Army Agniveer Recruitment 2024: ಭಾರತೀಯ ಸೇನೆಯು ಅಗ್ನಿವೀರ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಹುದ್ದೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು, ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ್ದಲ್ಲಿ ಸಂಪೂರ್ಣವಾಗಿ ನೇಮಕಾತಿ ಅಧಿಸೂಚನೆಯನ್ನು ಓದಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ 8th/10th/12th ಪಾಸಾದವರು ಕೂಡಾ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು: ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08-02-2024
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-03-2024
ಹುದ್ದೆಗಳು: ಅಗ್ನೀವೀರ್ ಜನರಲ್ ಡ್ಯೂಟಿ,ಅಗ್ನಿವೀರ್ ಟೆಕ್ನಿಕಲ್,ಅಗ್ನಿವೀರ್ ಕ್ಲರ್ಕ್ (ಅಗ್ನಿವೀರ್ ಸ್ಟೋರ್‌ಕೀಪರ್ ಟೆಕ್ನಿಕಲ್),ಅಗ್ನಿವೀರ್ ಟ್ರೇಡ್ಸ್‌ಮ್ಯಾನ್,ಅಗ್ನಿವೀರ್ ಜನರಲ್ ಡ್ಯೂಟಿ (ಮಹಿಳೆ) ಮಿಲಿಟರಿ ಪೊಲೀಸ್ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಯೋಮಿತಿ: ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 17.5 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 21 ವರ್ಷ ಮೀರಿರಬಾರದು.
ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ವಿವರ:
ಅಗ್ನೀವೀರ್ ಜನರಲ್ ಡ್ಯೂಟಿ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು. ಪ್ರತಿ ವಿಷಯದಲ್ಲಿ ಅಭ್ಯರ್ಥಿಗಳು ಶೇ.45 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಗ್ನಿವೀರ್ ಟೆಕ್ನಿಕಲ್ – ಈ ಹುದ್ದೆಗೆ ಎಸ್‌ಎಸ್‌ಎಲ್ಸಿ/12th/ITI ಪಾಸ್ ಮಾಡಿರಬೇಕು. ಶೇ.60 ಅಂಕ ಪಡೆದಿರಬೇಕು.
ಅಗ್ನಿವೀರ್ ಕ್ಲರ್ಕ್ (ಅಗ್ನಿವೀರ್ ಸ್ಟೋರ್‌ಕೀಪರ್ ಟೆಕ್ನಿಕಲ್) – ಈ ಹುದ್ದೆಗೆ 10+2/Intermidiate ಪಾಸ್ ಆಗಿರಬೇಕು. .ಶೇ.60 ರಷ್ಟು ಅಂಕ ಪಡೆದಿರಬೇಕು.
ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ – ಈ ಹುದ್ದೆಗೆ 10th class Pass ಆಗಿರಬೇಕು. ಶೇ.33 ರಷ್ಟು ಅಂಕವನ್ನು ಪ್ರತಿ ವಿಷಯದಲ್ಲಿ ಅಭ್ಯರ್ಥಿಗಳು ಪಡೆದಿರಬೇಕು.
ಅಗ್ನಿವೀರ್ ಟ್ರೇಡ್ಸ್‌ಮ್ಯಾನ್- ಈ ಹುದ್ದೆಗೆ ಎಂಟನೇ ತರಗತಿ ಪಾಸ್ ಆಗಿರಬೇಕು. ಪ್ರತಿ ವಿಷಯದಲ್ಲಿ ಅಭ್ಯರ್ಥಿಗಳು ಶೇ.33 ರಷ್ಟು ಅಂಕ ಪಡೆದಿರಬೇಕು.
ಅಗ್ನಿವೀರ್ ಜನರಲ್ ಡ್ಯೂಟಿ (ಮಹಿಳೆ) ಮಿಲಿಟರಿ ಪೊಲೀಸ್- ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 10th/Matriculation ತೇರ್ಗಡೆ ಹೊಂದಿರಬೇಕು. 10ನೇ/ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಶೇ.45 ಅಂಕ ಹಾಗೂ ಪ್ರತಿ ವಿಷಯದಲ್ಲಿ ಶೇ.33 ಅಂಕಗಳೊಂದಿಗೆ ತೇರ್ಗಡೆ ಕಡ್ಡಾಯವಾಗಿದ್ದು, ಗ್ರೇಡಿಂಗ್ ಪದ್ಧತಿ ಜಾರಿಯಲ್ಲಿದ್ದರೆ ಪ್ರತಿ ವಿಷಯದಲ್ಲಿ ಡಿ ಗ್ರೇಡ್ ಹಾಗೂ ಶೇ.45 ಅಂಕಗಳೊಂದಿಗೆ ಸಿ2 ಶ್ರೇಣಿಯಲ್ಲಿ ತೇರ್ಗಡೆಯಾಗುವುದು ಕಡ್ಡಾಯ.
ಅರ್ಜಿ ಶುಲ್ಕ: ಅಭ್ಯರ್ಥಿಗಳು ಈ ಮೇಲಿನ ಹುದ್ದೆಗಳಿಗೆ ರೂ.550 ಪಾವತಿಸಬೇಕು.
ಆಯ್ಕೆ ವಿಧಾನ: ಅಭ್ಯರ್ಥಿಗಳ ಆಯ್ಕೆ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲನೆಯ ಹಂತ ಆನ್‌ಲೈನ್ ಪರೀಕ್ಷೆ ಇರಲಿದ್ದು, ಇದರಲ್ಲಿ ಟೈಪಿಂಗ್ ಟೆಸ್ಟ್ ಇರಲಿದೆ. ಎರಡನೇ ಹಂತದಲ್ಲಿ ನೇಮಕಾತಿ ರ್ಯಾಲಿ ಇರಲಿದೆ. ಇದರಲ್ಲಿ ತೇರ್ಗಡೆಯಾದವರನ್ನು ಮೂರನೇ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಮೆರಿಟ್ ಲಿಸ್ಟ್ ಮೂಲಕ ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.