200 ಗೃಹ ರಕ್ಷಕರ ನೇಮಕ

Advertisements

ಸ್ವಯಂ ಸೇವಕ ಗೃಹ ರಕ್ಷಕ ಹುದ್ದೆಯಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಸದಾವಕಾಶ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿಗೆ ಭೇಟಿ ನೀಡಿ ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸಲು ನಿಗದಿಪಡಸಿಲಾದ ವಿದ್ಯಾರ್ಹತೆ ದಾಖಲೆ ಜೊತೆಗೆ ಆಧಾರ್ ಕಾರ್ಡ್, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸೇವೆಗಳ ( ಕರ್ತವ್ಯ ನಿರ್ವಹಿಸಿದ ದಿನ) ಆಧಾರದ ಮೇಲೆ ವೇತನ/ ಗೌರವಧನ ನೀಡಲಾಗುವುದು.

ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಉಪ ಘಟಕಗಳಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹ ರಕ್ಷಕ ಸದಸ್ಯರನ್ನು ನೇಮಕ ಮಾಡಲು ಪ್ರಕಟಣೆಯನ್ನು ಹೊರಡಿಲಾಗಿದೆ,

ಒಟ್ಟು ಹುದ್ದೆಗಳ ಸಂಖ್ಯೆ : 200

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳು 2021 ರ ಮೇ 30 ರೊಳಗೆ ಜಿಲ್ಲಾ ಗೃಹರಕ್ಷಕ ದಳ, ಸಮಾದೇಷ್ಟರವರ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಗೃಹ ರಕ್ಷಕ ದಳದ ಸಮಿತಿಯ ಸಮಾದೇಷ್ಟಕರು ಹಾಗೂ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆಯು ತಿಳಿಸಿದೆ.

Leave a Comment