ಕೆಪಿಎಸ್ಸಿ ಎಫ್‌ಡಿಎ ಲಿಖಿತ ಪರೀಕ್ಷಾ ದಿನಾಂಕ ಪ್ರಕಟ: ಇಲ್ಲಿದೆ ಹೆಚ್ಚಿನ ವಿವರ

Advertisements

ಕರ್ನಾಟಕ ಲೋಕ ಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕರು/ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆಗಳ ನೇಮಕಕ್ಕೆ ನಡೆಸುವ ಲಿಖಿತ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ.

ದಿನಾಂಕ 31 ಜನವರಿ 2020 ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಧಿ ಸೂಚನೆ ಹೊರಡಿಸಿತ್ತು. ಲಿಖಿತ ಪರೀಕ್ಷೆ ಯು ಜನವರಿ 24, 2021 ರಂದು ನಿಗದಿಪಡಿಸಿ ಕಾರಣಾಂತರಗಳಿಂದ ಮುಂದೂಡಲಾಗಿತ್ತು.

ಆಯೋಗವು ಈ ಸ್ಪರ್ಧಾತ್ಮಕ ಪರೀಕ್ಷೆ ಯನ್ನು ದಿನಾಂಕ 28 ಫೆಬ್ರವರಿ 2021 (ಭಾನುವಾರ) ರಂದು ನಡೆಸಲಿದೆ.

ಕೆಪಿಎಸ್ಸಿ ಎಫ್‌ಡಿಎ ಲಿಖಿತ ಪರೀಕ್ಷಾ ದಿನಾಂಕ ಪ್ರಕಟ: ಇಲ್ಲಿದೆ ಹೆಚ್ಚಿನ ವಿವರ 2

ಇದರ ಅಧಿಕೃತ ಪ್ರಕಟಣೆಯನ್ನು ಅಭ್ಯರ್ಥಿಗಳು ಈ ಲಿಂಕ್ ಮೂಲಕ ತಿಳಿದುಕೊಳ್ಳಬಹುದು.

Leave a Comment