Author: Mallika

  • KSET: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ( ಕೆ- ಸೆಟ್)

    KSET: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ( ಕೆ- ಸೆಟ್)

    ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆ-ಸೆಟ್ 2021 ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಓನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

    ಅಧಿಸೂಚನೆಯ ದಿನಾಂಕ 06 ನೇ ಫೆಬ್ರವರಿ 2021

    ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 08, ಫೆಬ್ರವರಿ 2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07, ಮಾರ್ಚ್ 2021

    ಅರ್ಜಿ ಶುಲ್ಕ
    ಸಾಮಾನ್ಯ ವರ್ಗ ರೂ.1150, ಪ್ರವರ್ಗ 2ಎ, 2 ಬಿ, 3ಎ , 3 ಬಿ ಅಭ್ಯರ್ಥಿಗಳಿಗೆ ರೂ. 950, ಪ್ರವರ್ಗ-1, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ , ಪಿಡ್ಬ್ಯುಡಿ ರೂ.650 ಶುಲ್ಕ ವಿಧಿಸಲಾಗಿದೆ.

    ವಯೋಮಿತಿ
    ಗರಿಷ್ಠ ವಯೋಮಿತಿ ಇಲ್ಲ

    ಅರ್ಜಿ ಶುಲ್ಕ ದಂಡದೊಂದಿಗೆ ರೂ.250 ಸಲ್ಲಿಸಲು ಕೊನೆಯ ದಿನಾಂಕ 13, ಮಾರ್ಚ್ 2021

    15, ಮಾರ್ಚ್ 2021 ಭರ್ತಿ ಮಾಡಿದ ಅರ್ಜಿಗಳನ್ನು ನೊಡೆಲ್ ಕೇದ್ರಕ್ಕೆ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

    ಪರೀಕ್ಷಾ ದಿನಾಂಕ: 11 ಎಪ್ರಿಲ್ 2021

    ಹುದ್ದೆಯ ಸ್ಥಳ : ಕರ್ನಾಟಕ

    ವಿದ್ಯಾರ್ಹತೆ

    ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಿರಬೇಕು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೂಲಕ ತಿಳಿದುಕೊಳ್ಳಬಹುದು.

    ಆನ್ ಲೈನ್ KSET ಅಪ್ಲೈ ಮಾಡಲು ಈ ಲಿಂಕನ್ನು ಕ್ಲಿಕ್ ಮಾಡಿ

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

  • ECIL ನಲ್ಲಿ 650 ಟೆಕ್ನಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ಇಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ECIL)ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಟೆಕ್ನಿಕಲ್ ಆಫೀಸರ್ ಹುದ್ದೆಗೆ (ಕಾಂಟ್ರಾಕ್ಟ್ ಆಧಾರದ ಮೇಲೆ)ಅರ್ಜಿಗಳನ್ನು ಆಹ್ವಾನಿಸಿದೆ‌. ಆಸಕ್ತ ಅಭ್ಯರ್ಥಿಗಳು ದಿನಾಂಕ 15-02-2021ರ ಒಳಗಾಗಿ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸಬಹುದು.

    ಹುದ್ದೆಯ ಹೆಸರು :ಟೆಕ್ನಿಕಲ್ ಆಫೀಸರ್

    ಹುದ್ದೆಯ ಸಂಖ್ಯೆ : 650

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-02-2021

    ವಿದ್ಯಾರ್ಹತೆ
    ಅಭ್ಯರ್ಥಿಗಳು ಇಂಜಿನಿಯರ್ ಕೋರ್ಸ್ ನ್ನು ಫಸ್ಟ್ ಕ್ಲಾಸ್ ನಲ್ಲಿ ತೇರ್ಗಡೆಯಾಗಿರಬೇಕು.
    (ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ಸ್/ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ ಆಂಡ್ ಇನ್ಸ್ಟ್ರುಮೆಂಟೇಶನ್ಸ್/ಮೆಕ್ಯಾನಿಕಲ್/ಕಂಪ್ಯೂಟರ್ ಸೈನ್ಸ್/ಇನ್ ಫೊರ್ಮೇಶನ್ ಟೆಕ್ನಾಲಜಿ)

    ವಯೋಮಿತಿ
    ಅಭ್ಯರ್ಥಿಗಳಿಗೆ 30ವರ್ಷ ಮೇಲ್ಪಟ್ಟಿರಬಾರದು.
    ವಯಸ್ಸಿನ ಸಡಿಲಿಕೆ ಕಂಪನಿ ರೂಲ್ಸ್ ಮೇಲೆ ಅವಲಂಬಿತವಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:
    ಆನ್ ಲೈನ್ ಮುಖಾಂತರ ಅಪ್ಲೈ ಮಾಡಲು ಈ ಲಿಂಕನ್ನು ಕ್ಲಿಕ್ ಮಾಡಿ

    ಅಧಿಕೃತ ವೆಬ್‌ಸೈಟ್‌ಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

  • ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹುದ್ದೆಗೆ ಅರ್ಜಿ ಆಹ್ವಾನ: ಕೂಡಲೇ ಅರ್ಜಿ ಸಲ್ಲಿಸಿ

    ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಡೆಪ್ಯೂಟೇಷನ್ ಅಡಿಯಲ್ಲಿ ಡೆಪ್ಯೂಟಿ ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಆಸಕ್ತರು ಅರ್ಜಿಗಳನ್ನು ದಿನಾಂಕ 08, ಮಾರ್ಚ್ 2021 ರ ಒಳಗೆ ಸಲ್ಲಿಸಲು ಅವಕಾಶವಿದೆ.
    ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ‌

    ಹುದ್ದೆಯ ಹೆಸರು : ಡೆಪ್ಯೂಟಿ ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್)

    ಹುದ್ದೆ ಸಂಖ್ಯೆ : 01

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-03-2021

    ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ
    https://iisc.ac.in/positions-open/

  • ಪ.ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

    2020-21 ಸಾಲಿಗೆ ಪ.ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

    ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

    ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಹೊಸದಾಗಿ ಪ್ರವೇಶ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

    ಕೋವಿಡ್ -19 ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯದ ಸಾಮರ್ಥ್ಯದ 75% ರಷ್ಟು ಮಾತ್ರ ಪ್ರವೇಶ ನೀಡಲಾಗುತ್ತದೆ. ಪ.ಜಾತಿ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ
    https://sw.kar.nic.in

    ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮತ್ತು ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಪೋಷಕರ ಮಕ್ಕಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಕ್ಕಾಗಿ
    https://ssp.karnataka.gov.in/2021

    ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ
    https://sw.kar.nic.in/hostel admissions

    ಇನ್ನಷ್ಟು ಮಾಹಿತಿಗಾಗಿ ಜಂಟಿ ನಿರ್ದೇಶಕರು/ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕುಗಳ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರನ್ನು ಸಂಪರ್ಕಿಸಬಹುದು.

  • ಸೆಂಟ್ರಲ್ ರೈಲ್ವೇಯಲ್ಲಿ 2532 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ಸೆಂಟ್ರಲ್ ರೈಲ್ವೇಯಲ್ಲಿ 2532 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ರೈಲ್ವೆ ರಿಕ್ರುಟ್ ಮೆಂಟ್ ಸೆಲ್ (RRC) ಸೆಂಟ್ರಲ್ ರೈಲ್ವೇ ಯಲ್ಲಿ ಅಪ್ರೈಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ. 2532 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಹುದ್ದೆಯ ಹೆಸರು : ಅರ್ಪೈಂಟಿಸ್

    ಹುದ್ದೆಯ ಸಂಖ್ಯೆ :2532

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05, ಫೆಬ್ರವರಿ ,2021

    ವಯೋಮಿತಿ
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವಯಸ್ಸಾಗಿರಬೇಕು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ.100 ನ್ನು ಪಾವತಿಸಬೇಕಾಗುತ್ತದೆ.ಆನ್ ಲೈನ್ ಮುಖಾಂತರ ಶುಲ್ಕ ಸಲ್ಲಿಸಬೇಕು.

    ಸೆಂಟ್ರಲ್ ರೈಲ್ವೆ ಅಪ್ರೈಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲ ಬಯಸುವ ಅಭ್ಯರ್ಥಿಗಳು 10 +2 ಶೇ.50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಹಾಗೂ ITI (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ

    ಆನ್ ಲೈನ್ ಮುಖಾಂತರ ಅಪ್ಲೈ ಮಾಡಲು ಈ ಲಿಂಕನ್ನು ಕ್ಲಿಕ್ ಮಾಡಿ

    ಅಧಿಕೃತ ವೆಬ್ ಸೈಟ್ ಲಿಂಕ್

  • ಮಹಿಳಾ ನಿಲಯ ಪಾಲಕರು ಹುದ್ದೆಗೆ ಅರ್ಜಿ ಆಹ್ವಾನ

    ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಗೆ ಮಹಿಳಾ‌ ನಿಲಯ ಪಾಲಕರು ಬೇಕಾಗಿದ್ದಾರೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಹುದ್ದೆಯ ಹೆಸರು : ಮಹಿಳಾ‌ ನಿಲಯ ಪಾಲಕರು

    ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು. ಅದರ ಜೊತೆಗೆ ಇಂಗ್ಲೀಷ್ ಚೆನ್ನಾಗಿ ಮಾತನಾಡಲು ಬರಬೇಕು.

    ಏಕಾಂಗಿ, ಅವಿವಾಹಿತೆ, ವಿಧವೆ ಹಾಗೂ ಪರಿತ್ಯಕ್ತ ರಿಗೆ ಮೊದಲ ಆದ್ಯತೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :20.02.2021

    ಅರ್ಜಿ ಸಲ್ಲಿಸುವುದು ಹೇಗೆ ?
    ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ ಹಾಗೂ ಎಲ್ಲಾ ಪ್ರಮಾಣ ಪತ್ರಗಳ ಪ್ರತಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.
    ಪ್ರಾಚಾರ್ಯರು,
    ಕಿತ್ತೂರು ರಾಣಿ ಚೆನ್ನಮ್ಮ ವಸತಿ ಸೈನಿಕ ಶಾಲೆ,‌ ಕಿತ್ತೂರ -591115
    ಜಿಲ್ಲೆ : ಬೆಳಗಾವಿ
    ಕರ್ನಾಟಕ

    ಅಧಿಕೃತ ವೆಬ್‌ಸೈಟ್‌ www.kitturusainikschool.org