Author: Mallika

  • ನೇರ ಸಂದರ್ಶನ ದಿನಾಂಕ ಮರುನಿಗದಿ

    ನೇರ ಸಂದರ್ಶನ ದಿನಾಂಕ ಮರುನಿಗದಿ

    ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಚಿಕ್ಕಬಳ್ಳಾಪುರ ಇಲ್ಲಿಗೆ ಪ್ರಾಧ್ಯಾಪಕರು/ಸಹ ಪ್ರಾಧ್ಯಾಪಕರು/ಸಹಾಯಕ ಪ್ರಾಧ್ಯಾಪಕರು/ಬೋಧಕರು/ ಹಿರಿಯ ಮತ್ತು ಕಿರಿಯ ರೆಸಿಡೆಂಟ್ಸ್, ಹುದ್ದೆಗಳಿಗೆ ಉದ್ದೇಶಿತ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡ ಭಾಷಾ ಪರೀಕ್ಷೆ, ದಾಖಲೆ ಪತ್ರಗಳ ಪರಿಶೀಲನೆ ಮತ್ತು ನೇರ ಸಂದರ್ಶನವನ್ನು ದಿನಾಂಕ 05-03-2021 ರಿಂದ 09-03-2021 ನಡೆಸಲು ನಿಗದಿಪಡಿಸಿದ್ದನ್ನು ಮುಂದೂಡಲಾಗಿದ್ದು, ಕನ್ನಡ ಭಾಷ ಪರೀಕ್ಷೆ, ದಾಖಲೆ ಪತ್ರಗಳ ಪರಿಶೀಲನೆ ಮತ್ತು ಸಂದರ್ಶನವನ್ನು ದಿನಾಂಕ 15-03-2021 ರಿಂದ 19-03-2021 ರವರೆಗೆ ನಡೆಸಲು ಮರು ನಿಗದಿಪಡಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.karunadu.gov.in/dmekarnataka ಅಥವಾ https://medicaleducation.kar.nic.in ಗೆ ಭೇಟಿ ನೀಡಬಹುದು.

  • ಕರ್ನಾಟಕ  ರೇರಾ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರೇರಾ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅಧ್ಯಕ್ಷ ರು ಮತ್ತು ಸದಸ್ಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಅಭ್ಯರ್ಥಿಗಳು ಓನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :09-04-2021(5pm)

    ಅಭ್ಯರ್ಥಿಗಳು ಓನ್ ಲೈನ್ ಮೂಲಕ ಅಥವಾ ರಿಜಿಸ್ಟರ್ ಪೋಸ್ಟ್ ಅಥವಾ ಮುಖತಃ ಅರ್ಜಿ ಸಲ್ಲಿಸಬಹುದು.

    ಇ-ಮೈಲ್ – [email protected]/[email protected]

    ವಿಳಾಸ : The Member Secretary, Selection Committee and Secretary to government,housing department,Government of Karnataka,Karnataka government Secretariat, Room no.211,2nd Floor, Vikasa Soudha,Bengaluru-560001

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಎಸ್ ಎಸ್ ಸಿ ಜೆ ಇ ಅಂತಿಮ ಉತ್ತರಗಳು ಪ್ರಕಟ

    ಎಸ್ ಎಸ್ ಸಿ ಜೆ ಇ ಅಂತಿಮ ಉತ್ತರಗಳು ಪ್ರಕಟ

    ಸ್ಟಾಫ್ ಸೆಲೆಕ್ಷನ್ ಕಮಿಶನ್ ಎಸ್ ಎಸ್ ಸಿ ಜೆ ಇ 2019 ನೇ ಸಾಲಿನ‌ ಪರೀಕ್ಷೆಯ ಅಂತಿಮ ಸರಿಯುತ್ತರಗಳನ್ನು ಪ್ರಕಟಿಸಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳು ಮತ್ತು ಪ್ರಶ್ನೆ ಪತ್ರಿಕೆಗಳನ್ನು ssc.nic.in ಗೆ ಭೇಟಿ ನೀಡಿ ಪಡೆಯಬಹುದು.

    ಎಸ್ ಎಸ್ ಸಿ ಜೆಇ 2019, ಪರೀಕ್ಷೆ 1 ಅಂತಿಮ‌ ಕೀ ಉತ್ತರಗಳನ್ನು ಮಾರ್ಚ್ 19,2021 ರ ವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

    ಪೇಪರ್ -1 ಪರೀಕ್ಷೆಯು ಸಿವಿಲ್, ಕ್ವಾಂಟಿಟಿ, ಸರ್ವೇಯಿಂಗ್, ಕ್ರಾಂಟ್ರ್ಯಾಕ್ಟ್, ಮೆಕ್ಯಾನಿಕಲ್,ಎಲೆಕ್ಟ್ರಿಕಲ್ ಹುದ್ದೆಗಳಿಗೆ ನಡೆಸಿತ್ತು.

    ಒಟ್ಟು 5661 ಅಭ್ಯರ್ಥಿಗಳು ಎಸ್ ಎಸ್ ಸಿ ಜೆಇ ವಿವರಣಾತ್ಮಕ ಪೇಪರ್ -2 ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಈ ಪರೀಕ್ಷೆಯು ಮಾರ್ಚ್ 21, 2021 ರಂದು ನಡೆಸಲು ತೀರ್ಮಾನಿಸಿದೆ.

  • ರೇಡಿಯೋ ದೂರದರ್ಶನ ಹುದ್ದೆ ಗಳ ನೇಮಕ

    ರೇಡಿಯೋ ದೂರದರ್ಶನ ಹುದ್ದೆ ಗಳ ನೇಮಕ

    ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ವತಿಯಿಂದ ಸ್ಟಾಫ್ ಸೆಲೆಕ್ಷನ್ ಕಮಿಷನ್ ( ಎಸ್ ಎಸ್ ಸಿ) ರೇಡಿಯೋ ಮತ್ತು ದೂರದರ್ಶನ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ‌.

    ಅಭ್ಯರ್ಥಿಗಳು ಮಾರ್ಚ್ 21,2021, ಬೆಳಗ್ಗೆ 11.30 ಗಂಟೆ ಯೊಳಗಾಗಿ ಅಧಿಕೃತ ವೆಬ್‌ಸೈಟ್‌ sss.nic.in ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಇತರೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://ssc.nic.in// ಗೆ ಭೇಟಿ ನೀಡಿ ಹಾಗೂ ದೂರವಾಣಿ ಸಂಖ್ಯೆ 08262-235513,080-255025520, 948386202020 ಗೆ ಸಂಪರ್ಕಿಸಬಹುದು.

  • ಐಆರ್ ಸಿಟಿಸಿ ನಲ್ಲಿ ಹುದ್ದೆ

    ಐಆರ್ ಸಿಟಿಸಿ ನಲ್ಲಿ ಹುದ್ದೆ

    ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕೋರ್ಪರೇಶನ್ ನಲ್ಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸಲ್ಲಿಸಲು 20 ಮಾರ್ಚ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆಫ್ ಲೈನ್
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 19-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-03-2021
    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಐಆರ್ ಸಿಟಿಸಿ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ-1 ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ವೇತನ : ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ರೂ.50,000/- ರಿಂದ 1,60,000/- ವರೆಗೆ ವೇತನ‌ ನಿಗದಿಪಡಿಸಲಾಗಿದೆ.

    ಹುದ್ದೆ ಸ್ಥಳ : ಡೆಲ್ಲಿ

    ವಿದ್ಯಾರ್ಹತೆ :ಐಆರ್ ಸಿಟಿಸಿ ನ ನಿಯಮಾನುಸಾರ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ/ ಬೋರ್ಡ್ ನಿಂದ ಗ್ರಾಜ್ಯುಯೇಟ್/ ಎಲ್.‌ಎಲ್.ಬಿ ಹೊಂದಿರಬೇಕು.

    ವಯೋಮಿತಿ : ಅಭ್ಯರ್ಥಿಗಳು ಗರಿಷ್ಠ 50 ವರ್ಷ ಮೀರಿರಬಾರದು.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.

    ವಿಳಾಸ : General Manager (HRD), Indian Railway Catering and Tourism Corporation Ltd., 12th Floor, Statesman House, Barakhamba Road, New Delhi- 110001

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    https://www.irctc.co.in/nget/train-search

  • ಬೆಂಗಳೂರು ಯುನಿವರ್ಸಿಟಿ ಹುದ್ದೆಗೆ ಅರ್ಜಿ ಆಹ್ವಾನ

    ಬೆಂಗಳೂರು ಯುನಿವರ್ಸಿಟಿ ಹುದ್ದೆಗೆ ಅರ್ಜಿ ಆಹ್ವಾನ

    ಬೆಂಗಳೂರು ಯುನಿವರ್ಸಿಟಿ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸಲ್ಲಿಸಲು ಮಾರ್ಚ್ 10, 2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆಫ್ ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 03-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-03-2021
    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಬೆಂಗಳೂರು ಯುನಿವರ್ಸಿಟಿ ನಲ್ಲಿ ಗೆಸ್ಟ್ ಫೆಕ್ಯುಲಿಟಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಒಟ್ಟು ಹುದ್ದೆಗಳ ಸಂಖ್ಯೆ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ.

    ವಿದ್ಯಾರ್ಹತೆ : ಬಿ.ಎಸ್ಸಿ, ಎನ್ ಇಟಿ, ಎಸ್ ಎಲ್ ಇಟಿ ನ್ನು ಯಾವುದೇ ಸಂಸ್ಥೆ / ಬೋರ್ಡ್ ನಿಂದ ಪಡೆದಿರಬೇಕು.

    ವಯೋಮಿತಿ : ಬೆಂಗಳೂರು ಯುನಿವರ್ಸಿಟಿ ನೇಮಕಾತಿ ನಿಯಮಾನುಸಾರ ಅಭ್ಯರ್ಥಿಗಳು ವಯೋಮಿತಿ ಹೊಂದಿರಬೇಕು.

    ಅಭ್ಯರ್ಥಿಗಳು ಬೆಂಗಳೂರು ಯುನಿವರ್ಸಿಟಿ ಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ 10-03-2021 ರೊಳಗೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.

    ವಿಳಾಸ : Chairman, Department of Communication, Jnanabharathi Campus, Bangalore University, Bangalore – 56

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ: https://eng.bangaloreuniversity.ac.in/