ಮಂಡ್ಯ ಹಾಲು ಒಕ್ಕೂಟದಲ್ಲಿ ಉದ್ಯೋಗಾವಕಾಶ, 187 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾರ್ಚ್‌ 3ರ ಮೊದಲು ಅರ್ಜಿ ಸಲ್ಲಿಸಿ

Advertisements

ಮಂಡ್ಯ ಮಾನ್ಮುಲ್‌ ಕೂಪ್‌ನಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಸವಿಸುದ್ದಿಯೊಂದು ಇಲ್ಲಿದೆ. ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಗೆಜ್ಜಲಗೆರೆಯು ವಿವಿಧ ಉದ್ಯೋಗಾವಕಾಶಗಳಿದ್ದು, ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಸಹಾಯಕ ವ್ಯವಸ್ಥಾಪಕರು, ಕಾನೂನು ಅಧಿಕಾರಿ, ತಾಂತ್ರಿಕ ಅಧಿಕಾರಿ (ಡಿಟಿ), ಉಗ್ರಾಣಾಧಿಕಾರಿ/ಐಎಂ ಅಧಿಕಾರಿ, ಡೇರಿ ಪರಿವೀಕ್ಷಕರು ದರ್ಜೆ-೨ ಸಿವಿಲ್‌/ಎಲೆಕ್ಟ್ರಾನಿಕ್ಸ್‌ ಆಂಡ್‌ ಇನ್‌ಸ್ಟ್ರುಮೆಂಟೆಷನ್‌/ ಎಲೆಕ್ಟ್ರಿಕಲ್‌ ಆಂಡ್‌ ಎಲೆಕ್ಟ್ರಾನಿಕ್ಸ್‌, ವಿಸ್ತರಣಾಧಿಕಾರಿ, ಆಡಳಿತ ಸಹಾಯಕ ದರ್ಜೆ, ಲೆಕ್ಕ ಸಹಾಯಕ, ಜೂನಿಯರ್ ಟೆಕ್ನಿಷಿಯನ್‌, ಕೆಮಿಸ್ಟ್‌, ಜೂನಿಯರ್‌ ಸಿಸ್ಟಮ್‌ ಆಪರೇಟರ್‌, ಕೋ ಆರ್ಡಿನೇಟರ್‌, ಆರೋಗ್ಯ ನಿರೀಕ್ಷಕರು, ನರ್ಸ್, ಮಾರುಕಟ್ಟೆ ಸಹಾಯಕ, ಚಾಲಕರು, ಕೃಷಿ ಸಹಾಯಕ, ತೋಟಗಾರಿಕೆ ಸಹಾಯಕ ಇತ್ಯಾದಿ `187 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಫೆಬ್ರವರಿ ೧ರಿಂದ ಮಾರ್ಚ್‌ ೨ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಖುದ್ದಾಗಿ, ಅಂಚೆ ಮೂಲಕ, ಕೊರಿಯರ್‌ ಮೂಲಕ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲವೆಂದು ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತವು ಉದ್ಯೋಗ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಹೆಚ್ಚಿನ ವಿವರಕ್ಕೆ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ವೆಬ್‌ ಲಿಂಕ್‌

Leave a Comment