರಾಮಿಣ ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ್ ಮಿಶನ್ – ಗ್ರಾಮೀಣ ಜಲಜೀವನ ಯೋಜನೆ ಅನುಷ್ಠಾನಕ್ಕೆ ತಂದು ಅಭಿವೃದ್ಧಿ ಪಡಿಸುತ್ತಿದೆ. ಈ ಯೋಜನೆಯ ಅಭಿವೃದ್ಧಿಯ ಸಲುವಾಗಿ ಇಲಾಖೆಯು ಅಗತ್ಯ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ( RDPR) ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ( ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.

    ಕೇಂದ್ರ ಕಚೇರಿ:
    ಹುದ್ದೆ : ಜ್ಯೂನಿಯರ್ ಕನ್ಸಲ್ಟೆಂಟ್ ( ಎಕ್ಸಿಕ್ಯುಟಿವ್ ಇಂಜಿನಿಯರ್ ಲೆವಲ್) – 1 ಹುದ್ದೆ
    ಮಾನಿಟರಿಂಗ್ ಆಂಡ್ ಇವ್ಯಾಲ್ಯುಯೇಷನ್ ಎಕ್ಸೊರ್ಟ್ – 1 ಹುದ್ದೆ

    ಜಿಲ್ಲಾ ಪಂಚಾಯತ ಕಚೇರಿ: ಜಲ ಜೀವನ್ ಮಿಶನ್ ಮತ್ತು ಸ್ವಚ್ಛ ಭಾರತ ಮಿಶನ್ ( ಗ್ರಾಮೀಣ)
    ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಮ್ಯಾನೇಜರ್ – 02 ಹುದ್ದೆ
    ಎಂಐಎಸ್ ಕನ್ಸಲ್ಟೆಂಟ್ – 03 ಹುದ್ದೆ
    ಡಿಸ್ಟ್ರಿಕ್ಟ್‌ ಸ್ಯಾನಿಟೈಜೇಶನ್ ಮತ್ತು ಹೈಜಿನ್ ಪ್ರೊಮಿಷನ್ ಕನ್ಸಲ್ಟೆಂಟದ (ಎಸ್ ಹೆಚ್ )- 02 ಹುದ್ದೆ
    ಸಾಲಿಡ್ ಆಂಡ್ ಲಿಕ್ವಿಡ್ ವೇಸ್ಟ್ ಮ್ಯಾನೆಜ್‌ಮೆಂಟ್‌ ಕನ್ಸಲ್ಟೆಂಟ್ – 03 ಹುದ್ದೆ

    ವಯೋಮಿತಿ : ಈ ಪ್ರಕಟಣೆ ಪ್ರಕಟಗೊಂಡ ದಿನದಂದು ಅಭ್ಯರ್ಥಿಗಳ ವಯೋಮಿತಿಯು 45 ವರ್ಷ ಮೀರಿರಬಾರದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-08-2021 ಸಂಜೆ 5.30 ರೊಳಗೆ.

    ಅರ್ಜಿ ಸಲ್ಲಿಕೆ ಹೇಗೆ?
    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಫೀಶಿಯಲ್ ವೆಬ್ ಸೈಟ್ ನಲ್ಲಿ ನೀಡಲಾದ ನಿಗದಿತ ಅರ್ಜಿ ನಮೂನೆಗಳನ್ನು ಹುದ್ದೆಗಳಿಗೆ ಅನುಗುಣವಾಗಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

    ಅರ್ಜಿ ಸಲ್ಲಿಸಬೇಕಾದ ವಿಳಾಸ : ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2 ನೇ ಮಹಡಿ, ಕೆ.ಹೆಚ್.ಬಿ.ಕಟ್ಟಡ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು -560009

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ