AIASTL Recruitment 2024: ಏರ್‌ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 422 ವಿವಿಧ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳಿಂದ ಹ್ಯಾಂಡಿಮ್ಯಾನ್, ಹ್ಯಾಂಡಿವುಮೆನ್, ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 02 ರಿಂದ 04, ಮೇ 2024 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬೇಕು.
ಪ್ರಮುಖ ದಿನಾಂಕಗಳು
ನೇರ ಸಂದರ್ಶನದ ದಿನಾಂಕ: 02 ರಿಂದ 04, ಮೇ 2024
ಹುದ್ದೆಗಳ ವಿವರ ಇಲ್ಲಿದೆ:
ಹುದ್ದೆ ಹೆಸರು: ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್-130 ಹುದ್ದೆಗಳು
ಹ್ಯಾಂಡಿಮ್ಯಾನ್/ಹ್ಯಾಂಡಿವುಮೆನ್-292 ಹುದ್ದೆಗಳು
ವೇತನ: ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.24,960 ವೇತನವಿರಲಿದೆ.
ಹ್ಯಾಂಡಿಮ್ಯಾನ್/ಹ್ಯಾಂಡಿವುಮೆನ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.22,530 ವೇತನ ಲಭ್ಯವಿದೆ.
ವಿದ್ಯಾರ್ಹತೆ:
ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಸಿ/ಎಸ್‌ಎಸ್‌ಎಲ್‌ಸಿ ಪಾಸ್ ಜೊತೆಗೆ ಹೆವಿ ಮೋಟಾರ್ ವೆಹಿಕಲ್ ಲೈಸೆನ್ಸ್ ಪಡೆದಿರಬೇಕು.
ಹ್ಯಾಂಡಿಮ್ಯಾನ್/ಹ್ಯಾಂಡಿವುಮೆನ್ ಈ ಹುದ್ದೆಗೆ ಇಂಗ್ಲೀಷ್ ಭಾಷೆ ಬರೆಯಲು ಓದಲು ಗೊತ್ತಿರಬೇಕು. ಹಿಂದಿ ಭಾಷೆ ತಿಳಿದಿರಬೇಕು.
ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 28 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 31 ವರ್ಷ, ಇತರೆ ಕೆಟಗರಿಯವರಿಗೆ 33 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ನೇರ ಸಂದರ್ಶನ ನಡೆಯುವ ಸ್ಥಳ: ಹೆಚ್‌ಆರ್‌ಡಿ ಡಿಪಾರ್ಟ್‌ಮೆಂಟ್ ಕಚೇರಿ, ಎಐ ಯುನಿಟಿ ಕಾಂಪ್ಲೆಕ್ಸ್, ಪಲ್ಲವರಮ್, ಕಂಟಾನ್ಮೆಂಟ್, ಚೆನ್ನೈ – 600 043.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ