ಭಾರತೀಯ ವಾಯುಪಡೆ Airmen ಹುದ್ದೆಗಳಿಗೆ (ಗ್ರೂಪ್ X ಮತ್ತು ಗ್ರೂಪ್Y ) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 07-02-2021 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-02-2021
ವಯೋಮಿತಿ ಎಷ್ಟು
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 21ವರ್ಷ ವಯಸ್ಸಾಗಿರಬೇಕು. ಅಭ್ಯರ್ಥಿಗಳು 16.01.2001 ರಿಂದ 29.12.2004 ನಡುವೆ ಜನಿಸಿರಬೇಕು.
ಅರ್ಹತೆಗಳೇನು?
ಗ್ರೂಪ್ (X) ( ಎಜುಕೇಶನ್ ಇನ್ಸ್ಟ್ರಕ್ಟರ್ ಟ್ರೇಡ್ ಹೊರತು ಪಡಿಸಿ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಿಯುಸಿ ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಫಿಸಿಕ್ಸ್, ಇಂಗ್ಲೀಷ್ ಗಣಿತದಲ್ಲಿ ಪಡೆದುಕೊಂಡಿರಬೇಕು. ಅಥವಾ 3 ವರ್ಷಗಳ ಯಾವುದೇ ವಿಷಯದಲ್ಲಿ ಇಂಜಿನಿಯರ್ ಡಿಪ್ಲೋಮಾ ಮಾಡಿರಬೇಕು.
ಗ್ರೂಪ್ y ( IAF (S) & Musician trades ಹೊರತು ಪಡಿಸಿ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ/ಕೇಂದ್ರ ಎಜುಕೇಶನ್ ಬೋರ್ಡ್ ನಡೆಸಿದ ಪರೀಕ್ಷೆ ಪಿಯುಸಿ ಯಲ್ಲಿ ಶೇ 50 ರಷ್ಟು ಅಂಕ ಗಳಿಸಿರಬೇಕು.
ಗ್ರೂಪ್ Y ( medical asst trade only)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ 50 ರಷ್ಟು ಅಂಕಗಳನ್ನು ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ಮತ್ತು ಇಂಗ್ಲೀಷ್ ನಲ್ಲಿ ಪಡೆದುಕೊಂಡಿರಬೇಕು. ಮತ್ತು ಇಂಗ್ಲೀಷ್ ವಿಷಯದಲ್ಲಿ 50% ಗಳಿಸಿರಬೇಕು.
ಅರ್ಜಿ ಶುಲ್ಕ
ಅಭ್ಯರ್ಥಿಗಳು ರೂ.250 ನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು debit card/ credit card/Internet banking ಮೂಲಕ ಅಥವಾ ಸ್ಥಳೀಯ ಎಕ್ಸಿಕ್ ಬ್ಯಾಂಕ್ ನ ಕಚೇರಿಯ ವೇಳೆಯಲ್ಲಿ ಚಲನ್ ನೀಡಿ ಪಾವತಿಸಬೇಕು.