Author: Mallika

  • ತುಮಕೂರು ಜಿಲ್ಲೆಯಲ್ಲಿ 358 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆ

    ತುಮಕೂರು ಜಿಲ್ಲೆಯ 11 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ 73 ಅಂಗನವಾಡಿ ಕಾರ್ಯಕರ್ತೆ ( ಮಿನಿ ಅಂಗನವಾಡಿ ಕಾರ್ಯಕರ್ತೆ ಸೇರಿದಂತೆ) ಹಾಗೂ 285 ಸಹಾಯಕಿ ಹುದ್ದೆ ಸೇರಿದಂತೆ ಒಟ್ಟು 358 ಗೌರವ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

    ಆನ್ಲೈನ್ ಮೂಲಕವೇ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವುದು. ತದನಂತರ ಸಲ್ಲಿಸಿದ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ದಿನಾಂಕ 04-09-2021 ಕ್ಕೆ 18 ವರ್ಷ ಪೂರ್ಣಗೊಂಡಿರಬೇಕು ಹಾಗೂ 35 ವರ್ಷ ಮೀರಿರಬಾರದು.

    ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 06-08-2021 ಬೆಳಿಗ್ಗೆ 10 ಗಂಟೆಯಿಂದ

    ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04-09-2021 ರಿಂದ ಸಂಜೆ 5.30 ರವರೆಗೆ.

    https://anganwadirecruit.kar.nic.in/

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ನೋಡಿ

  • ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ವಿವಿಧ ಹುದ್ದೆ

    ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಮಂಜೂರಾದ ಅಪರ ನಿಬಂಧಕರು 01 ಹುದ್ದೆ, ಸಹಾಯಕ ನಿಬಂಧಕರು 1 ಹುದ್ದೆ, ಕೋರ್ಟ್ ಅಧಿಕಾರಿ 01 ಹುದ್ದೆ, ತೀರ್ಪು ಬರಹಗಾರರು 01 ಹುದ್ದೆ, ಕಾನೂನು ಸಹಾಯರು/ ಸಂಶೋಧನಾ ಸಹಾಯಕರು 02 ಹುದ್ದೆ, ಶೀಘ್ರಲಿಪಿಗಾರರು 02 ಹುದ್ದೆ, ಸಹಾಯಕರು 01 ಹುದ್ದೆ ಮತ್ತು ವಾಹನ ಚಾಲಕರು 01 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ಬಾನಿಸಿದೆ.

    ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಪ್ರಥಮತಃ 06 ತಿಂಗಳ ಅವಧಿಗೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಆಯೋಗದ ವೆಬ್ಸೈಟ್ www.kshrc.karnataka.gov.in ನಲ್ಲಿ ಅಧಿಸೂಚನೆ ಹಾಗೂ ಅರ್ಜಿ ಪ್ರಪತ್ರದ ವಿವರಗಳನ್ನು ಪ್ರಕಟಿಸಲಾಗಿದೆ. ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ : 04-09-2021

  • IIM CAT ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIMS) ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ಐಐಎಂ ಅಹಮದಬಾದ್ ಈ ಬಾರಿ ಪರೀಕ್ಷೆಯನ್ನು ಆಯೋಜಿಸುತ್ತಿದೆ. 158 ನಗರಗಳಲ್ಲಿ ಈ ಬಾರಿ ಪರೀಕ್ಷೆ ನಡೆಯಲಿದೆ. ಟಾಪ್ ಮ್ಯಾನೇಜ್ಮೆಂಟ್ ಸೀಟಿಗಾಗಿ ನಡೆಯುವ ಪರೀಕ್ಷೆ ಇದಾಗಿದೆ.

    ನವೆಂಬರ್ 28, 2021 ರಂದು 3 ಸೆಶನ್ ಗಳಲ್ಲಿ ಈ ಬಾರಿ ಪರೀಕ್ಷೆ ನಡೆಯಲಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಆಗಸ್ಟ್ 4,2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 15, 2021
    ಪ್ರವೇಶ ಪತ್ರ ಬಿಡುಗಡೆ ದಿನಾಂಕ : ಅಕ್ಟೋಬರ್ 17, 2021
    ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಕೊನೆಯ ದಿನಾಂಕ : ನವೆಂಬರ್ 17, 2021
    ಪರೀಕ್ಷೆ ದಿನಾಂಕ : ನವೆಂಬರ್ 28, 2021

    ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?

    ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ iimcat.ac.in. ಗೆ ಭೇಟಿ ನೀಡಿ, ನಂತರ ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅನಂತರ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ ನಂತರ ಪ್ರಿಂಟೌಟ್ ತೆಗೆದುಕೊಳ್ಳಿ.

  • ಚಿಕ್ಕಮಗಳೂರು ಜಿಲ್ಲೆಯಲ್ಲಿ 87 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆ

    ಚಿಕ್ಕಮಗಳೂರು ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಪ್ರಸ್ತುತ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ‌‌ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ : 05-08-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-09-2021 ಸಂಜೆ 5.30 ರೊಳಗೆ

    ಅಂಗನವಾಡಿ ಕಾರ್ಯಕರ್ತೆ ಒಟ್ಟು ಹುದ್ದೆ : 27
    ಅಂಗನವಾಡಿ ಸಹಾಯಕಿ ಒಟ್ಟು ಹುದ್ದೆ : 60

    ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಮಾತ್ರವೇ ಸಲ್ಲಿಸತಕ್ಕದ್ದು. ಆನ್ಲೈನ್ ಅರ್ಜಿಯೊಂದಿಗೆ ಅಗತ್ಯ ಅರ್ಜಿಗಳನ್ನು ಸಲ್ಲಿಸದೇ ಇದ್ದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

    ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು 18-35 ವರ್ಷದ ವಯೋಮಿತಿಯೊಳಗಿರಬೇಕು.

    ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗೆ ಸ್ಥಳೀಯರಾಗಿರಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆಗೆ‌ ಪರಿಗಣಿಸುವುದಿಲ್ಲ.

    ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 4 ನೇ ತರಗತಿ ತೇರ್ಗಡೆ, ಗರಿಷ್ಠ 9 ನೇ ತರಗತಿಯವರೆಗೆ ತೇರ್ಗಡೆ ಹೊಂದಿರಬೇಕು. ಇದರಲ್ಲಿ ಹೆಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆ ಮಾಡಲಾಗುವುದು. 9 ನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.

    ನೋಟಿಫಿಕೇಶನ್

  • ಗಡಿ ಭದ್ರತಾ ಪಡೆಯಲ್ಲಿ 269 ವಿವಿಧ ಹುದ್ದೆ

    ದೇಶದ ಗಡಿ ಕಾಯುವ ಮಹತ್ವದ ಕೆಲಸ ನಿರ್ವಹಿಸುವ ಗಡಿ ಭದ್ರತಾ ಪಡೆ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ನಲ್ಲಿ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರ ತಿಳಿದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

    ಪ್ರಮುಖ ದಿನಾಂಕ :
    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :01-08-2021
    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-09-2021

    ಒಟ್ಟು ಹುದ್ದೆ ಸಂಖ್ಯೆ : 269

    ಹುದ್ದೆ : ಕಾನ್ಸ್ ಟೇಬಲ್ ( ಜನರಲ್ ಡ್ಯೂಟಿ)

    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ರಿಂದ ಗರಿಷ್ಠ 23 ವರ್ಷ ಮೀರಿರಬಾರದು.

    ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ ಅಥವಾ ಸಮಾನ‌ ಅರ್ಹತೆ ಹೊಂದಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನೋಟಿಫಿಕೇಶನ್ ನೋಡಬಹುದು.

  • ಶ್ರೀ ಬಾಲಾಜಿ ಬಂಜಾರಾ ವಿದ್ಯಾವರ್ಧಕ ಸಂಘ ( ರಿ) ಸಹ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲು ಮರು ಪ್ರಕಟಣೆ

    ಶ್ರೀ ಬಾಲಾಜಿ ಬಂಜಾರಾ ವಿದ್ಯಾವರ್ಧಕ ಸಂಘ ( ರಿ) ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಅನುದಾನಿತ ಪ್ರೌಢಶಾಲೆಯಲ್ಲಿ ಈ ಕೆಳಗೆ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ವಿವರ : ಸಹ ಶಿಕ್ಷಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಸಮಾಜ ವಿಜ್ಞಾನ ಮತ್ತು ಕನ್ನಡ ಪಂಡಿತ ಅನುದಾನಿತ ‌ವಿಷಯ ಹಾಗೂ ಬಿಎ,ಬಿಎಡ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಮೀಸಲಾತಿ ಗುಂಪು : ಸಮಾಜ ವಿಜ್ಞಾನ : ಪರಿಶಿಷ್ಟ ಜಾತಿ : 1 ಹುದ್ದೆ
    ಕನ್ನಡ ಪಂಡಿತ : ಸಾಮಾನ್ಯ : 1 ಹುದ್ದೆ

    ವೇತನ : ರೂ.33,460/- ರಿಂದ ರೂ.62,600/-

    ಅರ್ಜಿ ಸಲ್ಲಿಸುವ ವಿಧಾನ : ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ ಅರ್ಜಿಯೊಂದಿಗೆ ತಮ್ಮ ಶೈಕ್ಷಣಿಕ ವಿದ್ಯಾರ್ಹತೆ, ಜಾತಿ , ಪ್ರಮಾಣ ಪತ್ರ, ಜನ್ಮದಾಖಲೆ ಮತ್ತು ಇತರೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳು ದೃಢೀಕರಿಸಿ ನಕಲುಗಳೊಂದಿಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ರೂ. 600/-, ಸಾಮಾನ್ಯ ಅಭ್ಯರ್ಥಿಗಳು ರೂ.1000/- ಗಳ ರಾಷ್ಟ್ರೀಕೃತ ಬ್ಯಾಂಕ್ ಹುಂಡಿ ( ಡಿಡಿ)ಯನ್ನು ಅಧ್ಯಕ್ಷರು ಶ್ರೀ ಬಾಲಾಜಿ , ಬಂಜಾರಾ, ವಿದ್ಯಾವರ್ಧಕ ಸಂಘ , ಐನಾಪುರ, ತಾಂಡಾ, ತಾ/ ಜಿ/ ಇವರ ಹೆಸರಿಗೆ ಪಡೆದು, ಅರ್ಜಿಯ ಜೊತೆ ಲಗತ್ತಿಸಿ ಈ ಪ್ರಕಟಣೆ ಪ್ರಕಟಗೊಂಡ 21 ದಿನಗಳ ಅಂದರೆ ದಿನಾಂಕ 26-08-2021 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಮತ್ತು ಅರ್ಜಿಯ ಪ್ರತಿಯೊಂದನ್ನು ಅಗತ್ಯ ದಾಖಲೆಗಳ ಸಹಿತವಾಗಿ ಉಪ‌ನಿರ್ದೇಶಕರು,ಸಾ.ಶಿ. ಇಲಾಖೆ ವಿಜಯಪುರ ಇವರಿಗೆ ನಿಗದಿತ ಸಮಯದೊಳಗೆ ಅರ್ಜಿಯನ್ನು ಸಲ್ಲಿಸಬೇಕು.

    ಸಂದರ್ಶನ ನಡೆಯುವ ದಿನಾಂಕವನ್ನು ಲಿಖಿತವಾಗಿ ತಿಳಿಸಲಾಗುವುದು.

    ಅರ್ಜಿ ಸಲ್ಲಿಸುವ ವಿಳಾಸ : ಅಧ್ಯಕ್ಷರು, ಐನಾಪುರ ಪ್ರೌಢಶಾಲೆ, ಐನಾಪುರ, ತಾ/ಜಿ/ವಿಜಯಪುರ

    ವಿಶೇಷ ಸೂಚನೆ : ಈ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಬೇಕು.