Advertisements
ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಭೂಮಿಯ ಭೂಮಾಪನಾ, ಕಂದಾಯ, ಭೂದಾಖಲೆ ಹಾಗೂ ಭೂ ಸಂಬಂಧಿತ ನ್ಯಾಯಾಲಯದಲ್ಲಿರುವ ದಾವೆಗಳ ಬಗ್ಗೆ ಕರ್ತವ್ಯ ನಿರ್ವಹಿಸಲು ಪ್ರಥಮ ದರ್ಜೆ ಭೂಮಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರಕಾರ, ಸ್ಥಳೀಯ ಪ್ರಾಧಿಕಾರದಿಂದ ನಿವೃತ್ತಿ ಹೊಂದಿರುವ ಅರ್ಹ, ನುರಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಸೇವಾನುಭವ ಇತ್ಯಾದಿ ಅಂಶಗಳಿರುವ ಅರ್ಜಿಯನ್ನು ಜು.15 ರೊಳಗೆ ಕುಲಸಚಿವರು, ಬೆಂಗಳೂರು ವಿವಿ, ಜ್ಞಾನಭಾರತಿ ಆವರಣ, ಬೆಂಗಳೂರು – 56 ಈ ವಿಳಾಸಕ್ಕೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ