ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜೂನಿಯರ್ ಇಂಜಿನಿಯರ್ ( ಸಿವಿಲ್/ಎಲೆಕ್ಟ್ರಿಕಲ್) ಹುದ್ದೆಯ ನೇಮಕಾತಿ ಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಯ ಹೆಸರು
24 ಹುದ್ದೆ ಗಳು ಜೂನಿಯರ್ ಇಂಜಿನಿಯರ್ (ಸಿವಿಲ್)
24 ಹುದ್ದೆಗಳು ಜೂನಿಯರ್ ಇಂಜಿನಿಯರ್ ( ಎಲೆಕ್ಟ್ರಿಕಲ್)
ಹುದ್ದೆಯ ಒಟ್ಟು ಸಂಖ್ಯೆ
48
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಫೆಬ್ರವರಿ,2021
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ಹಾಗೂ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು.( ಅಭ್ಯರ್ಥಿಗಳು 02/02/1991 ನಂತರ ಮತ್ತು 01/02/2001 ರ ಒಳಗೆ ಜನಿಸಿರಬೇಕು)
ಆರ್ ಬಿ ಐ ಎಕ್ಸಾಮ್ 2021 ಮಾರ್ಚ್ 8 ರಂದು ನಡೆಯಲಿದೆ.
ವಿದ್ಯಾಭ್ಯಾಸ
ಜೂನಿಯರ್ ಇಂಜಿನಿಯರ್ ಅಭ್ಯರ್ಥಿಗಳಿಗೆ (civil)
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಮೂರು ವರ್ಷಗಳ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಶೇ.65% ಅಂಕದಲ್ಲಿ ಪಾಸಾಗಿರಬೇಕು. (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡ್ಬ್ಲೂಡಿ 55%)
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್): ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನ್ನು 65% ನಲ್ಲಿ ಪಾಸಾಗಿರಬೇಕು. (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡ್ಬ್ಲೂಡಿ 55%)
ಅರ್ಜಿ ಶುಲ್ಕ
ಒಬಿಸಿ / ಜನರಲ್ / ಇಡಬ್ಲ್ಯೂಎಸ್ ಅಭ್ಯರ್ಥಿಗಳು: ರೂ. 450 / – (ಪರೀಕ್ಷಾ ಶುಲ್ಕ + ಮಾಹಿತಿ ಶುಲ್ಕಗಳು) ನ್ನು ಪಾವತಿಸಬೇಕು.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಇಎಕ್ಸ್‌ಎಸ್‌ಗೆ: ರೂ. 50 / – (ಮಾಹಿತಿ ಶುಲ್ಕಗಳು) ಪಾವತಿಸಬೇಕು.
ಸಿಬ್ಬಂದಿ ಅಭ್ಯರ್ಥಿಗಳಿಗೆ: ಇಲ್ಲ
ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಈ ಮುಖಾಂತರ ಪಾವತಿಸ ಬಹುದು.ಡೆಬಿಟ್ ಕಾರ್ಡ್‌ಗಳು (ರುಪೇ / ವೀಸಾ / ಮಾಸ್ಟರ್ ಕಾರ್ಡ್ / ಮೆಸ್ಟ್ರೋ), ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್‌ಗಳು / ಮೊಬೈಲ್ ವ್ಯಾಲೆಟ್‌ಗಳು.
ಆಸಕ್ತ ಅಭ್ಯರ್ಥಿಗಳು ಆರ್ ಬಿ ಐ ಇಂಜಿನಿಯರ್ 2021 ಹುದ್ದೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.