Author: Mallika

  • ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ದಿನಾಂಕ :30.07.2020 ರಲ್ಲಿ ಅಧಿಸೂಚಿಸಿರುವ ಆಯುಷ್ ನಿರ್ದೇಶನಾಲಯದ ಸರಕಾರಿ ಆಯುಷ್ ಚಿಕಿತ್ಸಾ ಅ ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಗೆ ಸಂಬಂಧಿಸಿದಂತೆ ದಿನಾಂಕ 18.02.2021, 19.02.2021 ಮತ್ತು 20.02.2021 ರಂದು ಮೂಲ ದಾಖಲೆಗಳ ಪರಿಶೀಲನೆ ಯನ್ನು ಸರಕಾರಿ ಕಲಾ ಕಾಲೇಜು ಡಾ‌.ಬಿ.ಆರ್.ಅಂಬೇಡ್ಕರ್ ವೀಧಿ, ಸಿಟಿ ಸಿವಿಲ್ ಕೋರ್ಟ್‌ ಪಕ್ಕ ಬೆಂಗಳೂರು-560001 ನಡೆಯಲಿದೆ.

    ಸೂಚನಾ ಪತ್ರಗಳನ್ನು ಅಭ್ಯರ್ಥಿಗಳಿಗೆ ಈಗಾಗಲೇ ಕಳುಹಿಸಲಾಗಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಮಾಹಿತಿಗಾಗಿ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಕೆಳಗೆ ನೀಡಿರುವ ಲಿಂಕ್ ಮುಖಾಂತರ ಅಭ್ಯರ್ಥಿಗಳು ಪಟ್ಟಿಯನ್ನು ವೀಕ್ಷಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಗಮ(KOF) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿ ಓದಿ ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ:

    ಹುದ್ದೆ : ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಮತ್ತು
    ಕೆಮಿಸ್ಟ್
    ಹುದ್ದೆಯ ಸಂಖ್ಯೆ : 06
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-03-2021(5.30p.m ರ ಒಳಗೆ)

    ವಯೋಮಿತಿ : ಹುದ್ದೆಗಳಿಗನುಸಾರವಾಗಿ 08 ಮಾರ್ಚ್, 2021 ಗೆ ಅನುಸಾರವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ /ಸಿಎಟಿ-1 ಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಹಾಗೆಯೇ ಸಿಎಟಿ-2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ‌.

    ಅರ್ಜಿ ಶುಲ್ಕ
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ /ಸಿಎಟಿ-1 ಮತ್ತು ಪಿಎಚ್ ಅಭ್ಯರ್ಥಿಗಳಿಗೆ ರೂ.500/- ಹಾಗೂ ಉಳಿದ ಅಭ್ಯರ್ಥಿಗಳಿಗೆ ರೂ.1000/- ಶುಲ್ಕವಿರುತ್ತದೆ.
    ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

    ಆಯ್ಕೆ ಪ್ರಕ್ರಿಯೆ :ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

    ವಿದ್ಯಾರ್ಹತೆ :ಹುದ್ದೆಗಳಿಗನುಸಾರವಾಗಿ ಪದವಿ/ಬಿ.ಎಸ್ಸಿ/ಬಿಬಿಎಂ/ಬಿಬಿಎ/ಬಿಕಾಂ ವಿದ್ಯಾರ್ಹತೆ ಯನ್ಯ ಅಭ್ಯರ್ಥಿಗಳು ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್‌ಸೈಟ್‌ ಗೆ ಭೇಟಿ ನೀಡಿ
    www.kofchitradurga.com

    ನೋಟಿಫಿಕೇಶನ್ ಕಾಗಿ ಇಲ್ಲಿ ಕ್ಲಿಕ್ ಮಾಡಿ

    ಅಪ್ಲಿಕೇಶನ್ ಫಾರಂಗಾಗಿ ಇಲ್ಲಿ ಕ್ಲಿಕ್ ಮಾಡಿ

  • ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹುದ್ದೆ : ಕೂಡಲೇ ಅರ್ಜಿ ಸಲ್ಲಿಸಿ

    ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹುದ್ದೆ : ಕೂಡಲೇ ಅರ್ಜಿ ಸಲ್ಲಿಸಿ

    ಭಾರತೀಯ ವಿಜ್ಞಾನ ಸಂಸ್ಥೆ ಯು ತನ್ನ ಅಧಿಸೂಚನೆಯಲ್ಲಿ ಫೆಸಿಲಿಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿವರಗಳನ್ನು ತಿಳಿಯಿರಿ.

    ಹುದ್ದೆ : ಅಡ್ವಾನ್ಸ್ಡ್ ಫೆಸಿಲಿಟಿ ಫಾರ್ ಮೈಕ್ರೋಸ್ಕೋಪಿ ಮತ್ತು ಮೈಕ್ರೋಅನಾಲಿಸಸ್ (ಎಎಫ್ ಎಂಎಂ) ನಲ್ಲಿ ಫೆಸಿಲಿಟಿ ಮ್ಯಾನೇಜರ್ ಹುದ್ದೆ

    ಹುದ್ದೆಯ ಸಂಖ್ಯೆ : 01

    ವಿದ್ಯಾರ್ಹತೆ : ವಿಜ್ಞಾನ ಅಥವಾ ಇಂಜಿನಿಯರಿಂಗ್ ಡಾಕ್ಟರಲ್ ಪದವಿ ಅಥವಾ ವಿಜ್ಞಾನ/ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಪದವಿಯೊಂದಿಗೆ ಕನಿಷ್ಟ 4 ವರ್ಷಗಳ ಅನುಭವ, ಉನ್ನತ ಮಟ್ಟದ ಟ್ರಾನ್ಸ್ ಮಿಷನ್ ಮತ್ತು ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಮತ್ತು ಇತರೆ ಸಂಬಂಧಿತ ಕ್ಷೇತ್ರದಲ್ಲಿ ದಿನಚರಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಪರಿಣಿತಿ ಹೊಂದಿರಬೇಕು.

    ಅಪೇಕ್ಷಣೀಯ ಅರ್ಹತೆ : ಪಿಹೆಚ್.ಡಿ/ಎಂಇ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01:03:2021
    ವಯೋಮಿತಿ : ಅರ್ಜಿ ಸ್ವೀಕೃತಿಗೆ ಕೊನೆಯ ದಿನದಂದು ಅಭ್ಯರ್ಥಿಗೆ 40 ವರ್ಷ ತುಂಬಿರಬಾರದು.

    ವೇತನ : ಪ್ರತಿ ತಿಂಗಳಿಗೆ ಕ್ರೋಢೀಕೃತ ರೂ‌ 1,00,000/- , 2,00,000/-

    ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ನಿಖರ ವೇತನ

    ಅವಧಿ : ಪ್ರಾರಂಭಿಕ ಒಂದು ವರ್ಷ ಮತ್ತು ತೃಪ್ತಿದಾಯಕ ಕಾರ್ಯಕ್ಷಮತೆ ಮತ್ತು ನಡವಳಿಕಯ ಮೇಲೆ ವಾರ್ಷಿಕವಾಗಿ ಐದು ವರ್ಷಗಳವರೆಗೆ ಅವಧಿ ವಿಸ್ತರಣೆ.

    ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್‌ ಗೆ ಭೇಟಿ ನೀಡಿ.

  • ಐಡಿಬಿಐ(IDBI) ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ‌: ಆಸಕ್ತರು ಅರ್ಜಿ ಸಲ್ಲಿಸಿ

    ಐಡಿಬಿಐ (IDBI) ನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೆಳಕಂಡ ಮಾಹಿತಿಯನ್ನು ಓದಿ, ಅರ್ಜಿ ಸಲ್ಲಿಸಬಹುದು.

    ಹುದ್ದೆ : ಬ್ಯಾಂಕ್ ಮೆಡಿಕಲ್ ಆಫೀಸರ್

    ಹುದ್ದೆಯ ಸಂಖ್ಯೆ : 23

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24 ಫೆಬ್ರವರಿ,2021

    ವಯೋಮಿತಿ : ಅಭ್ಯರ್ಥಿಗಳಿಗೆ ಗರಿಷ್ಠ 65 ವಯಸ್ಸಾಗಿರಬೇಕು.

    ವಿದ್ಯಾರ್ಹತೆ : ಮೆಡಿಕಲ್ ಕೌನ್ಸಿಲ್ ಅಲೋಪತಿಕ್ ನಿಂದ ಅಪ್ರೂವ್ ಆದ ಎಂಡಿ/ಎಂಬಿಬಿಎಸ್ ಪದವಿಯನ್ನು ಅಂಗೀಕೃತ ಕಾಲೇಜಿನಿಂದ ಪಡೆದುಕೊಂಡಿರಬೇಕು.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಐಡಿಬಿಐ ಫಾರ್ಮಾಟ್ ಫಾರಂ ನ್ನು ತುಂಬಿ (ಯಾವುದೇ ಸರ್ಟಿಫಿಕೇಟ್ ನ್ನು ಲಗತ್ತಿಸುವಂತಿಲ್ಲ.) ಪೋಸ್ಟ್ ಮುಖಾಂತರ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು:

    General Manager,
    IDBI Bank
    21st floor, IDBI Bank tower, Cuffe Parade,
    Colaba, Mumbai-400005

  • ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) ನಲ್ಲಿ 346 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) ನಲ್ಲಿ 346 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ವಿವಿಧ ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿ ಓದಿ ಅರ್ಜಿ ಹಾಕಬಹುದು.

    ಹುದ್ದೆ : ಟೆಕ್ನಿಶಿಯನ್ ಮತ್ತು ಟ್ರೇಡ್ ಅಪ್ರೆಂಟಿಸ್

    ಹುದ್ದೆಯ ಸಂಖ್ಯೆ: 346

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-03-2021

    ಲಿಖಿತ ಪರೀಕ್ಷೆ : 21-03-2021

    ವಯೋಮಿತಿ :
    ಅರ್ಜಿ ಸಲ್ಲಿಸುವ ಇಡ್ಬ್ಯುಎಸ್ /ಜನರಲ್ ಅಭ್ಯರ್ಥಿಗಳಿಗೆ 28.02.2021 ರ ಅನ್ವಯದಂತೆ ಕನಿಷ್ಠ 18 ಹಾಗೂ ಗರಿಷ್ಠ 24 ವಯಸ್ಸಾಗಿರಬೇಕು.
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿ/ಪಿಡ್ಬ್ಯುಬಿಡಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ಸಂಸ್ಥೆಯ ರೂಲ್ಸ್ ಪ್ರಕಾರ ನೀಡಲಾಗಿದೆ.

    ವಿದ್ಯಾರ್ಹತೆ
    ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಇಂಜಿನಿಯರಿಂಗ್ ಇನ್ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್/ಸಿವಿಲ್/ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ /ಐಟಿಐ ವಿದ್ಯಾರ್ಹತೆಯನ್ನು ಅಂಗೀಕೃತ ವಿಶ್ವವಿದ್ಯಾಲಯದಿಂದ 50% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ www.iocl.com ಗರ ಭೇಟಿ ನೀಡಿ.

  • SSCKKR ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    SSCKKR ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸ್ಟಾಫ್ ಸೆಲೆಕ್ಷನ್ ಕಮಿಶನ್,ಕರ್ನಾಟಕ ಕೇರಳ ರೀಜನ್ ಅಧಿಸೂಚನೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಹುದ್ದೆ : ಡಿಇಒ, ಜ್ಯೂನಿಯರ್ ಇಂಜಿನಿಯರ್ ಮತ್ತು ವಿವಿಧ ಹುದ್ದೆ

    ಹುದ್ದೆಯ ಸಂಖ್ಯೆ: 225 ಡಿಇಒ

    ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ , ಮಾಜಿ ಸೈನಿಕ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ.
    ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು ರೂ‌.100 ನ್ನು ಆನ್ ಲೈನ್ ಮುಖಾಂತರ ಪಾವತಿಸಬೇಕಾಗುತ್ತದೆ.

    ವಿದ್ಯಾರ್ಹತೆ

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10 ನೇ ತರಗತಿ, 12 ನೇ ತರಗತಿ, ಡಿಪ್ಲೋಮಾ, ಪದವಿ, ಕಾನೂನು ಪದವಿ, ಬಿ.ಎಸ್ಸಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರಬೇಕು.

    ವಯೋಮಿತಿ

    ಹುದ್ದೆಗೆ ಅನುಸಾರವಾಗಿ ಅರ್ಜಿ ಹಾಕುವ ಅಭ್ಯರ್ಥಿಗೆ ಕನಿಷ್ಠ 18 ಹಾಗೂ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು. ಪ.ಜಾತಿ/ಪ.ಪಂಗಡ, ಅಂಗವಿಕಲ ಅಭ್ಯರ್ಥಿಗಳಿಗೆ ಕ್ರಮವಾಗಿ 5 ಮತ್ತು 10 ವರ್ಷಗಳ ವಯೋಮಿತಿ ಸಡಿಲಿಕೆ ಯನ್ನು ನೀಡಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://ssckkr.kar.nic.in/