AIIMS Recruitment 2024: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ದೆಹಲಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗೆ ನೀಡಲಾದ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಒಟ್ಟು 220 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜೂನಿಯರ್ ರೆಸಿಡೆಂಟ್ಸ್ ಹುದ್ದೆಗಳು ಖಾಲಿ ಇದ್ದು, ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಹುದ್ದೆಗಳಿಗೆ ದಿ.15-06-2024 ಕೊನೆಯ ದಿನಾಂಕವಾಗಿದ್ದು, ಈ ಕೂಡಲೇ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು;
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 05-06-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :15-06-2024
ಹುದ್ದೆಯ ಕುರಿತ ಹೆಚ್ಚಿನ ವಿವರ ಇಲ್ಲಿದೆ,
ನೇಮಕಾತಿ ಸಂಸ್ಥೆ: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ದೆಹಲಿ ಇಲ್ಲಿ ಖಾಲಿ ಇರುವ ಜೂನಿಯರ್ ರೆಸಿಡೆಂಟ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರುಗಳ ವಿವರ ಇಲ್ಲಿ ನೀಡಲಾಗಿದೆ;
ಬ್ಲಡ್ ಬ್ಯಾಂಕ್, ಬರ್ನ್ಸ್ ಅಂಡ್ ಪ್ಲಾಸ್ಟಿಕ್ ಸರ್ಜರಿ, ಬ್ಲಡ್ ಬ್ಯಾಂಕ್ ಎನ್‌ಸಿಐ, ಕಾರ್ಡಿಯಾಕ್ ರೇಡಿಯೋಲಜಿ, ಕಾರ್ಡಿಯೋಲಜಿ, ಕಂಮ್ಯುನಿಟಿ ಮೆಡಿಷನ್, ಸೈಡರ್, ಸಿಟಿವಿಎಸ್, ಡರ್ಮಟೊಲಜಿ ಅಂಡ್ ವೆನೆರಿಯೋಲಜಿ, ಇಹೆಚ್‌ಎಸ್, ಎಮರ್ಜೆನ್ಸಿ ಮೆಡಿಷನ್, ಲ್ಯಾಬ್ ಮೆಡಿಷನ್, ನೆಪ್ರೊಲಜಿ, ಇತರೆ ವಿಭಾಗಗಳು.
ವಿದ್ಯಾರ್ಹತೆ: ಹುದ್ದೆಗಳಿನುಸಾರವಾಗಿ ಅಭ್ಯರ್ಥಿಗಳು ಪದವಿ, ಎಂಬಿಬಿಎಸ್, ಬಿಡಿಎಸ್ ಮಾಡಿರಬೇಕು. ಹುದ್ದೆಗೆ ತಕ್ಕಂತೆ ನಿಖರವಾದ ವಿದ್ಯಾರ್ಹತೆಯನ್ನು ಅಧಿಸೂಚನೆಯಲ್ಲಿ ನೀಡಲಾಗಿದ್ದು, ಅಲ್ಲಿ ವಿವರವಾಗಿ ಅಭ್ಯರ್ಥಿಗಳು ಓದಬಹುದು.
ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಪರೀಕ್ಷೆ/ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಶಾರ್ಟ್‌ಲಿಸ್ಟ್ ಆಗಿ ನಂತರ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ಉತ್ತಮ ವೇತನ ದೊರಕಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಮೊದಲಿಗೆ ಇಲ್ಲಿ ನೀಡಲಾದ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿ
ನಂತರ ನ್ಯೂ ರಿಜಿಸ್ಟ್ರೇಷನ್-ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿ
ಅಲ್ಲಿ ನಿಮ್ಮ ಇಮೇಲ್ ವಿಳಾಸ, ಮೊಬೈಲ್ ನಂಬರ್, ಹೆಸರು ಇತರೆ ವಿಷಯಗಳನ್ನು ಭರ್ತಿ ರಿಜಿಸ್ಟ್ರೇಷನ್ ಪಡೆಯಿರಿ
ನಂತರ ಲಾಗಿನ್ ಆಗಿ ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ