Author: Mallika

  • ರಾಯಚೂರು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಆಹ್ವಾನ

    ರಾಯಚೂರು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಆಹ್ವಾನ

    ರಾಯಚೂರು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಯನ್ನು ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ರಾಯಚೂರು ಜಿಲ್ಲೆಯಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದ್ದು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಅಂಗನವಾಡಿ ಸಹಾಯಕಿ

    ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : ಫೆಬ್ರವರಿ 19, 2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 18, 2021

    ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ

    ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು. ವಿಕಲ ಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

    ಸ್ಥಳೀಯರಿಗೆ ಆದ್ಯತೆ

    ಆಸಿಡ್ ದಾಳಿಗೆ ಒಳಗಾದ ಮಹಿಳೆಯರು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಇತರ ಎಲ್ಲಾ ಸ್ವೀಕೃತ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹಾಗೂ ಮೊದಲ ಆದ್ಯತೆ ಮೇರೆಗೆ ನೇರವಾಗಿ ಅವರನ್ನೇ ಆಯ್ಕೆ ಮಾಡಲಾಗುವುದು.

    ವಿಧವೆಯರ ಆದ್ಯತೆ:
    ವಿಧವೆಯರಲ್ಲಿ ರೈತನ ಪತ್ನಿಗೆ ಮೊದಲ ಆದ್ಯತೆ. ಉಳಿದಂತೆ ಇತರ ವಿಧವೆಯರನ್ನು ಪರಿಗಣಿಸಲಾಗುವುದು. ಅರ್ಜಿ ಸಲ್ಲಿಸಿದ ನಂತರ ವಿಧವೆಯರಾದರೆ ಪರಿಗಣಿಸಲಾಗುವುದಿಲ್ಲ. ಗರಿಷ್ಠ ಅಂಕ ಪಡೆದ ವಿಧವೆಯರ ಅರ್ಜಿಯನ್ನು ಪರಿಗಣಿಸಲಾಗುವುದು.

    ಅಂಗವಿಕಲ ಅಭ್ಯರ್ಥಿಗಳಿಗೆ ಆದ್ಯತೆ : ಕಿವುಡರು, ಮೂಕರು, ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು , ಕಾರ್ಯಕರ್ತೆ ಹುದ್ದೆ ಅರ್ಹರಿರುವುದಿಲ್ಲ.

    ಅರ್ಜಿ ಶುಲ್ಕ : ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

    ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ ಲೈನಲ್ಲಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಿ, ಅರ್ಜಿ ಭರ್ತಿ ಮಾಡಿ, ಮಾರ್ಚ್ 18, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

    ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು, ಅಂಚೆ ಅಥವಾ ಖುದ್ದಾಗಿ ಸಲ್ಲಿಸಲು ಅವಕಾಶವಿಲ್ಲ. ಅಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

    ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

  • ಬಾರ್ಡರ್ ರೋಡ್ಸ್ ಆರ್ಗನೈಸೇಶನ್(ಬಿ.ಆರ್.ಓ) ನಲ್ಲಿ 459 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್(ಬಿ.ಆರ್.ಓ) ನಲ್ಲಿ 459 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್(ಬಿ.ಆರ್.ಓ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

    ಹುದ್ದೆ : ಡ್ರಾಪ್ಟ್ಸ್ ಮ್ಯಾನ್ – 43
    ಸುಪರ್ ವೈಸರ್ ಸ್ಟೋರ್ – 11
    ರೇಡಿಯೊ ಮೆಕ್ಯಾನಿಕ್ – 04
    ಲ್ಯಾಬ್ ಅಸಿಸ್ಟೆಂಟ್ – 01
    ಮಲ್ಟಿ ಸ್ಕಿಲ್ಡ್ ವರ್ಕರ್ – 250
    ಸ್ಟೋರ್ ಕೀಪರ್ ಟೆಕ್ನಿಕಲ್ -150

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03.04.2021

    ವಿದ್ಯಾರ್ಹತೆ :

    ಡ್ರಾಪ್ಟ್ಸ್ ಮ್ಯಾನ್ – 12th
    ಸುಪರ್ ವೈಸರ್ ಸ್ಟೋರ್ – ಡಿಗ್ರಿ
    ರೇಡಿಯೊ ಮೆಕ್ಯಾನಿಕ್ -10th
    ಲ್ಯಾಬ್ ಅಸಿಸ್ಟೆಂಟ್ -12th
    ಮಲ್ಟಿ ಸ್ಕಿಲ್ಡ್ ವರ್ಕರ್ – 10th
    ಸ್ಟೋರ್ ಕೀಪರ್ ಟೆಕ್ನಿಕಲ್ -12th

    ವೇತನ :

    ಡ್ರಾಪ್ಟ್ಸ್ ಮ್ಯಾನ್ -29,200/- ರಿಂದ 92,300/-
    ಸುಪರ್ ವೈಸರ್ ಸ್ಟೋರ್ – 25,100/- ರಿಂದ 81,100/-
    ರೇಡಿಯೊ ಮೆಕ್ಯಾನಿಕ್ -25,100/- ರಿಂದ 81,100/-
    ಲ್ಯಾಬ್ ಅಸಿಸ್ಟೆಂಟ್ -21,700/-ರಿಂದ 69,100/-
    ಮಲ್ಟಿ ಸ್ಕಿಲ್ಡ್ ವರ್ಕರ್ -18,000/- ರಿಂದ 56,900/-
    ಸ್ಟೋರ್ ಕೀಪರ್ ಟೆಕ್ನಿಕಲ್ -19900/- ರಿಂದ 63,200/-

    ವಯೋಮಿತಿ :
    ಡ್ರಾಪ್ಟ್ಸ್ ಮ್ಯಾನ್ , ಸುಪರ್ ವೈಸರ್ ಸ್ಟೋರ್ ,
    ರೇಡಿಯೊ ಮೆಕ್ಯಾನಿಕ್ , ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 27 ವಯೋಮಿತಿ ಹೊಂದಿರಬೇಕು.
    ಮಲ್ಟಿ ಸ್ಕಿಲ್ಡ್ ವರ್ಕರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ಗರಿಷ್ಠ 25 ವಯೋಮಿತಿ ಹೊಂದಿರಬೇಕು. ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ಹಾಗೂ ಗರಿಷ್ಠ 27 ವಯೋಮಿತಿ ಹೊಂದಿರಬೇಕು.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಪಿಡ್ಬ್ಯು ಡಿ ಅಭ್ಯರ್ಥಿಗಳಿಗೆ 10 ವರ್ಷ, ಒಬಿಸಿ, 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಓನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು.

    ಒಬಿಸಿ/ಸಾಮಾನ್ಯ/ಇಡ್ಬ್ಯುಎಸ್/ಎಕ್ಸ್ ಸರ್ವಿಸ್ ಮ್ಯಾನ್ರೂ.50/-
    ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದವರಿಗೆ ಯಾವುದೇ ಶುಲ್ಕವಿರುವುದಿಲ್ಲ.

    ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ, ಫಿಸಿಕಲ್ ಎಫಿಶಿಯೆನ್ಸಿ ಪರೀಕ್ಷೆ ಮತ್ತು ಪ್ರಾಕ್ಟಿಟಿಕಲ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ03 ಎಪ್ರಿಲ್ 2021ರೊಳಗೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಮುಖಾಂತರ ಸಲ್ಲಿಸಬೇಕು.

    ವಿಳಾಸ ಈ ಕೆಳಗಿನಂತೆ ;

    Commandant,
    GREF Centre,Dighi Camp, Pune-411015

    ಅಧಿಕೃತ ವೆಬ್‌ಸೈಟ್‌ ಲಿಂಕ್ ಕ್ಲಿಕ್ ಮಾಡಿ

  • ಕೇಂದ್ರೀಯ ವಿದ್ಯಾಲಯ (KVS)ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೇಂದ್ರೀಯ ವಿದ್ಯಾಲಯ (KVS)ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೇಂದ್ರೀಯ ವಿದ್ಯಾಲಯ ಚನ್ನಪಟ್ಟಣ ರಾಮನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ‌ ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ : ಪದವಿ, ಬಿ.ಎಡ್,ಡಿಎಡ್, ಡಿಪ್ಲೋಮಾ,ಸ್ನಾತಕೋತ್ತರ ಪದವಿ,ಪೋಸ್ಟ್ ಗ್ರಾಜ್ಯುಯೇಟ್,ಬಿಸಿಎ,ಬಿಎಸ್ಸಿ, ಎಂಸಿಎ,ಎಂ.ಎಸ್ಸಿ,ಬಿ.ಪಿ.ಎಡ್,ಪೋಸ್ಟ್ ಗ್ರಾಜ್ಯುಯೇಟ್,ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಯನ್ನು ಅಂಗೀಕೃತ ಸಂಸ್ಥೆಯಿಂದ ಹೊಂದಿರಬೇಕು.

    ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಫೆಬ್ರವರಿ 24, 2021 ರಂದು ಬೆಳಗ್ಗೆ 9 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.

    ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 21,250/- ವೇತನ ನೀಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕನ್ನು ಕ್ಲಿಕ್ ಮಾಡಿ.

    ನೋಟಿಫಿಕೇಶನ್ ಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

  • ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸಸ್ (NCBS) ನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ

    ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸಸ್ (NCBS) ನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ

    ಎನ್ ಸಿ ಬಿ ಎಸ್ (ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸಸ್) ಸಂಸ್ಥೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಹುದ್ದೆ : ಫೆಸಿಲಿಟಿ ಅಸಿಸ್ಟೆಂಟ್

    ಹುದ್ದೆ ಸಂಖ್ಯೆ :01

    ಹುದ್ದೆ ಸ್ಥಳ: ಬೆಂಗಳೂರು ಕರ್ನಾಟಕ

    ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 18-02-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-03-2021

    ಅಭ್ಯರ್ಥಿಗಳ ಸಂಸ್ಥೆಯ ಮಿಂಚಂಚೆ( ಇ ಮೈಲ್) ಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.

    [email protected] ಗೆ ದಿನಾಂಕ 03-03-2021ರೊಳಗೆ ತಮ್ಮ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.

    ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ/ ಬಿ.ಟೆಕ್, ಎಂ.ಫಾರ್ಮ,ಮಾಸ್ಟರ್ ಡಿಗ್ರಿ ಯನ್ನು ಯಾವುದೇ ಅಂಗೀಕೃತ ಸಂಸ್ಥೆ ಅಥವಾ ಬೋರ್ಡ್ ನಿಂದ ಪಡೆದುಕೊಂಡಿರಬೇಕು.

    ವಯೋಮಿತಿ : ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

  • ತುಮಕೂರು ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ತುಮಕೂರು ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ತುಮಕೂರು ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

    ಹುದ್ದೆ : ಬೆರಳಚ್ಚುಗಾರ-07
    ಬೆರಳಚ್ಚು ನಕಲುಗಾರ – 03
    ಜಾರಿ ಪೇದೆ-11

    ಹುದ್ದೆ ಸಂಖ್ಯೆ : 21

    ಹುದ್ದೆ ಸ್ಥಳ‌: ತುಮಕೂರು ನ್ಯಾಯಾಲಯ

    ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 23-02-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24-03-2021

    ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- 26-03-2021

    ಸೂಚನೆ : ವಯೋಮಿತಿ ಹಾಗೂ ವಿದ್ಯಾರ್ಹತೆ ಗಳು ಹಿಂದಿನ ದಿನಾಂಕಗಳೇ ಅನ್ವಯವಾಗುತ್ತದೆ.

    ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ.

    ವೇತನ : ಬೆರಳಚ್ಚುಗಾರ ಮತ್ತು ಬೆರಳಚ್ಚು ನಕಲುಗಾರ ಹುದ್ದೆಗಳಿಗೆ ರೂ. 21,000/- ರಿಂದ ರೂ.42,000/-

    ಜಾರಿಪೇದೆ ಹುದ್ದೆಗಳಿಗೆ ರೂ. 19,950/- ರಿಂದ 37,900/- ರವರೆಗೆ ವೇತನವಿರುತ್ತದೆ.

    ವಿದ್ಯಾರ್ಹತೆ : 10 ನೇ ತರಗತಿ ತೇರ್ಗಡೆ ಹೊಂದಿರಬೇಕು.

    ಕನ್ನಡ ಮತ್ತು ಆಂಗ್ಲ ಪ್ರೌಢ ದರ್ಜೆಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

    ಜಾರಿಪೇದೆ ಹುದ್ದೆಗೆ ತತ್ಸಮಾನ ವಿದ್ಯಾರ್ಹತೆ ಅಥವಾ ಎಸ್ ಎಸ್ ಎಲ್ ಸಿ ಜೊತೆಗೆ ಚಾಲನಾ ಪರವಾನಗಿ ಹೊಂದಿರಬೇಕು.

    ವಯೋಮಿತಿ ‌: ಕನಿಷ್ಠ 18 ಹಾಗೂ ಗರಿಷ್ಠ 35 ವಯೋಮಿತಿ ಮೀರಿರಬಾರದು.

    ಜಾತಿವಾರು ಮೀಸಲಾತಿ ನಿಯಮ ಅನ್ವಯಿಸುತ್ತದೆ.

    ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ ರೂ.200/- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ , ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/- ಅನ್ವಯಿಸುತ್ತದೆ.

    ಅರ್ಜಿ ಶುಲ್ಕ ವನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಎಪ್ರಿಲ್ 18 ಹಾಗೂ ಚಲನ್ ಮೂಲಕ ಪಾವತಿಸಲು ಎಪ್ರಿಲ್ 21 ರವರೆಗೆ ಅವಕಾಶವಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕನ್ನು ಕ್ಲಿಕ್ ಮಾಡಿ

  • ಎಂಪ್ಲೋಯಿಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೋರೇಷನ್ ಕರ್ನಾಟಕ ( ಇಎಸ್ ಐಸಿ) ನಲ್ಲಿ ಉದ್ಯೋಗವಕಾಶ ಕೂಡಲೇ ಅರ್ಜಿ ಸಲ್ಲಿಸಿ

    ಎಂಪ್ಲೋಯಿಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೋರೇಷನ್ ಕರ್ನಾಟಕ ( ಇಎಸ್ ಐಸಿ) ನಲ್ಲಿ ಉದ್ಯೋಗವಕಾಶ ಕೂಡಲೇ ಅರ್ಜಿ ಸಲ್ಲಿಸಿ

     

    ಎಂಪ್ಲೋಯಿಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೋರೇಷನ್ ಕರ್ನಾಟಕ ( ಇಎಸ್ ಐಸಿ)(ಕರ್ನಾಟಕ ರಾಜ್ಯ ವಿಮಾ ನಿಗಮ) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು ಇಲ್ಲಿದೆ ಸದವಕಾಶ. ವಿವರಗಳು ಈ ಕೆಳಗಿನಂತೆ :

    ಹುದ್ದೆ : ಟೀಚಿಂಗ್ ಫ್ಯಾಕ್ಯುಲಿಟಿ. (ಬೋಧಕ ಸಿಬ್ಬಂದಿ ಹುದ್ದೆ)
    1.ಫೊಫೆಸರ್ -_03

    2.ಅಸೋಸಿಯೇಟ್ ಪ್ರೊಫೆಸರ್-05

    1. ಅಸಿಸ್ಟೆಂಟ್ ಪ್ರೊಫೆಸರ್-01

    ಹುದ್ದೆ ಸಂಖ್ಯೆ : 09

    ಹುದ್ದೆ ಸ್ಥಳ : ಕಲ್ಬುರ್ಗಿ ಕರ್ನಾಟಕ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-03-2022(10.00a.m)

    ವಯೋಮಿತಿ : ಅಭ್ಯರ್ಥಿಗೆ ಗರಿಷ್ಠ 64 ವಯಸ್ಸಾಗಿರಬೇಕು.(08.03.2021ಗೆ)

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಡಿಮಾಂಡ್ ಡ್ರಾಫ್ಟ್ ಮುಖಾಂತರ ಅರ್ಜಿ ಶುಲ್ಕ ಸಲ್ಲಿಸಬೇಕು.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ,ಇಎಸ್ ಐಎಸ್, ಮಹಿಳಾ ಅಭ್ಯರ್ಥಿಗಳು,ಎಕ್ಸ್ ಸರ್ವಿಸ್ ಮ್ಯಾನ್ ಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

    ಉಳಿದ ಎಲ್ಲಾ ಅಭ್ಯರ್ಥಿಗಳು ರೂ.300/- ಅರ್ಜಿ ಶುಲ್ಕ ಪಾವತಿಸಬೇಕು.

    ವಿದ್ಯಾರ್ಹತೆ : ಅಂಗೀಕೃತ ಸಂಸ್ಥೆಯಿಂದ ಅಭ್ಯರ್ಥಿಗಳು ಡಿಗ್ರಿ, ಪೋಸ್ಟ್ ಗ್ರಾಜ್ಯುಯೇಷನ್ ವಿದ್ಯಾರ್ಹತೆ ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

     

    ವೇತನ : ಪ್ರೊಫೆಸರ್- 1,64,000/-
    ಅಸಿಸ್ಟೆಂಟ್ ಪ್ರೊಫೆಸರ್- ರೂ.92,000/-
    ಅಸೋಸಿಯೇಟ್ ಪ್ರೊಫೆಸರ್- ರೂ. 1,06,000/-

    ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳೊಂದಿಗೆ ಈ ವಿಳಾಸಕ್ಕೆ ದಿನಾಂಕ 08-03-2021 (ಸಮಯ ಬೆಳಗ್ಗೆ 11.00 )ರಂದು ಸಂದರ್ಶನಕ್ಕೆ ಹಾಜರಿರತಕ್ಕದ್ದು.

    ವಿಳಾಸ:

    Office of the Dean,
    ESIC Dental College,
    Kalaburgi-585106

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ