Author: Mallika

  • ಐಡಿಇಎಂಐ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಐಡಿಇಎಂಐ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಇನ್ಸ್ಟಿಟ್ಯೂಟ್ ಫಾರ್ ಡಿಸೈನ್ ಆಫ್ ಎಲೆಕ್ಟ್ರಿಕಲ್ ಮೆಷರಿಂಗ್ ಇನ್ಸ್ಟ್ರುಮೆಂಟ್ಸ್ (ಐಡಿಇಎಂಐ) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 6 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ,ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-03-2021

    ವಿದ್ಯಾರ್ಹತೆ : 3D ಅನಿಮೇಷನ್‌ ಮತ್ತು ವಿಎಫ್ ಎಕ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶಾಖೆಯಲ್ಲಿ ಡಿಪ್ಲೋಮಾ ಅಥವಾ ಪದವಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಸಮಾನ/ ಸಂಸ್ಥೆ ಗಳು ಮತ್ತು ನಾಪೇಕ್ಷ ಕ್ಷೇತ್ರದಲ್ಲಿ ವಿಶೇಷ ಕೋರ್ಸ್ ಹೊಂದಿರಬೇಕು.

    ಅನುಭವ: 2 ರಿಂದ 5 ವರ್ಷಗಳು 3D ಅನಿಮೇಷನ್‌ ತಜ್ಞರ ಮಟ್ಟದ ಪ್ರಾಯೋಗಿಕ ಜ್ಞಾನ ಮತ್ತು ಆಟೋಡೆಸ್ಕ್ ಮಾಯಾ 3DD max ದಲ್ಲಿ VFX ಮತ್ತು 3Dಮಾಡಲಿಂಗ್, ಲೈಟಿಂಗ್, ಟೆಕ್ಸೃರಿಂಗ್, ರಿಗ್ಗಿಂಗ್, ಸಂಯೋಜನೆ ಸಂಪಾದನೆ, ಇವುಗಳಲ್ಲಿ ಬಲವಾದ ಜ್ಞಾನವನ್ನು ಹೊಂದಿರಬೇಕು.

    ಫೊಟೋಶಾಪ್, ಇಲಸ್ಟ್ರೇಟರ್ , ಪರಿಣಾಮಗಳ ನಂತರ, ಪ್ರೀಮಿಯರ್ ಪ್ರೊ ಮತ್ತು 3D ಸಾಫ್ಟ್‌ವೇರ್ ಬಗ್ಗೆ ಜ್ಞಾನ ಇರಬೇಕು.

    ವೆಬ್ ಡಿಸೈನರ್ ಮತ್ತು ಡೆವಲಪರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶಾಖೆಯಲ್ಲಿ ಡಿಪ್ಲೋಮಾ ಅಥವಾ ಪದವಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಮಾನ/ಸಂಸ್ಥೆಗಳು ಮತ್ತು ಸಾಪೇಕ್ಷ ಕ್ಷೇತ್ರದಲ್ಲಿ ವಿಶೇಷ ಕೋರ್ಸ್

    ಅನುಭವ : 2ರಿಂದ5 ವರ್ಷಗಳು, ಫ್ರಂಟ್-ಎಂಡ್ ಮತ್ತು ಬ್ಯಾಕ್ ಎಂಡ್ ಅಭಿವೃದ್ಧಿ ಯಲ್ಲಿ ಅನುಭವ, ವೆಬ್ ಪ್ರೋಗಾಮಿಂಗ್‌‌ ಭಾಷೆಗಳಾದ HTML ಮತ್ತುCSS, jQuery, Java Script ಮತ್ತುbootstrap, ವೆಬ್ ಡಿಸೈನಿಂಗ್, ಫೋಟೋಶಾಪ್ ಇಲ್ಲಸ್ಟ್ರೇಟರ್, ಇದರ ಬಗ್ಗೆ
    ಹೆಚ್ಚಿನ ಮಾಹಿತಿಯು ಹೆಚ್ಚುವರಿ ಪ್ರಯೋಜನ ವಾಗಿರುತ್ತದೆ.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 35 ವಯೋಮಿತಿ ಉಳ್ಳವರಾಗಿರಬೇಕು.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ,ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸ ಅಥವಾ ಇ-ಮೈಲ್ ಗೆ ದಿನಾಂಕ ಮಾರ್ಚ್ 06, 2021 ರೊಳಗಡ ಸಲ್ಲಿಸಬೇಕು.

    ಇ-ಮೈಲ್ [email protected]

    ವಿಳಾಸ ಈ ಕೆಳಗಿನಂತಿವೆ:

    ಗೆ, ಪ್ರಧಾನ ನಿರ್ದೇಶಕ ಐ/ಸಿ, ಇನ್ಸ್ಟಿಟ್ಯೂಟ್ ಫಾರ್ ಡಿಸೈನ್ ಆಫ್ ಎಲೆಕ್ಟ್ರಿಕಲ್ ಮೆಷರಿಂಗ್ ಇನ್ಸ್ಟ್ರುಮೆಂಟ್ಸ್ (ಐಡಿಇಎಂಐ) ಈಸ್ಟರ್ನ್ ಎಕ್ಸ್‌ಪ್ರೆಸ್‌ ಹೆದ್ದಾರಿ, ಚುನಭಟ್ಟೆ,ಸಿಯಾನ್ ಪಿ.ಒ ಮುಂಬೈ-400022

    ಅಪ್ಲಿಕೇಶನ್ ಸ್ವರೂಪ ಐಡಿಇಎಂಐ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. www.idemi.org

  • ಎಫ್ ಸಿಐ ನಲ್ಲಿ ಉದ್ಯೋಗವಕಾಶ

    ಎಫ್ ಸಿಐ ನಲ್ಲಿ ಉದ್ಯೋಗವಕಾಶ

    ಭಾರತೀಯ ಆಹಾರ ನಿಗಮ (ಎಫ್ ಸಿಐ) ದೇಶದ ಆಹಾರ ಭದ್ರತಾ ಖಾತ್ರಿಯಡಿ ಒಂದು ಬೃಹತ್ ಸಾರ್ವಜನಿಕ ಉದ್ದಿಮೆಯಾಗಿದ್ದು, ದೇಶಾದ್ಯಂತ ಇರುವ ಇದರ ಕಚೇರಿಗಳಿಗೆ ನಿಗದಿತ ವಿದ್ಯಾರ್ಹತೆ, ವಯಸ್ಸು, ಅನುಭವ ಇತ್ಯಾದಿ ಇರುವ ಅರ್ಹ ಅಭ್ಯರ್ಥಿಗಳಿಂದ ಸಹಾಯಕ ಪ್ರಧಾನ ವ್ಯವಸ್ಥಾಪಕ (ಪ್ರಧಾನ ಆಡಳಿತ/ತಾಂತ್ರಿಕ/ಲೆಕ್ಕ/ಕಾನೂನು ) ಮತ್ತು ವೈದ್ಯಕೀಯ ಅಧಿಕಾರಿ ಹುದ್ದೆಗಳಿಗಾಗಿ ಆನ್ ಲೈನ್ ಅರ್ಜಿಗಳನ್ನು ಮಾತ್ರ ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ :01-03-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2021
    (16:00 ಗಂಟೆವರೆಗೆ)

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.fci.gov.in ಕ್ಲಿಕ್ ಮಾಡಿ

  • ಎನ್ ಎಟಿಎ 2021 ರ ಮೊದಲ ಮತ್ತು ಎರಡನೇ ಪರೀಕ್ಷೆ  : ದಿನಾಂಕಗಳ ಪ್ರಕಟಣೆ

    ಎನ್ ಎಟಿಎ 2021 ರ ಮೊದಲ ಮತ್ತು ಎರಡನೇ ಪರೀಕ್ಷೆ : ದಿನಾಂಕಗಳ ಪ್ರಕಟಣೆ

    ದಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನ್ಯಾಷನಲ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ಎನ್ ಎಟಿಎ) 2021 ರ ಮೊದಲ ಮತ್ತು‌ ಎರಡನೇ ಪರೀಕ್ಷೆಗಳು ಎಪ್ರಿಲ್ 10, ಜೂನ್ 12, 2021 ರಂದು ನಡೆಯಲಿವೆ.

    ಎನ್ ಎಟಿಎ 2021 ರ ಕೈಪಿಡಿಯನ್ನು ಎರಡು ಟೆಸ್ಟ್ ಗಳ‌ ಪ್ರಮುಖ ದಿನಾಂಕಗಳೊಂದಿಗೆ ವೆಬ್ಯ ಗಳಾದ www.nata.in ಮತ್ತು www.coa.gov.in ಗಳಿಗೆ ಶೀಘ್ರದಲ್ಲಿ ಅಪ್ಲೋಡ್ ಮಾಡಲಾಗುವುದು. ಅಭ್ಯರ್ಥಿಗಳು ಮೇಲ್ಕಂಡ ವೆಬ್‌ಸೈಟ್‌ಗಳನ್ನು ನಿಯತವಾಗಿ ಪರಿಶೀಲಿಸುವುದು.

  • ಸಶಸ್ತ್ರ ಮೀಸಲು ಸಬ್ ಇನ್ಸ್ ಪೆಕ್ಟರ್ : ಆಯ್ಕೆಪಟ್ಟಿ ಪ್ರಕಟ

    ಸಶಸ್ತ್ರ ಮೀಸಲು ಸಬ್ ಇನ್ಸ್ ಪೆಕ್ಟರ್ : ಆಯ್ಕೆಪಟ್ಟಿ ಪ್ರಕಟ

    ಕರ್ನಾಟಕ ಪೊಲೀಸ್ ಇಲಾಖೆಯು 45 ಸಶಸ್ತ್ರ ಮೀಸಲು ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

    ಅಭ್ಯರ್ಥಿಗಳು ಕೆಎಸ್ ಪಿ ವೆಬ್‌ಸೈಟ್‌ ಗೆ ಭೇಟಿ ನೀಡಿ ಲಿಸ್ಟ್ ನ್ನು ಚೆಕ್ ಮಾಡಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜನವರಿ 03, 2021 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ದೈಹಿಕ ಸಾಮಾರ್ಥ್ಯ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆಯನ್ನು ನಡೆಸಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಮೀಸಲಾತಿ ಗೆ ಅನುಗುಣವಾಗಿ ಸಿದ್ಧಪಡಿಸಿ ಪ್ರಸ್ತುತ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ. ತಾತ್ಕಾಲಿಕ ಪಟ್ಟಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಾನೂನಾತ್ಮಕವಾಗಿ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಮೂಲ ದಾಖಲೆಗಳ ಪರಿಶೀಲನೆ ಹಾಗೂ ಮೆಡಿಕಲ್ ಟೆಸ್ಟ್ ಗೆ ಅಭ್ಯರ್ಥಿಗಳು ಹಾಜರಾಗಬೇಕು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಆರ್ಬಿಐ ಗ್ರೇಡ್ ಬಿ ಪ್ರವೇಶ ಪತ್ರ ಲಭ್ಯ!ಈಗಲೇ ಡೌನ್ಲೋಡ್ ಮಾಡಿ

    ಆರ್ಬಿಐ ಗ್ರೇಡ್ ಬಿ ಪ್ರವೇಶ ಪತ್ರ ಲಭ್ಯ!ಈಗಲೇ ಡೌನ್ಲೋಡ್ ಮಾಡಿ

    ಆರ್ ಬಿಐ ಅಧಿಕಾರಿ ಗ್ರೇಡ್ ಬಿ ಹುದ್ದೆಗಳ ಫೇಸ್ 1 ಆನ್ಲೈನ್ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟಿಸಲಾಗಿದೆ.
    322 ಹುದ್ದೆಗಳನ್ನು ಭರ್ತಿ ಮಾಡಲು ಆರ್ ಬಿಐ ಅರ್ಜಿಗಳನ್ನು ಆಹ್ಬಾನಿಸಲಾಗಿತ್ತು. ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ಓದಿ

    ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ https://www.rbi.org.in/ ಗೆ ಭೇಟಿ ನೀಡಿ, ಅಲ್ಲಿ career ನ ಕೆಳಗಿರುವ call Letter ಮೇಲೆ ಕ್ಲಿಕ್ ಮಾಡಿ. ನಂತರ ಫೇಸ್-1 ಪರೀಕ್ಷೆಯ ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಮೇಲೆ ರಿಜಿಸ್ಟ್ರೇಶನ್ ನಂಬರ್/ರೋಲ್ ನಂಬರ್ ಮತ್ತು ಜನ್ಮದಿನಾಂಕ/ಪಾಸ್ವರ್ಡ್ ನಮೂದಿಸಿ ನಿಮ್ಮ ಪ್ರವೇಶ ಪತ್ರವು ಸ್ಕ್ರೀನ್‌ ಮೇಲೆ ಬರುತ್ತದೆ. ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.

  • ಇಸಿಐಎಲ್ ನಲ್ಲಿ ಉದ್ಯೋಗವಕಾಶ : ಆಸಕ್ತರು ಅರ್ಜಿ ಸಲ್ಲಿಸಿ

    ಇಸಿಐಎಲ್ ನಲ್ಲಿ ಉದ್ಯೋಗವಕಾಶ : ಆಸಕ್ತರು ಅರ್ಜಿ ಸಲ್ಲಿಸಿ

    ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್)ನಲ್ಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 6 ಮತ್ತು 9 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 25-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 6 ಮತ್ತು 9 , 2021 ಬೆಳಗ್ಗೆ 9.30ರ ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳು ಭಾಗಿಯಾಗಬಹುದು.

    ಇಸಿಐಎಲ್ ನಲ್ಲಿ ತಾಂತ್ರಿಕ ಅಧಿಕಾರಿ ಹಾಗೂ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ತಾಂತ್ರಿಕ ಅಧಿಕಾರಿ ( ಟೆಕ್ನಿಕಲ್ ಆಫೀಸರ್ ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 06-03-2021ರ(9.30a.m ರಿಂದ 12pm) ಸಂದರ್ಭದಲ್ಲಿ ಭಾಗಿಯಾಗಬಹುದು.

    ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 09-03-2021 (9.30a.m ರಿಂದ 12pm) ಸಂದರ್ಶನದಲ್ಲಿ ಭಾಗಿಯಾಗಬಹುದು.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ವಿದ್ಯಾರ್ಹತೆ : ಇಂಜಿನಿಯರಿಂಗ್ ನಲ್ಲಿ ಪದವಿ ಮತ್ತು ಡಿಪ್ಲೋಮಾ ಪದವಿ ಹೊಂದಿರೋ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಬಹುದು.

    ವಯೋಮಿತಿ : ತಾಂತ್ರಿಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ 30, ಹಾಗೂ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 25 ವಯೋಮಿತಿ ಹೊಂದಿರಬೇಕು.

    ಅಂಗವಿಕಲ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ : ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.22,202/- ವೇತನವಿರುತ್ತದೆ. ತಾಂತ್ರಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.23,000/- ವೇತನವಿರುತ್ತದೆ.

    ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ನೇರಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸದಲ್ಲಿ ಮಾರ್ಚ್ 6 ಮತ್ತು ಮಾರ್ಚ್ 9 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬೇಕು.

    ತಾಂತ್ರಿಕ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಿಳಾಸದಲ್ಲಿ ಸಂದರ್ಶನದಲ್ಲಿ ಭಾಗಿಯಾಗಬಹುದು.

    ECIL Zonal Office, D-15,DDA Local Shopping Complex,A-Block, Ring Road,Naraina(Near Naraina Vihar Metro Station Gate no-1 New Delhi -110028

    ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಿಳಾಸದಲ್ಲಿ ಸಂದರ್ಶನದಲ್ಲಿ ಭಾಗಿಯಾಗಬಹುದು.

    ECIL Zonal Office,#1207,Veer Savarkar Marg, Dadar(Prabhadevi)Mumbai- 400028

    ಸಂಸ್ಥೆ ಯ ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ